ರಾಜ್ ಕುಟುಂಬ ಬಿಟ್ಟು ವಿನೋದ್ ರಾಜ್ ಒಬ್ಬರೇ ಅಪ್ಪುವಿನ ಶ್ರದ್ದಾ ಕಾರ್ಯ ಮಾಡಿದ್ದೇಕೆ, ನೋಡಿ

0 3

ಕೇವಲ 46ನೆ ವಯಸ್ಸಿಗೆ ಪುನೀತ್ ರಾಜಕುಮಾರ್ ಅವರಂತಹ ಅದ್ಭುತ ವ್ಯಕ್ತಿತ್ವ ನಮ್ಮೆಲ್ಲರನ್ನು ಬಿಟ್ಟು ಬಾರದ ಲೋಕಕ್ಕೆ ಮರಳಿದ್ದಾರೆ. ಅವರ ಹನ್ನೊಂದನೆ ದಿನದ ಕಾರ್ಯವನ್ನು ರಾಜ್ ಕುಟುಂಬವನ್ನು ಬಿಟ್ಟು ವಿನೋದ್ ರಾಜ್ ಅವರು ಪ್ರತ್ಯೇಕವಾಗಿ ಮಾಡಿದ್ದಾರೆ ಅದರ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.

ಅಪ್ಪು ನಮ್ಮೊಂದಿಗಿಲ್ಲ ಎಂಬ ಸತ್ಯವನ್ನು ಯಾರಿಗೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಆದರೂ ರಾಜ್ ಕುಟುಂಬ ಅಗಲಿದವರಿಗೆ ಸಲ್ಲಿಸಬೇಕಾದಂತಹ ಎಲ್ಲಾ ಗೌರವ ಹಾಗೂ ಕಾರ್ಯಗಳನ್ನು ನೊಂದ ಮನಸ್ಸಿನಿಂದ ಮಾಡುತ್ತಾ ಬಂದಿದ್ದಾರೆ. ಹೀಗಿರುವಾಗ ಆ ಕುಟುಂಬದವರನ್ನು ಬಿಟ್ಟು ವಿನೋದ್ ರಾಜ್ ಮತ್ತು ಲೀಲಾವತಿ ಅಮ್ಮ ಶ್ರೀರಂಗಪಟ್ಟಣಕ್ಕೆ ಹೋಗಿ ಪುನೀತ್ ರಾಜಕುಮಾರ್ ಅವರ ಕಾರ್ಯವನ್ನು ಮಾಡಿದ್ದಾರೆ ಎಂಬ ಸುದ್ದಿ ಲಭ್ಯವಾಗಿದೆ.

ಪುನೀತ್ ಅವರ ಹನ್ನೊಂದನೆ ದಿನದಂದು ಶಿವರಾಜಕುಮಾರ್ ಅವರ ಮುಂದಾಳತ್ವದಲ್ಲಿ ಪುನೀತ್ ರಾಜಕುಮಾರ್ ಅವರ ಎಲ್ಲಾ ಕಾರ್ಯಗಳನ್ನು ಮನೆಯಲ್ಲಿ ಹಾಗೂ ಕಂಠೀರವ ಸ್ಟೇಡಿಯಂನಲ್ಲಿ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಸಾವಿರಾರು ಜನಕ್ಕೆ ಅನ್ನಸಂತರ್ಪಣೆ ನಡೆಸಿ ಪುನೀತ್ ರಾಜಕುಮಾರ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬೇಡಿಕೊಂಡರು.

ಹೀಗಿರುವಾಗ ರಾಜ್ ಕುಟುಂಬವನ್ನು ಬಿಟ್ಟು ವಿನೋದ್ ರಾಜ್ ಮತ್ತು ಲೀಲಾವತಿ ಅಮ್ಮ ಶ್ರೀರಂಗಪಟ್ಟಣಕ್ಕೆ ಹೋಗಿ ಪುನೀತ್ ರಾಜಕುಮಾರ್ ಅವರ ಶ್ರಾದ್ಧಾ ಕಾರ್ಯಗಳನ್ನು ಮಾಡಿದ್ದಾರೆ. ಶ್ರೀರಂಗಪಟ್ಟಣದ ಗಂಜಾಮ ಬಳಿಯಿರುವ ಸಂಗಮದಲ್ಲಿ ವೈದಿಕ ಕಾರ್ಯ, ಆಶ್ಲೇಷ ಬಲಿ ಮತ್ತು ನಾರಾಯಣ ಪೂಜೆಯನ್ನು ನಟ ವಿನೋದ್ ರಾಜ್ ಮತ್ತು ಲೀಲಾವತಿಯವರು ಮಾಡಿ ಅಪ್ಪು ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೋರಿದರು.

ಇದನ್ನು ಗಮನಿಸಿದಂತಹ ಜನರು ನೀವೇಕೆ ಪುನೀತ್ ರಾಜಕುಮಾರ್ ಅವರ ಕಾರ್ಯ ಮಾಡುತ್ತಿದ್ದೀರಾ ಎಂದು ಕೇಳಿದಾಗ ವಿನೋದ್ ರಾಜ್ ಅವರು ನೋಡಿ ಪುನೀತ್ ರಾಜಕುಮಾರ್ ಅವರು ನನ್ನ ಅಣ್ಣನ ತರ ಆದ್ದರಿಂದ ನಾನು ಮತ್ತು ನನ್ನ ತಾಯಿ ಮಾತನಾಡಿಕೊಂಡು ಈ ಕಾರ್ಯವನ್ನು ನೆರವೇರಿಸಲು ಬಯಸಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬೇಡಿಕೊಂಡೆವು ಎಂದು ಹೇಳುತ್ತಾ ವಿನೋದ್ ರಾಜ್ ಅವರು ಕಂಬನಿ ಮಿಡಿದರು. ಇದರಿಂದ ಪುನೀತ್ ರಾಜಕುಮಾರ್ ಅವರು ವಿನೋದ್ ರಾಜ್ ಅವರನ್ನು ಪ್ರೀತಿಯಿಂದ ನೋಡುತ್ತಿದ್ದರು ಎಂದು ತಿಳಿಯುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.