ಕೊ’ರೊನ ಜಾಗೃತಿ ಮೂಡಿಸುತ್ತಿರುವ ಈ ತುಂಬು ಗರ್ಭಿಣಿ ಯಾರು ಗೊತ್ತೇ?

0 2

ಹೆಚ್ಚುತ್ತಿರುವ ಕೊರೋನ ವೈರಸ್ ನಿಯಂತ್ರಣಕ್ಕೆ ಬರುತ್ತಿಲ್ಲ. ಕೊರೋನ ನಿಯಮಗಳನ್ನು ಜನರು ಪಾಲಿಸದೆ ನಿರ್ಲಕ್ಷ ಮಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಕೊರೋನ ತಡೆಯುವ ಜವಾಬ್ದಾರಿ ಪೊಲೀಸ್ ಅಧಿಕಾರಿಗಳ ಮೇಲೆ ಇದೆ‌. ಆದ್ದರಿಂದ ಗರ್ಭಿಣಿ ಪೊಲೀಸ್ ಅಧಿಕಾರಿಯೊಬ್ಬರು ಜನ ಜಾಗೃತಿ ಮೂಡಿಸುತ್ತಿದ್ದಾರೆ, ಅದರ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಗರ್ಭಿಣಿ ಪೊಲೀಸ್ ಅಧಿಕಾರಿ ಡಿಎಸ್ಪಿ ಶಿಲ್ಪಾ ಸಾಹು ಅವರು ಬಿಸಿಲಿನ ತಾಪವನ್ನು ಲೆಕ್ಕಿಸದೆ ನಡುರಸ್ತೆಯಲ್ಲಿ ನಿಂತು ಕೊರೋನ ನಿಯಮಾವಳಿಗಳನ್ನು ಪಾಲಿಸುವಂತೆ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅವರು ಛತ್ತಿಸ್ ಗಡದ ದಾಂತೆವಾಡ ಪಟ್ಟಣದಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಈ ಏರಿಯಾದಲ್ಲಿ ನಕ್ಸಲರು ಅಟ್ಟಹಾಸದಿಂದ ಮೆರೆಯುತ್ತಿದ್ದಾರೆ. ಇಂತಹ ಸ್ಥಳದಲ್ಲಿ ನಿರ್ಭಿಡೆಯಾಗಿ ಸೇವೆ ಸಲ್ಲಿಸುತ್ತಿರುವ ಮಹಿಳಾ ಅಧಿಕಾರಿ ಶಿಲ್ಪಾರವರನ್ನು ಮೆಚ್ಚಲೇಬೇಕು.

ಇದೀಗ ಕೊರೋನ ತೀವ್ರವಾಗಿ ಹೆಚ್ಚುತ್ತಿರುವ ಕಾರಣ ಜನರು ಕೊರೋನ ನಿಯಮಾವಳಿಗಳನ್ನು ಪಾಲಿಸುವಂತೆ ಮಾಡುವುದು ಅವರ ಜವಾಬ್ಧಾರಿಯಾಗಿದೆ ಆದ್ದರಿಂದ ಶಿಲ್ಪಾ ಅವರು ಹಗಲಿರುಳು ರಸ್ತೆಯಲ್ಲಿ ನಿಂತು ಎಲ್ಲ ಕಡೆ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಮಾಸ್ಕ್ ಅಪ್ ಇಂಡಿಯಾ ಅಭಿಯಾನದಡಿ ಶಿಲ್ಪಾರವರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇವರ ಇನ್ನೊಂದು ವಿಶೇಷತೆಯೆಂದರೆ ಜನರ ಜೊತೆ ಯಾವತ್ತೂ ಹಾರ್ಷ್ ಆಗಿ ನಡೆದುಕೊಳ್ಳದೆ ಕೋರೊನ ಖಾಯಿಲೆಯ ಗಂಭೀರತೆಯನ್ನು ಜನರಿಗೆ ಸರಿಯಾದ ರೀತಿಯಲ್ಲಿ ತಿಳಿಸಿ ಹೇಳಿ ಅವರು ಮಾಸ್ಕ್ ಧರಿಸುವಂತೆ ಮಾಡುತ್ತಿದ್ದಾರೆ‌. ಅವರ ವಿಡಿಯೊವನ್ನು ನೋಡಿದ ಮೇಲಾದರೂ ನಾವೆಲ್ಲರೂ ಸರ್ಕಾರವನ್ನು ಧೂಷಿಸುತ್ತಾ ಕೂರುವ ಬದಲು ಮೊದಲು ನಮ್ಮ ಹಾಗೂ ನಮ್ಮವರ ಕಾಳಜಿ ನೋಡಿಕೊಳ್ಳೋಣ, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಯಾರಿಂದಲೂ ಹೇಳಿಸಿಕೊಳ್ಳದೇ ಪಾಲಿಸೋಣ. ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವಂತೆ ನಾವೆಲ್ಲರೂ ಸೇರಿ ಕೊರೋನ ತಡೆಯಲು ಮನಸ್ಸು ಮಾಡಿದರೆ ಕೊರೋನ ತಡೆಯಬಹುದು.

Leave A Reply

Your email address will not be published.