ಕೆಜಿಎಫ್ 1 ಹಾಗೂ ಕೆಜಿಎಫ್-2 ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡು ಶ್ರೀನಿಧಿ ಶೆಟ್ಟಿ ಅವರು ತಮ್ಮ ಮೊದಲ ಸಿನಿಮಾದಲ್ಲಿ ಯಶಸ್ಸನ್ನು ಪಡೆದರು. ಮೂಲತಃ ಮಾಡೆಲಿಂಗ್ ಆಗಿರುವ ಅವರು ಪ್ರತಿಭಾವಂತ ನಟಿಯಾಗಿದ್ದಾರೆ. ಶ್ರೀನಿಧಿ ಶೆಟ್ಟಿ ಅವರು 10ನೆ ಕ್ಲಾಸಿನಲ್ಲಿ ಕನ್ನಡ ವಿಷಯದಲ್ಲಿ ಪಡೆದುಕೊಂಡ ಅಂಕದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿಯಾಗುತ್ತಿದೆ. ಹಾಗಾದರೆ ಅವರು ಪಡೆದುಕೊಂಡ ಮಾರ್ಕ್ಸ್ ಎಷ್ಟು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ತಮ್ಮ ಅಮೋಘ ಅಭಿನಯದ ಮೂಲಕ ಮೊದಲ ಸಿನಿಮಾದಲ್ಲಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದಂತಹ ನಟಿ ಶ್ರೀನಿಧಿ ಶೆಟ್ಟಿ ಅವರು ಈಗ ಕೆಜಿಎಫ್ ಸಿನಿಮಾ ಮೂಲಕ ಮನೆಮಾತಾಗಿದ್ದಾರೆ. ಮಾಡೆಲಿಂಗ್ ಲೋಕದಲ್ಲಿ ಮಿಂಚಿ ಅನೇಕ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿರುವ ಸುಂದರಿ ಶ್ರೀನಿಧಿ ಶೆಟ್ಟಿ ಅವರು ತಮ್ಮ 10ನೆ ತರಗತಿಯಲ್ಲಿ ಪಡೆದಂತಹ ಅಂಕದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾತುಗಳು ಕೇಳಿ ಬರುತ್ತಿದೆ.

ರಾಕಿಂಗ್ ಸ್ಟಾರ್ ಯಶ್ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಅವರ ಕಾಂಬಿನೇಷನ್ ನಲ್ಲಿ ಮೂಡಿ ಬಂದತಹ ಕೆಜಿಎಫ್ ಎಂಬ ಸಾಮ್ರಾಜ್ಯಕ್ಕೆ ರಾಣಿಯಾಗಿರುವಂತಹ ಶ್ರೀನಿಧಿ ಶೆಟ್ಟಿಯವರ ಅಮೋಘ ಅಭಿನಯವನ್ನು ಮೆಚ್ಚಿ ಕನ್ನಡಿಗರು ಮಾತ್ರವಲ್ಲದೆ ತಮಿಳು, ತೆಲುಗು, ಹಿಂದಿ, ಮಲಯಾಳಂ ಸೇರಿದಂತೆ ಅನೇಕ ಭಾಷಿಗರು ಕೂಡ ಫುಲ್ ಮಾರ್ಕ್ಸ್ ನೀಡಿ ಬಿಟ್ಟಿದ್ದಾರೆ.

ಯಾವ ನಟಿಗೆ ತಾನೆ ಇಷ್ಟು ದೊಡ್ಡ ಮಟ್ಟದ ಸಕ್ಸಸ್ ಒಂದೆ ಒಂದು ಸಿನಿಮಾದ ಮೂಲಕ ಅದರಲ್ಲೂ ಮೊದಲ ಸಿನಿಮಾದ ಮೂಲಕ ಸಿಗಲು ಸಾಧ್ಯ ಹೇಳಿ ಅಲ್ಲವೆ ಆದರೆ ಶ್ರೀನಿಧಿ ಶೆಟ್ಟಿ ಅವರಿಗೆ ಈ ಭಾಗ್ಯ ಲಭಿಸಿತು. ಪ್ರತಿಯೊಬ್ಬರು ಕೂಡ ಒಂದೊಂದೆ ಹೆಜ್ಜೆಯಿಡುತ್ತಾ ನಿಧಾನವಾಗಿ ಮೇಲೆ ಬಂದರೆ ನಟಿ ಶ್ರೀನಿಧಿ ಶೆಟ್ಟಿ ಅವರು ತಮ್ಮ ಮನಮೋಹಕ ಸೌಂದರ್ಯ ಹಾಗೂ ಅಭಿನಯದ ಮೂಲಕ ಸ್ಟಾರ್ ಗಿರಿಯನ್ನು ಮೊದಲ ಸಿನಿಮಾದಲ್ಲೆ ಪಡೆದುಕೊಂಡು ಬಿಟ್ಟಿದ್ದಾರೆ.

ಶ್ರೀನಿಧಿ ಅವರು ಚಿಕ್ಕಂದಿನಿಂದಲೂ ಮಾಡೆಲಿಂಗ್ ನಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡಿದ್ದರು. ಶ್ರೀನಿಧಿ ಅವರು ಶಾಲಾ-ಕಾಲೇಜಿಗೆ ಹೋಗುವಾಗಲೆ ಅನೇಕ ವೇದಿಕೆಯ ಮೇಲೆ ತಮ್ಮ ಸೌಂದರ್ಯ ಪ್ರದರ್ಶನದ ಮೂಲಕ ಎಲ್ಲರ ಗಮನ ಸೆಳೆದಿದ್ದರು. 2016ರಲ್ಲಿ ಮಿಸ್ ಸುಪ್ರನೇಷನಲ್ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡ ಶ್ರೀನಿಧಿ ಶೆಟ್ಟಿ ಅವರಿಗೆ ಕೆಜಿಎಫ್ ಸಿನಿಮಾದ ಅವಕಾಶ ಒದಗಿ ಬರುತ್ತದೆ. ಸಿನಿಮಾದಲ್ಲಿ ಅಮೋಘವಾಗಿ ಅಭಿನಯಿಸಿದ ಶ್ರೀನಿಧಿ ಶೆಟ್ಟಿ ಅವರು ಇಂದು ಕೋಟ್ಯಾಂತರ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ.

ಇಂತಹ ಮನಮೋಹಕ ನಟಿಯ ಹತ್ತನೆ ಕ್ಲಾಸಿನ ಮಾರ್ಕ್ಸ್ ಕಾರ್ಡ್ ಒಂದು ಸಾಮಾಜಿಕ ಜಾಲತಾಣದಲ್ಲಿ ಬಾರಿ ಸೌಂಡ್ ಮಾಡುತ್ತಿದೆ. ಕನ್ನಡದಲ್ಲಿ 125 ಕ್ಕೆ 121 ಅಂಕವನ್ನು ಶ್ರೀನಿಧಿ ಶೆಟ್ಟಿ ಅವರು ಗಳಿಸುವ ಮೂಲಕ ಕನ್ನಡತಿ ಎಂಬುದನ್ನು ಆಗಲೆ ಸಾಬೀತುಪಡಿಸಿ ಬಿಟ್ಟಿದ್ದರು. ಈ ಮುದ್ದಾದ ನಟಿಗೆ ಮುಂದಿನ ದಿನಗಳಲ್ಲಿ ಸಿನಿಮಾಗಳಲ್ಲಿ ನಟಿಸಲು ಹೆಚ್ಚಿನ ಅವಕಾಶ ಸಿಗಲಿ ಎಂದು ಆಶಿಸೋಣ. ಶ್ರೀನಿಧಿ ಶೆಟ್ಟಿ ಅವರ ಬಗ್ಗೆ ನಿಮ್ಮ ಅನಿಸಿಕೆ ಅಬಿಪ್ರಾಯಗಳನ್ನು ತಿಳಿಸಿ.

Leave a Reply

Your email address will not be published. Required fields are marked *