ಮೋಹಕ ತಾರೆ ಅನುಷ್ಕಾ ಶೆಟ್ಟಿ ಅವರ ಕುಟುಂಬದ ಬಗ್ಗೆ ಹಾಗೂ ಅವರ ಸಿನಿ ಪಯಣ ಮತ್ತು ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಮೋಹಕ ಚೆಲುವೆ ಅನುಷ್ಕಾ ಶೆಟ್ಟಿ ಅವರ ನಿಜವಾದ ಹೆಸರು ಸ್ವೀಟಿ ಶೆಟ್ಟಿ. ಇವರು ನಟಿ ಹಾಗೂ ಮೋಡೆಲ್ ಆಗಿದ್ದಾರೆ. ಇವರು ನವೆಂಬರ 7, 1981 ರಂದು ಮಂಗಳೂರಿನಲ್ಲಿ ಜನಿಸಿದ್ದಾರೆ. ಇವರು ಬೆಂಗಳೂರಿನಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿದ್ದಾರೆ. ತಂದೆ- ವಿಟ್ಟಲ ಶೆಟ್ಟಿ, ತಾಯಿ – ಪ್ರಪುಲ್ಲ ಶೆಟ್ಟಿ. ಇವರಿಗೆ ಇಬ್ಬರು ಸಹೋದರರಿದ್ದಾರೆ. ಇವರ ಮನೆ ಬೆಂಗಳೂರಿನಲ್ಲಿ ಇದ್ದು ಮನೆಯು ಬಹಳಷ್ಟು ಆಡಂಬರದಿಂದ ಕೂಡಿದೆ.

ಇವರು ದೋಸೆ, ಜಿಲೇಬಿ, ಐಸ ಕ್ರೀಮ್ ಹಾಗೂ ಜಪಾನೀಸ್ ಪುಡ್ ಇಷ್ಟ ಪಡುತ್ತಾರೆ. ಇವರು ತಮಿಳು, ತೆಲುಗು, ಮುಂತಾದ ಭಾಷೆಗಳ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಇವರ ನಟನೆಗೆ ಮನ ಸೋಲದವರು ಯಾರಿಲ್ಲ. ಇವರು ನಟಿಯಾಗಿ ಕೋಟಿಗಟ್ಟಲೆ ಹಣವನ್ನು ಸಂಪಾದಿಸುತ್ತಾರೆ. ಇವರು 2015 ರಲ್ಲಿ ಬಾಹುಬಲಿ ಚಿತ್ರದಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ಇವರು ಫೇಸ್ ಬುಕ್, ಟ್ವಿಟರ್, ಇನ್ಸ್ಟಾಗ್ರಾಮದಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಇವರ ನಗುವನ್ನು ಇಷ್ಟಪಡದೇ ಇರುವವರೆ ಇಲ್ಲ, ನಟನೆಯೂ ಅಷ್ಟೇ ಅದ್ಭುತವಾಗಿದೆ. ಇವರ ಬಳಿ ಉತ್ತಮ ಕಾರುಗಳಿದೆ. ಇವರು ನೋಡಲು ಸುಂದರವಾಗಿ, ಮುದ್ದಾಗಿ ಕಾಣುತ್ತಾರೆ. ಇವರ ಚೆಲುವಿಗೆ ಯಾರೂ ಸಾಟಿಯಿಲ್ಲ. ಇವರು ಇನ್ನೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಲಿ ಎಂದು ಹಾರೈಸೋಣ.

Leave a Reply

Your email address will not be published. Required fields are marked *