ವಿಶ್ವ ದಾಖಲೆ ಬರೆದ KL ರಾಹುಲ್ ಇದು ಕನ್ನಡಿಗರ ಹೆಮ್ಮೆ

0 2

ಭಾರತೀಯ ಕ್ರಿಕೆಟ್ ತಂಡದಲ್ಲಿ ಆಡುತ್ತಿರುವ ಒಬ್ಬ ಒಳ್ಳೆಯ ಆಟಗಾರ ಕರ್ನಾಟಕದ ಕೆ ಎಲ್ ರಾಹುಲ್ ಅವರು ಐಪಿಎಲ್ ಪಂದ್ಯಾವಳಿಯಲ್ಲಿ ರನ್ ಗಳ ಹೊಳೆಯನ್ನೇ ಹರಿಸಿದ್ದರು ಆದರೆ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಯಾವುದೇ ರನ್ನುಗಳನ್ನು ಗಳಿಸದೆ ಔಟಾಗಿದ್ದರು. ಆದರೆ ಸ್ಕಾಟ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಉತ್ತಮವಾಗಿ ಆಟವನ್ನು ಪ್ರದರ್ಶಿಸಿದಂತಹ ಕೆ ಎಲ್ ರಾಹುಲ್ ಅವರು ಕೇವಲ ಹದಿನೆಂಟು ಎಸೆತಗಳಿಗೆ ಅರ್ಧಶತಕವನ್ನು ಸಿಡಿಸಿ ಮತ್ತೆ ತಮ್ಮ ಆಟದ ಚಾಕ ಚಕ್ಯತೆಯನ್ನು ತೋರಿಸಿದ್ದಾರೆ.

ಕೆ ಎಲ್ ರಾಹುಲ್ ಅವರು ಸ್ಕಾಟ್ಲ್ಯಾಂಡ್ ವಿರುದ್ಧ ಅಬ್ಬರಿಸುವ ಮೂಲಕ ಅವರು ಹೊಸ ದಾಖಲೆ ಬರೆದಿದ್ದಾರೆ. ಕೆ ಎಲ್ ರಾಹುಲ್ ಅವರು ಕೇವಲ ಹದಿನೆಂಟು ಎಸೆತಗಳಲ್ಲಿ ಮೂರು ಸಿಕ್ಸ್ ಹಾಗೂ ಆರು ಫೋರ್ ಗಳೊಂದಿಗೆ ಅರ್ಧಶತಕ ಪೂರೈಸಿದರು. ಇದು ಈ ಬಾರಿಯ ಟಿ ಟ್ವೆಂಟಿಯ ವೇಗದ ಅರ್ಧಶತಕ ವಾಗಿದೆ.

ಅಷ್ಟೇ ಅಲ್ಲದೆ ಒಟ್ಟಾರೆ ಟಿ ಟ್ವೆಂಟಿ ವಿಶ್ವ ಕಪ್ ನ ನಾಲ್ಕನೇ ವಿಗದ ಹಾಫ್ ಸೆಂಚುರಿ ಎನ್ನುವುದು ವಿಶೇಷ. ಇನ್ನು ಟೀಮ್ ಇಂಡಿಯಾ ಪರ ಅತೀ ವೇಗದ ಅರ್ಧಶತಕ ಬಾರಿಸಿದ್ದ ಎರಡನೇ ಬ್ಯಾಟ್ಸ್ ಮ್ಯಾನ್ ಎಂಬ ದಾಖಲೆ ಕೂಡ ಕೆಎಲ್ ರಾಹುಲ್ ಅವರ ಪಾಲಾಗಿದೆ. ಈ ಹಿಂದೆ ಯುವರಾಜ್ ಸಿಂಗ್ ಅವರು ಹನ್ನೆರಡು ಎಸೆತಗಳಿಗೆ ಅರ್ಧ ಶತಕ ಬಾರಿಸಿ ವಿಶ್ವದಾಖಲೆ ಬರೆದಿದ್ದರು.

ಇದೀಗ ಕೆ ಎಲ್ ರಾಹುಲ್ ಹದಿನೆಂಟು ಎಸೆತಗಳಲ್ಲಿ ಅರ್ಧ ಶತಕ ಬಾರಿಸುವ ಮೂಲಕ ಟಿ-ಟ್ವೆಂಟಿ ವಿಶ್ವಕಪ್ ನಲ್ಲಿ ವೇಗದ ಅರ್ಧಸೆಂಚುರಿ ಬಾರಿಸಿದ ಭಾರತದ ಎರಡನೇ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇನ್ನೂ ಒಟ್ಟಾರೆಯಾಗಿ ಟಿ ಟ್ವೆಂಟಿ ವಿಶ್ವ ಕಪ್ ನಲ್ಲಿ ಯುವರಾಜ್ ಸಿಂಗ್ ಹನ್ನೆರಡು ಎಸೆತಗಳಿಗೆ ಅರ್ಧ ಶತಕ ಬಾರಿಸಿ ಅಗ್ರಸ್ಥಾನದಲ್ಲಿದ್ದರೆ

ಹದಿನೇಳು ಎಸೆತಗಳಲ್ಲಿ ಅರ್ಧ ಶತಕ ಬಾರಿಸಿದ ನೆದರ್ಲ್ಯಾಂಡ್ ನ ಸ್ಟಿಫರ್ ಮೈಬರ್ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು ಮೂರನೇ ಸ್ಥಾನದಲ್ಲಿ ಹದಿನೆಂಟು ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು ಗ್ಲೆನ್ ಮ್ಯಾಕ್ಸ್ವೆಲ್ ಇದ್ದಾರೆ ಹಾಗೆ ಇದೀಗ ಹದಿನೆಂಟು ಎಸೆತಗಳಿಗೆ ಅರ್ಧ ಸೆಂಚುರಿ ಬಾರಿಸಿದೆ ರಾಹುಲ್ ಅವರು ನಾಲ್ಕನೇ ಸ್ಥಾನದಲ್ಲಿದ್ದಾರೆ.

ಭಾರತ ತಂಡದಲ್ಲಿ ಟೆಸ್ಟ್, ಟಿ-ಟ್ವೆಂಟಿ, ಏಕದಿನ ಪಂದ್ಯಾವಳಿ ಸೇರಿದಂತೆ ಮೂರೂ ಮಾದರಿಯಲ್ಲಿ ಆಟವನ್ನು ಆಡುವ ಮೂಲಕವಾಗಿ ಕೆ ಎಲ್ ರಾಹುಲ್ ಅವರು ಉತ್ತಮ ಆಟಗಾರ ಎಂಬುದನ್ನು ಸಾಬೀತುಪಡಿಸಿದ್ದಾರೆ. ಕೆ ಎಲ್ ರಾಹುಲ್ ಅವರು ಇದುವರೆಗೂ ಒಟ್ಟು ಐವತ್ಮುರು ಟಿ ಟ್ವೆಂಟಿ ಪಂದ್ಯಾವಳಿಗಳಲ್ಲಿ ಆಡಿದ್ದು ಸಾವಿರದ ಆರು ನೂರಾ ತೊಂಬತ್ತೆಳು ರನ್ ಗಳನ್ನು ಗಳಿಸಿದ್ದಾರೆ

ಇದಲ್ಲದೆ ತೊಂಬತ್ನಾಲ್ಕು ಐಪಿಎಲ್ ಪಂದ್ಯಾವಳಿಗಳಲ್ಲಿ ಮೂರು ಸಾವಿರದ ಎರಡು ನೂರಾ ಎಪ್ಪತ್ಮೂರು ರನ್ ಗಳನ್ನು ಸಿಡಿಸುವ ಮೂಲಕವಾಗಿ ಭಾರತೀಯರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ ಅವರು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವ ಮೂಲಕ ಭಾರತದ ಕ್ರಿಕೆಟ್ ತಂಡಕ್ಕೆ ಕೀರ್ತಿಯನ್ನು ತರಲಿ ಎಂದು ನಾವು ಆಶಿಸೋಣ.

Leave A Reply

Your email address will not be published.