KGF ಇವನ ಲೈಫೇ ಚೇಂಜ್ ಮಾಡ್ತು ಜೂನಿಯರ್ ರಾಖಿಬಾಯ್ ಈಗ ಹೇಗಿದ್ದಾನೆ ನೋಡಿ

0 2

ಯಶ್ ಅವರ ಕೆಜಿಎಫ್ ಸಿನಿಮಾ ಅವರ ಎಲ್ಲ ಸಿನಿಮಾಗಳಿಗಿಂತ ಹೆಚ್ಚಿನ ರೀತಿಯಲ್ಲಿ ಜನಪ್ರಿಯತೆ ಗಳಿಸಿದೆ. ಕೆಜಿಎಫ್ 2 ಸಿನಿಮಾ ಬಿಡುಗಡೆಯಾಗಬೇಕಿದೆ. ಈಗಾಗಲೆ ಟೀಸರ್ ಬಿಡುಗಡೆಯಾಗಿದೆ. ಕೆಜಿಎಫ್ ಸಿನಿಮಾದಲ್ಲಿ ನಟಿಸಿದ ಯುವ ಪ್ರತಿಭೆ ಅನ್ಮೋಲ್ ಅವರ ಬಗ್ಗೆ ಕೆಲವು ವಿಷಯವನ್ನು ಈ ಲೇಖನದಲ್ಲಿ ನೋಡೋಣ.

ಕುಂದಾಪುರದ ಯುವಕ ಅನ್ಮೋಲ್ ಅವರನ್ನು ಜ್ಯೂನಿಯರ್ ರಾಕಿ ಬಾಯ್ ಎಂದು ಕರೆಯುತ್ತಾರೆ. ಕೆಜಿಎಫ್ ಸಿನಿಮಾದಲ್ಲಿ ನಟಿಸಿ ನಂತರ ಅವರ ಜೀವನದಲ್ಲಿ ಕೆಲವು ಬದಲಾವಣೆ ಆಗಿದೆ ಎಂದು ಅವರೆ ಹೇಳಿಕೊಂಡಿದ್ದಾರೆ. ಜನರು ನನ್ನನ್ನು ಗುರುತಿಸುತ್ತಾರೆ ಬಹಳ ಖುಷಿಯಾಗುತ್ತದೆ ಎಂದು ಹೇಳುತ್ತಾರೆ ಅನ್ಮೋಲ್.

ಅನ್ಮೋಲ್ ಅವರು ಹುಟ್ಟಿ ಬೆಳೆದಿದ್ದು ಕುಂದಾಪುರದಲ್ಲಿ ಇದೀಗ ಬೆಂಗಳೂರಿನಲ್ಲಿ ಸೆಟ್ಲ್ ಆಗಿದ್ದಾರೆ. ಬೆಂಗಳೂರಿನಲ್ಲಿ ಅವರು ಡ್ಯಾನ್ಸ್ ಕಲಿತಿದ್ದಾರೆ ಕೆಲವು ಸಿನಿಮಾಗಳಲ್ಲಿ ಬ್ಯಾಕ್ ಡ್ಯಾನ್ಸರ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಅನ್ಮೋಲ್ ಅವರ ಡ್ಯಾನ್ಸ್ ಮಾಸ್ಟರ್ ಅವರ ಸಲಹೆಯಂತೆ ಕೆಜಿಎಫ್ ಸಿನಿಮಾದ ಆಡಿಷನ್ ನಲ್ಲಿ ಭಾಗವಹಿಸಿ ಸೆಲೆಕ್ಟ್ ಆದರು. ಇದೀಗ ಕೆಜಿಎಫ್ 2 ಸಿನಿಮಾ ಬಿಡುಗಡೆಗೆ ಅನ್ಮೋಲ್ ಅವರು ಕಾಯುತ್ತಿದ್ದಾರೆ. ಚೆನ್ನೈನಲ್ಲಿ ಶೂಟ್ ಮಾಡುವಾಗ ಅನ್ಮೋಲ್ ಅವರು ಯಶ್ ಅವರನ್ನು ಮೀಟ್ ಮಾಡಿದ್ದಾರೆ. ಯಶ್ ಅವರನ್ನು ಭೇಟಿ ಮಾಡಲು ಅನ್ಮೋಲ್ ಅವರಿಗೆ ಮೊದಲು ಭಯ ಆಗಿತ್ತು ನಂತರ ಯಶ್ ಅವರು ಪ್ರೀತಿಯಿಂದ ಮಾತನಾಡಿದರು ಎಂದು ಅನ್ಮೋಲ್ ಹೇಳಿಕೊಂಡಿದ್ದಾರೆ.

ಕೆಜಿಎಫ್ ಸಿನಿಮಾ ಐದು ಭಾಷೆಗಳಲ್ಲಿ ಬಿಡುಗಡೆಯಾಗಿ ಯಶಸ್ವಿಯಾಗಿದೆ ಅದರಂತೆ ಅನ್ಮೋಲ್ ಅವರು ಕೂಡ ಫೇಮಸ್ ಆಗಿದ್ದಾರೆ. ಕೆಜಿಎಫ್ 2 ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು ಸಿನಿಮಾ ಉತ್ತಮವಾಗಿ ಮೂಡಿಬರಲಿದೆ. ಸೆಕೆಂಡ್ ಪಿಯುಸಿ ಓದುತ್ತಿರುವ ಅನ್ಮೋಲ್ ಅವರು ಚಿಕ್ಕವಯಸ್ಸಿನಲ್ಲಿಯೆ ಡ್ಯಾನ್ಸ್ ಪ್ರಾರಂಭಿಸಿ ಮುಂದಿನ ದಿನಗಳಲ್ಲಿ ಹೆಚ್ಚಿನ ಸಾಧನೆ ಮಾಡಬೇಕು ಎಂಬ ಕನಸನ್ನು ಹೊಂದಿದ್ದಾರೆ.

ಕೆಜಿಎಫ್ ಸಿನಿಮಾದಲ್ಲಿ ಜ್ಯೂನಿಯರ್ ರಾಕಿ ಭಾಯ್ ಆಗಿ ನಟಿಸಿದ ನಂತರ ಬ್ರಹ್ಮಚಾರಿ, ಬಿಚ್ಚುಗತ್ತಿ, ಮಿಸ್ ನಂದಿನಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅನ್ಮೋಲ್ ಅವರಿಗೆ ಕಂಟೆಂಪ್ರರಿ, ವೆಸ್ಟರ್ನ್, ಫ್ರಿ ಸ್ಟೈಲ್ ಡ್ಯಾನ್ಸ್ ಇಷ್ಟವಾಗುತ್ತದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಡ್ಯಾನ್ಸಿಂಗ್ ಚಾಂಪಿಯನ್ ಎಂಬ ರಿಯಾಲಿಟಿ ಶೋನಲ್ಲಿ ಅನ್ಮೋಲ್ ಅವರು ಸ್ಪರ್ಧಿಸಿದ್ದಾರೆ ಅವರಿಗೆ ಜನರು ಹೆಚ್ಚಿನ ರೀತಿಯಲ್ಲಿ ಬೆಂಬಲ ನೀಡಲಿ ಹಾಗೂ ಕೆಜಿಎಫ್ 2 ಸಿನಿಮಾ ಭರ್ಜರಿ ಜಯ ಗಳಿಸಲಿ ಎಂದು ಆಶಿಸೋಣ.

Leave A Reply

Your email address will not be published.