ಕನ್ನಡದ ಸೀರಿಯಲ್ ಕಮಲಿ ದಾರವಾಹಿಯಲ್ಲಿ ನಟರ ಮಾಡುತ್ತಿರುವ ಕಮಲಿ ಪಾತ್ರದ ನಟಿಯ ನಿಜ ಜೀವನದ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ. ನಮ್ಮ ಪ್ರತಿಯೊಂದು ಟಿವಿ ಚಾನೆಲ್ ಗಳಲ್ಲಿ ಧಾರವಾಹಿಗಳಿಗೆ ಏನು ಕಡಿಮೆ ಇಲ್ಲ. ಸಾಮಾನ್ಯವಾಗಿ ಪ್ರತಿಯೊಂದು ಧಾರವಾಹಿಯಲ್ಲಿ ಬರುವಂತಹ ನಟ-ನಟಿಯರು ಎಲ್ಲರ ಮನೆ ಮಾತಾಗಿರುತ್ತಾರೆ. ಆದರೆ ನಾವು ಧಾರವಾಹಿಗಳಲ್ಲಿ ನೋಡುವಂತಹ ನಟನಟಿಯರೆ ಬೇರೆ ಧಾರವಾಹಿಯನ್ನು ಹೊರತುಪಡಿಸಿ ಅವರ ವೈಯಕ್ತಿಕ ಜೀವನವೇ ಬೇರೆ.

ಸಿನಿಮಾಗಳಲ್ಲಿ ಅಥವಾ ಧಾರವಾಹಿಗಳಲ್ಲಿ ನಟಿಸುವವರು ಕೇವಲ ನಿರ್ದೇಶಕರ ಕೈಗೊಂಬೆಯಾಗಿದ್ದು ನಿರ್ದೇಶಕರು ತಿಳಿಸಿದಂತೆ ನಟನೆ ಮಾಡುತ್ತಾರೆ ಅಷ್ಟೇ. ಆದರೆ ಆ ಧಾರಾವಾಹಿಗಳನ್ನು ನೋಡುವ ಜನರು ಅದನ್ನು ಮನಸ್ಸಿಗೆ ತೀರಾ ಹಚ್ಚಿಕೊಂಡು ಧಾರಾವಾಹಿಗಳಲ್ಲಿ ಬರುವಂತಹ ಪಾತ್ರಗಳು ತಮ್ಮ ನಿಜ ಜೀವನದಲ್ಲಿಯೂ ಕೂಡ ಹೀಗೆಯೇ ಇರುತ್ತವೆ ಎಂದು ತಿಳಿದಿರುತ್ತಾರೆ. ಆದರೆ ಬಣ್ಣದ ಬದುಕಿಗೂ ಹಾಗೂ ಬಣ್ಣದ ಆಚೆಗಿನ ಬದುಕು ತೀರಾ ಹೋಲಿಕೆ ವ್ಯತ್ಯಾಸ ಇದ್ದು, ಎಲ್ಲಾ ನಟ-ನಟಿಯರ ಅಥವಾ ಎಲ್ಲಾ ಕಲಾವಿದರ ವೈಯಕ್ತಿಕ ಜೀವನ ಅಥವಾ ನಿಜ ಜೀವನ ಬೇರೆಯಾಗಿರುತ್ತದೆ.

ಅದೇ ರೀತಿ ಕಮಲಿ ಧಾರಾವಾಹಿಯ ನಟಿ ಕಮಲಿ ಕೂಡ. ಇವರ ನಿಜವಾದ ಹೆಸರು ಅಮೂಲ್ಯ ಗೌಡ. ತಾಯಿಯನ್ನು ಕಳೆದುಕೊಂಡ ಅಮೂಲ್ಯ ಕಮಲಿ ಧಾರಾವಾಹಿಯ ಮೂಲಕ ಪ್ರತಿಯೊಬ್ಬರ ಮನೆಮಾತಾಗಿದ್ದಾರೆ. ಕಳೆದೆರಡು ವರ್ಷಗಳಿಂದ ಕನ್ನಡ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಮಲಿ ಧಾರಾವಾಹಿಯಲ್ಲಿ ಮುಖ್ಯ ಪಾತ್ರ ದಲ್ಲಿ ನಟನೆ ಮಾಡುತ್ತಿರುವ ಅಮೂಲ್ಯ, ಹಳ್ಳಿ ಹುಡುಗಿಯಾಗಿ ತನ್ನ ಮುಗ್ಧ ಮಾತಿನಿಂದ ಎಲ್ಲರ ಗಮನಸೆಳೆಯುತ್ತಿದ್ದಾರೆ.

By

Leave a Reply

Your email address will not be published. Required fields are marked *