ಕಳೆದ 15 ವರ್ಷಗಳಿಂದ ದಕ್ಷಿಣ ಭಾರತದಲ್ಲಿ ಹವಾ ಸೃಷ್ಟಿಸಿರುವ ನಟಿ ಎಂದರೆ ಅದು ಅನುಷ್ಕಾ ಶೆಟ್ಟಿ. ಅರುಂಧತಿ, ಬಾಹುಬಲಿಯಂತಹ ಹಿಟ್ ಸಿನಿಮಾಗಳಲ್ಲಿ ಅವರು ಕಾಣಿಸಿಕೊಂಡಿದ್ದರು. ಮೂಲತಃ ಕನ್ನಡದವರಾಗಿದ್ದರೂ, ತೆಲುಗಿನಲ್ಲೇ ಸಿನಿ ಜರ್ನಿ ಮಾಡಿದ್ದರು. ಇದೀಗ ಮತ್ತೊರ್ವ ಕರಾವಳಿ ಚೆಲುವೆ ಅವರ ಹಾದಿಯಲ್ಲೇ ಸಾಗುತ್ತಿದ್ದಾರೆ. ಅವರ ಮೊದಲ ಸಿನಿಮಾವೇ ಈಗ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಕನ್ನಡದವರಾಗಿದ್ದುಕೊಂಡು ತೆಳಗು ಸಿನಿಮಾ ರಂಗದಲ್ಲಿ ತನ್ನ ಮೊದಲ ಸಿನಿಮಾದಲ್ಲೇ ಮಿಂಚುತ್ತಿರುವ ಚೆಲುವೆ ಯರು ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದ್ದಾಳೆ ದಾವಣಿ ಚೆಲುವೆ. ಇದೀಗ ಸಿಂಪಲ್ ಆಗಿರುವ ಸಾಂಪ್ರದಾಯಿಕ ಉಡುಗೆ ಲಂಗ ದಾವಣಿ ತೊಟ್ಟು ಸಭೆಯಲ್ಲಿ ಸಖತ್ ಆಗಿ ಕಾಣಿಸಿಕೊಂಡಿರುವ ನಟಿಯೊಬ್ಬರ ಫೋಟೋ ಇದೀಗ ವೈರಲ್ ಆಗುತ್ತಿದೆ. ಟಾಲಿವುಡ್ ನಟಿ ಕೃತಿ ಶೆಟ್ಟಿ ಆಕಾಶ ನೀಲ ಬಣ್ಣದ ಲಂಗ, ಗುಲಾಬಿ ಬಣ್ಣದ ದಾವಣಿಯಲ್ಲಿ ಮಿಂಚಿದ್ದಾರೆ. ಅಲ್ಲದೆ, ಈ ಸುಂದರಿ ಚಂದುಳ್ಳಿಯ ಫೋಟೋ ಎಲ್ಲರ ಸ್ಟೇಟಸ್ ಗಳಲ್ಲಿಯೂ ಕಾಣತೊಡಗಿವೆ. ಮಂಗಳೂರಿನ ನಗುಮೊಗದ ಅರಸಿಯ ಮುಗ್ಧ ಸೌಂದರ್ಯವೇ ಇಂದು ಆಕೆಯನ್ನು ಹೆಚ್ಚು ಗಮನ ಸೆಳೆಯುವಂತೆ ಮಾಡಿರುವುದು ಸುಳ್ಳಳ್ಳ. ಸಿಂಪಲ್ ಆಗಿ ಕಾಣಿಸಿದ ನಟಿ ಅದೇ ಲುಕ್ನಲ್ಲಿ ಎಲ್ಲರ ಸ್ಟೇಟಸ್, ಸ್ಟೋರಿಯಲ್ಲಿ ಕಾಣಿಸಿಕೊಂಡಿದ್ದಾರೆ. ಆಕೆ ಬೇರೆ ಯಾರೂ ಅಲ್ಲ 18 ವರ್ಷದ ನಟಿ ಕೃತಿ ಶೆಟ್ಟಿ. ಕನ್ನಡ ಮೂಲದ ನಟ ನಟಿಯರು ಬೇರೆ ಭಾಷೆಗಳಲ್ಲಿ ಮಿಂಚುತ್ತಿರುವುದು ಹೊಸತೇನು ಅಲ್ಲ. ಅಂತಹವರ ಸಾಲಿನಲ್ಲಿ ಇರುವ ಕೃತಿ ಶೆಟ್ಟಿ, ಸದ್ಯ ತೆಲುಗು ಸಿನಿಮಾ ರಂಗದಲ್ಲಿ ಮಿಂಚುತ್ತಿದ್ದಾರೆ. 2003ರ ಸೆ.21 ರಂದು ಮಂಗಳೂರಿನಲ್ಲಿ ಜನಿಸಿದ ಕೃತಿ ಶೆಟ್ಟಿ, ಬೆಳೆದದ್ದು ಮುಂಬೈನಲ್ಲಿ. ಈಗಾಗಲೇ ಸೂಪರ್ 30 ಹಿಂದಿ ಸಿನಿಮಾದಲ್ಲಿ ಶ್ರೇಷ್ಠ ವಿದ್ಯಾರ್ಥಿಯಾಗಿ ಹಾಗೂ 2021 ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿ ತೆರೆ ಕಾಣುತ್ತಿರುವ ಉಪ್ಪೆನ ತೆಲುಗು ಸಿನಿಮಾದಲ್ಲಿ ನಾಯಕಿ ಪಾತ್ರ ವಹಿಸಿ ಖ್ಯಾತಿ ಪಡೆದಿದ್ದಾರೆ.

ಉಪ್ಪೆನ ಸಿನಿಮಾ ಮೂಲಕ ವೈರಲ್ ಆಗ್ತಿರೋ ಚೆಲುವೆ ಈಕೆ. 2011ರಿಂದಲೂ ಸಿನಿಮಾ ಮಾಡಿರೋ ಈಕೆ ಇಷ್ಟೊಂದು ವೈರಲ್ ಆಗಿದ್ದು ಮಾತ್ರ ಇದೇ ಮೊದಲು. ಕೃತಿ ಶೆಟ್ಟಿಯವರಿಗೆ ಹೆಮ್ಮೆಯ ಗರಿಯೊಂದು ಬಂದಿದೆ. ಅದೇನೆಂದರೆ, ತೆಲುಗು ಯುವ ನಟ ವೈಷ್ಣವ್ ತೇಜ್ ಅವರು ಅಭಿನಯಿಸಿದ ಹಾಗೂ ಬುಚ್ಚಿ ಬಾಬು ಸನಾ ನಿರ್ದೇಶಿದ ಉಪ್ಪೆನ ಸಿನಿಮಾದಲ್ಲಿ ಮೊದಲ ಬಾರಿಗೆ ಕೃತಿ ಬಣ್ಣ ಹಚ್ಚಿದ್ದು, ವೈಷ್ಣವ್ ಅವರದ್ದು ಕೂಡ ಮೊದಲ ಸಿನಿಮಾ ಉಪ್ಪೆನ ಆಗಿದೆ. ಕೇಲವ 22ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಸಿನಿಮಾವು ಇದೀಗ 100ಕೋಟಿ ರೂ. ಗಳಿಸಿ ಮುಂದಕ್ಕೆ ಹೋಗುತ್ತಿದೆ. ಇದರ ಖ್ಯಾತಿಯನ್ನು ಕೃತಿ ಶೆಟ್ಟಿಯವರೂ ಪಡೆದಿದ್ದಾರೆ. ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ ಕೆಲವೇ ದಿನಗಳಲ್ಲಿ ಸೂಪರ್ ಹಿಟ್ ಆಗಿ ಹೊರಹೊಮ್ಮಿರುವ ಉಪ್ಪೆನ ಸಿನಿಮಾವು ಏಪ್ರೀಲ್ ತಿಂಗಳಿನಲ್ಲಿ ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಲಿದೆ.

ಈಕೆ 8ಕ್ಕೂ ಹೆಚ್ಚು ಸಿನಿಮಾಗಳನ್ನು ಮಾಡಿದ್ದು, ಈಕೆಯ ಮುಗ್ಧ ಸೌಂದರ್ಯದಿಂದಲೇ ಸದ್ಯ ವೈರಲ್ ಆಗಿದ್ದಾರೆ ಈ ನಟಿ. ಉದಯೋನ್ಮುಖ ನಟ-ನಟಿಯರು ಸೇರಿದಂತೆ ಇನ್ನಿತರ ಸೆಲೆಬ್ರಿಟಿಗಳ ಸಿನಿಮಾಗಳನ್ನು ಅಭಿಮಾನಿಗಳು ಪರೋಕ್ಷವಾಗಿ ಸಿನಿಮಾ ನೋಡುವಂತೆ ಮಾಡಲು ಹಾಗೂ ತೆರೆ ಕಂಡ ನಂತರ ಧನ್ಯವಾದಗಳನ್ನು ತಿಳಿಸುವ ಹಿನ್ನೆಲೆಯಿಂದ ಫಿಲ್ಮ್ ಅವಾರ್ಡ್ ನಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತದೆ. ಇಂತಹ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಕೃತಿ ಶೆಟ್ಟಿಯವರು ಸಾಂಪ್ರದಾಯಿಕ ಉಡುಗೆಯಾದ ಲಂಗ ದಾವಣಿ ಉಟ್ಟುಕೊಂಡು ಬಂದು ಎಲ್ಲರ ಗಮನ ಸೆಳೆದಿದ್ದಾರೆ. ಉಪ್ಪೆನ ಸಿನಿಮಾದಲ್ಲಿ ನಟಿಸಿ ಮುನ್ನೆಲೆಗೆ ಬರುತ್ತಿರುವ ಕೃತಿ ಶೆಟ್ಟಿಯವರು ಸಿನಿಮಾದ ಮೂಲಕ ಅಷ್ಟೇನು ಸದ್ದು ಮಾಡಿರಲಿಲ್ಲ. ಆದರೆ ಕಾರ್ಯಕ್ರಮದಲ್ಲಿ ಲಂಗ ದಾವಣಿ ತೊಟ್ಟುಕೊಂಡು ತೆಗೆದಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಪಡ್ಡೆ ಹುಡುಗರ ನಿದ್ದೆಗೆಡಿಸಿದೆ.

ಶೂಟಿಂಗ್ ಹಂತದಲ್ಲಿ ಸಿನಿಮಾಗಳು
ಕೃತಿ ಶೆಟ್ಟಿಯವರು ಈಗಾಗಲೇ ಕೆಲವು ಜಾಹಿರಾತುಗಳಲ್ಲಿ ಕಾಣಿಸಿಕೊಂಡಿದ್ದು, ಎರಡು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಇದಲ್ಲದೆ ಮತ್ತೆರಡು ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿರುವ ಕೃತಿ, ಶ್ಯಾಮ್ ಸಿಂಘಾ ರಾಯ್ ಹಾಗೂ ಆ ಅಮ್ಮಾಯಿ ಗುರಿಯಿಂಚಿ ಮೀಕು ಚೆಪ್ಪಾಲಿ ಎಂಬ ಎರಡು ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸದ್ಯ ಸಿನಿಮಾದ ಶೂಟಿಂಗ್ ಪ್ರಗತಿಯಲ್ಲಿದೆ. ಸಿನಿಮಾ ರಂಗದಲ್ಲಿ ಖ್ಯಾತಿ ಗಳಿಸುತ್ತಿರುವ ಬೆನ್ನಲ್ಲೆ ಕೃತಿ ಸಿನಿಮಾವೊಂದಕ್ಕೆ 85ಲಕ್ಷ ರೂ. ಡಿಮ್ಯಾಂಡ್ ಇಡುತ್ತಿದ್ದಾರಂತೆ.

ಶ್ರೀ ಮಂತ್ರಾಲಯ ಗುರು ಬೃಂದಾವನ ಜ್ಯೋತಿಷ್ಯ ಮಂದಿರ, ಗುರೂಜಿ ಶ್ರೀ ಪರುಶುರಾಮ ಎಲ್ ಜ್ಯೋಷಿ ವ್ಯಾಪಾರ ಸಮಸ್ಯೆ ಮದುವೆ ಸಮಸ್ಯೆ ಸಂತಾನ ಸಮಸ್ಯೆ ಹಣಕಾಸಿನ ಸಮಸ್ಯೆ ಗಂಡ-ಹೆಂಡತಿ ಸಮಸ್ಯೆ ಅತ್ತೆ ಸೊಸೆ ಕಿರಿಕಿರಿ ಇನ್ನು ನಿಮ್ಮ ಜೀವನದಲ್ಲಿ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ಶ್ರೀ ಮಂತ್ರಾಲಯ ಗುರು ರಾಯರ ಅನುಗ್ರಹದಿಂದ ಮತ್ತು ದುರ್ಗಾ ಹೋಮ ಸುದರ್ಶನ ಹೋಮ ಮಹಾಗಣಪತಿ ಯಾಗ ಶ್ರೀ ಕರ ಮಂತ್ರ ಹೋಮ ಸುಗ್ರೀವ ಹೋಮ ಹಾಗೂ 1008 ಜಪ ತಪ ಹೋಮ ಹವನ ಗಳಿಂದ ಕೇವಲ 24 ಗಂಟೆಗಳಲ್ಲಿ ಶಾಶ್ವತವಾಗಿ ಪರಿಹಾರ ಶತಸಿದ್ಧ ಇಂದೇ ಸಂಪರ್ಕಿಸಿ 9845111287

Leave a Reply

Your email address will not be published. Required fields are marked *