ನಿಮ್ಮ ಮನೆಗೆ ಉಚಿತ ಗ್ಯಾಸ್ ಪಡೆಯೋದು ಹೇಗೆ ಅನ್ನೋದನ್ನ ತಿಳಿಯಿರಿ

0 5

ಸರ್ಕಾರ ಪ್ರತಿ ಬಡವರಿಗೂ ಉಚಿತವಾಗಿ ಗ್ಯಾಸ್ ಸೌಲಭ್ಯ ಪಡೆಯುವ ಯೋಜನೆಯನ್ನು ರೂಪಿಸಿದೆ ಅದರಲ್ಲಿ ಪ್ರತಿ ಬಡವರು ಹಾಗು ಆರ್ಥಿಕವಾಗಿ ಹಿಂದುಳಿದವರು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಈಗಾಗಲೇ ರಾಜ್ಯದಲ್ಲಿ ಹಾಗೂ ದೇಶದಲ್ಲಿ ಬಹುತೇಕ ಜನರು ಸರ್ಕಾರದ ಉಜ್ಜಲ ಯೋಜನೆಯಡಿಯಲ್ಲಿ ಉಚಿತ ಗ್ಯಾಸ್ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ, ನೀವು ಕೂಡ ನಿಮ್ಮ ಮನೆಗೆ ಈ ಗ್ಯಾಸ್ ಸೌಲಭ್ಯವನ್ನು ಪಡೆಯಬೇಕು ಅನ್ನೋದಾದರೆ ಇದಕ್ಕೆ ಏನು ಮಾಡಬೇಕು ಅನ್ನೋದನ್ನ ಮುಂದೆ ನೋಡಿ ಇದರ ಸದುಪಯೋಗವನ್ನು ಪಡೆದುಕೊಳ್ಳಿ.

ಮೊದಲನೆಯದಾಗಿ ಮನೆಗೆ ಉಚಿತ ಗ್ಯಾಸ್ ಸೌಲಭ್ಯ ಪಡೆಯುವುದು ಹೇಗೆ ಅನ್ನೋದನ್ನ ನೋಡುವುದಾದರೆ, ನಿಮ್ಮ ಹತ್ತಿರದ ತಾಲ್ಲೂಕು ಅಥವಾ ಜಿಲ್ಲೆಯ ಗ್ಯಾಸ್ ಏಜೆನ್ಸಿ ಗೆ ಬಂದು ಫಲಾನುಭವಿಯು ದಾಖಲೆಗಳ ಸಹಿತ ಅರ್ಜಿ ಸಲ್ಲಿಸಬೇಕು, ನಂತರ ಅದನ್ನು ಕಂಪ್ಯೂಟರ್‌ ಮೂಲಕ ಆನ್‌ಲೈನ್‌ ಸಂಪರ್ಕ ನೀಡಿ ಅನುಮತಿ ಯಾಚಿಸಲಾಗುತ್ತದೆ ಈಗಾಗಲೇ ಇಂತಹ ಪ್ರಕ್ರಿಯೆಗಳು ಜಿಲ್ಲೆಯಾದ್ಯಂತ ನಡೆಯುತ್ತಿದ್ದು, ಒಂದು ತಿಂಗಳೊಳಗೆ ಇದಕ್ಕೆ ಅನುಮತಿ ದೊರೆಯಲಿದೆ.

ಇನ್ನು ಅನುಮತಿ ದೊರೆತ ತಕ್ಷಣ ಸಂಬಂಧಪಟ್ಟ ಗ್ಯಾಸ್‌ ಏಜೆನ್ಸಿಯವರು ಫಲಾನುಭವಿಗಳಿಗೆ ಸುಮಾರು 1,600 ರೂ. ಮೌಲ್ಯದ ಸಿಲಿಂಡರ್‌ ಹಾಗೂ ರೆಗ್ಯುಲೇಟರ್‌ ಅನ್ನು ಉಚಿತವಾಗಿ ಅಳವಡಿಸುತ್ತಾರೆ, ಅಷ್ಟೇ ಅಲ್ದೆ ಸುರಕ್ಷಾ ಪೈಪ್‌ ಇತರ ಗ್ಯಾಸ್‌ ಪರಿಕರ ಹಾಗೂ ಸುಧಾರಿತ ಕ್ರಮಗಳಿಗೆ ಗ್ರಾಹಕರು ಹೆಚ್ಚಿನ ಹಣವನ್ನು ನೀಡಬೇಕು ಬಳಿಕ ಸಿಲಿಂಡರ್‌ ರೀಫಿಲ್ಲಿಂಗ್‌ಗೆ ಮಾತ್ರ ಹಣ ಪಾವತಿ ಮಾಡಬೇಕಾಗುತ್ತದೆ.

ಮೊದಲನೆಯದಾಗಿ ಈ ಯೋಜನೆ ರೂಪಿತಗೊಡಿರುವುದು ಮಹಿಳೆಯರಿಗಾಗಿ ಅಂದರೆ ಈ ಯೋಜನೆಗೆ ಮಹಿಳೆಯರು ಮಾತ್ರ ಅರ್ಹರಾಗಿದ್ದು, 18 ವರ್ಷ ಮೇಲ್ಪಟ್ಟಿರಬೇಕು ಹಾಗೂ ರಾಜ್ಯಸರ್ಕಾರಗಳು ಬಡತನ ರೇಖೆಗಿಂತ ಕೆಳಗಿರುವ ನೀಡುವ ಬಿಪಿಎಲ್ ಕಾರ್ಡ್’ನ್ನು ಹೊದಿರಬೇಕು. ಉಚಿತವಾಗಿ ಗ್ಯಾಸ್ ಪಡೆಯಲು ಯಾವೆಲ್ಲ ದಾಖಲೆಗಳನ್ನು ನೀಡಬೇಕು ಅನ್ನೋದನ್ನ ನೋಡುವುದಾದರೆ ರೇಷನ್ ಕಾರ್ಡ್ ಆಧಾರ್‌ ಕಾರ್ಡು ಪ್ರತಿ ಮತದಾನದ ಗುರುತಿನ ಚೀಟಿ (ವೋಟರ್‌ ಐಡಿ), ಬ್ಯಾಂಕಿನ ಉಳಿತಾಯ ಖಾತೆಯ ಪಾಸ್‌ ಬುಕ್‌ ಪ್ರತಿ ಪಾಸ್‌ಪೋರ್ಟ್‌ ಸೈಜ್‌ ಫೋಟೋ 1ಇವುಗಳನ್ನು ಕೊಡಬೇಕು ಈ ವಿಚಾರಕ್ಕೆ ಸಂಬಂದಿಸಿದ ಮಾಹಿತಿಯನ್ನು ತಿಳಿಯಲು ನಿಮ್ಮ ಹತ್ತಿರದ ಗ್ಯಾಸ್ ಏಜೆನ್ಸಿ ಗೆ ಭೇಟಿ ನೀಡಿ ಇದರ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದಾಗಿದೆ.

Leave A Reply

Your email address will not be published.