ವಿರಾಟ್ ಕೋಹ್ಲಿ ಹಾಗೂ ಅನುಷ್ಕಾ ಶರ್ಮಾ ಅವರ ಫನ್ನಿ ವಿಡಿಯೋ

0 1

ವಿರಾಟ್ ಕೋಹ್ಲಿ ಹಾಗೂ ಅನುಷ್ಕಾ ಶರ್ಮಾ ಅವರ ಬಗ್ಗೆ ಮಾಹಿತಿ ಹಾಗೂ ಲಾಕ್ ಡೌನ್ ಸಮಯದಲ್ಲಿ ಅವರು ಹೇಳಿದ ಸಂದೇಶವನ್ನು ಈ ಲೇಖನದ ಮೂಲಕ ತಿಳಿಯೋಣ.

ವಿರಾಟ್ ಕೋಹ್ಲಿ 5 ನವೆಂಬರ 1988 ರಂದು ದೆಹಲಿಯ ಪಂಜಾಬಿ ಕುಟುಂಬದಲ್ಲಿ ಹುಟ್ಟಿದ್ದಾರೆ. ಅವರ ತಂದೆ ಪ್ರೇಮ್ ಕೋಹ್ಲಿ ವಕೀಲರಾಗಿದ್ದರು ತಾಯಿ ಸರೋಜಾ ಕೋಹ್ಲಿ ಗೃಹಿಣಿ. ಇವರಿಗೆ ಒಬ್ಬಳು ಅಕ್ಕ, ಒಬ್ಬ ಅಣ್ಣ ಇದ್ದಾನೆ. ಕೋಹ್ಲಿ 3 ವರ್ಷದವನಿದ್ದಾಗ ಬ್ಯಾಟ್ ಹಿಡಿದುಕೊಂಡು ಅಪ್ಪನ ಹತ್ತಿರ ಬೌಲಿಂಗ್ ಮಾಡಲು ಹೇಳುತ್ತಿದ್ದನಂತೆ. ರಾಜಕುಮಾರ್ ಶರ್ಮಾ ಅವರ ಅಕಾಡೆಮಿಯಲ್ಲಿ ಇದ್ದುಕೊಂಡು ವಿರಾಟ್ ಉತ್ತಮ ವಿದ್ಯಾರ್ಥಿಯಾಗಿದ್ದರು. ಇವರು ಕ್ರಿಕೆಟ್ ನಲ್ಲಿ ಅಷ್ಟೆ ಅಲ್ಲದೆ ಶಿಕ್ಷಣದಲ್ಲೂ ಮುಂದೆ ಇದ್ದರು. ಅನುಷ್ಕಾ ಶರ್ಮಾ ಅವರು ಉತ್ತರಪ್ರದೇಶದ ಅಯೋಧ್ಯಾ ಎಂಬಲ್ಲಿ ಜನಿಸಿದ್ದಾರೆ ಇವರ ತಂದೆ ಮಿಲ್ಟ್ರಿ ಆಫೀಸರ್, ಸಹೋದರ ಸ್ಟೇಟ್ ಲೆವೆಲ್ ಕ್ರಿಕೆಟರ್. ಅನುಷ್ಕಾ ತಮ್ಮ ವಿದ್ಯಾಭ್ಯಾಸವನ್ನು ಬೆಂಗಳೂರಿನಲ್ಲಿ ನಡೆಸಿದ್ದಾರೆ. ಇವರು ಹಿಂದಿಯ ಹಲವು ಸಿನಿಮಾಗಳಲ್ಲಿ ನಟಿಯಾಗಿ ಪ್ರೇಕ್ಷಕರ ಮನಸ್ಸು ಗೆದ್ದಿದ್ದಾರೆ.

ವಿರಾಟ್ ಕೋಹ್ಲಿ ಹಾಗೂ ಅನುಷ್ಕಾ ಶರ್ಮಾ ಡಿಸೆಂಬರ್ 9, 2017 ರಂದು ಗುಟ್ಟಾಗಿ ಇಟಲಿಯಲ್ಲಿ ಮದುವೆಯಾಗಿದ್ದರು. ನಂತರ ಮುಂಬೈನಲ್ಲಿ ಆರತಕ್ಷತೆ ಕಾರ್ಯಕ್ರಮ ಬಹಳ ಅದ್ದೂರಿಯಾಗಿ ನಡೆದಿದೆ. ವಿರಾಟ್ ಹಾಗೂ ಅನುಷ್ಕಾ ಪ್ರೀತಿಸಿ ಮದುವೆಯಾಗಿದ್ದರು. ಇವರು ಖುಷಿಯಾಗಿ ಜೀವನ ನಡೆಸುತ್ತಿದ್ದಾರೆ. ಇವರು ಕೊರೋನ ಲಾಕ್ ಡೌನ್ ಸಮಯದಲ್ಲಿ ಜನತೆಗೆ ಮನೆಯಲ್ಲಿ ಸುರಕ್ಷಿತವಾಗಿರಿ, ಕುಟುಂಬದವರ ರಕ್ಷಣೆ ಮಾಡಿಕೊಳ್ಳಿ ಎಂದು ಸಂದೇಶ ನೀಡಿದ್ದಾರೆ. ಇವರ ಜೀವನ ನೆಮ್ಮದಿಯಾಗಿ, ಸುಖಕರವಾಗಿರಲಿ ಎಂದು ಹಾರೈಸೋಣ.

Leave A Reply

Your email address will not be published.