ಪಾನಿಪುರಿ ಅಥವಾ ಸ್ಟ್ರೀಟ್ ಸ್ಟೈಲ್ ಗೋಲ್ ಗಪ್ಪ ಇದನ್ನು ಇಷ್ಟಪಡದ ಜನರೇ ಇಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ರಸ್ತೆಯ ಬದಿಯಲ್ಲಿ ಇದನ್ನ ಇಟ್ಟು ವ್ಯಾಪಾರ ಮಾಡುವುದರಿಂದ , ಹಾಗೂ ಅದನ್ನು ತಿನ್ನುವುದರಿಂದ ನಮ್ಮ ಆರೋಗ್ಯ ಹಾಳು ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗಾಗಿ ನಾವು ಮನೆಯಲ್ಲಿಯೇ ಸುಲಭವಾಗಿ ಸ್ವಚ್ಛವಾಗಿ ಪಾನಿಪುರಿಯನ್ನು ಮಾಡಿಕೊಂಡು ನಮಗೆ ಎಷ್ಟು ಬೇಕೋ ಅಷ್ಟು ಕಡಿಮೆ ದುಡ್ಡಿನಲ್ಲಿ ಹೆಚ್ಚು ತಿನ್ನಬಹುದು. ಪಾನಿಪುರಿ, ಅದಕ್ಕೆ ಬೇಕಾದಂತಹ ಪಾನಿ, ಆಲೂ ಸ್ಟಫಿಂಗ್ಗ್ ಹೇಗೆ ಮಾಡೋದು ಅನ್ನೋದನ್ನ ಇಲ್ಲಿ ತಿಳಿದುಕೊಳ್ಳೋಣ.

ಮೊದಲ ಮನೆಯಲ್ಲಿಯ ಪುರಿ ಮಾಡೋದು ಹೇಗೆ ಅಂತ ನೋಡೋಣ. ಪುರಿ ಮಾಡಲು ಒಂದು ದೊಡ್ಡದಾದ ಬೌಲ್ ಗೆ 2 ಕಪ್ ಚಿರೋಟಿ ರವೆ, ಎರಡು ಸ್ಪೂನ್ ನಷ್ಟು ಮೈದಾಹಿಟ್ಟು, 1 ಸ್ಪೂನ್ ನಷ್ಟು ಎಣ್ಣೆ ಹಾಗೂ ಅರ್ಧ ಸ್ಪೂನ್ ನಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡುಸ್ವಲ್ಪ ಸ್ವಲ್ಪ ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಂಡು 15ರಿಂದ 20 ನಿಮಿಷ ಮುಚ್ಚಿ ಇಡಬೇಕು. ನಂತರ ಮತ್ತೊಮ್ಮೆ ಕೈಯಲ್ಲಿ ಚೆನ್ನಾಗಿ ನಾದಿಕೊಂಡು, ಚಪಾತಿ ಹಿಟ್ಟಿನ ಹಾಗೆ ಸ್ವಲ್ಪ ದೊಡ್ಡದಾದ ಉಂಡೆಯನ್ನು ತೆಗೆದುಕೊಂಡು ತೆಳುವಾಗಿ ಲಟ್ಟಿಸಿಕೊಂಡು ರೌಂಡ್ ಆಗಿ ಕಟ್ ಮಾಡಿಕೊಂಡು ಕಾದ ಎಣ್ಣೆಯಲ್ಲಿ ಕರಿದಿಟ್ಟುಕೊಳ್ಳಬೇಕು.

ಆಲು ಸ್ಟಫಿಂಗ್: ಮೊದಲು 5 / 6 ಆಲೂಗಡ್ಡೆಯನ್ನು ಬೇಯಿಸಿ ಸಿಪ್ಪೆತೆಗೆದು ನೀರು ತೆಗೆದಿಟ್ಟುಕೊಳ್ಳಬೇಕು. ನಂತರ ಇದನ್ನು ಒಂದು ಪಾತ್ರೆಯಲ್ಲಿ ಹಾಕಿ ಮ್ಯಾಚ್ ಮಾಡಿಕೊಂಡು ಇದಕ್ಕೆ ಬೇಯಿಸಿದ ಬಟಾಣಿಯನ್ನು ಸೇರಿಸಿಕೊಳ್ಳಬೇಕುನಂತರ ಅದಕ್ಕೆ ಒಂದು ಟೀ ಸ್ಪೂನ್ ನಷ್ಟು ಅಚ್ಚಖಾರದ ಪುಡಿ 1 ಟೀ ಸ್ಪೂನ್ ನಷ್ಟು ಚಾಟ್ ಮಸಾಲ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಇಷ್ಟು ಮಾಡಿಕೊಂಡರೆ ಪೂರಿ ಒಳಗಿನ ಸ್ಟಫಿಂಗ್ ರೆಡಿಯಾಗಿರುತ್ತೆ.

ಪಾನಿ ಮಾಡುವ ವಿಧಾನ: ಒಂದು ಮಿಕ್ಸಿ ಜಾರಿಗೆಕುತುಂಬರಿ ಹಾಗೂ ಪುದಿನ ಎರಡನ್ನು ತಲಾ ಒಂದೊಂದು ಕೊಟ್ಟಂತೆ ಹಾಕಿ ಖಾರಕ್ಕೆ ತಕ್ಕಷ್ಟು ಹಸಿಮೆಣಸಿನಕಾಯಿಯನ್ನು ಹಾಕಿ ಸ್ವಲ್ಪ ನೀರು ಸೇರಿಸಿ ಪೇಸ್ಟ್ ಮಾಡಿಕೊಂಡು, ಮತ್ತೆ ನಂತರ ಬೇಕಾದಷ್ಟು ನೀರು ಹಾಕಿ ಶೋಧಿಸಿ ಕೊಳ್ಳಬೇಕು. ನಂತರ ಇದಕ್ಕೆ ಕಾಲು ಚಮಚ ಉಪ್ಪು, ಕಾಲು ಕಪ್ ಹುಣಸೆಹಣ್ಣಿನ ರಸ, 1 ಟೇಬಲ್ ಚಮಚ ಬ್ಲಾಕ್ ಸಾಲ್ಟ್, 1 ಟೇಬಲ್ ಚಮಚ ಚಾಟ್ ಮಸಾಲ, ಅರ್ಧ ಚಮಚ ಆನ್ಸರ್ ಪೌಡರ್ ಮಿಸ್ಟರ್ ಹಾಗೂ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಇಷ್ಟೆಲ್ಲ ರೆಡಿಯಾದ ನಂತರಗರಿಗರಿಯಾದ ಪೂರಿಯನ್ನು ಮಧ್ಯದಲ್ಲಿ ಹೋಲ್ ಮಾಡಿಕೊಂಡು ಅದಕ್ಕೆ ಆಲೂ ಸ್ಟಫಿಂಗ್ಗ್ ಮಾಡಿಕೊಂಡು, ಸ್ವಲ್ಪ ಈರುಳ್ಳಿ ಹಾಕಿ ಕಾರ ಪಾನಿ ಹಾಕಿಕೊಂಡರೆ ಸ್ಪೀಡ್ ಸ್ಟೈಲ್ ಪಾನಿಪುರಿ ಅಥವಾ ಗೋಲ್ ಗಪ್ಪ ತಿನ್ನೋದಕ್ಕೆ ರೆಡಿ

By

Leave a Reply

Your email address will not be published. Required fields are marked *