ಕೂದಲು ಉದುರುವುದು ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯ. ಇವುಗಳ ಜೊತೆಗೆ ಬಿಳಿ ಕೂದಲು ,ಡ್ಯಾಂಡ್ರಾಫ್ ಸಮಸ್ಯೆ ಕೂಡ. ಇವಕ್ಕೆಲ್ಲ ಕಾರಣ ನಮ್ಮ ಇಂದಿನ ಜೀವನ ಶೈಲಿ ಆಗುರಬಹುದು ಅಥವಾ ಆಹಾರ ವಿಹಾರ ಇರಬಹುದು. ಕೂದಲಿಗೆ ಸರಿಯಾದ ಪೋಷಣೆ ಸಿಗದೇ ಇರುವುದು ಸಹ ಒಂದು ಮುಖ್ಯ ಕಾರಣ ಎನ್ನಬಹುದು. ಈ ಲೇಖನದಲ್ಲಿ ಕೂದಲು ಉದುರದಂತೆ, ದಟ್ಟವಾಗಿ ಕೂದಲು ಬೆಳೆಯಲು ನಾವು ಸುಲಭವಾಗಿ ಮನೆಯಲ್ಲೇ ಏನು ಮಾಡಬಹುದು ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ.

ಕೂದಲಿನ ಪೋಷಣೆಯನ್ನು ನಾವು ಮನೆಯಲ್ಲಿ ಮಾಡಿಕೊಳ್ಳಲು ನಮಗೆ ಬೇಕಾಗಿರುವುದು ಕೇವಲ ಎರಡೇ ಎರಡು ಪದಾರ್ಥಗಳು. ಒಂದೆರಡು ವಾರ ಈ ಪ್ಯಾಕ್ ಅನ್ನು ಬಳಕೆ ಮಾಡುವುದರಿಂದ ತುಂಬಾ ಪರಿಣಾಮಕಾರಿಯಾದಂತಹ ಅಂಶವನ್ನು ನಾವು ಕಾಣಬಹುದು. ಬಹಳ ಸುಲಭ ಹಾಗೂ ಪ್ರಯೋಜನಕಾರಿ ಆಗಿದ್ದು ಇದನ್ನು ಹೇಗೆ ಮಾಡಿಕೊಳ್ಳುವುದು ಹಾಗೂ ಇದರ ಬಳಕೆ ಮಾಡುವುದು ಹೇಗೆ ಅನ್ನೋದನ್ನು ನೋಡೋಣ. ಈ ಪ್ಯಾಕ್ ತಯಾರಿಸಲು ನಮಗೆ ಮುಖ್ಯವಾಗಿ ಬೇಕಾಗಿರುವುದು ಮನೆಯಲ್ಲಿ ಸಿಗುವಂತಹ 10ರಿಂದ 12 ದಾಸವಾಳದ ಎಲೆಗಳು ಹಾಗೂ ಅಲೋವೆರಾದ ಸಣ್ಣ ತುಂಡು. ನೈಸರ್ಗಿಕವಾಗಿ ದೊರೆಯುವ ಅಲೋವೆರಾ ದೊರಕದೆ ಇದ್ದಲ್ಲಿ ಎಲೋವರ ಜೆಲ್ ಕೂಡ ಬಳಕೆ ಮಾಡಬಹುದು.

ಅಲೋವೆರಾ ಮೇಲಿನ ಸಿಪ್ಪೆ ತೆಗೆದು ಅದನ್ನು ಮಿಕ್ಸಿ ಜಾರಿಗೆ ಹಾಕಿಕೊಳ್ಳಬೇಕು ಹಾಗೂ ದಾಸವಾಳದ ಎಲೆಗಳನ್ನು ಸಹ ಸ್ವಚ್ಛವಾಗಿ ತೊಳೆದು ಒಂದು ಬಟ್ಟೆಯಲ್ಲಿ ಒರೆಸಿ ಅದನ್ನು ಸಹ ಚಿಕ್ಕ ತುಂಡುಗಳಾಗಿ ಮಾಡಿ ಮಿಕ್ಸಿಯಲ್ಲಿ ಹಾಕಿ ಕೊಳ್ಳಬೇಕು. ಇದಕ್ಕೆ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಬೇಕು. ನಂತರ ಇದನ್ನು ಒಂದು ಬೌಲಿಗೆ ತೆಗೆದುಕೊಂಡು ತಲೆಗೆ ಕೂದಲ ಬುಡಕ್ಕೆ ಸರಿಯಾಗಿ ಹಚ್ಚಿಕೊಂಡು 15 ರಿಂದ 20 ನಿಮಿಷ ಬಿಡಬೇಕು. 20 ನಿಮಿಷಗಳ ನಂತರ ಯಾವುದೇ ಹರ್ಬಲ್ ಅಥವಾ ಆಯುರ್ವೇದಿಕ್ ಶಾಂಪೂವನ್ನು ಬಳಸಿ ಉಗುರುಬೆಚ್ಚಗಿನ ನೀರಿನಲ್ಲಿ ತಲೆ ಸ್ನಾನ ಮಾಡಬೇಕು. ಕೂದಲು ಉದುರುವ ಸಮಸ್ಯೆಗೆ ಈ ಒಂದು ವಿಧಾನ ಬಹಳ ಸುಲಭವಾಗಿದ್ದು ಪ್ರತಿಯೊಬ್ಬರೂ ಕೂಡ ಮಾಡಬಹುದಾಗಿದೆ.

By

Leave a Reply

Your email address will not be published. Required fields are marked *