ಒಂದು ಚಿಕ್ಕ ಉಪಾಯದಿಂದ ಇರೋ ಚಿಕ್ಕ ಕೃಷಿ ಭೂಮಿಯಲ್ಲಿ ಲಕ್ಷ ಸಂಪಾದನೆ ಮಾಡುತ್ತಿರುವ ಮಹಿಳೆ

0 0

ಬೆಳಗ್ಗೆ ಬೇಗ ಎದ್ದು ಅಡುಗೆ ಕೆಲಸ ಹಾಗೂ ಬಾಕಿ ಉಳಿದ ಎಲ್ಲಾ ಕೆಲಸಗಳನ್ನು ಮಾಡಿ ಎಲ್ಲರಂತೆ ಕೃಷಿ ಕೆಲಸವನ್ನು ಸಹ ಮಾಡುವಂತಹ ಮಹಿಳೆಯರು ಗಂಡಸರಿಗಿಂತ ಹೆಚ್ಚು ದುಡಿಯುತ್ತಾರೆ ಎನ್ನುವುದು ಎಲ್ಲರೂ ಒಪ್ಪಿಕೊಳ್ಳಬೇಕಾದ ಸತ್ಯ. ಈ ಮಹಿಳೆಯು ಹಾಗೆ ಕುಟುಂಬದ ಪರಿಸ್ಥಿತಿ ತೀರಾ ಹದಗೆಟ್ಟಾಗ ಇವರಿಗೆ ಬಂದ ಆಲೋಚನೆ, ಮುಂದೆ ಇವರು ಒಂದು ತಿಂಗಳಿಗೆ ಒಂದು ಲಕ್ಷ ದುಡಿಯುವಂತೆ ಮಾಡಿದೆ. ಆ ಮಹಿಳೆ ಯಾರು ಅವರ ಮಾಡುತ್ತಿರುವ ಕೆಲಸವಾದರೂ ಎಂತಹದ್ದು ಎನ್ನುವುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಈ ಮಹಿಳೆ ಹೆಸರು ಬಿನಾ ದೇವಿ ಬಿಹಾರ ರಾಜ್ಯದ ಇವರು ಎಲ್ಲರಂತೆ ಮದುವೆಯಾಗಿ ಗಂಡನ ಮನೆಗೆ ಕಾಲಿಟ್ಟರು. ಅವರ ಗಂಡನ ಮನೆ ಕುಟುಂಬ ವ್ಯವಸಾಯ ಮಾಡಿ ತಮ್ಮ ಜೀವನವನ್ನು ಸಾಗಿಸುತ್ತಿದ್ದರು. ಅವರ ದುಡಿದಂತಹ ಹಣ ಅವರ ತಿನ್ನೋದಕ್ಕೆ ಮಾತ್ರವೇ ಸಾಲುತ್ತಿದ್ದು, ಬೀನಾ ದೇವಿಯವರಿಗೆ ಮಕ್ಕಳಾದ ನಂತರ ತನ್ನ ಮಕ್ಕಳ ಜೀವನ ಕೂಡ ತನ್ನ ಜೀವನದಂತೆಯೇ ಆಗಬಾರದು ಅವರಿಗೆ ಉತ್ತಮ ಜೀವನವನ್ನು ತಲುಪಿಸಿ ಕೊಡಬೇಕು ಎನ್ನುವ ನಿಟ್ಟಿನಲ್ಲಿ ಅವರು ಯೋಚಿಸುತ್ತಿದ್ದರು. ಅದೇ ಸಮಯದಲ್ಲಿ ವ್ಯವಸ್ಥಿತ ವ್ಯವಸಾಯದ ಬಗ್ಗೆ ಕೃಷಿ ವಿಜ್ಞಾನ ಕೇಂದ್ರದಲ್ಲಿ ತರಬೇತಿಯನ್ನು ನೀಡಲಾಗುತ್ತಿತ್ತು.

ಈ ತರಬೇತಿಯನ್ನು ಪಡೆದ ಬಿನಾ ದೇವಿಯವರಿಗೆ ಅಣಬೆ ಹಾಗೂ ಸಹಜ ಪದ್ಧತಿಯಲ್ಲಿ ಇದರ ಬಗ್ಗೆ ವ್ಯವಸಾಯ ಮಾಡುವುದರ ಕುರಿತಾಗಿ ಆಸಕ್ತಿ ಬೆಳೆದಿತ್ತು. ಟ್ರೈನಿಂಗ್ ನಲ್ಲಿ ಅಣಬೆಯನ್ನು ಹೇಗೆ ಬೆಳೆಯಬೇಕು ಎನ್ನುವುದರ ಕುರಿತು ತಿಳಿಸಿಕೊಟ್ಟಿದ್ದರು. ಕೊನೆಗೆ ಆ ತರಬೇತಿಯಲ್ಲಿ ಹೇಳಿಕೊಟ್ಟ ಹಾಗೆ ಅಣಬೆಯನ್ನು ಬೆಳೆಯಲು ನಿರ್ಧರಿಸಿದರು ಬಿನಾ ದೇವಿಯವರು ತಮ್ಮ ಮನೆಯ ಪಕ್ಕದಲ್ಲಿಯೇ ಇದ್ದ ಸ್ವಲ್ಪ ಜಾಗದಲ್ಲಿ ಮೊದಲಿಗೆ 1ಕೆಜಿ ಅಣಬೆಯನ್ನು ಬೆಳೆದರು ಸರಿಯಾಗಿ ಬೆಳೆದಿದ್ದರ ಪ್ರತಿಯಾಗಿ ಬೀನಾ ದೇವಿಯವರಿಗೆ ಸ್ವಲ್ಪ ಧೈರ್ಯ ಬಂದಿತ್ತು. ಇದರಿಂದಾಗಿ ನಂತರದ ದಿನಗಳಲ್ಲಿ ನೂರಾರು ಕೆಜಿ ಅಣಬೆ ಬೆಳೆಯಲು ಆರಂಭಿಸಿದ ಬಿನಾ ದೇವಿಯವರು ತಮ್ಮ ಮನೆ ಹತ್ತಿರ ಅಂಗಡಿ ಹಾಗೂ ಮನೆಯ ಮುಂದೆಯೇ ಅಣಬೆಯನ್ನು ಮಾರಾಟ ಮಾಡಲು ಆರಂಭಿಸಿದರು. ಇದರ ಜೊತೆಗೆ ತಮ್ಮ ಗೆದ್ದ ಅಲ್ಪಸ್ವಲ್ಪ ಜಮೀನಿನಲ್ಲಿಯೇ ಸಹಜ ಪದ್ಧತಿಯಲ್ಲಿ ವ್ಯವಸಾಯವನ್ನು ಕೂಡ ಆರಂಭಿಸಿದರು.ಕೊನೆಗೆ ಬೀನಾ ದೇವಿಯವರಲ್ಲಿ ಯಶಸ್ಸನ್ನು ಸಹ ಕಂಡರು ಈಗ ಅಣಬೆ ಹಾಗೂ ಸಹಜ ಪದ್ಧತಿಯ ವ್ಯವಸಾಯದ ಫಲವಾಗಿ ಬೀನಾ ದೇವಿಯವರು ತಿಂಗಳಿಗೆ ಸರಿಸುಮಾರು ಒಂದು ಲಕ್ಷ ರಾಗ ಲಾಭವನ್ನು ಗಳಿಸುತ್ತಿದ್ದಾರೆ. ತಮ್ಮ ಮಕ್ಕಳಿಗೆ ಸಹ ಉನ್ನತ ವಿದ್ಯಾಭ್ಯಾಸವನ್ನು ನೀಡುತ್ತಿರುವ ಬೀನಾ ದೇವಿಯವರು ತಮ್ಮ ಸುತ್ತಮುತ್ತಲಿನ ಮಹಿಳೆಯರಿಗೂ ಸಹ ಅಣಬೆ ಕೃಷಿ ಯನ್ನು ಕಲಿಸಿಕೊಡುತ್ತಿದ್ದಾರೆ.

ಅಣಬೆಗೆ ಈಗ ಭಾರೀ ಬೇಡಿಕೆ ಇದ್ದು ಇದನ್ನು ಬೆಳೆಯುವುದು ಅಷ್ಟು ಕಷ್ಟದ ಕೆಲಸವೇನಲ್ಲ. ಬೆಂಗಳೂರಿನ ಹೆಸರಘಟ್ಟದ ಬಳಿ ಭಾರತೀಯ ತೋಟಗಾರಿಕಾ ಸಂಶೋಧನಾ ಇಲಾಖೆ ಇದ್ದು ಇಲ್ಲಿ ಅಣಬೆ ಬೆಳೆಯುವುದು ಹೇಗೆ ಎಂದು ತಿಳಿಸಿ ಅದಕ್ಕೆ ಬೇಕಾದಂತಹ ತರಬೇತಿಯನ್ನು ಸಹ ನೀಡಿ ಅದಕ್ಕೆ ಬೇಕಾದಂತಹ ವಸ್ತುಗಳನ್ನು ಸಹ ಮಾರಾಟ ಮಾಡಲಾಗುತ್ತದೆ. ಅಣಬೆಯನ್ನು ಬೆಳೆಯಲು ದೊಡ್ಡದಾದ ಜಮೀನು ಬೇಕೆಂದು ಏನು ಇಲ್ಲ ಮನೆಯಲ್ಲಿ ಆದರೂ ಅಣಬೆಯನ್ನು ಬೆಳೆದು ಹತ್ತಿರದ ಅಂಗಡಿಗಳಲ್ಲಿ ಹಾಗೂ ಆನ್ಲೈನ್ ಮೂಲಕ ಮಾರಾಟ ಮಾಡಬಹುದು. ಇಲ್ಲಿ ಇನ್ನೊಂದು ಪ್ರಯೋಜನ ಏನು ಅಂದರೆ ಫ್ರೆಶ್ ಆಗಿರುವಂತಹ ಅಣಬೆ ಮಾರಾಟವಾಗದೇ ಇದ್ದಲ್ಲಿ ಅದನ್ನು ಒಣಗಿಸಿ ಅಂದರು ಮಾರಾಟ ಮಾಡಬಹುದು. ಇದರಿಂದ ಯಾವುದೇ ನಷ್ಟ ಅಂತ ಆಗುವುದಿಲ್ಲ. ಬಿನಾ ದೇವಿಯವರ ಒಂದು ದೃಢವಾದ ಹೆಜ್ಜೆ ಅವರನ್ನು ಒಬ್ಬ ಆದರ್ಶ ಮಹಿಳೆ ಯನ್ನಾಗಿ ರೂಪಿಸಿದೆ.

Leave A Reply

Your email address will not be published.