ನಮ್ಮಲ್ಲಿ ಕೆಲವು ಜನರಲ್ಲಿ ಕಿಡ್ನಿಯಲ್ಲಿ ಕಲ್ಲು ಉಂಟಾಗುವುದು ಅದು ನಾವು ಸೇವಿಸುವ ಆಹಾರದಲ್ಲಿ ಕಲ್ಲು ಇದ್ದು ಅದರಿಂದ ಕಿಡ್ನಿಯಲ್ಲಿ ಕಲ್ಲು ಉಂಟಾಗುತ್ತದೆ ಎಂಬ ಮೂಢ ನಂಬಿಕೆ ಇದೆ. ಆದರೆ ಇದು ನಿಜ ಅಲ್ಲ. ವಿಲಾಸ್ ಎಂಬ ವ್ಯಕ್ತಿಗೆ ಒಂದು ವಿಚಿತ್ರ ರೆಕಾರ್ಡ್ ಇದೆ. ಅವರ ಕಿಡ್ನಿಯಲ್ಲಿ ಕಾಣಿಸಿಕೊಂಡ ಕಲ್ಲಿನ ಸುತ್ತಳತೆ ಸುಮಾರು 13 ಸೆಂಟಿ ಮೀಟರ್ ಇದ್ದು, ಒಂದು ಕೆಜಿ ತೂಕ ಹೊಂದಿತ್ತು. ಇದು ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಗೆ ಸೇರಿದೆ. ಇದು ನೋಡಲು ತೆಂಗಿನಕಾಯಿ ರೀತಿಯಲ್ಲಿತ್ತು. ಇಷ್ಟು ದೊಡ್ಡ ಕಲ್ಲು ಹೇಗೆ ಸಾಧ್ಯ ಈ ಲೇಖನದಲ್ಲಿ ಕಿಡ್ನಿಯಲ್ಲಿ ಕಲ್ಲು ಉತ್ಪತ್ತಿ ಹೇಗೆ ಆಗುತ್ತೆ ಅದಕ್ಕೆ ಕಾರಣ ಏನು, ನಾವು ಸೇವಿಸುವ ಯಾವ ಆಹಾರಗಳಿಂದ ಕಿಡ್ನಿಯಲ್ಲಿ ಕಲ್ಲು ಉತ್ಪತ್ತಿ ಆಗತ್ತೆ ಹಾಗೂ ಕಿಡ್ನಿಯಲ್ಲಿ ಕಲ್ಲು ಆಗದಂತೆ ನಾವೇನು ಮಾಡಿಕೊಳ್ಳಬೇಕು ಎನ್ನುವುದರ ಬಗ್ಗೆ ಇಲ್ಲಿ ನೋಡೋಣ.

ಈ ಕಿಡ್ನಿಯಲ್ಲಿ ಆಗುವ ಕಲ್ಲು ಕಿಡ್ನಿಗಳಲ್ಲಿ, ಮೂತ್ರ ನಾಳಗಳಲ್ಲಿ, ಮೂತ್ರಾಶಯಗಳಲ್ಲಿ ಉತ್ಪತ್ತಿ ಆಗುತ್ತೆ. ಯೂರಿನ್ ನಲ್ಲಿ ಇರುವ ಕೆಮಿಕಲ್ ಕಾಂಪೋಂಡ್ಸ್ ಆದ ಕ್ಯಾಲ್ಶಿಯಂ, ಸೋಡಿಯಂ, ಪೊಟ್ಯಾಶಿಯ , ಯೂರಿಕ್ ಆಸಿಡ್ ಮುಂತಾದ ಕೆಮಿಕಲ್ಸ್ ಇರತ್ತೆ. ಒಂದುವೇಳೆ ಯೂರಿನ್ ನಲ್ಲಿ ಈ ಕಣಗಳು ಹೆಚ್ಚಾಗಿದ್ದರೆ ಯೂರಿನ್ ನಲ್ಲಿ ಬೆರೆತು ಕಲ್ಲಿನ ರೀತಿ ಗಡ್ಡೆ ಕಟ್ಟುತ್ತವೆ. ದಿನಕಳೆದಂತೆ ಇವು ಬೆಳೆಯುತ್ತಾ ದೊಡ್ಡ ಕಲ್ಲಾಗಿ ಪರಿಣಮಿಸುತ್ತವೆ. ಸಾಮಾನ್ಯವಾಗಿ ಕಿಡ್ನಿಯಲ್ಲಿ ಕಲ್ಲು ಉಂಟಾಗಲು 80 ರಷ್ಟು ಕ್ಯಾಲ್ಶಿಯಂ ಕಾರಣವಾಗಿರತ್ತೆ. ಯುರಿನ್ ನಲ್ಲಿ ಇತರ ಕಣಗಳಿಂದ ಕಲ್ಲು ಉಂಟಾಗುವುದು ಕಡಿಮೆ. ಕೆಲವು ಕಲ್ಲುಗಳು ಬ್ಯಾಕ್ಟೀರಿಯ ಇನ್ಫೆಕ್ಷನ್ ಕಾರಣದಿಂದ ಮಿನರಲ್ಸ್ ಆದ ಮೆಗ್ನಿಶಿಯಂ ಅಮೋನಿಯಂ ನಿಂದ ಬರುತ್ತೆ. ಕಿಡ್ನಿ ಕಲ್ಲು ಅವು ಇರುವ ಜಾಗಗಳಿಂದ ಹೊರ ಬರುವವರೆಗೂ ಅವು ಇದೆ ಎನ್ನುವುದು ನಮಗೂ ತಿಳಿಯುವುದಿಲ್ಲ. ಕಿಡ್ನಿಯಲ್ಲಿರುವ ಕಲ್ಲುಗಳು ಮೂತ್ರನಾಳದ ಕಡೆ ಹೋದಾಗ ಕಲ್ಲಿನ ಸುತ್ತ ಇರುವ ಚೂಪಾದ ಆಕಾರಗಳು ಮೂತ್ರ ನಾಳಗಳನ್ನು ಚುಚ್ಚುತ್ತವೆ. ಈ ರೀತಿ ಆದಾಗ ಅದಕ್ಕೆ ಸಂಬಂಧ ಪಟ್ಟ ನರಗಳು ಭಯಂಕರ ನೋವಿನ ಲಕ್ಷಣಗಳನ್ನು ನಮ್ಮ ಮೆದುಳಿಗೆ ರವಾನಿಸುತ್ತದೆ.

ಆ ಕಲ್ಲುಗಳು ಮೂತ್ರ ನಾಳಗಳಿಗೆ ಚುಚ್ಚುವುದರಿಂದ ರಕ್ತ ಬಂದು ಯೂರಿನ್ ನಲ್ಲಿ ಕೂಡಾ ಕಾಣಿಸತ್ತೆ. ಈ ರೀತಿ ಆದಾಗ ಯೂರಿನ್ ನಲ್ಲಿ ರಕ್ತದ ಜೊತೆ ವಾಂತಿ ಕೂಡಾ ಆಗತ್ತೆ ಹಾಗೆ ಕೆಲವೊಮ್ಮೆ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಒಂದುವೇಳೆ ಕಿಡ್ನಿಯಲ್ಲಿ ಕಲ್ಲು ದೊಡ್ಡದಾಗಿದ್ದು ಮೂತ್ರ ಬರದೆ ಮೂತ್ರ ನಾಳಗಳನ್ನು ಕಟ್ಟಿದ್ದರೆ ಇದರಿಂದ ಇನ್ಫೆಕ್ಷನ್ ಆಗುತ್ತೆ. ಇಲ್ಲವಾದಲ್ಲಿ ಮೂತ್ರ ಹಿಂದೆ ಹೋಗುವಂತೆ ಮಾಡಿ ನಮ್ಮ ಕಿಡ್ನಿ ಹಾಳಾಗಲು ಕಾರಣವಾಗಿರತ್ತೆ. ಸಾಮಾನ್ಯವಾಗಿ ಕಿಡ್ನಿಯಲ್ಲಿರುವ ಕಲ್ಲುಗಳು ಯಾವುದೇ ತೊಂದರೆ ಕೊಡುವುದಿಲ್ಲ. 5mm ಗಿಂತ ಕಡಿಮೆ ಗಾತ್ರದ ಕಲ್ಲುಗಳು ಮೂತ್ರದ ಜೊತೆ ತಾನಾಗಿಯೇ ಹೊರಗೆ ಹೋಗುತ್ತವೆ. ಇವು ಬೇಗ ಹೊರ ಬರಲು ಡಾಕ್ಟರ್ ಗಳು ಹೆಚ್ಚು ನೀರು ಕುಡಿಯಲು ಸಲಹೆ ನೀಡುತ್ತಾರೆ. ಒಂದುವೇಳೆ ನೋವು ಹೆಚ್ಚಿದ್ದರೆ ಪೇನ್ ಕಿಲ್ಲರ್ ನೀಡುತ್ತಾರೆ. ಇನ್ನೂ ಹೆಚ್ಚು ನೋವಿದ್ದಲ್ಲಿ ಮೂತ್ರ ನಾಳಗಳನ್ನು ಸಡಿಲಗೊಳಿಸುವ ಔಷಧ ನೀಡುತ್ತಾರೆ. 10mm ಗಿಂತ ಕಡಿಮೆ ಗಾತ್ರದ ಕಲ್ಲುಗಳನ್ನ ಕರಗಿಸಲು ಸೌಂಡ್ ವೇವ್ಸ್ ಉಪಯೋಗಿಸಿ ಪುಡಿ ಮಾಡುತ್ತಾರೆ. ಇದನ್ನು ದೇಹದ ಹೊರ ಭಾಗದಿಂದ ನೇರವಾಗಿ ಕಲ್ಲಿನ ಮೇಲೆ ಪ್ರಯೋಗ ಮಾಡಲಾಗುತ್ತದೆ. ಇದರಿಂದ ಬಿಡುಗಡೆ ಆಗುವ ವೇವ್ಸ್ ನೇರವಾಗಿ ಕಲ್ಲಿನ ಮೇಲೆ ಬಿದ್ದು ಪುಡಿ ಆಗಿ ನಂತರ ಮೂತ್ರ ನಾಳಗಳಿಂದ ಹೊರ ಬರುತ್ತೆ. ಒಂದುವೇಳೆ ಕಲ್ಲು ದೊಡ್ಡದಾಗಿದ್ದರೆ ಸೌಂಡ್ ವೇವ್ಸ್ ಉಪಯೋಗಿಸಿ ಒಡೆಯುವುದು ತುಂಬಾ ಕಷ್ಟ. ಸ್ಟೆಂಟ ಎನ್ನುವ ಟ್ಯೂಬ್ ಅನ್ನು ಮೂತ್ರ ನಾಳಗಳಿಂದ ಕಿಡ್ನಿ ಒಳಗೆ ಕಳಿಸಿ ಕಲ್ಲನ್ನು ಹೊರಗೆ ತೆಗೆಯಲಾಗುತ್ತೆ ಅಥವಾ ಆಫ್ಟಿಕಲ್ ಫೈಬರ್ ನಿಂದ ಲೇಜರ್ ಬಳಸಿ ಅಥವಾ ಆಪರೇಷನ್ ಮಾಡಿ ಕಲ್ಲನ್ನು ಹೊರಗೆ ತೆಗೆಯಲಾಗುತ್ತದೆ.

ಕಿಡ್ನಿಯಲ್ಲಿ ಕಲ್ಲು ಉಂಟಾಗಲು ಕಾರಣವಾಗಿರುವ ಆಹಾರಗಳು ಏನು? ಮತ್ತು ಇದನ್ನು ತಡೆಯುವುದು ಹೇಗೆ ಅನ್ನೋದನ್ನ ನೋಡೋಣ. ಮೇಲೆ ಹೇಳಿದ ಹಾಗೆ ಕಿಡ್ನಿಯಲ್ಲಿ ಕಲ್ಲು ಉಂಟಾಗಲು 80 ರಷ್ಟು ಕ್ಯಾಲ್ಶಿಯಂ ಆಕ್ಸೈಟ್ ಕಾರಣವಾಗಿರತ್ತೆ. ಆದ್ದರಿಂದ ಆಕ್ಸೈಟ್ ಹೆಚ್ಚಾಗಿರುವ ಆಹಾರಗಳಾದ ಬಿಟ್ರುಟ್, ಆಲೂಗಡ್ಡೆ, ನಟ್ಸ್ ಮುಂತಾದ ಆಕ್ಸೈಟ್ ಹೆಚ್ಚಾಗಿರುವ ಪದಾರ್ಥಗಳನ್ನು ಅತಿಯಾಗಿ ತೆಗೆದುಕೊಳ್ಳಬಾರದು. ಸೋಡಿಯಂ ಹೆಚ್ಚಾಗಿರುವ ಆಹಾರಗಳನ್ನು ಸೇವಿಸಬಾರದು. ಸೋಡಿಯಂ ಉಪ್ಪಿನ ಒಂದು ಭಾಗವಾಗಿದ್ದು ನಾವು ತಿನ್ನುವ ಫಾಸ್ಟ್ ಫುಡ್ ಗಳಲ್ಲಿ ಈ ಅಂಶ ಹೆಚ್ಚಾಗಿರತ್ತೆ. ನಾವು ಹೊರಗೆ ತಿನ್ನುವ ಆಹಾರದಲ್ಲಿ ಟೇಸ್ಟಿಂಗ್ ಪೌಡರ್ ಹಾಕಿರುತ್ತರೆ ಅದು ಕೂಡಾ ಕಿಡ್ನಿಯಲ್ಲಿ ಕಲ್ಲು ಬರೋಕೆ ಒಂದು ಕಾರಣವಾಗಿರತ್ತೆ.

ಹೆಚ್ಚು ಮಾಂಸಾಹಾರ ಸೇವನೆಯಿಂದ ಸಹ ಕಿಡ್ನಿಯಲ್ಲಿ ಕಲ್ಲು ಉಂಟಾಗತ್ತೆ. ಹೆಚ್ಚು ನೀರನ್ನು ಕುಡಿಯುವುದರಿಂದ ಕಿಡ್ನಿಯಲ್ಲಿ ಕಲ್ಲು ಬರದಂತೆ ಮಾಡುತ್ತೆ. ಕಿಡ್ನಿಯಲ್ಲಿ ಬರುವ ಕಲ್ಲುಗಳಲ್ಲಿ ಕ್ಯಾಲ್ಶಿಯಂ ಇದ್ದರು ಸಹ ಕ್ಯಾಲ್ಶಿಯಂ ಇರುವಂತಹ ಪಾನೀಯಗಳು ಹಾಗೂ ಆಹಾರಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು. ಯಾಕಂದ್ರೆ ಕ್ಯಾಲ್ಶಿಯಂ ಆಕ್ಸೈಟ್ ಅನ್ನು ತಡೆದು ಅದು ಕಿಡ್ನಿವರೆಗೂ ಹೋಗದಂತೇ ನೋಡಿಕೊಳ್ಳುತ್ತೇ. ಹಾಗಾಗಿ ಪ್ರೈವೇನ್ಷನ್ ಇಸ್ ಬೆಟರ್ ಧೆನ್ ಕ್ಯೂರ್ ಅನ್ನೋ ಹಾಗೆ ಯಾವುದೇ ಕಾಯಿಲೆ ಆದರೂ ಬಂದಮೇಲೆ ಪರದಾಡುವುದಕ್ಕಿಂತ ಬರದಂತೆ ನೋಡಿಕೊಳ್ಳುವುದು ಜಾಣರ ಲಕ್ಷಣ. ನಿಮಗೆ ಈ ಮಾಹಿತಿ ಉಪಯುಕ್ತ ಆಗಿದೆ ಅಂದುಕೊಳ್ಳುತ್ತೇವೆ ನಿಮ್ಮ ಸ್ನೇಹಿತರಿಗೂ ಷೇರ್ ಮಾಡಿ ಇದನ್ನು ತಿಳಿದುಕೊಳ್ಳಲಿ.

By

Leave a Reply

Your email address will not be published. Required fields are marked *