ಪವರ್ ಸ್ಟಾರ್’ ಪುನೀತ್ ರಾಜ್‌ಕುಮಾರ್ ಅಭಿನಯದ ‘ಯುವರತ್ನ’ ಚಿತ್ರತಂಡವು ಪುನೀತ್ ಅಭಿಮಾನಿಗಳಿಗೆ ಒಟ್ಟಿಗೇ ಎರಡು ಗುಡ್ ನ್ಯೂಸ್ ನೀಡಿದೆ. ಒಂದು, ಕನ್ನಡದ ಜೊತೆಗೆ ತೆಲುಗು ಭಾಷೆಯಲ್ಲಿಯೂ ಸಹ ಈ ಸಿನಿಮಾ ತೆರೆಗೆ ಬರಲಿದೆ. ಮತ್ತೊಂದು ಗುಡ್ ನ್ಯೂಸ್ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಪುನೀತ್ ರಾಜಕುಮಾರ್! ಟಾಲಿವುಡ್‌ನಲ್ಲೂ ಸದ್ದು ಮಾಡಲಿದೆ ‘ಯುವರತ್ನ’! ಅಂದರೆ…. ಪುನೀತ್ ರಾಜಕುಮಾರ್ ಅವರು ತೆಲುಗು ಚಿತ್ರರಂಗದಲ್ಲಿ ಕೂಡಾ ಅಭಿನಯ ಮಾಡಲಿದ್ದಾರ?? ಈ ವಿಚಾರದ ಕುರಿತಾಗಿ ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಯುವರತ್ನ ಸಿನಿಮಾದ ಮೇಲೆ ಸಿನಿಪ್ರಿಯರು ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ರಾಜಕುಮಾರ ತಂಡವೇ ಇಲ್ಲಿ ಮತ್ತೊಮ್ಮೆ ಒಟ್ಟಿಗೆ ಸೇರಿ ಕೆಲಸ ಮಾಡಿರುವುದು ಆ ನಿರೀಕ್ಷೆಗೆ ಇನ್ನೊಂದು ಕಾರಣ. ಸದ್ಯ ಚಿತ್ರತಂಡ ಗುಡ್‌ನ್ಯೂಸ್ ನೀಡಿದೆ. ಅದೇನೆಂದರೆ, ಕನ್ನಡದ ಯುವರತ್ನ ಚಿತ್ರ ಕನ್ನಡದ ಜೊತೆಗೆ ತೆಲುಗಿನಲ್ಲೂ ಸದ್ದು ಮಾಡಲಿದೆ ಎಂದು ಹೇಳುತ್ತಿದ್ದಾರೆ. ಏಕಕಾಲಕ್ಕೆ ಕನ್ನಡ ಮತ್ತು ತೆಲುಗಿನಲ್ಲಿ ತೆರೆಕಾಣುವ ಪುನೀತ್ ಅವರ ಮೊದಲ ಸಿನಿಮಾ ಇದಾಗಲಿದೆ.

ಪುನೀತ್ ಅಭಿಮಾನಿಗಳು ‘ಯುವರತ್ನ’ ಸಿನಿಮಾ ಎಷ್ಟು ಭಾಷೆಗಳಲ್ಲಿ ತೆರೆಗೆ ಬರಲಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಈ ಹಿಂದೆ ಸಿಕ್ಕಾಪಟ್ಟೆ ಚರ್ಚೆ ಮಾಡಿದ್ದರು. ಆಗ ನಿರ್ದೇಶಕ ಸಂತೋಷ್‌ ಆನಂದ್‌ರಾಮ್‌ ಟ್ವಿಟರ್‌ ಮೂಲಕ ಉತ್ತರ ನೀಡಿದ್ದರು. ಯುವರತ್ನ ಸಿನಿಮಾ ಬೇರೆ ಭಾಷೆಗಳಲ್ಲಿ ರಿಲೀಸ್‌ ಆಗಲಿದೆಯೇ? ಎಂದು ಎಲ್ಲರೂ ಕೇಳುತ್ತಿದ್ದೀರಿ. ಈ ಬಗ್ಗೆ ನಮ್ಮ ನಿರ್ಮಾಪಕರು ಆದಷ್ಟು ಬೇಗ ಒಂದು ಅಪ್‌ಡೇಟ್ ನೀಡಲಿದ್ದಾರೆ. ಪ್ರಚಾರಕಾರ್ಯ ಶುರು ಆಗುತ್ತಿದ್ದಂತೆಯೇ ಎಲ್ಲ ವಿಚಾರಗಳೂ ಬಹಿರಂಗ ಆಗಲಿದೆ. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ರಿಲೀಸ್‌ ಆಗಲಿದೆ ಎಂಬುದರ ಬಗ್ಗೆ ನಾನು ಭರವಸೆ ನೀಡುತ್ತೇನೆ ಎಂದು ಸಂತೋಷ್ ಅವರು ಹೇಳಿದ್ದರು. ಇದೀಗ ನಿರ್ಮಾಪಕರೇ ಯುವರತ್ನ ಚಿತ್ರದ ತೆಲುಗು ಪೋಸ್ಟರ್ ರಿಲೀಸ್ ಮಾಡಿ, ಸುದ್ದಿಯನ್ನುಅಧಿಕೃತಗೊಳಿಸಿದ್ದಾರೆ.

ಇದುವರೆಗೂ ಚಿತ್ರದ ಟೀಸರ್ ಮತ್ತು ಪೋಸ್ಟರ್ ಮಾತ್ರ ರಿಲೀಸ್ ಮಾಡಲಾಗಿತ್ತು. ಇದೀಗ ಚಿತ್ರದ ಮೊದಲ ಹಾಡನ್ನು ರಿಲೀಸ್ ಮಾಡುವುದಕ್ಕೆ ತಂಡ ಸಿದ್ಧತೆ ಮಾಡಿಕೊಂಡಿದೆ. ಇದು ತಂಡ ನೀಡಿರುವ ಮತ್ತೊಂದು ಗುಡ್ ನ್ಯೂಸ್‌. ಪವರ್ ಆಫ್ ಯೂಥ್ ಎಂಬ ಚಿತ್ರದ ಮೊದಲ ಹಾಡನ್ನು ಡಿಸೆಂಬರ್ ಎರಡರಂದು ರಿಲೀಸ್ ಮಾಡುವುದಾಗಿ ತಂಡ ಹೇಳಿಕೊಂಡಿದೆ. ಕನ್ನಡದ ಜೊತೆಗೆ ತೆಲುಗಿನಲ್ಲೂ ಈ ಹಾಡು ರಿಲೀಸ್ ಆಗಲಿದೆ. ಕನ್ನಡ ವರ್ಷನ್‌ ಸಾಂಗ್ ಅನ್ನು ಸಂತೋಷ್ ಬರೆದರೆ, ತೆಲುಗು ವರ್ಷನ್‌ಗೆ ರಾಮಜೋಗಯ್ಯ ಶಾಸ್ತ್ರಿ ಅವರು ಸಾಹಿತ್ಯ ಬರೆದಿದ್ದಾರೆ. ಥಮನ್ ಸಂಗೀತ ನೀಡಿದ್ದು, ನಕಶ್ ಅಜೀಜ್ ಹಾಡಿದ್ದಾರೆ.

ಈ ಹಿಂದೆ ಪುನೀತ್ ರಾಜ್‌ಕುಮಾರ್ ಹಾಗೂ ಭಾವನಾ ಮೆನನ್ ನಟಿಸಿದ್ದ ಜಾಕಿ ಸಿನಿಮಾ ಕನ್ನಡದಲ್ಲಿ ರಿಲೀಸ್ ಆದಮೇಲೆ, ತೆಲುಗಿಗೆ ಡಬ್ ಆಗಿತ್ತು. ಇದೀಗ ಯುವರತ್ನ ಏಕಕಾಲದಲ್ಲಿ ತೆರೆಕಾಣುತ್ತಿರುವುದಕ್ಕೆ ಪುನೀತ್ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ತೆಲುಗು ವರ್ಷನ್‌ ಪೋಸ್ಟರ್‌ ಶೇರ್‌ ಮಾಡಿಕೊಂಡಿರುವ ಪುನೀತ್, ತೆಲುಗಿನಲ್ಲೂ ‘ಯುವರತ್ನ’ ರಿಲೀಸ್ ಆಗಲಿದೆ ಎಂದು ಹೇಳಲು ಸಂತೋಷವಾಗುತ್ತಿದೆ. ನಿಮ್ಮೆಲ್ಲರ ಆಶೀರ್ವಾದ ಇರಲಿ ಎಂದು ಬರೆದುಕೊಂಡಿದ್ದಾರೆ. ಇನ್ನು, ಅಪ್ಪು ಸಿನಿಮಾ ನಿರ್ದೇಶಕ ಪುರಿ ಜಗನ್ನಾಥ್‌, ಸಂಗೀತ ನಿರ್ದೇಶಕ ಥಮನ್‌ ಸೇರಿದಂತೆ ಅನೇಕರು ಪುನೀತ್‌ಗೆ ಸ್ವಾಗತ ಕೋರಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ಸಾಯೇಶಾ ಸೈಗಲ್‌ ನಟಿಸಿದ್ದಾರೆ. ವಿಜಯ್ ಕಿರಗಂದೂರು ಇದರ ನಿರ್ಮಾಪಕರು. ಪುನೀತ್ ರಾಜಕುಮಾರ್ ಅವರ ಅಭಿನಯದ ಯುವರತ್ನ ಸಿನಿಮಾ ಉತ್ತಮ ಪ್ರದರ್ಶನ ಕಂಡು ಒಳ್ಳೆಯ ಹೆಸರು ಮಾಡಲಿ ಎಂದು ಆಶಿಸೋಣ.

Leave a Reply

Your email address will not be published. Required fields are marked *