ಮಗಳಿಗೆ ಕನ್ನಡ ಎಂದು ಹೆಸರಿಟ್ಟು ಕನ್ನಡಾಭಿಮಾನ ಮೆರೆದ ದಂಪತಿ

0 2

ಮಗಳಿಗೆ ಕನ್ನಡ ಎಂದು ಹೆಸರಿಟ್ಟ ಕನ್ನಡಾಭಿಮಾನಿಗಳಾದ ಕುಂದಾಪುರದ ದಂಪತಿಳ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ನೆಂಪುವಿನ ಪ್ರತಾಪ್ ಶೆಟ್ಟಿ ಕನ್ನಡಾಭಿಮಾನಿ, ಇವರು ಇಂಟೀರಿಯರ್ ಡಿಸೈನರ್ ಆಗಿದ್ದು, ಕಳೆದ 25 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದು ಬಹಿರಂಗವಾಗಿ ಎಲ್ಲಿಯೂ ಕನ್ನಡಾಭಿಮಾನವನ್ನು ಹೇಳಿಕೊಳ್ಳುವುದಿಲ್ಲ. ಆದರೆ ಭಾಷೆಯ ಬಗ್ಗೆ ಅಪಾರವಾದ ಅಭಿಮಾನವನ್ನು ಹೊಂದಿದ್ದಾರೆ. ಇವರ ಪತ್ನಿ ಪ್ರತಿಮಾ ಶೆಟ್ಟಿ ಇವರು ಸಹ ಕನ್ನಡಾಭಿಮಾನಿ. ಇವರಿಗೆ ಬೆಂಗಳೂರಿನ ರಂಗದೋರ್ ಮೆಮೋರಿಯಲ್ ಆಸ್ಪತ್ರೆಯಲ್ಲಿ 2019ರ ನವೆಂಬರ್ 27ರಂದು ಮಗಳು ಜನಿಸುತ್ತಾಳೆ. ಅವಳಿಗೆ ಕನ್ನಡ ಶೆಟ್ಟಿ ಎಂದು ಹೆಸರಿಟ್ಟಿದ್ದಾರೆ ಅಲ್ಲದೆ ಕನ್ನಡ ಎಂಬ ಹೆಸರಿನಲ್ಲಿ ಜನನ ಪ್ರಮಾಣ ಪತ್ರವನ್ನು ನೊಂದಾಯಿಸಿಕೊಂಡಿದ್ದಾರೆ. ಮಗಳಿಗೆ ನವೆಂಬರ್ ತಿಂಗಳಿಗೆ ಒಂದು ವರ್ಷ ತುಂಬುತ್ತದೆ.

ಪ್ರತಾಪ್ ಶೆಟ್ಟಿ ಮಗುವಿಗೆ ಹೆಸರಿಡಬೇಕು ಅಂತ ಅಂದುಕೊಂಡಾಗ ಥಟ್ಟನೆ ಹೊಳೆದಿದ್ದು ತಾಯಿ ಭುವನೇಶ್ವರಿ, ಕನ್ನಡದ ಅಭಿಮಾನಿಯಾಗಿರುವ ಪ್ರತಾಪ್ ಶೆಟ್ಟಿ ಅವರು ಮಗಳಿಗೆ ಕನ್ನಡ ಎಂದು ಹೆಸರಿಡಲು ಯೋಚಿಸುತ್ತಾರೆ. ಇದನ್ನು ಪತ್ನಿ ಪ್ರತಿಮಾ ಶೆಟ್ಟಿಗೆ ತಿಳಿಸಿದಾಗ ಅವರು ಕೂಡ ಖುಷಿಯಾಗುತ್ತಾರೆ. ಮರೆಯಾಗುತ್ತಿರುವ ಕನ್ನಡವನ್ನು ಉಳಿಸುವ ನಿಟ್ಟಿನಲ್ಲಿ ಮಗುವಿಗೆ ಕನ್ನಡ ಎಂದು ಹೆಸರಿಟ್ಟಿದ್ದೇವೆ, ಕನ್ನಡಳಿಗೆ ಕನ್ನಡದ ಕಂಪು ಪಸರಿಸುವ ಮಾರ್ಗವನ್ನು ತೋರಿಸುತ್ತೇವೆ ಎಂದು ತಂದೆ ಪ್ರತಾಪ್ ಶೆಟ್ಟಿ ಹೆಮ್ಮೆಯಿಂದ ಹೇಳುತ್ತಾರೆ. ಸಾಮಾನ್ಯವಾಗಿ ಇಂದಿನ ಕಾಲದಲ್ಲಿ ಮಗುವಿನ ಹೆಸರನ್ನು ಇಡಲು ಗೂಗಲ್ ನಲ್ಲಿ ಸರ್ಚ್ ಮಾಡುತ್ತಾರೆ, ಅರ್ಥವಿಲ್ಲದ ಹೆಸರನ್ನು ಇಡುವವರೆ ಹೆಚ್ಚು ಹಾಗಿರುವಾಗ ಮಗಳಿಗೆ ಕನ್ನಡ ಎಂದು ಹೆಸರಿಟ್ಟ ಇವರನ್ನು ಅಭಿನಂದಿಸಲೆಬೇಕು. ಮಗುವಿನ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸೋಣ.

Leave A Reply

Your email address will not be published.