ಲಕ್ಷಗಳಲ್ಲಿ ಆಧಾಯ ಕೊಡುವ ಈ ಎಳನೀರು ಬಿಸಿನೆಸ್ ಕುರಿತು ಸಂಪೂರ್ಣ ಮಾಹಿತಿ

0 2

ಎಲ್ಲರಿಗೂ ಒಂದು ಯಶಸ್ವಿಯಾಗುವಂತಹ ಉದ್ಯಮವನ್ನು ಪ್ರಾರಂಭಿಸಬೇಕು ಅದನ್ನು ಚೆನ್ನಾಗಿ ಬೆಳೆಸಬೇಕು ಅದರಿಂದ ಪ್ರತಿಷ್ಠೆ ಮತ್ತು ದುಡ್ಡನ್ನು ಗಳಿಸಬೇಕು ಎನ್ನುವುದಿರುತ್ತದೆ. ಆದರೆ ನಮಗೆ ಹಣಕಾಸಿನ ಸೌಲಭ್ಯ ಇಲ್ಲದೆ ಸರಿಯಾದ ಮಾಹಿತಿ ಇಲ್ಲದೆ ನಾವದನ್ನು ಮಾಡುವುದಕ್ಕೆ ಆಗುವುದಿಲ್ಲ. ಇಂದು ನಾವು ನಿಮಗೆ ಒಂದು ಒಳ್ಳೆಯ ಉದ್ಯೋಗದ ಮಾಹಿತಿಯನ್ನು ತಿಳಿಸಿಕೊಡುತ್ತೇವೆ ಅದುವೇ ಕೋಕೋನಟ್ ವಾಟರ್ ಬಾಟಲ್ ಬಿಸಿನೆಸ್. ಈ ಉದ್ಯಮವನ್ನು ಹೇಗೆ ಮಾಡುವುದು ಇದನ್ನು ಮಾಡುವುದಕ್ಕೆ ಜಾಗ ಎಷ್ಟು ಬೇಕಾಗುತ್ತದೆ ಇದಕ್ಕೆ ಯಾವ ಕಚ್ಚಾವಸ್ತುಗಳು ಬೇಕು ಯಾವೆಲ್ಲ ಯಂತ್ರಗಳು ಬೇಕು ಇದಕ್ಕೆ ಎಷ್ಟು ಬಂಡವಾಳವನ್ನ ಹಾಕಬೇಕು ಯಾವ ರೀತಿಯ ಲಾಭ ಸಿಗುತ್ತದೆ ಯಾವ ರೀತಿ ಮಾರುಕಟ್ಟೆಯನ್ನು ಒದಗಿಸಬೇಕು ಇವೆಲ್ಲ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ.

ಎಳೆನೀರು ಆರೋಗ್ಯಕ್ಕೆ ತುಂಬಾ ಒಳ್ಳೆಯದು ನಮಗೆ ನೈಸರ್ಗಿಕವಾಗಿ ಪರಿಶುದ್ಧವಾದ ಆರೋಗ್ಯಕ್ಕೆ ಒಳ್ಳೆಯದಾದ ನೀರು ಯಾವುದು ಎಂದರೆ ಅದು ಎಳೆನೀರು ಎಂದು ಹೇಳಬಹುದು. ಎಳೆನೀರು ಕಾಯಿಯಾದ ನಂತರ ಇದನ್ನು ಸಾಕಷ್ಟು ರೀತಿಯಲ್ಲಿ ಬಳಸಿಕೊಳ್ಳಬಹುದು ಅಡುಗೆಯಲ್ಲಿ ಬಳಸಬಹುದು ಸಿಹಿ ತಿನಿಸುಗಳನ್ನು ತಯಾರಿಸಬಹುದು.

ಹೆಚ್ಚಿನ ಜನರು ಆರೋಗ್ಯದ ದೃಷ್ಟಿಯಿಂದ ಎಳೆನೀರನ್ನು ಕುಡಿಯುತ್ತಾರೆ ಇತ್ತೀಚಿನ ದಿನಗಳಲ್ಲಿ ಎಳೆನೀರಿಗಿಂತ ಎಳೆನೀರಿನ ಬೊಟೆಲ್ ಗಳಿಗೆ ತುಂಬಾ ಬೇಡಿಕೆ ಇದೆಯೆಂದು ಹೇಳಬಹುದು. ಪ್ರಪಂಚದಾದ್ಯಂತ ಕೊಬ್ಬರಿ ಉತ್ಪಾದನೆಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ ಎಳೆನೀರಿನ ಬಾಟಲಿಗಳನ್ನು ಪರಿಚಯ ಮಾಡಿರುವುದು ತೈವಾನ್ ಮತ್ತು ಮಲೇಶಿಯಾ ದೇಶಗಳು. ಅಲ್ಲಿಂದಲೇ ಇದು ಭಾರತಕ್ಕೆ ಬಂದಿರುವಂತದ್ದು ದೊಡ್ಡ ದೊಡ್ಡ ಕಂಪನಿಗಳು ಕೂಡ ಈಗ ಇದರ ತಯಾರಿಕೆ ಮಾಡುತ್ತಿವೆ.

ದೂರದ ಸ್ಥಳಗಳಿಗೆ ಪ್ರಯಾಣ ಮಾಡುವಾಗ ಎಳೆನೀರಿನ ಕಾಯಿಗಳನ್ನು ತೆಗೆದುಕೊಂಡು ಹೋಗುವುದಕ್ಕೆ ಆಗುವುದಿಲ್ಲ ಆ ಸಮಯದಲ್ಲಿ ಬಾಟಲಿಗಳಲ್ಲಿ ಎಳೆನೀರನ್ನು ತೆಗೆದುಕೊಂಡು ಹೋಗುವುದಕ್ಕೆ ಸಹಾಯವಾಗುತ್ತದೆ. ಇದು ಮೂರು ತಿಂಗಳವರೆಗೆ ಬಾಳಿಕೆ ಬರುತ್ತದೆ ಎಳೆನೀರಿನ ಬಾಟಲಿಗಳನ್ನು ತಯಾರಿಸುವ ಉದ್ಯಮವನ್ನು ಚಿಕ್ಕ ಪ್ರಮಾಣದಲ್ಲಿ ಪ್ರಾರಂಭಿಸಬಹುದು.

ಸುಮಾರು ನೂರು ಅಡಿ ಜಾಗದಿಂದ ಹಿಡಿದು ಸಾವಿರ ಅಡಿ ಜಾಗದ ವರೆಗೆ ನಮ್ಮ ಬಂಡವಾಳದ ಆಧಾರದ ಮೇಲೆ ಇದನ್ನು ಪ್ರಾರಂಭಿಸಬಹುದು. ಉದ್ಯಮವನ್ನು ಪ್ರಾರಂಭಿಸುವ ಮೊದಲು ರಿಜಿಸ್ಟ್ರೇಷನ್ ಮಾಡಿಸಿಕೊಳ್ಳಬೇಕು ಹಾಗೆ ಟ್ರೇಡ್ ಲೈಸೆನ್ಸ್ ಜಿಎಸ್ಟಿ ನಂಬರ್ ಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಜೊತೆಗೆ ಎಫ್ ಎಸ್ ಎಸ್ ಎ ಐ ನಿಂದ ಸರ್ಟಿಫಿಕೇಟನ್ನು ತೆಗೆದುಕೊಳ್ಳಬೇಕಾಗುತ್ತದೆ. ನಿಮ್ಮದೇ ಆದಂತಹ ಒಂದು ಲೋಗೋ ಮತ್ತು ಬ್ರ್ಯಾಂಡನ್ನು ರಿಜಿಸ್ಟರ್ ಮಾಡಿಕೊಳ್ಳಬೇಕು.

ಉದ್ಯಮವನ್ನು ಪ್ರಾರಂಭಿಸುವುದಕ್ಕೆ ನಿಮಗೆ ಬೇಕಾದಂತಹ ಕಚ್ಚಾ ವಸ್ತು ಯಾವುದು ಎಂದರೆ ಕಾಯಿ. ಇದನ್ನು ನೀವು ಎಲ್ಲಿ ಪಡೆದುಕೊಳ್ಳಬೇಕು ಎಂದರೆ ನೇರವಾಗಿ ರೈತರಿಂದ ಹೋಲ್ಸೇಲ್ ಬೆಲೆಗೆ ಇದನ್ನ ಪಡೆದುಕೊಳ್ಳಬಹುದು. ಇದಕ್ಕೆ ಯಾವ ಯಂತ್ರಗಳು ಬೇಕಾಗುತ್ತವೆ ಎಂದರೆ ಕೊಕೊನೆಟ್ ಕಟಿಂಗ್ ಮಷೀನ್ ಕೂಲಿಂಗ್ ಮಷೀನ್ ಟ್ಯಾಂಕರ್ ಫಾಸ್ಟ್ರೈಜೇಶನ್ ಪ್ಲಾಂಟ್ ಯು ಎಸ್ ಟಿ ಸ್ಟರಿಲೈಸ ಹಾಗೆ ಬಾಟಲಿಂಗ್ ಮಷೀನ್ ಲೇಬಲ್ ಮತ್ತು ಕಾಲಿ ಬಾಟಲಿಗಳು. ನಿವು ಈಷ್ಟು ಎಂಎಲ್ ಗಳನ್ನ ಮಾರುತ್ತಿರಿ ಅದರ ಆಧಾರದ ಮೇಲೆ ಅಷ್ಟು ಎಂಎಲ್ ಬಾಟಲಿಗಳನ್ನು ಪಡೆದುಕೊಳ್ಳಬೇಕು. ನೂರು ಎಂ ಎಲ್ ಇಂದ ಹಿಡಿದು ಒಂದು ಲೆಟರ್ ಬಾಟಲಿವರೆಗೂ ನೀವು ಮಾಡಬಹುದು.

ಮೊದಲನೆಯದಾಗಿ ನೀವು ತಂದಿರುವ ಕಾಯಿಗಳನ್ನು ಪೂರ್ತಿಯಾಗಿ ಸ್ವಚ್ಛಗೊಳಿಸಬೇಕು ನಂತರ ಅದರಲ್ಲಿರುವ ಎಳೆನೀರನ್ನು ಕೂಲಿಂಗ್ ಮಷೀನ್ ಗೆ ಹಾಕಿ ಎರಡರಿಂದ ನಾಲ್ಕು ಡಿಗ್ರಿಯವರೆಗೆ ತಂಪು ಮಾಡಬೇಕಾಗುತ್ತದೆ. ನಂತರ ಫ್ಯಾಟ್ ಸ್ಕಿಲ್ಲಿಂಗ್ ಮೂಲಕ ಅದರಲ್ಲಿರುವ ಫ್ಯಾಟ್ ಗಳನ್ನು ತೆಗೆಯಬೇಕಾಗುತ್ತದೆ ಆಗ ಪಾಶ್ಚರೈಜೇಷನ್ ಪೂರ್ತಿಯಾಗುತ್ತದೆ. ನಂತರ ಅದು ಟ್ಯಾಂಕ್ ನಲ್ಲಿ ಶೇಖರಣೆ ಆಗುತ್ತದೆ ಅಲ್ಲಿಂದ ಯು ಎಸ್ ಟಿ ಸ್ಟರಿಲೈಸ ಪೂರ್ತಿ ಆಗುತ್ತದೆ.

ಇದನ್ನು ನಿಮಗೆ ಎಷ್ಟು ಎಂಎಲ್ ಬೇಕು ಆರೀತಿಯ ಬಾಟಲ್ ಗಳಲ್ಲಿ ಪ್ಯಾಕಿಂಗ್ ಮಾಡಬಹುದು. ಬಾಟಲಿಗಳನ್ನು ಅಟೋಮೆಟಿಕ್ ಮಷೀನ್ ಗಳಲ್ಲಿ ಡಿಕೋಡಿಂಗ್ ಮೂಲಕ ಫಾಕಿಂಗ್ ಮಾಡಬೇಕಾಗುತ್ತದೆ. ಮಶೀನಗಳು ನಿಮಗೆ ಟ್ರೇಡ್ ಇಂಡಿಯಾ.ಕಾಮ್ ನಲ್ಲಿ ಅಥವಾ ಇಂಡಿಯಾ ಮಾರ್ಟ್. ಕಾಮ್ ನಲ್ಲು ಸಿಗುತ್ತದೆ. ಇವುಗಳನ್ನು ನೀವು ಆನ್ಲೈನ್ ಮೂಲಕ ನೋಡಿ ನೇರವಾಗಿ ಅವರ ಬಳಿ ಹೋಗಿ ತೆಗೆದುಕೊಳ್ಳಬೇಕಾಗುತ್ತದೆ. ಉದ್ಯಮವನ್ನು ಚಿಕ್ಕ ಪ್ರಮಾಣದಲ್ಲಿ ಪ್ರಾರಂಭಿಸಬೇಕು ಎಂದರೂ ನಿಮಗೆ ಹದಿನೈದು ಲಕ್ಷ ರೂಪಾಯಿ ಬೇಕಾಗುತ್ತದೆ.

ಇನ್ನು ಇದರಿಂದ ಯಾವ ರೀತಿಯ ಲಾಭ ಬರುತ್ತದೆ ಎಂಬುದನ್ನು ನೋಡುವುದಾದರೆ ನೀವು ರೈತರ ಬಳಿ ಕಾಯಿಗಳನ್ನು ಹೋಲ್ಸೇಲಾಗಿ ಕೊಂಡುಕೊಳ್ಳಬಹುದು ಮಾರುಕಟ್ಟೆಯಲ್ಲಿ ಎಳೆನೀರಿನ ಬೆಲೆ ಮುವತ್ತು ರೂಪಾಯಿಂದ ನಲವತ್ತು ರೂಪಾಯಿವರೆಗೆ ಇರುತ್ತದೆ. ಹೋಲ್ಸೇಲಾಗಿ ತೆಗೆದುಕೊಳ್ಳುವಾಗ ಸಹ ಇದರ ಬೆಲೆ ಬದಲಾಗುತ್ತಿರುತ್ತದೆ. ರೈತರಿಂದಲೇ ನೇರವಾಗಿ ಕಾಯಿಗಳನ್ನು ತೆಗೆದುಕೊಂಡು ಎಳನೀರಿನ ಬಾಟಲಿಗಳನ್ನು ತಯಾರು ಮಾಡುವುದು ಒಳ್ಳೆಯದು.

ರಸ್ತೆ ಬದಿಯಲ್ಲಿ ಮಾರಾಟ ಮಾಡುವವರು ಒಂದು ಲೀಟರ್ ಎಳೆನೀರು ಬಾಟಲಿಗಳನ್ನು ನೂರು ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ ದೊಡ್ಡ ದೊಡ್ಡ ಕಂಪನಿಗಳು ಒಂದು ಲೀಟರ್ ಬಾಟಲಿಗಳನ್ನು ಪ್ಯಾಕಿಂಗ್ ಮಾಡಿ ನೂರಾ ನಲವತ್ತು ರೂಪಾಯಿವರೆಗೂ ಮಾರಾಟ ಮಾಡುತ್ತವೆ. ನೀವು ಪ್ರತಿ ಲೀಟರ್ ಗೆ ನೂರಾ ಇಪ್ಪತ್ತರಿಂದ ನೂರಾ ಮುವತ್ತು ರೂಪಾಯಿವರೆಗೂ ಮಾರಾಟ ಮಾಡಬಹುದು. ಇದರಿಂದ ನಿಮಗೆ ಒಳ್ಳೆಯ ಲಾಭ ಸಿಗುತ್ತದೆ. ಒಂದು ಲೀಟರ್ ಮೇಲೆ ನಿಮಗೆ ಎಲ್ಲಾ ಖರ್ಚು ಕಳೆದು ನಲವತ್ತು ರೂಪಾಯಿ ಲಾಭ ಸಿಗುತ್ತದೆ.

ಎಳೆನೀರಿನ ಬಾಟಲಿಗಳಿಗೆ ಉತ್ತರ ಭಾರತದಲ್ಲಿ ತುಂಬಾ ಬೇಡಿಕೆಯಿದ್ದು ನೀವು ಅಲ್ಲಿಗೆ ರಫ್ತು ಮಾಡಬಹುದು ನೀವು ಅಂಗಡಿಗಳಿಗೆ ಒಳ್ಳೆಯ ಹೋಲ್ಸೇಲ್ ಬೆಲೆಗೆ ಕೊಡುವುದರಿಂದ ಅವರು ನಿಮ್ಮ ಬ್ರಾಂಡನ್ ಪ್ರಮೋಟ್ ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ರೆಸ್ಟೋರೆಂಟ್ಗಳಲ್ಲಿ ಕೂಡ ಇವುಗಳಿಗೆ ಬೇಡಿಕೆ ಬರುತ್ತಿದೆ. ನೀವು ಅಲ್ಲಿಯೂ ಕೂಡ ಮಾರಾಟ ಮಾಡಬಹುದು ಜೊತೆಗೆ ಮಾಲ್ ಗಳಲ್ಲಿ ಪಾರ್ಕ್ ಬಳಿ ಇರುವ ಅಂಗಡಿಗಳಿಗೂ ಕೂಡ ಮಾರಾಟ ಮಾಡಬಹುದು.

ಸಾಫ್ಟ್ ಡ್ರಿಂಕ್ಸ್ ಗಳಿಗಿಂತ ಎಳೆನೀರು ತುಂಬಾ ಒಳ್ಳೆಯದು ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಇದನ್ನ ಕುಡಿಯುತ್ತಾರೆ ಅನಾರೋಗ್ಯದಿಂದ ಇರುವವರಿಗೂ ಕೂಡ ಇದನ್ನು ಕೊಡುತ್ತಾರೆ ಹಾಗಾಗಿ ಇದಕ್ಕೆ ತುಂಬಾ ಬೇಡಿಕೆ ಇದೆ ಎಂದು ಹೇಳಬಹುದು. ಜೊತೆಗೆ ಇದು ರೋಗನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ ಜೊತೆಗೆ ದೇಹದ ಉಷ್ಣಾಂಶವನ್ನು ಸಮತೋಲನದಲ್ಲಿಡುತ್ತದೆ. ಕೇರಳದಲ್ಲಿ ತುಂಬಾ ಜನರು ಈ ಉದ್ಯಮವನ್ನು ಪ್ರಾರಂಭಿಸಿ ಒಳ್ಳೆಯ ಲಾಭವನ್ನುಗಳಿಸುತ್ತಿದ್ದಾರೆ ನೀವು ಕೂಡ ಈ ಉದ್ಯಮವನ್ನು ಪ್ರಾರಂಭಿಸಿ ಒಳ್ಳೆಯ ಲಾಭವನ್ನು ಗಳಿಸಬಹುದು. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಸ್ನೇಹಿತರು ಹಾಗೂ ಪರಿಚಿತರಿಗೂ ತಿಳಿಸಿರಿ.

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.