ಅನಂತ್ ನಾಗ್ ಅವರ ಬಗ್ಗೆ ಯಾರಿಗೆ ತಿಳಿದಿಲ್ಲ.ಕನ್ನಡ ಚಿತ್ರರಂಗದಲ್ಲಿ ಇವರು ಎಲ್ಲರ ಮನೆಮಾತಾಗಿದ್ದಾರೆ.ಇವರ ಚಲನಚಿತ್ರಗಳು ಒಂದೋ ಎರಡೋ.ಸುಖ ಸಂಸಾರಕ್ಕೆ12 ಸೂತ್ರಗಳು,ಗಣೇಶ ಗೌರಿ ಇನ್ನೂ ಹಲವಾರು ಸಿನೆಮಾಗಳಲ್ಲಿ ನಾಯಕನಟನಾಗಿ ಅಭಿನಯ ಮಾಡಿದ್ದಾರೆ.ಇವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಾವು ಇಲ್ಲಿ ತಿಳಿಯೋಣ.

ಅನಂತನಾಗ್ ಅವರು ಜನಿಸಿದ್ದು ಸೆಪ್ಟೆಂಬರ್ 4, 1948ರಲ್ಲಿ. ಅಮ್ಮ ಆನಂದಿ, ತಂದೆ ಸದಾನಂದ ನಾಗರಕಟ್ಟೆ. ಪ್ರಾರಂಭಿಕ ಓದು ದಕ್ಷಿಣ ಕನ್ನಡದ ಆನಂದ ಆಶ್ರಮದಲ್ಲಿ. ಆ ನಂತರದಲ್ಲಿ ಉತ್ತರ ಕನ್ನಡದ ಚಿತ್ರಾಪುರ ಮಠದಲ್ಲಿ ನೆರವೇರಿತು ಇವರಿಗೆ ಒಬ್ಬ ತಮ್ಮ ಮತ್ತು ಒಬ್ಬ ಅಕ್ಕ ಇದ್ದಾರೆ. ಇವರ ತಮ್ಮ ನ ಹೆಸರು ಶಂಕರ್ ನಾಗ್. ಅಕ್ಕನ ಹೆಸರು ಶೈಮಾಲಾ. ಅನಂತ್ ನಾಗ್ ಅವರು MLA ಮತ್ತು MLC ಆಗಿದ್ದರು. ಇವರು ಹಿಂದಿ, ಮರಾಠಿ, ತಮಿಳು ಹಾಗೂ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬರೋಬ್ಬರಿ ನೂರಕ್ಕಿಂತ ಹೆಚ್ಚು ಸಿನೆಮಾಗಳಲ್ಲಿ ಇವರು ನಟಿಸಿದ್ದಾರೆ.

ಅನಂತ್ ನಾಗ್ ಅವರು ನಟಿ ಗಾಯತ್ರಿಯನ್ನು ಲವ್ ಮಾಡುತ್ತಿದ್ದರು.ನಂತರ 1987ರಲ್ಲಿ ವಿವಾಹವಾಗಿದ್ದಾರೆ.ಇವರಿಗೆ ಒಬ್ಬಳೇ ಮಗಳು. ಅವಳ ಹೆಸರು ಅದಿತಿ. ಇವರು ಪೋಸ್ಟ್ ಗ್ರಾಜುಯೆಟ್ ಮುಗಿಸಿದ್ದು ಈಗ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.ಇವರು ಚಿತ್ರರಂಗದ ಕಾರ್ಯಕ್ರಮಗಳಲ್ಲಿ ಅಷ್ಟು ಕಾಣಿಸಿಕೊಳ್ಳುವುದಿಲ್ಲ. ಅದಿತಿ ಅವರು ವಿವೇಕ್ ಎನ್ನುವವರನ್ನು ವಿವಾಹ ಆಗಿದ್ದಾರೆ. ಇವರಿಬ್ಬರೂ ಕೋಟಕ್ ಮಹಿಂದ್ರಾದಲ್ಲಿ ಕೆಲಸ ಮಾಡುತ್ತಿದ್ದರು.ಅಲ್ಲಿ ಇಬ್ಬರಿಗೂ ಪರಿಚಯ ಆಗಿ ವಿವಾಹ ಆದರು.ಈಗ ಇಬ್ಬರೂ ಬೆಂಗಳೂರಿನಲ್ಲಿ ಸೆಟ್ಟಲ್ ಆಗಿದ್ದಾರೆ.

ಅನಂತ್ ನಾಗ್ ಅವರ ಹೆಂಡತಿ ಗಾಯತ್ರಿ ಅವರು ಹೇಳುವ ಪ್ರಕಾರ ಅವರಿಗೆ ಅಡಿಗೆ ಯಾವಾಗಲೂ ಫ್ರೆಶ್ ಇರಬೇಕಂತೆ.ರಾತ್ರಿ ಊಟ ಬೆಳಿಗ್ಗೆ ಅಥವಾ ಬೆಳಿಗ್ಗೆ ಊಟ ರಾತ್ರಿ ತಿನ್ನುವ ಅಭ್ಯಾಸ ಇಲ್ಲವಂತೆ. ಅದೇ ತರಹ ಅವರು ಹೊರಗೆ ತಿನ್ನುವುದರ ಬದಲು ಮನೆಯಲ್ಲೇ ಊಟ ಮಾಡುವುದನ್ನು ಹೆಚ್ಚು ಇಷ್ಟಪಡುತ್ತಾರಂತೆ. ಅನಂತ್ ನಾಗ್ ಅವರು ನೋಡಲು ಮೃದುವಾಗಿ ಇದ್ದರೂ ಅವರಿಗೆ ಬೇಗನೆ ಕೋಪ ಬರುತ್ತದೆ ಎಂದು ಗಾಯತ್ರಿ ನಾಗ್ ಅವರು ಹೇಳಿದ್ದಾರೆ. ಇದಿಷ್ಟು ನಮ್ಮ ನೆಚ್ಚಿನ ನಟ ಅನಂತ್ ನಾಗ್ ಅವರ ಕುರಿತು ಚಿಕ್ಕ ಲೇಖನವಾಗಿದೆ.ನಿಮಗೆ ನಟ ಅನಂತ್ನಾಗ್ ಇಷ್ಟವಾದಲ್ಲಿ ಒಂದು ಲೈಕ್ ಮಾಡುವ ಮೂಲಕ ನಮ್ಮನ್ನು ಪ್ರೋತ್ಸಾಹಿಸಿ ಧನ್ಯವಾದಗಳು

Leave a Reply

Your email address will not be published. Required fields are marked *