ಶ್ವಾಸಕೋಶದಲ್ಲಿ ಕಫ ತುಂಬಿಕೊಳ್ಳುವ ಕಾರಣದಿಂದಾಗಿ ಎದೆಯಲ್ಲಿ ದಟ್ಟನೆ ಉಂಟಾಗಬಹುದು. ಇದರಿಂದ ಎದೆಯ ಭಾಗ ಭಾರವಾಗಿರುವ ಅನುಭವವಾಗಬಹುದು. ಸಣ್ಣ ಮಟ್ಟದ ಎದೆ ನೋವು, ಕಫ, ಉಸಿರಾಟದ ಸಮಸ್ಯೆ, ಕಿರಿಕಿರಿ ಮತ್ತು ಆಯಾಸ ಎದೆ ದಟ್ಟನೆಯ ಅಥವಾ ಎದೆ ದಟ್ಟಣೆಯ ಕೆಲವು ಲಕ್ಷಣಗಳಾಗಿವೆ. ಇನ್ನು ಕೆಲವು ಸಮಯದಲ್ಲಿ ಕೆಮ್ಮು ಕಡಿಮೆ ಆದರೂ ಸಹ ಕಫ ಹಾಗೆಯೇ ಇರುತ್ತದೆ ಎಷ್ಟೇ ಔಷಧಿ ಮಾಡಿದರೂ ಸಹ ಹೋಗುವುದಿಲ್ಲ. ಹಾಗಿದ್ದಾಗ ನಾವು ತಿಳಿಸುವ ಈ ಮನೆಮದ್ದನ್ನು ಒಮ್ಮೆ ಮಾಡಿ ನೋಡಿ ಕಫ ನಿವಾರಣೆ ಆಗುವುದು. ಹಾಗಿದ್ದರೆ ಕಫದ ನಿವಾರಣೆಗೆ ಇರುವ ಸುಲಭವಾದ ಮನೆಮದ್ದು ಏನು ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಕೆಲವರಿಗೆ ಬಹಳ ದಿನಗಳಿಂದ ಕಫ ಗಂಟಲಿನಲ್ಲಿ ಕಟ್ಟಿಕೊಂಡು ಇರುತ್ತದೆ ಹಾಗಿದ್ದಾಗ ಇದಕ್ಕೆ ಶುದ್ಧವಾದ ಹಸುವಿನ ಹಾಲನ್ನು ಒಂದು ಲೋಟದಷ್ಟು ಸ್ವಲ್ಪ ಬೆಚ್ಚಗಿನ ಹಾಲನ್ನು ತೆಗೆದುಕೊಂಡು ಅದಕ್ಕೆ ಎರಡು ಸ್ಪೂನ್ ಅಷ್ಟು ಕಲ್ಲುಸಕ್ಕರೆ ಸೇರಿಸಿಕೊಳ್ಳಬೇಕು. ಒಂದುವೇಳೆ ಸಕ್ಕರೇ ಕಾಯಿಲೆ ಇರುವವರು ಕಲ್ಲುಸಕ್ಕರೆ ಬಳಸುವುದು ಬೇಡ. ಇದರ ಜೊತೆಗೆ ಮುಖ್ಯವಾಗಿ ಅರ್ಧ ಚಿಟಿಕೆ ಅಷ್ಟು ಕಾಳುಮೆಣಸಿನ ಪುಡಿ ಹಾಕಿ ಮಿಕ್ಸ್ ಮಾಡಿಕೊಂಡು ಹಾಲು ಬಿಸಿ ಇರುವಾಗಲೇ ಇದನ್ನು ಕುಡಿಯಬೇಕು. ಹಾಗೆಯೇ ಈ ರೀತಿಯಾಗಿ ಮಾಡಿಕೊಂಡ ಹಸುವಿನ ಹಾಲನ್ನು ಬೆಳಿಗ್ಗೆ ತಿಂಡಿಗೂ ಮೊದಲು ಅಂದರೆ ತಿಂಡಿಗೂ ಒಂದು ಗಂಟೆ ಮೊದಲು ಈ ಹಾಲನ್ನು ಕುಡಿಯಬೇಕು. ಈ ರೀತಿಯಾಗಿ ಒಂದು ವಾರ ಕುಡಿಯುವುದರಿಂದ ಎದೆಯಲ್ಲಿ , ಗಂಟಲಲ್ಲಿ ಕಟ್ಟಿದ ಕಫ ಹೊರಗಡೆ ಬರುವುದು.

ಅದೇ ರೀತಿ ಕಫ ಕಟ್ಟಿ ಎದೆ ದಟ್ಟಣೆಗೆ ಹಲವಾರು ಶತಮಾನಗಳಿಂದ ಮಾಡಿಕೊಂಡು ಬಂದಿರುವಂತಹ ಮನೆಮದ್ದು ಇದಾಗಿದೆ. ಅರಶಿನದಲ್ಲಿ ಹಲವಾರು ರೀತಿಯ ಔಷಧೀಯ ಗುಣಗಳು ಇದೆ ಎಂದು ತಿಳಿದಿದೆ. ಇದರಲ್ಲಿ ಇರುವ ಆ್ಯಂಟಿಆಕ್ಸಿಡೆಂಟ್ ಹಲವಾರು ಆರೋಗ್ಯ ಸಮಸ್ಯೆ ನಿವಾರಣೆ ಮಾಡುವುದು. ಒಂದು ಲೋಟ ಬಿಸಿ ಹಾಲಿಗೆ ಒಂದು ಚಮಚ ಅರಿಶಿನ ಮತ್ತು ಎರಡು ಚಮಚ ಜೇನುತುಪ್ಪ ಹಾಕಿಕೊಳ್ಳಿ. ಒಂದು ಚಿಟಿಕೆ ಕರಿಮೆಣಸಿನ ಹುಡಿ ಹಾಕಿ. ಬಿಸಿಯಾಗಿರುವಾಗಲೇ ಈ ಹಾಲನ್ನು ಕುಡಿದರೆ ಎದೆ ದಟ್ಟಣೆ ಕಡಿಮೆ ಮಾಡಬಹುದು. ಎದೆಯು ಕಫದಿಂದ ಮುಕ್ತಿ ಪಡೆಯುವ ತನಕ ದಿನದಲ್ಲಿ ಹಲವಾರು ಸಲ ಉಪ್ಪು ಬೆರೆಸಿದ ಬಿಸಿ ನೀರಿನಿಂದ ಬಾಯಿ ಮುಕ್ಕಳಿಸಿಕೊಳ್ಳಿ. ಇದನ್ನು ದಿನದಲ್ಲಿ 3-4 ಸಲ ಮಾಡಿ. ಉಪ್ಪು ಎದೆಯಲ್ಲಿರುವ ಕಫವನ್ನು ತೆಗೆಯುವುದು ಮತ್ತು ಬಿಸಿ ನೀರು ಗಂಟಲಿನ ಕಿರಿಕಿರಿ ತಪ್ಪಿಸುವುದು. ಒಂದು ಲೋಟ ಬಿಸಿ ನೀರಿಗೆ ಒಂದು ಚಮಚ ಉಪ್ಪು ಹಾಕಿ ಬೆರೆಸಿ ಬಾಯಿ ಮುಕ್ಕಳಿಸಿಕೊಳ್ಳಿ.

ಜ್ಯೋತಿಷ್ಯ: ಶ್ರೀ ಮಂತ್ರಾಲಯ ಗುರು ಬೃಂದಾವನ ಜ್ಯೋತಿಷ್ಯ ಮಂದಿರ, ಗುರೂಜಿ ಶ್ರೀ ಪರುಶುರಾಮ ಎಲ್ ಜ್ಯೋಷಿ
ವ್ಯಾಪಾರ ಸಮಸ್ಯೆ ಮದುವೆ ಸಮಸ್ಯೆ ಸಂತಾನ ಸಮಸ್ಯೆ ಹಣಕಾಸಿನ ಸಮಸ್ಯೆ ಗಂಡ-ಹೆಂಡತಿ ಸಮಸ್ಯೆ ಅತ್ತೆ ಸೊಸೆ ಕಿರಿಕಿರಿ ಇನ್ನು ನಿಮ್ಮ ಜೀವನದಲ್ಲಿ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ಶ್ರೀ ಮಂತ್ರಾಲಯ ಗುರು ರಾಯರ ಅನುಗ್ರಹದಿಂದ ಮತ್ತು ದುರ್ಗಾ ಹೋಮ ಸುದರ್ಶನ ಹೋಮ ಮಹಾಗಣಪತಿ ಯಾಗ ಶ್ರೀ ಕರ ಮಂತ್ರ ಹೋಮ ಸುಗ್ರೀವ ಹೋಮ ಹಾಗೂ 1008 ಜಪ ತಪ ಹೋಮ ಹವನ ಗಳಿಂದ ಕೇವಲ 24 ಗಂಟೆಗಳಲ್ಲಿ ಶಾಶ್ವತವಾಗಿ ಪರಿಹಾರ ಶತಸಿದ್ಧ ಇಂದೇ ಸಂಪರ್ಕಿಸಿ 9845111287

Leave a Reply

Your email address will not be published. Required fields are marked *