ಟಾಟಾ ಮೋಟಾರ್ಸ್ ಕಡೆಯಿಂದ ರೈತರಿಗೆ ಭರ್ಜರಿ ಕೊಡುಗೆ ಇದೆ ನೋಡಿ..

0 9

ಟಾಟಾ 9 ಕಾರ್ ಮಾದರಿಗಳನ್ನು ಸೇರಿಸಿ ಭಾರತದಲ್ಲಿ ಮಾರಾಟ ಮಾಡುತ್ತಿದೆ. 3 hatchbacks, 1 ಸೆಡಾನ್, 1 ಪಿಕಪ್ ಟ್ರಕ್ ಮತ್ತು 4 suvs ಹೀಗೇ ಒಂಭತ್ತು ರೀತಿಯ ಮಾದರಿಗಳಲ್ಲಿ ಕಾರ್ ಮಾರಾಟ ಮಾಡುತ್ತಿದೆ. ಅದರಲ್ಲಿ ಅಗ್ಗದ ಟಾಟಾ ಕಾರ್ ಗಳೆಂದರೆ ತಿಯಾಗೊ ಇದರ ಆರಂಭಿಕ ಬೆಲೆ 4.99 ಲಕ್ಷ ರೂಪಾಯಿ ಮತ್ತು ಅತ್ಯಂತ ದುಬಾರಿ ಬೆಲೆಯ ಟಾಟಾ ಕಾರ್ ಗಳೆಂದರೆ ಸಫಾರಿ ಇದರ ಮುಖಬೆಲೆ 14.99 ಲಕ್ಷ ರೂಪಾಯಿ. ಈ ಟಾಟಾ ನೆಕ್ಸನ್ 7.28 ಲಕ್ಷ ರೂಪಾಯಿ, ಟಾಟಾ ಆಲ್ಟ್ರೋಝ್ ಇದರ ಮುಖ ಬೆಲೆ 5.48 ಲಕ್ಷ ರೂಪಾಯಿ, ಟಾಟಾ ಹ್ಯಾರಿಯರ್ ಇದರ ಮುಖಬೆಲೆ 14.39 ಲಕ್ಷ ರೂಪಾಯಿಗಳು ಇರುತ್ತವೆ.

ಇವು ಟಾಟಾದಲ್ಲಿ ಜನಪ್ರಿಯ ಕಾರುಗಳು. ಮುಂಬರುವ, 2021/2022 ರಲ್ಲಿ ನಿರೀಕ್ಷಣೆಯಲ್ಲಿರುವ ಟಾಟಾ ಕಂಪೆನಿಯ ಕಾರುಗಳು ಎಂದರೆ ಟಿಗೊರ್ ev 2021, ತಿಯಾಗೊ ev, ಸಿಯೆರಾ, ಆಲ್ಟ್ರೊಜ್ ಇವಿಗಳಾಗಿವೆ. ಹೀಗಿದ್ದಾಗ ಟಾಟಾ ಕಂಪನಿಯು ತನ್ನ ಗ್ರಾಹಕರಿಗೆ ಕಾರ್ ಕೊಳ್ಳಲು ಒಂದು ಉತ್ತಮ ಅವಕಾಶವನ್ನು ನೀಡಿದೆ. ರೈತರು ಕಾರು ಖರೀದಿ ಮಾಡಲು ಟಾಟಾದಿಂದ ಭರ್ಜರಿ ಕೊಡುಗೆ ನೀಡಲಾಗಿದ್ದು ರೈತರಿಗೆ 6 ತಿಂಗಳಿಗೊಮ್ಮೆ ಕಂತು ಪಾವತಿ ಸೌಲಭ್ಯವನ್ನು ಟಾಟಾ ಕಂಪೆನಿಯ ಕಡೆಯಿಂದ ನೀಡಲಾಗಿದೆ. ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಟಾಟಾ ಮೋಟಾರ್ಸ್ ಹಾಗೂ ಸುಂದರಂ ಫೈನಾನ್ಸ್ ಒಪ್ಪಂದಿಂದ ಟಾಟಾ ಕಂಪೆನಿಯ ಕಾರುಗಳ ಮೇಲೆ ಕನಿಷ್ಠ ಡೌನ್‌ಪೇಮೆಂಟ್, ಶೇಕಡಾ 100 ರಷ್ಟು ಸಾಲ, 6 ವರ್ಷಗಳ ಕಾಲಮಿತಿ ಇರಲಿದೆ. ಈ ಮೂಲಕ ಗ್ರಾಹಕರ ಕಾರು ಖರೀದಿಸುವ ಕನಸು ಸುಲಭವಾಗಿ ನನಸಾಗಿಸುಲು ಟಾಟಾ ಕಂಪನಿಯು ಮುಂದಾಗಿದೆ ಎಂದು ಹೇಳಬಹುದು. ಟಾಟಾ ಮೋಟಾರ್ಸ್ ತನ್ನ ಗ್ರಾಹಕರಿಗೆ ಸುಲಭ ಹಾಗೂ ಆರ್ಥಿಕ ಸಂಕಷ್ಟ ಎದುರಿಸದೆ ಕಾರು ಖರೀದಿಸಲು ಮಹತ್ದ ಹೆಜ್ಜೆ ಇಟ್ಟಿದೆ. ಪ್ಯಾಸೆಂಜರ್ ವಾಹನಗಳ ಮೇಲೆ ವಿಶೇಷ ಕೊಡುಗೆಗಳನ್ನು ನೀಡಲು ಸುಂದರಂ ಫೈನಾನ್ಸ್ ಜೊತೆ ಒಪ್ಪಂದ ಮಾಡಿಕೊಂಡಿದೆ.

ಈ ಒಪ್ಪಂದಿಂದ ಗ್ರಾಹಕರಿಗೆ ಭರ್ಜರಿ ಕೊಡುಗೆಯೊಂದಿಗೆ ಹಣಕಾಸು ನೆರವು ನೀಡಲು ಘೋಷಿಸಿದೆ. ಕಿಸಾನ್ ಕಾರ್ ಯೋಜನಾ ಎಂಬ ಯೋಜನೆಯ ಮೂಲಕ ರೈತರಿಗಾಗಿ, ವಿಸ್ತರಿತ ಹಾಗು ಸುಲಭ ಮರುಪಾವತಿ ಆಯ್ಕೆಗಳಿರುವ ವಿಶೇಷವಾದ ಹಣಕಾಸು ಯೋಜನೆಯನ್ನು ಟಾಟಾ ಮೋಟಾರ್ಸ್ ಘೋಷಿಸಿದೆ. ಈ ಮೂಲಕ ರೈತರ ಕಾರು ಖರೀದಿ ಕನಸು ಸುಲಭವಾಗಿ ಸಾಕಾರಗೊಳಿಸಬಹುದಾಗಿದೆ. ಕಿಸಾನ್ ಕಾರ್ ಯೋಜನೆಯ ಮೂಲಕ ರೈತರು ಸಾಲಗಳನ್ನು ಕಂತುಗಳಲ್ಲಿ, ಪ್ರತಿ 6 ತಿಂಗಳಿಗೊಮ್ಮೆ, ಅಂದರೆ ತಮ್ಮ ಇಳುವರಿ ಆಗುವಂತಹ ಸಮಯದಲ್ಲಿ ಪಾವತಿಸಬಹುದು.

2ನೇ ಅಲೆ ಲಾಕ್‌ಡೌನ್ ಕಾರಣ ಏಪ್ರಿಲ್‌ನಿಂದ ಕುಸಿದಿದ್ದ ಮಾರಾಟ, ಜುಲೈ ತಿಂಗಳಿನಿಂದ  ಚೇತರಿಕೆ ಕಾಣುತ್ತಿದೆ.  ಸಾಮಾಜಿಕ ಅಂತರವು ಇನ್ನೂ ಜಾರಿಯಲ್ಲಿರುವಂತಹ ಸಂದರ್ಭದಲ್ಲಿ, ಕಳೆದ 12 ತಿಂಗಳುಗಳಿಂದ ನಾವು ‘ವೈಯಕ್ತಿಕ ಸಾರಿಗೆ’ಗಾಗಿ ಬೇಡಿಕೆ ಹೆಚ್ಚಾಗಿರುವುದನ್ನು ಕೂಡ ಗಮನಿಸಿದ್ದೇವೆ.  ಕಡಿಮೆ ಡೌನ್‍ಪೇಮೆಂಟ್ ಮಾದರಿ ಮತ್ತು ಕಡಿಮೆEMI ಮೂಲಕ, ನಾವು ಸಣ್ಣ ವ್ಯಾಪಾರ ಮಾಲೀಕರನ್ನು ಸಕ್ರಿಯವಾಗಿ ತಲುಪುವ ಮತ್ತು ಕಾರು ಮಾಲೀಕತ್ವವನ್ನು ಹೆಚ್ಚು ಕೈಗೆಟುಕುವಂತೆ ಮಾಡುವ ಮೂಲಕ ಸುರಕ್ಷಿತ ಪ್ರಯಾಣಕ್ಕಾಗಿ ಮಾರ್ಗ ಕಲ್ಪಿಸುತ್ತಿದ್ದೇವೆ ಎಂದು ಸುಂದರಂ ಫೈನಾನ್ಸ್‍ನ ಉಪ ವ್ಯವಸ್ಥಾಪಕ ನಿರ್ದೇಶಕ ಎ.ಎನ್.ರಾಜು ಹೇಳಿದ್ದಾರೆ.

ಗ್ರಾಹಕರಿಗೆ ಬೆಂಬಲ ಒದಗಿಸುವಲ್ಲಿ ನಮ್ಮ ಬದ್ಧತೆಯನ್ನು ಪ್ರದರ್ಶಿಸಿದ್ದೇವೆ. ಇತ್ತೀಚಿನ ಕೋವಿಡ್-19 ಬಿಕ್ಕಟ್ಟು ಪ್ರತಿಯೊಬ್ಬರ ಮೇಲೂ ಪ್ರಭಾವ ಬೀರಿದ್ದು, ಇಂತಹ ಸವಾಲೊಡ್ಡುವ ಸಂಕಷ್ಟದ ಸಮಯದಲ್ಲಿ ನಮ್ಮ ಪ್ಯಾಸೆಂಜರ್ ವಾಹನಗಳ ಕುಟುಂಬಕ್ಕೆ ನೆರವಾಗುವ ಸಲುವಾಗಿ ವಿಶೇಷ ಹಣಕಾಸು ಯೋಜನೆಗಳನ್ನು ಪರಿಚಯಿಸುವಲ್ಲಿ ಸುಂದರಂ ಫೈನಾನ್ಸ್‍ನೊಂದಿಗೆ ಒಪ್ಪಂದ ಮಾಡಲಾಗಿದೆ. ಗ್ರಾಹಕರು ತಮ್ಮ ಸಾಮರ್ಥ್ಯಕ್ಕೆ ತಕ್ಕ ರೀತಿ ಕಾರು ಖರೀದಿಸಲು ನೆರವಾಗಲಿದೆ ಎಂದು ಟಾಟಾ ಮಾರುಕಟ್ಟೆ ಹಾಗು ಗ್ರಾಹಕ ನೆರವಿನ ವಿಭಾಗದ ಉಪಾಧ್ಯಕ್ಷ ರಾಜನ್ ಅಂಬ ಹೇಳಿದ್ದಾರೆ.

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.