ಅಣ್ಣನ ಜೊತೆಗಿನ ಸುಂದರ ಕ್ಷಣಗಳನ್ನು ಹಂಚಿಕೊಂಡ ಯಶ್ ತಂಗಿ ನಂದಿನಿ

0 0

ಜನವರಿ 8 ನ್ನು ಕನ್ನಡ ಚಿತ್ರರಂಗದ ಅಭಿಮಾನಿಗಳು ಮರೆಯಲು ಸಾಧ್ಯವಿಲ್ಲ ಇದಕ್ಕೆ ಕಾರಣ ಅಂದು ಯಶ್ ಅವರ ಹುಟ್ಟುಹಬ್ಬ. ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಎಂದೆ ಖ್ಯಾತಿ ಪಡೆದ ಯಶ್ ಅವರು ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡಿದ್ದಾರೆ. ಅದರ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಜನವರಿ 8 ನೇ ತಾರೀಖು ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಯಶ್ ಅವರ ಅಭಿಮಾನಿಗಳಿಗೆ ಹಬ್ಬದ ದಿನ ಏಕೆಂದರೆ ಅಂದು ಯಶ್ ಅವರ ಹುಟ್ಟಿದ ದಿನವಾಗಿದೆ. ಇತ್ತೀಚೆಗೆ ಎರಡು ವರ್ಷದಿಂದ ಕೋವಿಡ್ ಮಹಾಮಾರಿಯಿಂದಾಗಿ ಯಶ್ ಅವರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಅಭಿಮಾನಿಗಳೊಂದಿಗೆ ಆಚರಿಸಲಾಗುತ್ತಿಲ್ಲ.

ಅದೆ ರೀತಿ ಈ ವರ್ಷವೂ ಕೋವಿಡ್ ಮಾರ್ಗಸೂಚಿ ಇರುವುದರಿಂದ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬವನ್ನು ಆಚರಿಸಲು ಸಾಧ್ಯವಿಲ್ಲ ಆದ್ದರಿಂದ ಅಭಿಮಾನಿಗಳು ಯಶ್ ಅವರ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಲು ನಿರ್ಧರಿಸಿದ್ದಾರೆ ಅದೇನೆಂದರೆ ಜನವರಿ ಎಂಟರಂದು ಟ್ವಿಟರ್ ನಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಬರ್ತಡೆಯನ್ನು ಟ್ರೆಂಡ್ ಮಾಡಲು ಮುಂದಾಗಿದ್ದಾರೆ. ಯಶ್ ಅವರ ಹುಟ್ಟುಹಬ್ಬವೆಂದರೆ ಅವರ ಮನೆಯವರಿಗೆ ಸಂತಸದ ದಿನ ಅಣ್ಣನ ಹುಟ್ಟುಹಬ್ಬವೆಂದರೆ ಅವರ ಮುದ್ದಿನ ತಂಗಿ ನಂದಿನಿ ಅವರಿಗೆ ಸಂತಸ. ನಂದಿನಿ ಅವರು ಯಶ್ ಅವರೊಂದಿಗಿನ ತಮ್ಮ ಅಪರೂಪದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಚಿಕ್ಕವಯಸ್ಸಿನಲ್ಲಿ ತೆಗೆದ ಫೋಟೋ, ರಾಖಿ ಹಬ್ಬದ ಫೋಟೋ, ಯಶ್ ಮತ್ತು ಅಮ್ಮನ ಜೊತೆ ತೆಗೆಸಿದ ಫೋಟೋಗಳನ್ನು ನಂದಿನಿ ಅವರು ಹಂಚಿಕೊಂಡಿದ್ದಾರೆ. ಯಶ್ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಹುಟ್ಟುಹಬ್ಬದ ಶುಭಾಶಯಗಳು ಹರಿದುಬರುತ್ತಿದೆ. ಕೊರೋನ ವೈರಸ್ ಕಾರಣದಿಂದ ಯಶ್ ಅವರು ಮನೆಯಲ್ಲಿ ಸರಳವಾಗಿ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಮನೆಯವರು ಕೆಜಿಎಫ್ ಸಿನಿಮಾದ ಚಿತ್ರ ಇರುವಂತಹ ಕೇಕ್ ಅನ್ನು ರೆಡಿ ಮಾಡಿಸಿದ್ದರು.

ಈ ಬಾರಿ ಯಶ್ ಅವರಿಗೆ ಅವರ ಮಕ್ಕಳಿಂದ ವಿಶೇಷ ಗಿಫ್ಟ್ ಸಿಕ್ಕಿದೆ ಹ್ಯಾಪಿ ಬರ್ತಡೆ ಡಾಡಾ ಎಂದು ಬರೆದ ಗ್ರೀಟಿಂಗ್ ಮೇಲೆ ಇಬ್ಬರು ಮಕ್ಕಳ ಕೈ ಅಚ್ಚು ಇದೆ. ಅದರಂತೆ ಪತ್ನಿ ರಾಧಿಕಾ ಪಂಡಿತ್ ಅವರಿಗೂ ಇಂದು ಸಂತಸದ ದಿನವಾಗಿದೆ. ಒಟ್ಟಿನಲ್ಲಿ ಕನ್ನಡ ಸಿನಿಮಾವನ್ನು ಜಗತ್ತು ತಿರುಗಿ ನೋಡುವಂತೆ ಮಾಡಿದ ಕೆಜಿಎಫ್ ಸಿನಿಮಾದ ನಾಯಕ ನಟ ರಾಕಿಂಗ್ ಸ್ಟಾರ್ ಯಶ್ ಅವರು ನೂರ್ಕಾಲ ಸುಖವಾಗಿ ಬಾಳಲಿ ಎಂದು ಆಶಿಸೋಣ.

Leave A Reply

Your email address will not be published.