ರಾಮ್ ಕುಮಾರ್ ಎಂದ ತಕ್ಷಣ ನಮಗೆ ತಟ್ಟನೆ ನೆನಪಿಗೆ ಬರುವುದು ಅವರ ಸುಂದರ ಮುಖ, ನಿಷ್ಕಲ್ಮಶ ನಗು ಹಾಗು ಪ್ರೀತಿ ತುಂಬಿದ ನೋಟ. ರಾಮಕುಮಾರ್ ಕೇವಲ ನಟ ಮಾತ್ರ ಆಗಿರದೆ ಅದೇಷ್ಟೋ ಹುಡುಗಿಯರ ಡ್ರೀಮ್ ಬಾಯ್ ಕೂಡ ಆಗಿದ್ದರು. ರಾಮ್ ಕುಮಾರ್ ಅವರ ಗೆಜ್ಜೆನಾದ, ಕಾವ್ಯ, ತವರಿನ ತೊಟ್ಟಿಲು ಮುಂತಾದ ಕೆಲವು ಚಿತ್ರಗಳನ್ನು ಈಗಲೂ ನೋಡುತ್ತಾ ಇರೋಣ ಅಂತ ಅನಿಸುತ್ತದೆ. ಕ್ಯಾತ ನಟ ಹಾಗೂ ನಿರ್ಮಾಪಕ ಶೃಂಗಾರ ರಾಜ ಅವರ ಮಗ ರಾಮ್ ಕುಮಾರ್. ಚಿಕ್ಕಂದಿನಿಂದಲೂ ಚಿತ್ರರಂಗದ ಬಗ್ಗೆ ಅತಿಯಾಗಿ ಆಸಕ್ತಿ ಬೆಳೆಸಿಕೊಂಡಿದ್ದ ರಾಮ್ ಕುಮಾರ್ ಅವರು ಆವೇಶ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಹಲವಾರು ಉತ್ತಮ ಚಿತ್ರಗಳನ್ನು ನೀಡಿದ ನಟ ರಾಮ್ ಕುಮಾರ್ ಉತ್ತಮ ನಟರಾಗಿ ಬೆಳೆದರು.

ಇದೇ ಸಮಯದಲ್ಲಿ ನಟ ಡಾಕ್ಟರ್ ರಾಜಕುಮಾರ್ ಅವರ ಮಗಳು ಪೂರ್ಣಿಮಾ ಅವರನ್ನು ವಿವಾಹವಾದರು. ರಾಮ್ ಕುಮಾರ್ ಅವರಿಗೆ ಒಬ್ಬ ಮಗ ಮತ್ತು ಒಬ್ಬ ಮಗಳು. ಇಲ್ಲಿ ವಿಶೇಷ ಎಂದರೆ ರಾಮ್ ಕುಮಾರ್ ಅವರ ಮಗ ಹಾಗೂ ಮಗಳು ಇಬ್ಬರು ಸಹ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಇವುಗಳ ನಡುವೆ ರಾಮ್ ಕುಮಾರ್ ಅವರ ಮನೆಯ ಸುಂದರ ಚಿತ್ರಗಳು ನೋಡುಗರ ಮನಸೆಳೆಯುತ್ತವೆ. ಆದರೆ 2010 ರ ನಂತರ ನಟ ರಾಮ್ ಕುಮಾರ್ ಅವರ ಚಿತ್ರಗಳು ಅಷ್ಟೊಂದು ಗೆಲುವನ್ನು ಸಾಧಿಸುವುದಿಲ್ಲ ಎನ್ನುವುದು ಸ್ವಲ್ಪ ಬೇಸರದ ಸಂಗತಿ. 2013ರಲ್ಲಿ ಬಂದ ಶ್ರೀ ಕ್ಷೇತ್ರ ಆದಿಚುಂಚನಗಿರಿ ಚಿತ್ರದ ನಂತರ ಬೇರೆ ಮತ್ಯಾವ ಚಿತ್ರಗಳಲ್ಲಿಯೂ ಕೂಡ ರಾಮ್ ಕುಮಾರ್ ಅವರು ನಟಿಸಲಿಲ್ಲ. ಉತ್ತಮ ವ್ಯಕ್ತಿತ್ವ ಹಾಗೂ ಅದ್ಭುತ ನಟನಾ ಕಲೆಯನ್ನು ಹೊಂದಿರುವ ರಾಮಕುಮಾರ್ ಅವರಂತಹ ಉತ್ತಮ ನಟರು ಕನ್ನಡ ಚಿತ್ರರಂಗಕ್ಕೆ ಇನ್ನು ಬೇಕಾಗಿದ್ದಾರೆ. ವಿಭಿನ್ನ ಪಾತ್ರ ಹಾಗೂ ಒಳ್ಳೆಯ ಕಥಾ ಹಂದರವನ್ನು ಹೊಂದಿರುವ ಸಿನಿಮಾ ಪಾತ್ರಗಳ ಮೂಲಕ ರಾಮ್ ಕುಮಾರ್ ಅವರು ಚಿತ್ರರಂಗಕ್ಕೆ ಪುನಹ ಪಾದಾರ್ಪಣೆ ಮಾಡಲೀ ಎನ್ನುವುದು ಅವರ ಅಭಿಮಾನಿಗಳ ಆಶಯವಾಗಿದೆ.

By

Leave a Reply

Your email address will not be published. Required fields are marked *