ಶ್ರೀಲೀಲಾ ಅವರ ಬಗ್ಗೆ ಯಾರಿಗೆ ಗೊತ್ತಿಲ್ಲ. ಕಿಸ್ ಸಿನಿಮಾದಿಂದ ಯುವಕರ ನಿದ್ರೆ ಕೆಡಿಸಿದ ಶ್ರೀಲೀಲಾ ಅವರು ಆಕ್ಷನ್ ಪ್ರಿನ್ಸ್ ಅವರ ಜೊತೆಗೆ ದುಬಾರಿ ಸಿನಿಮಾದಲ್ಲಿ ನಟಿಸಲಿದ್ದಾರೆ. ಧ್ರುವ ಹಾಗೂ ಶ್ರೀಲೀಲಾ ಜೋಡಿಯಾಗಲಿದ್ದಾರೆ ಧ್ರುವ ಅವರ ಹೊಸ ಚಿತ್ರಕ್ಕೆ. ಅದರ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಆಕ್ಷನ್ ಪ್ರಿನ್ಸ್ ಎಂದೇ ಪ್ರಸಿದ್ಧನಾದ ಧ್ರುವ ಸರ್ಜಾ ಅವರ ಪೊಗರು ಸಿನಿಮಾ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ. ಪೊಗರು ಸಿನಿಮಾದ ನಂತರ ನಂದಕಿಶೋರ ನಿರ್ದೇಶನದಲ್ಲಿ ದುಬಾರಿ ಸಿನಿಮಾದಲ್ಲಿ ಧ್ರುವ ಸರ್ಜಾ ನಾಯಕನಾಗಿ ನಟಿಸಲಿದ್ದಾರೆ ಆದರೆ ಈ ಸಿನಿಮಾಗೆ ನಾಯಕಿಯಾಗಿ ಯಾರು ನಟಿಸಲಿದ್ದಾರೆ ಎಂಬುದು ಕಾಡುತಿತ್ತು. ಕಿಸ್ ಖ್ಯಾತಿಯ ಶ್ರೀಲೀಲಾ ಅವರು ಭರ್ಜರಿ ನಾಯಕನ ದುಬಾರಿ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ. ದುಬಾರಿ ಸಿನಿಮಾದ ನಿರ್ದೇಶಕ ನಂದಕಿಶೋರ್ ಅವರೆ ಶ್ರೀಲೀಲಾ ಅವರು ನಾಯಕಿಯಾಗಿ ನಟಿಸಲಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ಶ್ರೀಲೀಲಾ ಅವರು ಕಿಸ್ ನಂತರ ಭರಾಟೆ ಸಿನಿಮಾ ಹೀಗೆ ಒಂದರ ನಂತರ ಒಂದು ಸಿನಿಮಾದಲ್ಲಿ ನಟಿಸಿ ಪ್ರೇಕ್ಷಕರ ಮನಸನ್ನು ಗೆದ್ದ ಅವರು ದುಬಾರಿ ಸಿನಿಮಾದಲ್ಲಿ ನಟಿಸಲಿದ್ದು ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

ದುಬಾರಿ ಸಿನಿಮಾದಲ್ಲಿ ಧ್ರುವ ಸರ್ಜಾ ಅವರ ಜೊತೆ ಇಲ್ಲಿವರೆಗೂ ಅವರ ಜೊತೆ ನಟಿಸದ ಹೊಸ ನಟಿಯನ್ನು ಆಯ್ಕೆ ಮಾಡಬೇಕು ಎಂಬುದು ನಿರ್ದೇಶಕರ ಆಸೆಯಾಗಿತ್ತು. ಅದರಂತೆ ಶ್ರೀಲೀಲಾ ಅವರನ್ನು ಆಯ್ಕೆ ಮಾಡಲಾಗಿತ್ತು. ಈಗಾಗಲೇ ಧ್ರುವ ಸರ್ಜಾ ಹಾಗೂ ನಂದಕಿಶೋರ್ ಇಬ್ಬರು ಸೇರಿ ಪೊಗರು ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ಈಗ ದುಬಾರಿ ಸಿನಿಮಾದಲ್ಲೂ ಕೆಲಸ ಮಾಡಲಿದ್ದಾರೆ. 2021 ರಲ್ಲಿ ದುಬಾರಿ ಸಿನಿಮಾದ ಶೂಟಿಂಗ್ ಆರಂಭವಾಗಲಿದೆ. ಫೆಬ್ರುವರಿ ತಿಂಗಳಿನಲ್ಲಿ ಶ್ರೀಲೀಲಾ ಅವರು ದುಬಾರಿ ಚಿತ್ರ ತಂಡವನ್ನು ಸೇರಲಿದ್ದಾರೆ. ಒಟ್ಟಿನಲ್ಲಿ ಧ್ರುವ ಹಾಗೂ ಶ್ರೀಲೀಲಾ ಕಾಂಬಿನೇಶನ್ ನಲ್ಲಿ ಮೂಡಿ ಬರುವ ದುಬಾರಿ ಸಿನಿಮಾ ದುಬಾರಿಯಾಗಲಿದೆಯಾ ಕಾದು ನೋಡಬೇಕು. ಈ ಮಾಹಿತಿಯನ್ನು ತಪ್ಪದೇ ಚಿತ್ರ ಅಭಿಮಾನಿಗಳಿಗೆ ತಿಳಿಸಿ.

Leave a Reply

Your email address will not be published. Required fields are marked *