ನನ್ನ ಕೊನೆ ಉಸಿರು ಇರೋವರೆಗೂ ನಾನು ವಿಷ್ಣು ಅಭಿಮಾನಿ, ಕಿಚ್ಚನ ಸಂದರ್ಶನ

0 1

ಡಾಕ್ಟರ್ ವಿಷ್ಣುವರ್ಧನ್ ಸರ್ ಎಂದರೆ ಯಾರಿಗೆ ತಾನೆ ಇಷ್ಟ ಇರುವುದಿಲ್ಲ. ನಮ್ಮ ನಿಮ್ಮೆಲ್ಲರ ಅಚ್ಚು ಮೆಚ್ಚಿನ ಕಿಚ್ಚ ಸುದೀಪ್ ಅವರಿಗೂ ಕೂಡ ಡಾಕ್ಟರ್ ವಿಷ್ಣುವರ್ಧನ್ ಎಂದರೆ ಬಹಳ ಗೌರವ. ಅವರು ಈಗಾಗಲೆ ಬಹಳ ಸಲ ವಿಷ್ಣುವರ್ಧನ್ ಅವರ ಮೇಲಿನ ಗೌರವವನ್ನು ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಮತ್ತೊಮ್ಮೆ ವ್ಯಕ್ತಪಡಿಸಿರುವುದನ್ನು ಈ ಲೇಖನದ ಮೂಲಕ ತಿಳಿಯೋಣ.

ಕಿಚ್ಚ ಸುದೀಪ್ ಅವರಿಗೆ ಸಾಹಸಸಿಂಹ, ಅಭಿನವ ಭಾರ್ಗವ ಡಾಕ್ಟರ್ ವಿಷ್ಣುವರ್ಧನ್ ಎಂದರೆ ಬಹಳ ಗೌರವ ಹಾಗೂ ಅಭಿಮಾನವಿದೆ ಎಂದು ಸುದೀಪ್ ಅವರೇ ಬೇರೆ ಬೇರೆ ವೇದಿಕೆಗಳಲ್ಲಿ ಬೇರೆಬೇರೆ ಸಂದರ್ಭಗಳಲ್ಲಿ ಹೇಳಿಕೊಂಡಿದ್ದಾರೆ. ಅದೇ ರೀತಿ ಇತ್ತೀಚೆಗೆ ಅವರು ತೆಲುಗು ಮಾಧ್ಯಮಕ್ಕೆ ನೀಡಿದ ಒಂದು ಸಂದರ್ಶನದಲ್ಲಿ ಕೂಡ ಡಾಕ್ಟರ್ ವಿಷ್ಣುವರ್ಧನ್ ಅವರ ಬಗ್ಗೆ ಇರುವ ಗೌರವವನ್ನು ವ್ಯಕ್ತಪಡಿಸಿದ್ದಾರೆ. ಅವರು ತಮ್ಮ ಮುಂದಿನ ಚಿತ್ರದ ಸಲುವಾಗಿ ತೆಲುಗು ಸಂದರ್ಶನವನ್ನು ನೀಡಿದ್ದಾರೆ. ಸಂದರ್ಶನದಲ್ಲಿ ನಿಮಗೆ ಕನ್ನಡ ಚಿತ್ರರಂಗದಲ್ಲಿ ಡಾಕ್ಟರ್ ರಾಜಕುಮಾರ್, ಡಾಕ್ಟರ್ ವಿಷ್ಣುವರ್ಧನ್, ಶಂಕರ್ ನಾಗ್, ಅಂಬರೀಷ್ ಇವರಲ್ಲಿ ಯಾರು ನಿಮ್ಮ ಫೇವರೇಟ್ ಆಕ್ಟರ್ ಎಂದು ಸಂದರ್ಶಕಿ ಸುದೀಪ್ ಅವರಿಗೆ ಕೇಳಿದ್ದಾರೆ ಆಗ ಸುದೀಪ್ ಅವರು ತಕ್ಷಣ ಡಾಕ್ಟರ್ ವಿಷ್ಣುವರ್ಧನ್ ನನ್ನ ಫೇವರೇಟ್ ಆಕ್ಟರ್, ಅವರೆಂದರೆ ನನಗೆ ಬಹಳ ಗೌರವ ಅವರು ನನಗೆ ಸ್ಪೂರ್ತಿ, ನನ್ನ ಕೊನೆ ಉಸಿರಿರುವರೆಗೂ ಅವರ ಅಭಿಮಾನಿ ಎಂದು ಸುದೀಪ್ ಅವರು ಉತ್ತರ ಕೊಟ್ಟಿದ್ದಾರೆ.

ನಂತರ ಸುದೀಪ ಅವರು ನನಗೆ ವಿಷ್ಣುವರ್ಧನ್ ಎಂದರೆ ಬಹಳ ಇಷ್ಟ ಹಾಗಂತ ರಾಜಕುಮಾರ್, ಅಂಬರೀಷ್, ಶಂಕರನಾಗ್ ಅವರನ್ನು ಕಂಡರೂ ಇಷ್ಟ. ಆದರೆ ಅವರಲ್ಲಿ ಒಂದು ಹೆಸರು ಹೇಳಬೇಕೆಂದರೆ ಅದು ಡಾಕ್ಟರ್ ವಿಷ್ಣುವರ್ಧನ್ ಎಂದು ಹೇಳಿದ್ದಾರೆ. ಡಾಕ್ಟರ್ ರಾಜಕುಮಾರ್, ಅಂಬರೀಷ್, ಶಂಕರ್ ನಾಗ್ ಅವರ ನಟನೆಗೆ ಮನಸೋಲದವರೇ ಇಲ್ಲ ಕಿಚ್ಚ ಸುದೀಪ್ ಅವರು ಕೂಡ ಅವರೆಲ್ಲರ ಅಭಿಮಾನಿಯಾಗಿದ್ದಾರೆ. ಒಟ್ಟಿನಲ್ಲಿ ಮತ್ತೊಮ್ಮೆ ವಿಷ್ಣುವರ್ಧನ್ ಅವರ ಅಭಿಮಾನಿ ಎಂದು ಕಿಚ್ಚ ಸುದೀಪ್ ಅವರು ವ್ಯಕ್ತಪಡಿಸಿದ್ದಾರೆ. ಇದರಿಂದ ಸುದೀಪ್ ಅವರು ಒಬ್ಬ ಉತ್ತಮ ನಟನಾಗಿದ್ದು ಕನ್ನಡ ಚಿತ್ರರಂಗವನ್ನು ಎಷ್ಟು ಪ್ರೀತಿಸುತ್ತಾರೆ ಎಂಬುದು ತಿಳಿಯುತ್ತದೆ. ಹಾಗೆಯೇ ಸುದೀಪ್ ಅವರಿಗೂ ಸಹ ಸಾಕಷ್ಟು ಅಭಿಮಾನಿಗಳಿದ್ದಾರೆ ಈ ಮಾಹಿತಿಯನ್ನು ಸಿನಿ ಪ್ರಿಯರಿಗೆ ತಿಳಿಸಿ.

Leave A Reply

Your email address will not be published.