ದೇಶದಲ್ಲಿ ಹೀಗಾಗಲೇ ಕೊರೋನಾ ವೈರಸ್ ಅನ್ನೋ ಮಹಾಮಾರಿ ರುದ್ರ ತಾಂಡವ ಆಡುತ್ತಿದೆ, ದಿನ ದಿಂದ ದಿನಕ್ಕೆ ಇದರ ಪ್ರಭಾವ ಜಾಸ್ತಿ ಆಗುತ್ತಿದ್ದು. ಜನ ಜೀವನ ತುಂಬಾನೇ ಕಠಿಣವಾಗುತ್ತಿದೆ. ದೇಶದ ನಾನಾ ಕಡೆಯಲ್ಲಿ ಈ ಕೊರೋನಾ ಮಹಾಮಾರಿಯನ್ನು ನಿಯಂತ್ರಿಸಲು ಹಲವು ರಿಸರ್ಚ್ ನಡೆಯುತ್ತಲೇ ಇದೆ. ಹಾಗು ಹಲವು ಬಗೆಯಲ್ಲಿ ಇದರ ಔಷದ ಮಾರ್ಗವನ್ನು ಹುಡುಕಲಾಗುತ್ತಿದೆ, ಆದ್ರೆ ಇಲ್ಲೊಂದು ಮಾಹಿತಿಯ ಪ್ರಕಾರ ಕೊರೋನಾ ವೈರಸ್ ಬಿಸಿನೀರಿನಿಂದ ಸಾಯುತ್ತೆ ಅನ್ನೋದನ್ನ ರಾಷ ಸಂಶೋಧನೆ ಹೇಳುತ್ತಿದೆ.

ಹೌದು ಸರ್ವ ರೋಗಕ್ಕೂ ರಾಮಬಾಣ ಬಿಸಿನೀರು ಅಂದ್ರೆ ತಪ್ಪಾಗಲಾರದು ಯಾಕೆಂದರೆ ದೈಹಿಕವಾಗಿ ನಮ್ಮ ಶರೀರದ ಹಲವು ತೊಂದರೆಗಳನ್ನು ನಿವಾರಿಸುವಲ್ಲಿ ಹಾಗೂ ದೇಹಕ್ಕೆ ವೈರಸ್ ಗಳು ಅಂಟದಂತೆ ಬಿಸಿನೀರು ರಕ್ಷಾ ಕವಚವಾಗಿ ಕೆಲಸ ಮಾಡುತ್ತೆ ಅನ್ನೋದು ಮುಂಚೆ ಯಿಂದಲೂ ನಮಗೆ ಗೊತ್ತಿರುವ ವಿಚಾರ. ಆದ್ರೆ ರಷ್ಯಾ ದೇಶದ ವಿಜ್ಞಾನಿಗಳು ಹೇಳಿದ್ದೇನು ಅನ್ನೋದನ್ನ ಮುಂದೆ ನೋಡಿ.

ರಷ್ಯಾದ ವೆಕ್ಟರ್ ಸ್ಟೇಟ್ ರಿಸರ್ಚ್ ಸೆಂಟರ್ ಆಫ್ ವೈರಾಲಜಿ ಌಂಡ್ ಬಯೋಟೆಕ್ನಾಲಜಿ ಸಿಂಪಲ್ ಸಲ್ಯೂಷನ್ ಕಂಡು ಹಿಡಿದಿದೆ. ಹೌದು ಬಿಸಿ ನೀರಿನಲ್ಲಿ ಕೊರೊನಾ ವೈರಾಣು ಬದುಕೋದಿಲ್ಲ, ಸತ್ತು ಹೋಗುತ್ತೆ ಅಂತ ಇಲ್ಲಿನ ಸಂಶೋಧಕರ ತಂಡ ಹೇಳಿದೆ. ಸಾಮಾನ್ಯ ತಾಪಮಾನ ಅಥವಾ ರೂಮ್ ಟೆಂಪರೇಚರ್​ನಲ್ಲಿರುವ ನೀರು ಕೊರೊನಾದ ಬೆಳವಣಿಗೆಯನ್ನ ತಡೆಯಬಹುದು ಅನ್ನೋದು ಈ ವಿಜ್ಞಾನಿಗಳ ಸಂಶೋಧನೆಯಲ್ಲಿ ತಿಳಿದು ಬಂದಿದೆಯಂತೆ. ಇನ್ನು ಈ ನೀರಿನ ರೂಮ್ ಟೆಂಪರೇಚರ್ ೨೦ ಡಿಗ್ರಿ ಸೆಲ್ಶಿಯಸ್. ಈ ಮಟ್ಟದ ಉಷ್ಣಾಂಶದಲ್ಲಿರುವ ನೀರಲ್ಲಿ ೨೪ ಗಂಟೆಗಳಲ್ಲೇ ಶೇಕಡ ೯೦ ರಷ್ಟು ಕೊರೊನಾ ವೈರಸ್​ನ ಅಂಶಗಳು ಸತ್ತು ಹೋಗಿವೆ. ೭೨ ಗಂಟೆಗಳಲ್ಲಿ ಶೇಕಡ ೯೯ ರಷ್ಟು ವೈರಸ್ ಪಾರ್ಟಿಕಲ್ಸ್ ಸತ್ತಿವೆ ಅಂತ ವಿಜ್ಞಾನಿಗಳು ಹೇಳಿದ್ದಾರೆ.

ಅಷ್ಟೇ ಅಲ್ಲದೆ ಅದೇ ನೀರನ್ನು ಕುದಿಯೋಕೆ ಇಟ್ಟರೆ ಆ ಬಿಸಿ, ಶಾಖಕ್ಕೆ ಕೂಡಲೇ ವೈರಸ್​ಗಳು ಸತ್ತು ಹೋಗಿವೆ ಮತ್ತು ಸಂಪೂರ್ಣವಾಗಿ ನಾಶವಾಗಿರೋದು ತಮ್ಮ ಸಂಶೋಧನೆಯಲ್ಲಿ ತಿಳಿದುಬಂದಿದೆ ಅಂತ ಈ ಸಂಶೋಧಕರ ತಂಡ ಹೇಳಿದೆ. ಅದೇನೇ ಇರಲಿ ನಮ್ಮ ಭಾರತೀಯ ಜನರು ಕೂಡ ಕೊರೋನಾ ವೈರಸ್ ಬರುವುದಕ್ಕಿಂತ ಮುಂಚೆ ಬಿಸಿರಿನ ಮಹತ್ವವನ್ನು ತಿಳಿದುಕೊಂಡಿದ್ದಾರೆ ಹಾಗೂ ನಮ್ಮ ಭಾರತೀಯರು ಈ ಹಿಂದೆ ಕೂಡ ಶೀತ ನೆಗಡಿ ಜ್ವರ ದಂತ ಸಮಸ್ಯೆಗಳಿಗೆ ಹಿಂದಿನಿಂದಲೂ ಬಿಸಿರು ಬಳಸುವ ಪದ್ದತಿಯನ್ನು ಬಳಸಿಕೊಂಡು ಬರುತ್ತಿದ್ದಾರೆ ಹಾಗಾಗಿ ಈ ಮಳೆಗಾಲದಲ್ಲಿ ಬಿಸಿನೀರು ಬಳಸುತ್ತೀರಿ ಕೊರೊನದಿಂದ ದೂರಯಿರಿ ಸಾಮಾಜಿಕ ಅನಂತರವನ್ನು ಬಳಸಿ ಹೊರಗಡೆ ಹೋಗುವಾಗ ಮಾಸ್ಕ್ ಬಳಸಿ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರಿಗೂ ಷೇರ್ ಮಾಡಿ ಧನ್ಯವಾದಗಳು…

By

Leave a Reply

Your email address will not be published. Required fields are marked *