ಮಂಗಳೂರಿನಲ್ಲಿ ನಡೆಯುತ್ತಿರುವ ಕೆಜಿಎಫ್ 2 ಚಿತ್ರೀಕರಣದ ಫೋಟೋಸ್

0 0

ಅತ್ಯಂತ ಹೆಚ್ಚು ಹೆಸರುವಾಸಿಯಾದ ಸಿನೆಮಾಗಳಲ್ಲಿ ಕೆ.ಜಿ.ಎಪ್ ಕೂಡ ಒಂದು. ಕೆ.ಜಿ.ಎಪ್ ಮೊದಲ ಭಾಗ ತುಂಬಾ ಹಿಟ್ ಆಗಿ ಬಾಕ್ಸ್ ಆಫೀಸ್ ಕಲೆಕ್ಷನ್ ಕೂಡ ಭರ್ಜರಿಯಾಗಿಯೆ ಆಗಿತ್ತು. ಯಶ್ ಹಾಗೂ ಶ್ರೀನಿಧಿ ಶೆಟ್ಟಿ ಅಭಿನಯದ ಕೆ.ಜಿ.ಎಪ್ ತುಂಬಾ ಹೆಸರು ವಾಸಿಯಾಗಿತ್ತು. ಇದೀಗ ಕೆ.ಜಿ.ಎಪ್ ಚಾಪ್ಟರ್ 2 ತಂಡ ಸಿನೆಮಾದ ಚಿತ್ರೀಕರಣದಲ್ಲಿ ನಿರತವಾಗಿದೆ. ಚಿತ್ರೀಕರಣದ ಕೆಲವು ಫೋಟೋಗಳನ್ನು ಚಿತ್ರತಂಡ ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಟ್ಟಿದ್ದಾರೆ. ಚಿತ್ರದ ಬಗ್ಗೆ ಕೆ.ಜಿ.ಎಪ್ ತಂಡದ ವಿವರಣೆ ಏನಿದೆ ಎಂಬುದನ್ನು ತಿಳಿಯೋಣ.

ಕೆ.ಜಿ.ಎಫ್ 2 ಚಿತ್ರೀಕರಣದ ಕಾರಣದಿಂದ ಮಂಗಳೂರನ್ನು ತಲುಪಿದೆ. ಚಿತ್ರೀಕರಣವು ಮಂಗಳೂರಿನ ಕಡಲ ತೀರವನ್ನು ತಲುಪಿದ್ದಾರೆ ಎಂದು ತಿಳಿದು ಬಂದಿದೆ. ಕೆಲ ದಿನಗಳ ಹಿಂದೆ ಕೆ.ಜಿ.ಎಫ್ 2 ಚಿತ್ರೀಕರಣದ ಮಾತು ಆಡಲಾಗಿತ್ತು. ಇವತ್ತು ಚಿತ್ರೀಕರಣದ ಸಮಯದಲ್ಲಿ ತೆಗೆಯಲಾದ ಕೆಲವು ಪೋಟೋಗಳನ್ನು ಇನ್ ಸ್ಟಾದಲ್ಲಿ ಹರಿಬಿಡಲಾಗಿದೆ. ರೀನಾ ದೇಸಾಯಿ ಹಾಗೂ ರಾಖಿ ಬಾಯ್ ಮಂಗಳೂರಿನ ಮಲ್ಪೆ ತೀರದಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಇನ್ ಸ್ಟಾದಲ್ಲಿ ಪ್ರಶಾಂತ್ ನೀಲ್ ಅವರು ಚಿತ್ರದ ಕೆಲವು ಪೋಟೋ ಹಂಚಿಕೊಂಡಿದ್ದಾರೆ. ಚಿತ್ರೀಕರಣದ ಸಮಯದಲ್ಲಿ ಬಿಡುವಿದ್ದಾಗ ಎಲ್ಲರೂ ಸೇರಿ ಕ್ರಿಕೆಟ್ ಆಡುತ್ತಿರುವ ಪೋಟೋವನ್ನು ಸಹ ಹರಿಬಿಟ್ಟಿದ್ದಾರೆ. ಕಡಲ ತೀರದ ಪೋಟೋವನ್ನು ಶ್ರೀನಿಧಿ ಶೆಟ್ಟಿ ಇನ್ ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ರಾಖಿ ಬಾಯ್ ಹಾಗೂ ರೀನಾ ದೇಸಾಯಿ ಸುತ್ತಲೂ ಕಾರುಗಳು ಸುತ್ತುತ್ತಿರುವ ದೃಶ್ಯದ ಫೋಟೊವನ್ನು ಹರಿಬಿಡಲಾಗುತ್ತಿದೆ.

ಸದ್ಯದಲ್ಲಿ ಕೆ.ಜಿ.ಎಪ್ 2 ಚಿತ್ರ ತಂಡವು ಇನ್ ಸ್ಟಾದಲ್ಲಿ ಹರಿಬಿಟ್ಟ ವಿಡಿಯೋಗಳು ಹೆಚ್ಚು ವೈರಲ್ ಆಗುತ್ತಿದ್ದು, ಕೆ.ಜಿ.ಎಪ್ 2 ಚಿತ್ರದ ಬಿಡುಗಡೆಗಾಗಿ ಜನರು ಕಾಯುತ್ತಿದ್ದಾರೆ. ಕೆ.ಜಿ.ಎಫ್ 2 ಚಿತ್ರದಲ್ಲಿ ದೊಡ್ಡ ದೊಡ್ಡ ನಟರುಗಳು ಪಾತ್ರ ನಿರ್ವಹಿಸಿರುವ ಬಗೆಗೂ ಮಾಹಿತಿಗಳೂ ಹರಿದಾಡುತ್ತಿವೆ. ಕೂತುಹಲ ಮೂಡಿಸಿದ ಸಿನೆಮಾದ ಬಗ್ಗೆ ಸಂಪೂರ್ಣ ತಿಳಿಯಲು ಚಿತ್ರದ ಬಿಡುಗಡೆಯ ವರೆಗೂ ಕಾದುನೋಡಬೇಕಾಗಿದೆ.

Leave A Reply

Your email address will not be published.