Ultimate magazine theme for WordPress.

ಕಿವಿಹಣ್ಣು ತಿನ್ನೋದ್ರಿಂದ ಶರೀರಕ್ಕೆ ಎಷ್ಟೊಂದು ಲಾಭವಿದೆ ತಿಳಿಯಿರಿ

0 8

ನಾವು ನಮ್ಮ ದಿನನಿತ್ಯದ ಜೀವನದಲ್ಲಿ ಎಷ್ಟೋ ವಿಧವಾದ ಹಣ್ಣು ಹಾಗೂ ತರಕಾರಿಗಳನ್ನು ಸೇವನೆ ಮಾಡುತ್ತೇವೆ. ಇದರಿಂದ ನಮ್ಮ ದೇಹಕ್ಕೆ ಸಾಕಷ್ಟು ರೀತಿಯ ಪ್ರಯೋಜನಗಳಿವೆ. ಪ್ರತಿ ನಿತ್ಯವೂ ಸ್ವಲ್ಪ ಪ್ರಮಾಣದಲ್ಲಿಯಾದರೂ ಹಣ್ಣುಗಳ ಸೇವನೆ ಮಾಡುವುದರಿಂದ ಅದೆಷ್ಟೋ ರೀತಿ ಅನಾರೋಗ್ಯ ಸಮಸ್ಯೆಯಿಂದ ಹೊರಬರಬಹುದು. ಹಣ್ಣುಗಳಲ್ಲಿ ಇರುವಂತ ನ್ಯೂಟ್ರಿಯೆಂಟ್ಸ್ ನಮ್ಮ ದೇಹದ ಆರೋಗ್ಯಕ್ಕೆ ಬಹಳಷ್ಟು ಒಳ್ಳೆಯದು. ಸಾಮಾನ್ಯವಾಗಿ ನಾವು ಹೆಚ್ಚಾಗಿ ನಮ್ಮ ದಿನನಿತ್ಯದಲ್ಲಿ ಸೇಬು ಹಣ್ಣು ಮಾವಿನ ಹಣ್ಣುಗಳು ಬಾಳೆಹಣ್ಣು ಇವುಗಳನ್ನು ಹೆಚ್ಚಾಗಿ ಸೇವಿಸುತ್ತೇವೆ. ಈ ಹಣ್ಣುಗಳನ್ನು ನೋಡುವುದಕ್ಕೆ ಬಹಳ ಆಕರ್ಷಕವಾಗಿ ಕಾಣುವುದು ಮಾತ್ರವಲ್ಲದೆ ಇದರಲ್ಲಿ ಸಾಕಷ್ಟು ನ್ಯೂಟ್ರಿಯೆಂಟ್ಸ್ ಇವೆ. ಇದೇ ರೀತಿ ಕಿವಿ ಹಣ್ಣು ಕೂಡಾ. ಈ ಲೇಖನದ ಮೂಲಕ ನಾವು ಕಿವಿಫ್ರೂಟ್ಸ್ ನ ಆರೋಗ್ಯಕರ ಲಾಭಗಳ ಬಗ್ಗೆ ತಿಳಿದುಕೊಳ್ಳೋಣ.

ಕಿವಿಫ್ರೂಟ್ ಇದು ನಮಗೆ ಎಲ್ಲಾ ಕಾಲದಲ್ಲಿಯೂ ಲಭ್ಯವಿರುವಂತಹ ಹಣ್ಣು ಎಲ್ಲಾ ಮಾರ್ಕೆಟ್ ಗಳಲ್ಲಿ ಕಿವಿ ಫ್ರೂಟ್ಸ್ ನಮಗೆ ದೊರೆಯುತ್ತವೆ. ಈ ಹಣ್ಣು ಕೂಡ ನೋಡುವುದಕ್ಕೆ ಆಕರ್ಷಕವಾಗಿ ಕಾಣುತ್ತದೆ. ಅದೇ ರೀತಿ ಕಿವಿ ಫ್ರೂಟ್ಸ್ ಇದು ಕೂಡ ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು. ಕಿವಿ ಫ್ರೂಟ್ಸ್ ಇದರಲ್ಲಿ ವಿಟಮಿನ್ ಸಿ, ವಿಟಮಿನ್ ಡಿ, ವಿಟಮಿನ್ ಇ, ವಿಟಮಿನ್ ಕೆ, ಫೋಲಿಕ್ ಆಸಿಡ್ ಮತ್ತು ಪೊಟ್ಯಾಷಿಯಂ ಈ ಅಂಶಗಳು ಅಧಿಕವಾಗಿ ಇರುವುದರಿಂದ ಇದು ನಮ್ಮ ದೇಹದ ಆರೋಗ್ಯಕ್ಕೆ ಬಹಳ ಒಳ್ಳೆಯದು. ಈ ಹಣ್ಣಿನಲ್ಲಿ ಆಂಟಿಆಕ್ಸಿಡೆಂಟ್ ಗಳು ಹೇರಳವಾಗಿರುತ್ತದೆ.

ಈ ಎಲ್ಲ ಅಂಶಗಳು ಇರುವುದರಿಂದ ಕಿವಿ ಫ್ರೂಟ್ಸ್ ನಮ್ಮ ಹೃದಯ ಸಂಬಂಧಿತ ಕಾಯಿಲೆಗಳನ್ನು ದೂರಮಾಡುತ್ತದೆ. ಹೈ ಬ್ಲಡ್ ಫ್ರೆಶರ್, ಚರ್ಮವ್ಯಾಧಿಗಳು, ಡಯಾಬಿಟಿಸ್ ಮತ್ತು ತೂಕವನ್ನು ಇಳಿಸಿಕೊಳ್ಳುವುದಕ್ಕೆ ಇದು ಬಹಳಷ್ಟು ಸಹಾಯಕಾರಿ. ಅಷ್ಟೇ ಅಲ್ಲದೆ ಮುಖದಲ್ಲಿ ಇರುವಂತಹ ನೆರಿಗೆಗಳು ಕೂದಲು ಉದುರುವಿಕೆ ಹಾಗೂ ಬಿಳಿ ಕೂದಲು ಈ ಸಮಸ್ಯೆಗಳನ್ನು ಕೂಡ ಬಹಳ ವೇಗವಾಗಿ ನಿವಾರಣೆ ಮಾಡುತ್ತದೆ. ಕಿವಿ ಫ್ರೂಟ್ಸ್ ಇದರಿಂದ ನಮ್ಮ ದೇಹಕ್ಕೆ ಸಿಗುವಂತಹ ಉಪಯೋಗಗಳು ಹಾಗೂ ಇದನ್ನು ಸರಿಯಾದ ಕ್ರಮದಲ್ಲಿ ತೆಗೆದುಕೊಳ್ಳುವ ವಿಧಾನ ಹೇಗೆ ಎನ್ನುವುದನ್ನು ನೋಡುವುದಾದರೆ..

ಕಿವಿ ಹಣ್ಣಿನಲ್ಲಿ ಪ್ರೋಟೀನ್ ಅಂಶ ಅಧಿಕವಾಗಿರುತ್ತದೆ ಈ ಮೂಲಕ ಇದು ನಮ್ಮ ಶರೀರದಲ್ಲಿ ಕೊಬ್ಬಿನ ಅಂಶ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ. ಹಾಗಾಗಿ ಕಿವಿ ಫ್ರೂಟ್ ಇದನ್ನು ಬೆಳಗಿನ ಸಮಯದಲ್ಲಿ ಸೇವನೆ ಮಾಡುವುದರಿಂದ ನಮ್ಮ ದೇಹದ ತೂಕವನ್ನು ಸಮತೋಲನದಲ್ಲಿ ಇರುವಂತೆ ನೋಡಿಕೊಳ್ಳುತ್ತದೆ. ಹಾಗಾಗಿ ತೂಕ ಇಳಿಸಿಕೊಳ್ಳಬೇಕು ಎಂದು ಇಚ್ಚಿಸುವವರು ಪ್ರತಿದಿನ ತಪ್ಪದೆ ಬೆಳಗಿನ ಸಮಯದಲ್ಲಿ ಕಿವಿ ಹಣ್ಣಿನ ಸೇವನೆ ಮಾಡುವುದು ಉತ್ತಮ. ಅಷ್ಟೇ ಅಲ್ಲದೆ ಕಿವಿ ಹಣ್ಣಿನಲ್ಲಿ ಫೈಬರ್ ಅಂಶ ಅಧಿಕವಾಗಿರುತ್ತದೆ ಈ ಕಾರಣದಿಂದ ನಮ್ಮ ಹೃದಯವನ್ನು ಆರೋಗ್ಯಕರವಾದ ಇರಿಸಿ ಅದೆಷ್ಟೋ ಭಯಂಕರವಾದ ರೋಗದಿಂದ ನಮ್ಮ ಹೃದಯವನ್ನು ರಕ್ಷಿಸುತ್ತದೆ ಹಾಗೂ ಅಷ್ಟೇ ಅಲ್ಲದೆ ಮಲಬದ್ಧತೆ ಸಮಸ್ಯೆಯನ್ನು ಕೂಡ ನಿವಾರಣೆ ಮಾಡುತ್ತದೆ.

ಕಿವಿ ಹಣ್ಣಿನ ಸತತವಾದ ಸೇವನೆಯಿಂದ ಲಿವರ್ ಸ್ಟ್ರೋಕ್ ಮತ್ತು ಕಾರ್ಡಿಯ ಕೆರೆಸ್ಟ್ ಅಂದರೆ ಹಾರ್ಟ್ ಅಟ್ಯಾಕ್ ಸಮಸ್ಯೆಯಿಂದ ನಮ್ಮನ್ನು ರಕ್ಷಿಸುತ್ತದೆ. ಕಿವಿ ಹಣ್ಣಿನಲ್ಲಿ ಇರುವಂತಹ ಗುಣಗಳ ನಮ್ಮ ರಕ್ತನಾಳದಲ್ಲಿ ಸೇರಿರುವ ಕೊಬ್ಬಿನ ಅಂಶಗಳನ್ನು ಕರಗಿಸಿ ಸರಾಗವಾಗಿ ರಕ್ತಸಂಚಲನ ಆಗುವಂತೆ ನೋಡಿಕೊಳ್ಳುತ್ತದೆ ಹಾಗಾಗಿ ಹೈ ಕೊಲೆಸ್ಟ್ರಾಲ್ ಸಮಸ್ಯೆ ಇರುವವರು ಪ್ರತಿನಿತ್ಯ ಬೆಳಗ್ಗೆ ಕಿವಿ ಹಣ್ಣನ್ನು ಸೇವಿಸುವುದು ಉತ್ತಮ.

ಇಷ್ಟೇ ಅಲ್ಲದೆ ಕಿವಿ ಹಣ್ಣು ನಮ್ಮ ದೇಹದಲ್ಲಿ ಕ್ಯಾನ್ಸರ್ ಕಣಗಳ ಉತ್ಪತ್ತಿ ಆಗದಂತೆ ಅವುಗಳನ್ನು ನಿಯಂತ್ರಣ ಮಾಡುತ್ತದೆ. ಕಿವಿ ಹಣ್ಣಿನಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚಾಗಿರುವುದರಿಂದ ನಮ್ಮ ಬ್ಲಡ್ ಪ್ರಶರ್ ಅನ್ನು ನಿಯಂತ್ರಣ ಮಾಡುತ್ತದೆ ಹಾಗೂ ಸೋಡಿಯಂ ಪ್ರಮಾಣವನ್ನು ಕೂಡ ನಿಯಂತ್ರಿಸುತ್ತದೆ. ಅಷ್ಟೇ ಅಲ್ಲದೆ ಇದರಲ್ಲಿ ಆಂಟಿ ಇನ್ ಫ್ಲೋಮೇಟರಿ ಗುಣಗಳು ಸಹ ಅಧಿಕವಾಗಿರುತ್ತದೆ. ಈ ಅಂಶಗಳು ಕೀಲು ಊತ ಸಂಧಿ ನೋವು ಹಾಗೂ ನಿದ್ರಾ ಹೀನತೆ ಸಮಸ್ಯೆಯನ್ನು ಸಹ ದೂರಮಾಡುತ್ತದೆ. ಕೊಲೆಜಿನ್ ಹಾಗೂ ವಿಟಮಿನ್ ಸಿ ಪ್ರಮಾಣ ಹೆಚ್ಚಾಗಿರುವುದರಿಂದ ನಮ್ಮ ಚರ್ಮವನ್ನು ಆರೋಗ್ಯವಾಗಿರಿಸುತ್ತದೆ. ಇದರಲ್ಲಿ ಇರುವಂತ ಆಂಟಿಆಕ್ಸಿಡೆಂಟ್ ಅಂಶಗಳು ನಮ್ಮ ಚರ್ಮವನ್ನು ಯವ್ವನ ವಾಗಿರುವಂತೆ ಕಾಪಾಡುತ್ತದೆ ಹಾಗೂ ಮೊಡವೆಗಳು ಆಗದಂತೆ ತಡೆಯುತ್ತದೆ.

ಚಿಕ್ಕ ವಯಸ್ಸಿನಲ್ಲಿ ಕಾಣಿಸಿಕೊಳ್ಳುವ ಬಿಳಿ ಕೂದಲಿನ ಸಮಸ್ಯೆ ಹಾಗೂ ಕೂದಲು ಸಮಸ್ಯೆಗಳು ಕೂಡ ಇದರ ಸೇವನೆಯಿಂದ ನಿವಾರಣೆಯಾಗುತ್ತದೆ. ಕಣ್ಣು ದೃಷ್ಠಿ ಸಮಸ್ಯೆ ಇರುವವರು ಕಿವಿ ಹಣ್ಣಿನ ಸೇವನೆಯನ್ನು ಸತತವಾಗಿ ಮಾಡುವುದರಿಂದ ಕಣ್ಣಿನ ದೃಷ್ಟಿ ಸಮಸ್ಯೆ ನಿವಾರಣೆಯಾಗುತ್ತದೆ. ಇದರಲ್ಲಿ ಇರುವಂತ ಆಂಟಿಆಕ್ಸಿಡೆಂಟ್ ಅಂಶಗಳು ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನಮ್ಮ ಶರೀರ ಯಾವುದೆ ಒಂದು ಖಾಯಿಲೆಯ ವಿರುದ್ಧ ಹೋರಾಡಲು ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತದೆ.

ಆಸ್ತಮ ಸಮಸ್ಯೆ ಇರುವವರಿಗೆ ಕಿವಿ ಹಣ್ಣು ಬಹಳ ಉತ್ತಮ ಇದರಲ್ಲಿ ವಿಟಮಿನ್ ಸಿ ಹಾಗೂ ಆಂಟಿಆಕ್ಸಿಡೆಂಟ್ ಗಳು ಇರುವುದರಿಂದ ಔಷಧಿಯ ರೀತಿಯಲ್ಲಿ ಕೆಲಸ ಮಾಡುತ್ತದೆ. ನಮ್ಮ ದೇಹದಲ್ಲಿ ರಕ್ತ ಹೀನತೆ ಸಮಸ್ಯೆ ನಿವಾರಣೆ ಮಾಡುವುದು ಮಾತ್ರವಲ್ಲದೆ ರಕ್ತಕಣಗಳ ಸಂಖ್ಯೆ ಹೆಚ್ಚಿಸಲು ಕೂಡ ಸಹಾಯ ಮಾಡುತ್ತದೆ. ಬೆಳಗ್ಗಿನ ಸಮಯದಲ್ಲಿ ನಿಯಮಿತ ಪ್ರಮಾಣದಲ್ಲಿ ಕಿವಿ ಹಣ್ಣನ್ನು ಸೇವನೆ ಮಾಡುವುದರಿಂದ ನಾವು ಇಷ್ಟೊಂದು ಪ್ರಯೋಜನವನ್ನು ಪಡೆದುಕೊಳ್ಳಬಹುದು. ಬೆಳಗಿನ ಸಮಯದಲ್ಲಿ ನಮ್ಮ ದೇಹಕ್ಕೆ ನಾವು ಸೇವಿಸುವ ಆಹಾರದಲ್ಲಿ ಪೋಷಕಾಂಶಗಳು ಹೆಚ್ಚಾಗಿ ದೊರೆಯುತ್ತದೆ ಈ ಕಾರಣಕ್ಕೆ ಬೆಳಗಿನ ಸಮಯದಲ್ಲಿ ಹಣ್ಣುಗಳ ಸೇವನೆ ಉತ್ತಮ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave A Reply

Your email address will not be published.