ಈ ಮಹಿಳೆ ರಸ್ತೆ ಬದಿಯಲ್ಲಿ ಚಿಕ್ಕದಾದ ಹೋಟೆಲ್ ನಡೆಸುವ ಜೊತೆಗೆ ತಮ್ಮ ಜೀವನವನ್ನು ಹೇಗೆ ರೂಪಿಸಿಕೊಂಡಿದ್ದಾರೆ ಗೋತ್ತಾ? ಓದಿ ರಿಯಲ್ ಸ್ಟೋರಿ

0 3,118

ನಾವಿಂದು ನಿಮಗೆ ಬೆಂಗಳೂರಿನಲ್ಲಿ ರಸ್ತೆ ಬದಿಯಲ್ಲಿ ಚಿಕ್ಕದಾದ ಹೋಟೆಲ್ ಒಂದನ್ನು ಹಾಕಿಕೊಂಡು ಹಸಿದವರಿಗೆ ಅನ್ನ ನೀಡುತ್ತಾ ಜೀವನವನ್ನು ನಡೆಸುತ್ತಿರುವ ಸಂಗೀತಾ ಎಂಬುವವರ ಬಗ್ಗೆ ತಿಳಿಸಿಕೊಡುತ್ತೇವೆ. ಜೀವನದಲ್ಲಿ ನಾವು ಒಂದು ಕನಸನ್ನು ಕಂಡಿರುತ್ತೇವೆ ಆದರೆ ದೈವ ಬೇರೆಯದನ್ನೆ ಬರೆದಿರುತ್ತದೆ ನಾವು ಅದಕ್ಕೆ ತಯಾರಾಗಿರಬೇಕು. ಸಂಗೀತಾ ಅವರು ಏನೇನೋ ಕನಸನ್ನು ಕಟ್ಟಿಕೊಂಡು ಬೆಂಗಳೂರಿಗೆ ಬರುತ್ತಾರೆ. ಅಲ್ಲಿಗೆ ಬಂದ ನಂತರ ಸೂತ್ರ ಹರಿದ ಗಾಳಿಪಟದಂತೆ ಜೀವನ ಎಲ್ಲೆಲ್ಲೋ ಸಾಗುತ್ತದೆ. ಕೊನೆಗೆ ತಮ್ಮ ತಾಯಿ ನಡೆಸಿಕೊಂಡು ಹೋಗುತ್ತಿದ್ದ ಹೋಟೆಲ್ ಉದ್ಯಮವನ್ನು ತಾವು ನಡೆಸುವುದಕ್ಕೆ ಪ್ರಾರಂಭಿಸುತ್ತಾರೆ. ಅದು ಅವರ ಕೈ ಹಿಡಿಯುತ್ತದೆ.

ಸಂಗೀತಾ ಅವರು ಸದ್ಯ ತಮ್ಮ ತಾಯಿಯ ಮನೆಯಲ್ಲಿಯೇ ಜೀವನವನ್ನು ನಡೆಸುತ್ತಿದ್ದಾರೆ ಇವರಿಗೆ ಮದುವೆಯಾಗಿ ಒಬ್ಬ ಮಗನಿದ್ದಾನೆ. ಆದರೆ ಇವರ ಗಂಡ ಇವರನ್ನು ನೋಡಿಕೊಳ್ಳುತ್ತಿಲ್ಲ ಮದುವೆಯಾದಾಗಿನಿಂದ ಇವರಿಗೆ ಬರಿ ತೊಂದರೆಯನ್ನೆ ಕೊಟ್ಟಿದ್ದಾರೆ. ಕುಡಿಯುವುದು ಇವರೊಂದಿಗೆ ಜಗಳ ಮಾಡುವುದು ಅಷ್ಟೇ ಅವರ ಕೆಲಸ ಹಾಗಾಗಿ ಇವರ ತಂದೆ ತಾಯಿ ಇವರನ್ನು ವಾಪಸ್ ಮನೆಗೆ ಕರೆದುಕೊಂಡು ಬರುತ್ತಾರೆ. ಇವರು ಟೈಲರಿಂಗ್ ವೃತ್ತಿಯನ್ನು ಆರಂಭಿಸಿದರು ಅದರಲ್ಲಿ ತುಂಬಾ ನಷ್ಟ ಉಂಟಾಗುತ್ತದೆ ನಂತರ ಇವರ ತಾಯಿ ತಾನು ರಸ್ತೆ ಬದಿಯಲ್ಲಿ ನಡೆಸಿಕೊಂಡು ಹೋಗುತ್ತಿರುವ ಹೋಟೆಲನ್ನು ನೀನು ನಡೆಸಿಕೊಂಡು ಹೋಗು ಎಂದು ಹೇಳುತ್ತಾರೆ.

ಸದ್ಯ ಸಂಗೀತಾ ಅವರು ಹೋಟೆಲನ್ನು ನಡೆಸಿಕೊಂಡು ಹೋಗುತ್ತಿದ್ದಾರೆ ನೆಮ್ಮದಿಯಿಂದ ಜೀವನವನ್ನು ಸಾಗಿಸುತ್ತಿದ್ದಾರೆ. ನಿಮಗೆ ಇಲ್ಲಿ ಉತ್ತರ ಕರ್ನಾಟಕದ ಶೈಲಿಯಲ್ಲಿ ಹೋಳಿಗೆ ಊಟ ಪ್ರತಿದಿನ ಸಿಗುತ್ತದೆ. ಇವರು ಪ್ರತಿದಿನ ಎರಡರಿಂದ ಎರಡೂವರೆ ಸಾವಿರ ರೂಪಾಯಿ ವ್ಯವಹಾರವನ್ನು ಮಾಡುತ್ತಾರೆ ಅದರಲ್ಲಿ ಇವರಿಗೆ ಐದು ನೂರು ರೂಪಾಯಿ ಇಂದ ಐದೂನೂರಾ ಐವತ್ತು ರೂಪಾಯಿ ಇವರಿಗೆ ಉಳಿಯುತ್ತದೆ.

ಇವರು ಒಬ್ಬರೇ ಎಲ್ಲ ಕೆಲಸವನ್ನು ಮಾಡಿಕೊಂಡು ಹೋಗುತ್ತಾರೆ. ಇವರು ಹೇಳುವ ಪ್ರಕಾರ ತಾವು ವ್ಯಾಪಾರಿಗಳ ಜೊತೆ ನಗುನಗುತ್ತಾ ಮಾತನಾಡಿದರೆ ಅವರು ಮತ್ತೊಮ್ಮೆ ಇಲ್ಲಿಗೆ ಬರುವುದಕ್ಕೆ ಇಷ್ಟಪಡುತ್ತಾರೆ ಮುಖ ಗಂಟು ಹಾಕಿಕೊಂಡು ವ್ಯಾಪಾರವನ್ನು ಮಾಡಿದರೆ ಯಾರು ಬರುವುದಿಲ್ಲ ಎಂದು ಇವರು ಹೇಳುತ್ತಾರೆ. ಎಷ್ಟೇ ದೊಡ್ಡ ಬಂಡವಾಳವನ್ನು ಹಾಕಿ ವ್ಯವಹಾರವನ್ನು ಮಾಡಿದರು ಮುಖದಲ್ಲಿ ನಗು ಇಲ್ಲ ಎಂದರೆ ಅದು ವ್ಯರ್ಥ ಎಂದು ಇವರು ಹೇಳುತ್ತಾರೆ.

ಅವರ ಹೋಟೆಲ್ನಲ್ಲಿ ಚಪಾತಿ ಪರೋಟ ಒಬ್ಬಟ್ಟು ಬಜ್ಜಿ ಬೋಂಡಾ ಪ್ರತಿದಿನ ಸಿಗುತ್ತದೆ. ಬೆಳಿಗ್ಗೆ ತಿಂಡಿಗೆ ಇಡ್ಲಿ ರೈಸ್ ಬಾತ್ ಪೂರಿ ಸಿಗುತ್ತದೆ ಪ್ರತಿದಿನ ಬೆಳಿಗ್ಗೆ 7:00 ಗಂಟೆಗೆ ತಮ್ಮ ವ್ಯವಹಾರವನ್ನು ಪ್ರಾರಂಭಿಸುತ್ತಾರೆ. ವಾರದಲ್ಲಿ ರವಿವಾರದ ದಿನ ರಜೆ ಇರುತ್ತದೆ. ಇವರು ತಮ್ಮ ಮಗನನ್ನು ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಓದಿಸುತ್ತಿದ್ದಾರೆ. ಇವರಿಗೆ ಭವಿಷ್ಯದಲ್ಲಿ ದೊಡ್ಡದಾದ ಹೋಟೆಲ್ ನ್ನು ಮಾಡಬೇಕು ಎಂಬ ಯಾವುದೇ ಆಸೆ ಇಲ್ಲ.

ಇವರು ತಮ್ಮಂತೆ ಇರುವ ಹೆಣ್ಣು ಮಕ್ಕಳಿಗೆ ಹೇಳುವ ಕಿವಿಮಾತು ಏನೆಂದರೆ ಯಾವುದೇ ಕಷ್ಟ ಬಂದರೂ ಅದನ್ನು ನಾನು ಮಾಡೆ ಮಾಡುತ್ತೇನೆ ಎಂದು ಎದುರಿಸಬೇಕು ಎಂದು ಹೇಳುತ್ತಾರೆ. ಇವರ ಹೋಟೆಲ್ನಲ್ಲಿ ನೀವು ಎರಡು ಚಪಾತಿ ರೈಸ್ ತೆಗೆದುಕೊಂಡರೆ ನಲವತ್ತೈದು ರೂಪಾಯಿ ಹೋಳಿಗೆ ತೆಗೆದುಕೊಂಡರೆ ಇಪ್ಪತ್ತು ರುಪಾಯಿ ಒಟ್ಟು ಐವತ್ತರಿಂದ ಅರವತ್ತು ರೂಪಾಯಿಯಲ್ಲಿ ಹೊಟ್ಟೆತುಂಬಾ ಊಟವನ್ನ ಮಾಡಬಹುದು.

ಅಲ್ಲಿ ಊಟ ಮಾಡಿದಂತಹ ಗ್ರಾಹಕರು ಕೂಡ ಊಟ ತುಂಬಾ ಚೆನ್ನಾಗಿದೆ ಎಂದು ಹೇಳುತ್ತಾರೆ. ಇವರ ಹೋಟೆಲ್ ಇರುವುದು ಬೆಂಗಳೂರಿನ ಇಂಡಸ್ಟ್ರಿಯಲ್ ಏರಿಯಾ ರಾಜಗೋಪಾಲ್ ನಗರ ಮುನೇಶ್ವರ ದೇವಸ್ಥಾನದ ಹತ್ತಿರ ಪೀಣ್ಯ ಮೊದಲ ಕ್ರಾಸ್ ನಲ್ಲಿ ರೇವಣ್ಣ ಸಿದ್ದೇಶ್ವರ ಕಾನಾವಳಿ ಎಂಬ ಇವರ ಹೋಟೆಲ್ ಇದೆ. ಜೀವನಕ್ಕೆ ಹೆದರದೆ ಹೋಟೆಲನ್ನು ನಡೆಸುತ್ತಿರುವ ಸಂಗೀತ ಅವರಿಗೆ ಅನ್ನ ಕೈಬಿಟ್ಟಿಲ್ಲ. ಕಷ್ಟದಲ್ಲಿ ಇರುವಂತಹ ಹೆಣ್ಣುಮಕ್ಕಳಿಗೆ ಅದನ್ನ ಹೇಗೆ ಎದುರಿಸಬೇಕು ಎಂಬುದಕ್ಕೆ ಸಂಗೀತ ಅವರು ಸ್ಪೂರ್ತಿಯಾಗಿದ್ದಾರೆ. ಕಷ್ಟಕ್ಕೆ ಹೆದರದೆ ಸಂಗೀತ ಅವರು ತಮ್ಮದೇ ಆದ ದುಡಿಮೆಯನ್ನು ಮಾಡಿಕೊಂಡು ನೆಮ್ಮದಿಯಿಂದ ಜೀವನವನ್ನು ಸಾಗಿಸುತ್ತಿದ್ದಾರೆ. Video Credit For Badukina Butti

Leave A Reply

Your email address will not be published.