ಭಾರತ ಕಂಡು ಹಿಡಿದ ಹೊಸ ಕ್ಷಿಪಣಿ ಶಬ್ದದ ಎರಡು ಪಟ್ಟು ವೇಗದಲ್ಲಿ ಚಲಿಸುವ ಶಕ್ತಿ, ಇದರ ವಿಶೇಷತೆ ಏನು ಓದಿ.

0 0

ಭಾರತದ ರಕ್ಷಣಾ ವಲಯ ಏರಿಕೆಯನ್ನು ಕಾಣುತ್ತಿದೆ.ನಮ್ಮ ದೇಶದಲ್ಲಿ ಸಾಕಷ್ಟು ಯುದ್ಧೋಪಕರಣಗಳ ತಯಾರಿಕೆ ಸಾಂಗವಾಗಿ ಸಾಗುತ್ತಿದೆ. ಹಾಗೆಯೇ ಮತ್ತಷ್ಟು ಆವಿಷ್ಕಾರಗಳಿಗಾಗಿ ಪರೀಕ್ಷೆಗಳು ನಡೆಯುತ್ತಿವೆ. ಅಂತಹ ಯಶಸ್ವೀ ಉಪಕರಣಗಳ ಪರೀಕ್ಷೆಗಳ ಪಟ್ಟಿಗೆ ಈಗ ಆಂಟೀ-ರೇಡಿಯೇಷನ್ ಮಿಸ್ಸಲ್ ಕೂಡ ಸೇರಿಕೊಂಡಿದೆ.ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಾವು ಇಲ್ಲಿ ತಿಳಿಯೋಣ.

ಇದು ನಮ್ಮ ಭಾರತ ಕಂಡು ಹಿಡಿದ ಹೊಸ ಕ್ಷಿಪಣಿಯ ಶಕ್ತಿ. ಅಕ್ಟೊಬರ್ 9 ಶುಕ್ರವಾರ ಭಾರತದ ಪಾಲಿಗೆ ಶುಭ ಶುಕ್ರವಾರ. ಏಕೆಂದರೆ ಅಂದು ರುದ್ರಮ್ 1 ಎಂಬ ಹೆಸರಿನ ಆಂಟೀ-ರೆಡಿಯೇಷನ್ ಮಿಸ್ಸಲ್ ನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಇವುಗಳು ಶಬ್ದದ ಎರಡು ಪಟ್ಟು ವೇಗದಲ್ಲಿ ಚಲಿಸುತ್ತವೆ. ಇದನ್ನು 500ಮೀಟರ್ ನಿಂದ 15 ಕಿ.ಮೀ. ದೂರದ ಎತ್ತರದಲ್ಲಿ ಉಡಾಯಿಸಬಹುದು. ಇದು ಸುಮಾರು 250ಕಿ.ಮೀ. ದೂರದಲ್ಲಿನ ಟಾರ್ಗೆಟ್ ಕೂಡ ತಲುಪುವ ಸಾಮರ್ಥ್ಯ ಹೊಂದಿದೆ.

ಈ ಕ್ಷಿಪಣಿ ಅನುವಿಕಿರಣದ ವಿರುದ್ಧ ಹೋರಾಡುವುದಿಲ್ಲ. ಬದಲಿಗೆ ರೇಡಿಯೋ ತರಂಗಗಳು ಕೆಲಸ ಮಾಡದ ಹಾಗೆ ಮಾಡುತ್ತವೆ. ಶತ್ರು ರಡಾರ್ ವ್ಯವಸ್ಥೆ ಶಕ್ತಿಯನ್ನು ನಿಷ್ಕ್ರಿಯಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.ದೇಶದಲ್ಲಿ ರಡಾರ್ ವ್ಯವಸ್ಥೆ ಬಹಳ ಮುಖ್ಯ.ರಡಾರ್ ವ್ಯವಸ್ಥೆ ಹಾಳಾದರೆ ಅಲ್ಲಿ ವ್ಯೆಮಾನಿಕ ಮತ್ತು ಕ್ಷಿಪಣಿ ದಾಳಿಯನ್ನು ಮಾಡುವುದು ಸುಲಭ.

ಇವುಗಳ ತಯಾರಿಕೆಗೆ 2012ರಲ್ಲಿ ಅನುಮೋದನೆ ನೀಡಲಾಯಿತು. ಅದಕ್ಕಾಗಿ ಅವತ್ತಿಗೆ 312.7 ಕೋಟಿ ವೆಚ್ಚದ ಹಣವನ್ನು ಘೋಷಣೆ ಮಾಡಲಾಯಿತು.ಇದನ್ನು 2017ರ ಹೊತ್ತಿಗೆ ಮುಗಿಸುವ ಯೋಜನೆ ಹೊಂದಿದ್ದು DRDO ಆರಂಭಿಸಿದ ಈ ಯೋಜನೆ ವೇಗವನ್ನು ಪಡೆದುಕೊಂಡಿದ್ದು 2014ರ ನಂತರ. ಇದು ಈಗ ಏರ್ ಟು ಸರ್ಫೆಸ್ ಉಡಾವಣೆಯ ಪರೀಕ್ಷೆಯಲ್ಲಿ ಯಶಸ್ಸು ಕಂಡಿದ್ದು ಮ್ಯಾಕ್ ಟು ವೇಗವನ್ನು ಪಡೆದುಕೊಂಡಿದೆ.

ಚೀನಾ ಹಾಗೂ ಪಾಕಿಸ್ತಾನದ ಉಪಟಳವನ್ನು ಎದುರಿಸುತ್ತಿರೋ ನಮ್ಮ ಭಾರತದ ವಾಯುಸೇನೆಗೆ ಈ ಕ್ಷಿಪಣಿ ಸಹಕಾರಿ ಆಗಲಿದೆ ಎನ್ನುವುದು ರಕ್ಷಣಾ ತಜ್ಞರ ಅಭಿಪ್ರಾಯ.ಇಂತಹ ಕ್ಷಿಪಣಿಗಳು ಅಮೆರಿಕಾ, ರಷ್ಯಾ ದಲ್ಲೂ ಸಹ ಇದೆ. ಹಾಗೆಯೇ ಯುರೋಪ್ ನ ಸಾಕಷ್ಟು ರಾಷ್ಟಗಳಲ್ಲಿ ಇಂತಹ ಕ್ಷಿಪಣಿಗಳು ಇದ್ದು ಚೀನಾದಲ್ಲೂ ಸಹ ಇದೆ. ಇಂತಹವುಗಳನ್ನು ಭಾರತೀಯರೇ ತಯಾರಿಸುತ್ತಿದ್ದಾರೆ ಅನ್ನುವುದು ವಿಶೇಷ ಸಂಗತಿ ಆಗಿದೆ. ಇನ್ನು ಹೆಚ್ಚಿನ ಆವಿಷ್ಕಾರಗಳು ಉಂಟಾಗಿ ಭಾರತ ಯಶಸ್ಸನ್ನು ಕಾಣಲಿ ಎಂದು ನಾವೆಲ್ಲರೂ ಹರಸೋಣ.

Leave A Reply

Your email address will not be published.