ಕರ್ನಾಟಕ ಕಂಡ ಕುಖ್ಯಾತ ದಂತಚೋರ ವೀರಪ್ಪನ್ ಪೊಲೀಸರಿಗೆ ತಲೆನೋವಾಗಿದ್ದನು. ಕಳ್ಳ ಸಾಗಾಣಿಕೆ, ಪ್ರಾಣಿ ಹತ್ಯೆ, ಅಪಹರಣ ಹೀಗೆ ಅಕ್ರಮವಾಗಿ ಸಂಪಾದಿಸಿದ ಕೋಟಿಗಟ್ಟಲೆ ಹಣವನ್ನು ಆತ ಎಲ್ಲಿಟ್ಟಿದ್ದಾನೆ ಎಂಬುದು ಇದುವರೆಗೂ ಯಾರಿಗೂ ತಿಳಿದಿಲ್ಲ. ವೀರಪ್ಪನ್ ಮಗಳು ವಿಜಯಲಕ್ಷ್ಮಿ ಅವರು ಒಂದು ಸ್ಪೋಟಕ ಹೇಳಿಕೆಯನ್ನು ಮಾಧ್ಯಮದವರ ಮುಂದೆ ಹೇಳಿದ್ದಾರೆ. ವೀರಪ್ಪನ್ ಜೀವನ ಹಾಗೂ ವಿಜಯಲಕ್ಷ್ಮಿ ಅವರು ಹೇಳಿದ ಹೇಳಿಕೆಯ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಸತ್ಯ ಮಂಗಲಂ ಕಾಡಿನಲ್ಲಿ ತಮ್ಮ ತಂದೆ ವೀರಪ್ಪನ್ ಭಾರಿ ಪ್ರಮಾಣದ ನಿಧಿ ಅಡಗಿಸಿಟ್ಟಿದ್ದಾರೆ ಎಂದು ವೀರಪ್ಪನ್ ಪುತ್ರಿ ವಿಜಯಲಕ್ಷ್ಮಿ ಅವರು ಹೇಳಿದ್ದಾರೆ. ಪ್ರಸ್ತುತ ವಿಜಯಲಕ್ಷ್ಮಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅವರು ನಟಿಸುವ ಚಿತ್ರದ ಸಲುವಾಗಿ ಚೆನ್ನೈನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾಧ್ಯಮದ ಮುಂದೆ ಮಾತನಾಡುತ್ತಾ ವಿಜಯಲಕ್ಷ್ಮಿಯವರು ತಮ್ಮ ತಂದೆ ವೀರಪ್ಪನ್ ವಾಸಿಸುತ್ತಿದ್ದ ಸತ್ಯಮಂಗಲಂ ಕಾಡಿನಲ್ಲಿ ನಿಧಿಯನ್ನು ಅಡಗಿಸಿಟ್ಟಿದ್ದಾರೆ ಎಂಬ ಸ್ಫೋಟಕ ಹೇಳಿಕೆ ಹೇಳಿದರು. ವೀರಪ್ಪನ್ ಜನವರಿ 18, 1952 ರಲ್ಲಿ ಕರ್ನಾಟಕದ ಗೋಪೀನಾಥಂನಲ್ಲಿ ಜನಿಸುತ್ತಾನೆ. ತನ್ನ 18 ನೇ ವಯಸ್ಸಿಗೆ ಅಕ್ರಮ ಶಿಕಾರಿ, ಪ್ರಾಣಿಹತ್ಯೆಗೆ ತೊಡಗುತ್ತಾನೆ. ತನ್ನ ವಿರೋಧಿ ಪಂಗಡದವರನ್ನು ನಾಶ ಮಾಡಿ ಇಡಿ ಕಾಡನ್ನು ತನ್ನ ನಿಯಂತ್ರಣಕ್ಕೆ ಒಳಪಡಿಸಿಕೊಳ್ಳುತ್ತಾನೆ. ವೀರಪ್ಪನ್ ನಿಗೆ ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಇರುವ 6000 ಕಿಲೋಮೀಟರ್ ಉದ್ದದ ಸತ್ಯಮಂಗಲಂ ಕಾಡು ಎಂದರೆ ಇಷ್ಟವಾಗಿತ್ತು, ಆ ಕಾಡಿನಲ್ಲಿ ವೀರಪ್ಪನ್ ಬಹಳ ಸಮಯದವರೆಗೆ ವಾಸಿಸಿದ್ದನು ಮತ್ತು ಆ ಕಾಡಿನಲ್ಲಿ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿದನು.

ಸುಮಾರು 120ಕ್ಕೂ ಹೆಚ್ಚು ಜನರ ಸಾವಿಗೆ ಕಾರಣನಾಗಿ ಪೊಲೀಸರ ಕಣ್ಣು ತಪ್ಪಿಸಿ ಆನೆಗಳ ಹತ್ಯೆ ಮಾಡುತ್ತಿದ್ದನು. ಕರ್ನಾಟಕ ಮತ್ತು ತಮಿಳುನಾಡು ಪೊಲೀಸರಿಗೆ ತಲೆನೋವಾಗಿದ್ದ ವೀರಪ್ಪನ್ ಅರಣ್ಯ ಸಂಪತ್ತನ್ನು ಲೂಟಿ ಮಾಡುತ್ತಿದ್ದ. ಅರಣ್ಯದಲ್ಲಿ ಶ್ರೀಗಂಧದ ಮರಗಳು, ಆನೆ ದಂತಗಳನ್ನು ಕಳ್ಳ ಸಾಗಣೆ ಮಾಡುತ್ತಿದ್ದ. ಸುಮಾರು 2000 ಆನೆಗಳನ್ನು ವೀರಪ್ಪನ್ ಸಾಯಿಸಿದ್ದಾನೆ ಎಂಬ ವರದಿ ಲಭ್ಯವಾಗಿದೆ. ಕಳ್ಳ ಸಾಗಾಣಿಕೆ ಗುಂಪನ್ನು ಸೇರಿ ಕಳ್ಳ ಸಾಗಾಣಿಕೆಯಲ್ಲಿ ತೊಡಗಿಕೊಂಡಿದ್ದನು. ಒಮ್ಮೆ ಈತನನ್ನು ಬಂಧಿಸಿ ಬೂಧಿವಾಡ ಕಾಡಿನ ಗೆಸ್ಟ್ ಹೌಸ್ ನಲ್ಲಿ ಬಂಧಿಸಲಾಗಿತ್ತು ಆದರೆ ಲಂಚ ಕೊಟ್ಟು ಪರಾರಿಯಾದನು. ನಂತರ ಫಾರೆಸ್ಟ್ ಆಫೀಸರ್ ಚಿದಂಬರ ಅವರನ್ನು ಅಪಹರಿಸಿ ಕೊಲೆ ಮಾಡುತ್ತಾನೆ. ನಂತರ ಪೊಲೀಸರು, ಸಾಮಾನ್ಯ ಜನರು ಹಾಗೂ ಪ್ರಾಣಿಗಳಿದ್ದ ಬಸ್ಸನ್ನು ನೆಲಬಾಂಬ್ ಇಂದ ಉಡಾಯಿಸುತ್ತಾನೆ.

ಡಾಕ್ಟರ್ ರಾಜಕುಮಾರ್ ಅವರನ್ನು ಅಪಹರಿಸಿ 108 ದಿನಗಳ ಕಾಲ ಒತ್ತೆಯಾಳಾಗಿ ಕಾಡಿನಲ್ಲಿ ಇರಿಸಿಕೊಳ್ಳುತ್ತಾನೆ. ವೀರಪ್ಪನ್ ಡಾಕ್ಟರ್ ರಾಜಕುಮಾರ್ ಅವರನ್ನು ಬಿಡಲು ಸರ್ಕಾರಕ್ಕೆ ದೊಡ್ಡ ಮೊತ್ತದ ಹಣವನ್ನು ಬೇಡಿಕೆಯಿಟ್ಟಿದ್ದನು ಅಂದಿನ ಸಿಎಂ ಎಸ್ಎಂ ಕೃಷ್ಣ ಅವರ ಅಳಿಯ ಕಾಫಿ ಡೇ ಮಾಲೀಕ ಸಿದ್ದಾರ್ಥ್ ಅವರು ಹಣವನ್ನು ಕೊಟ್ಟಿದ್ದರು ಎಂದು ಪೋಲಿಸ್ ನಿರ್ದೇಶಕೊರೊಬ್ಬರು ಬರೆದ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ವೀರಪ್ಪನ್ ನಿಗೆ ತಮಿಳುನಾಡಿನ ಪ್ರಬಲ ರಾಜಕೀಯ ಪಕ್ಷಗಳ ಬೆಂಬಲವಿತ್ತು ಎಂಬ ವರದಿ ತಿಳಿದಿದೆ. ವೀರಪ್ಪನ್ ಹುಡುಕಿಕೊಟ್ಟವರಿಗೆ ಐದು ಕೋಟಿ ಬಹುಮಾನ ಘೋಷಿಸಿದರೂ ಬಹಳ ವರ್ಷಗಳ ಕಾಲ ಯಾರ ಕೈಗೂ ಸಿಗದೆ ಇರುವುದು ವಿಪರ್ಯಾಸ. 2004 ರಲ್ಲಿ ನಡೆದ ಎನ್ಕೌಂಟರ್ ನಲ್ಲಿ ಪೊಲೀಸರಿಂದ ಕೊಲ್ಲಲ್ಪಡುತ್ತಾನೆ. ವೀರಪ್ಪನ್ ಪತ್ನಿ ಮುದ್ದುಲಕ್ಷ್ಮಿ ದಂಪತಿಗೆ ವಿದ್ಯಾರಾಣಿ ಮತ್ತು ವಿಜಯಲಕ್ಷ್ಮಿ ಎಂಬ ಮಕ್ಕಳಿದ್ದಾರೆ. ವಿದ್ಯಾರಾಣಿ ರಾಜಕೀಯಕ್ಕೆ ಸೇರಿ ಮಹಿಳಾ ಯುವ ಘಟಕದ ನಾಯಕಿಯಾಗಿದ್ದಾರೆ. ವಿಜಯಲಕ್ಷ್ಮಿಯವರು ಸಿನಿಮಾ ಜಗತ್ತಿನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ವೀರಪ್ಪನ್ ನಿಧಿ ಇಟ್ಟಿರುವ ಬಗ್ಗೆ ಗೊತ್ತಿರುವ ಅನುಯಾಯಿಗಳು ಯಾರೆಂದು ಗೊತ್ತಿಲ್ಲ. ಇದೀಗ ಅಡಗಿಸಿಟ್ಟ ನಿಧಿಯನ್ನು ಹುಡುಕಲು ಎಷ್ಟು ಜನರು ಪ್ರಯತ್ನ ಪಡುತ್ತಾರೊ ಗೊತ್ತಿಲ್ಲ ಆದರೆ ಇದರಿಂದ ಕಾಡಿಗೆ ಅಪಾಯ ಕಟ್ಟಿಟ್ಟ ಬುತ್ತಿ.

Leave a Reply

Your email address will not be published. Required fields are marked *