ಜೀವನದಲ್ಲಿ ನಡೆಯುವ ಒಂದು ಘಟನೆ ಬದುಕನ್ನೇ ಬದಲಾಯಿಸಿ ಬಿಡುತ್ತದೆ. ಒಂದೇ ವೇಗದಲ್ಲಿ ಹೋಗುತ್ತಿದ್ದ ಜೀವನದ ದಾರಿ ಬದಲಾಗುತ್ತದೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಕನ್ನಡದ ಪ್ರತಿಭಾನ್ವಿತ ನಟಿ ಶೃತಿ ಹರಿಹರನ್. ಲೂಸಿಯಾ ಚಿತ್ರದ ಮೂಲಕ ಕನ್ನಡಿಗರ ಮನ ಗೆದ್ದಿದ್ದ ನಟಿ ಕೇವಲ ಸೌಂದರ್ಯ ಮೈ ಮಾಟದಿಂದಲ್ಲ ಆಕೆಯ ಅಭಿನಯದ ಮೂಲಕ ಎಲ್ಲರ ಗಮನ ಸೆಳೆದಿದ್ದ ನಟಿ. ಸಿನಿಮಾ ಅವಕಾಶಗಳು ಒಂದರ ಮೇಲೊಂದು ಬರುತ್ತಿದ್ದವು ಕನ್ನಡ ಮಾತ್ರವಲ್ಲದೆ ಮಲಯಾಳಂ ಮತ್ತು ತೆಲುಗು ಚಿತ್ರಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು.

ಇಷ್ಟೇಲ್ಲಾ ಬೇಡಿಕೆ ಇದ್ದ ನಟಿ ಇದ್ದಕ್ಕಿದ್ದಂತೆ ಅರ್ಜುನ್ ಸರ್ಜಾ ವಿರುದ್ಧ ಆರೋಪವನ್ನು ಮಾಡುತ್ತಾರೆ. ಈ ಒಂದು ಆರೋಪ ತಾರ್ಕಿಕ ಅಂತ್ಯವನ್ನು ಪಡೆಯಲಿಲ್ಲ ಆದರೆ ಶೃತಿ ಹರಿಹರನ್ ಅವರ ಸಿನಿ ಬದುಕನ್ನು ಕಿತ್ತುಕೊಂಡು ಬಿಡುತ್ತದೆ. ಹಾಗಾದರೆ ಇವರ ಬದುಕಿನಲ್ಲಿ ಏನಾಯಿತು ಅವರಿಗೆ ಸಿನಿಮಾ ಅವಕಾಶಗಳು ಕಡಿಮೆಯಾಗಿದ್ದು ಯಾಕೆ ಇದೆಲ್ಲದರ ಬಗ್ಗೆ ತಿಳಿಸಿಕೊಡುತ್ತೆವೆ. ಅದಕ್ಕೂ ಮೊದಲು ಶೃತಿ ಹರಿಹರನ್ ಅವರ ಬಗ್ಗೆ ಚಿಕ್ಕ ಪರಿಚಯವನ್ನು ತಿಳಿದುಕೊಳ್ಳೋಣ.

ಇವರು ಹುಟ್ಟಿದ್ದು ಸಾವಿರದ ಒಂಬೈನೂರಾ ಎಂಬತ್ತೊಂಬತ್ತರಲ್ಲಿ ಕೇರಳದ ತ್ರಿವೇಂಡ್ರಂನಲ್ಲಿ. ಇವರು ತಮಿಳು ಕುಟುಂಬದವರು ಆದರೆ ಹುಟ್ಟಿದ್ದು ಕೇರಳದಲ್ಲಿ. ಆದರೆ ಓದಿದ್ದು ಬೆಳೆದಿದ್ದು ಎಲ್ಲವೂ ಬೆಂಗಳೂರಿನಲ್ಲಿ ಹಾಗಾಗಿ ಇವರಿಗೆ ತಮಿಳುನಾಡು ಕೇರಳ ಕರ್ನಾಟಕ ಈ ಮೂರು ರಾಜ್ಯಗಳ ಪರಿಚಯವಿರುತ್ತದೆ. ಹಾಗೆ ಮೂರು ಭಾಷೆಯನ್ನು ಸುರಳಿತವಾಗಿ ಮಾತನಾಡುತ್ತಾರೆ. ಬಾಲ್ಯದಲ್ಲಿಯೇ ಅವರಿಗೆ ನೃತ್ಯದಲ್ಲಿ ಆಸಕ್ತಿ ಇರುತ್ತದೆ ಭರತನಾಟ್ಯವನ್ನು ಕಲಿಯುತ್ತಾರೆ .

ಅವರಿಗೆ ಮಲೆಯಾಳಂ ಚಿತ್ರದಲ್ಲಿ ಒಂದು ಅವಕಾಶ ಸಿಗುತ್ತದೆ. ಎರಡು ಸಾವಿರದ ಹನ್ನೆರಡರಲ್ಲಿ ಸಿನಿಮಾ ಕಂಪನಿ ಎಂಬ ಚಿತ್ರದಲ್ಲಿ ಅಭಿನಯ ಮಾಡುತ್ತಾರೆ. ಇದಾದ ನಂತರ ಒಂದೆರಡು ಚಿಕ್ಕ ಪುಟ್ಟ ಚಿತ್ರಗಳಲ್ಲಿ ಅಭಿನಯ ಮಾಡುತ್ತಾರೆ. ಆಗ ಕನ್ನಡದಲ್ಲಿ ಲೂಸಿಯಾ ಎಂಬ ಚಿತ್ರ ತಯಾರಾಗುತ್ತಿರುತ್ತದೆ ಇದರ ಮೇಲೆ ಅಷ್ಟು ನಿರೀಕ್ಷೆ ಇರಲಿಲ್ಲ ಚಿಕ್ಕ ಸಿನಿಮಾ ಎಂದು ಮಾಡುತ್ತಿರುತ್ತಾರೆ ಹೀಗಾಗಿ ಇವರಿಗೆ ಕಡಿಮೆ ಸಂಭಾವನೆ ಪಡೆಯುವ ಆದರೆ ಪ್ರತಿಭಾನ್ವಿತ ನಟಿನ್ನು ಪವನ್ ವಡೆಯರ್ ಚಿತ್ರ ತಂಡ ಹುಡುಕುತ್ತಿತ್ತು.

ಆಗ ಶೃತಿ ಹರಿಹರನ್ ಅವರು ಸಿಗುತ್ತಾರೆ.ಲೂಸಿಯಾ ಸಿನಿಮಾದಲ್ಲಿ ಅಭಿನಯ ಮಾಡುತ್ತಾರೆ. ಆ ಸಿನಿಮಾಕ್ಕೆ ಎಲ್ಲ ಕಡೆ ಪ್ರಸಂಶೆ ಸಿಗುತ್ತದೆ. ಈ ಚಿತ್ರದ ನಂತರ ಇಡೀ ಚಿತ್ರ ತಂಡದವರ ಬದುಕು ಬದಲಾಗುತ್ತದೆ ಅದರಲ್ಲಿಯೂ ಶೃತಿ ಹರಿಹರನ್ ಅವರ ಬದುಕು ಬದಲಾಗುತ್ತದೆ. ಈ ಚಿತ್ರದ ನಂತರ ಅವರಿಗೆ ಸಾಲು ಸಾಲು ಅವಕಾಶಗಳು ಸಿಗುತ್ತದೆ. ಅನೇಕ ಚಿತ್ರ ಗಳಲ್ಲಿ ಅಭಿನಯ ಮಾಡುತ್ತಾರೆ. ಜೊತೆಗೆ ಮಲಯಾಳಂ ಮತ್ತು ತಮಿಳಿನಲ್ಲಿಯು ಅವಕಾಶಗಳು ಬರುತ್ತವೆ.ಎಲ್ಲ ಅವಕಾಶಗಳನ್ನು ಅದ್ಭುತವಾಗಿ ಬಳಸಿಕೊಳ್ಳುತ್ತಾರೆ.

ಇದೆ ಸಂದರ್ಭದಲ್ಲಿ ಮೀ ಟು ಕ್ಯಾಂಪಿನ ಶುರುವಾಗುತ್ತದೆ. ಶೃತಿ ಹರಿಹರನ್ ಇದ್ದಕ್ಕಿದ್ದ ಹಾಗೆ ಆರೋಪವಂದನ್ನು ಮಾಡುತ್ತಾರೆ. ನನಗೆ ಅರ್ಜುನ್ ಸರ್ಜಾ ಅವರಿಂದ ಕಿರುಕುಳ ಆಗಿದೆ ಅವರು ನನ್ನ ಜೊತೆ ವಿಚಿತ್ರವಾದ ವರ್ತನೆಯನ್ನು ತೋರಿದರು ಈ ರೀತಿಯಾಗಿ ಹೀಗೆ ಬೇರೆ ಬೇರೆ ರೀತಿಯಲ್ಲಿ ಆರೋಪವನ್ನು ಮಾಡುತ್ತಾರೆ. ಇದರಿಂದ ಇಡೀ ಚಿತ್ರ ರಂಗ ಶಾಕ್ ಆಗುತ್ತದೆ ಅಲ್ಲಿಯ ವರೆಗೆ ಅರ್ಜುನ್ ಸರ್ಜಾ ಅವರ ಮೇಲೆ ಒಂದೇ ಒಂದು ಕಪ್ಪು ಚುಕ್ಕೆ ಇರಲಿಲ್ಲ.

ಎಲ್ಲ ಭಾಷೆಗಳಲ್ಲಿಯೂ ಅದ್ಭುತವಾಗಿ ನಟನೆ ಮಾಡಿದ ಅರ್ಜುನ್ ಸರ್ಜಾ ಅವರ ಮೇಲೆ ಒಂದೇ ಒಂದು ಆರೋಪ ಇರಲಿಲ್ಲ ಹೀಗಾಗಿ ಯಾರೂ ಶೃತಿ ಹರಿಹರನ್ ಅವರ ಆರೋಪವನ್ನು ಒಪ್ಪುವುದಿಲ್ಲ ನಂತರ ಶೃತಿ ಅವರು ಎರಡು ಸಾವಿರದ ಹದಿನೆಂಟರಲ್ಲಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಕೇಸನ್ನು ಮಾಡುತ್ತಾರೆ ಇದಾದ ನಂತರ ಶೃತಿ ಹರಿಹರನ್ ಅವರ ಮೇಲೆ ಸಾಕಷ್ಟು ಆರೋಪಗಳು ಕೇಳಿ ಬರುತ್ತವೆ. ಅಂತಿಮವಾಗಿ ಅರ್ಜುನ್ ಸರ್ಜಾ ಅವರು ಶೃತಿ ಹರಿಹರನ್ ಅವರ ಮೇಲೆ ಮಾನನಷ್ಟ ಮೊಕದ್ದಮೆ ಹುದುತ್ತಾರೆ. ನಂತರ ಅಂಬರೀಷ್ ಅವರ ನೇತೃತ್ವದಲ್ಲಿ ಸಂದಾನ ಸಭೆಯನ್ನು ನಡೆಸಲಾಗುತ್ತದೆ ಇದಕ್ಕೆ ಶೃತಿ ಹರಿಹರನ್ ಅವರು ಒಪ್ಪುವುದಿಲ್ಲ. ತನಗೆ ಕಾನೂನು ರೀತಿ ಪರಿಹಾರ ಬೇಕು ಎಂದು ಹೇಳುತ್ತಾರೆ. ನನ್ನಿಂದಾಗಿ ಒಂದಿಷ್ಟು ನಟಿಯರಿಗೆ ಧೈರ್ಯ ಬರಬೇಕು ಎಂದು ಹೇಳುತ್ತಾರೆ. ಆರೋಪ ಪ್ರತ್ಯಾರೋಪ ಎರಡು ಆಗುತ್ತದೆ ಆದರೆ ತಾರ್ಕಿಕ ಅಂತ್ಯ ಸಿಗುವುದಿಲ್ಲ.

ಇದರ ನಡುವೆ ಶೃತಿ ಅವರ ಮದುವೆ ವಿಚಾರ ಹೊರಗಡೆ ಬರುತ್ತದೆ. ಆ ಮದುವೆಯ ವಿಚಾರವನ್ನಿಟ್ಟುಕೊಂಡು ಒಂದಿಷ್ಟು ಜನ ಇವರನ್ನು ದೂಷಿಸುತ್ತಾರೆ.ಎರಡುಸಾವಿರದ ಹದಿನೇಳರಲ್ಲಿ ಇವರು ರಾಜ್ ಕುಮಾರ್ ಎನ್ನುವವರನ್ನು ವಿವಾಹ ಆಗಿರುತ್ತಾರೆ. ಆದರೆ ಆ ವಿಚಾರವನ್ನು ಎಲ್ಲಿಯೂ ಹೇಳಿರುವುದಿಲ್ಲ.

ಇವರ ಆರೋಪಕ್ಕೆ ತಾರ್ಕಿಕವಾಗಿ ಅಂತ್ಯ ಸಿಗುವುದಿಲ್ಲ. ಅರ್ಜುನ ಸರ್ಜಾ ಅವರು ತಪ್ಪು ಮಾಡಿದ್ದರೆ ಎಂಬುದನ್ನು ನಿರೂಪಿಸುವುದಕ್ಕಾಗುವುದಿಲ್ಲ ಮತ್ತೊಂದು ಕಡೆ ಶೃತಿ ಅವರು ತಪ್ಪು ಆರೋಪ ಮಾಡಿದ್ದಾರೆ ಎಂಬುದನ್ನು ನಿರೂಪಿಸುವುದಕ್ಕಾಗುವುದಿಲ್ಲ. ಶೃತಿ ಅವರಿಗೂ ಇದರಿಂದ ಸಮಸ್ಯೆ ಆಯಿತು ಅರ್ಜುನ ಸರ್ಜಾ ಅವರಿಗೂ ಒಂದು ಕಪ್ಪು ಚುಕ್ಕಿ ಬಿದ್ದ ಹಾಗಾಯಿತು ಯಾರದ್ದು ಸರಿ ಯಾರದ್ದು ತಪ್ಪು ಎಂಬುದನ್ನು ಕಂಡುಹಿಡಿಯಲಿಕ್ಕಾಗಲಿಲ್ಲ.

ಆದರೆ ಒಬ್ಬ ಪ್ರತಿಭಾನ್ವಿತ ನಟಿಯನ್ನು ನಾವು ಚಿತ್ರರಂಗದಿಂದ ಕಳೆದುಕೊಂಡಂತಾಯಿತು. ಇವರ ಕೈಯಲ್ಲಿ ಒಂದಿಷ್ಟು ಸಿನಿಮಾ ಅವಕಾಶ ಇರುತ್ತದೆ ಆದರೆ ಇವರು ಆರೋಪವನ್ನು ಮಾಡಿದ ನಂತರ ಎಲ್ಲರೂ ಇವರ ಜೊತೆ ಚಿತ್ರವನ್ನು ಮಾಡುವುದಕ್ಕೆ ಹಿಂದೇಟು ಹಾಕುತ್ತಾರೆ. ಅರ್ಜುನ ಸರ್ಜಾ ಅವರು ಒಬ್ಬ ಹೆಸರಾಂತ ನಟ ಅವರ ಮೇಲೆ ಆರೋಪ ಮಾಡಿದ ಕಾರಣಕ್ಕಾಗಿ ಶೃತಿ ಅವರಿಗೆ ಯಾರು ಅವಕಾಶವನ್ನು ನೀಡುವುದಿಲ್ಲ.

ಶೃತಿ ಅವರು ಅದ್ಭುತವಾದ ನಟನೆಯನ್ನು ಮಾಡುತ್ತಿದ್ದರು ಅದ್ಭುತ ಅವಕಾಶಗಳಿದ್ದವು ಆದರೆ ಆ ಒಂದು ಆರೋಪದಿಂದ ಎಲ್ಲ ಅವಕಾಶಗಳನ್ನು ಕಳೆದುಕೊಳ್ಳಬೇಕಾಯಿತು. ಆದರೆ ಅಂತಿಮವಾಗಿ ಯಾರದ್ದು ಸರಿ ಯಾರದ್ದು ತಪ್ಪು ಎಂಬುದನ್ನು ನಿರ್ಣಯ ಮಾಡುವುದಕ್ಕಾಗಲಿಲ್ಲ.

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave a Reply

Your email address will not be published. Required fields are marked *