ಯಾವ ದಿನ ಹುಟ್ಟಿದವರ ಮದುವೆ ತಡವಾಗುತ್ತೆ ಗೊತ್ತೆ ಇದಕ್ಕೆ ಪರಿಹಾರವೇನು ನೋಡಿ..

0 90

ಸಾಕಷ್ಟು ಜನ ವಿವಾಹ ವಿಳಂಬದ ಸಮಸ್ಯೆಯಾನ್ನು ಎದುರಿಸುತ್ತಿರುತ್ತಾರೆ. ಯಾಕೆ ಈ ರೀತಿಯ ಸಮಸ್ಯೆಗಳು ಉಂಟಾಗುತ್ತವೆ ಜಾತಕದಲ್ಲಿ ದೋಷ ಇದ್ದರೆ ಈ ರೀತಿಯ ಸಮಸ್ಯೆಗಳು ಉಂಟಾಗುತ್ತದೆಯೆ ಹಾಗಾದರೆ ಜಾತಕವನ್ನು ಯಾವ ರೀತಿಯಾಗಿ ಪರಿಶೀಲನೆ ಮಾಡಬೇಕು ಯಾವೆಲ್ಲ ದೋಷಗಳಿದ್ದರೆ ಈ ರೀತಿಯ ಸಮಸ್ಯೆ ಉಂಟಾಗುತ್ತದೆ ಯಾವ ರೀತಿಯ ಪರಿಹಾರಗಳನ್ನು ಮಾಡಿಕೊಳ್ಳಬೇಕು ಈ ಎಲ್ಲದರ ಬಗ್ಗೆ ಇಂದು ನಾವು ತಿಳಿದುಕೊಳ್ಳೋಣ.

ವಿವಾಹ ಸಮಸ್ಯೆಗೂ ಜನ್ಮದಿನಾಂಕಕ್ಕು ಯಾವುದಾದರೂ ಸಂಬಂಧ ಇದೆಯೇ ಎಂಬುದನ್ನು ತಿಳಿದುಕೊಳ್ಳೋಣ. ಸಮಾನ್ಯವಾಗಿ ಜನ್ಮದಿನಾಂಕ ಎಂದರೆ ಹುಟ್ಟಿರುವಂತಹ ಸಮಯ ಮತ್ತು ದಿನಾಂಕದಲ್ಲಿ ಯಾವ ರಾಶಿ ಮತ್ತು ಯಾವ ನಕ್ಷತ್ರದಲ್ಲಿ ಜನನವಾಗಿದೆ ಎಂಬ ಲೆಕ್ಕಚಾರ ಬರುತ್ತದೆ. ಸಾಮಾನ್ಯವಾಗಿ ಮದುವೆ ವಿಚಾರ ಬಂದಾಗ ಕೆಲವೊಂದು ನಕ್ಷತ್ರಗಳ ವಿಚಾರದಲ್ಲಿ ಕೆಲವೊಂದು ರಾಶಿಗಳ ವಿಚಾರದಲ್ಲಿ ಈ ವರ್ಷದ ಫಲ ಹೇಗಿರುತ್ತದೆ ಮತ್ತು ಈ ವರ್ಷ ಮದುವೆಯಾಗುತ್ತದೆಯೆ ಎಂಬ ವಿಚಾರವನ್ನು ಲೆಕ್ಕಾಚಾರ ಮಾಡಬೇಕಾಗುತ್ತದೆ.

ಅದೇ ಇಲ್ಲಿ ಮದುವೆ ವಿಚಾರಕ್ಕು ಜನ್ಮ ದಿನಾಂಕಕ್ಕೂ ಸಂಬಂಧಪಟ್ಟ ವಿಚಾರವನ್ನು ನಾವು ನೋಡುವುದಕ್ಕೆ ಹೋದರೆ ನಾವು ರಾಶಿ ಹೊಂದಾಣಿಕೆ ಎಂದು ಮಾಡುತ್ತೇವೆ ರಾಶಿ ಹೊಂದಾಣಿಕೆ ಎಂದರೆ ಈಗ ಮೇಷ ರಾಶಿಗೆ ಯಾವ ರಾಶಿ ಆಗಿ ಬರುತ್ತದೆ ಯಾವ ರಾಶಿ ಆಗಿಬರುವುದಿಲ್ಲ ಅಥವಾ ನಕ್ಷತ್ರಗಳ ವಿಚಾರಕ್ಕೆ ಬಂದರೆ ಅಶ್ವಿನಿ ನಕ್ಷತ್ರಕ್ಕೆ ಯಾವ ನಕ್ಷತ್ರ ಚೆನ್ನಾಗಿರುತ್ತದೆ ಈ ರೀತಿಯಾಗಿ ಲೆಕ್ಕಾಚಾರ ಮಾಡಲಾಗುತ್ತದೆ. ಈ ರೀತಿ ಮುಖ್ಯವಾಗಿ ಮದುವೆಯ ವಿಷಯದಲ್ಲಿ ರಾಶಿ ಹೊಂದಾಣಿಕೆ ಬೇಕಾಗುತ್ತದೆ. ನಂತರ ಜಾತಕಗಳ ಹೊಂದಾಣಿಕೆ ರಾಶ್ಯಾಧಿಪತಿ ಬಲಹೀನನಾಗಿ ಇದ್ದಾನೆಯೆ ಸಪ್ತಮದಲ್ಲಿ ಯಾವ ಗ್ರಹ ಇದೆ ಇದನ್ನೆಲ್ಲಾ ಲೆಕ್ಕಾಚಾರ ಮಾಡುವಂತದ್ದಿರುತ್ತದೆ.

ನಂತರ ದೋಷಗಳು ಕುಜದೋಷ ಸರ್ಪದೋಷ ಇವುಗಳ ಲೆಕ್ಕಾಚಾರ ಇರುತ್ತದೆ. ಅದರಲ್ಲಿ ಜನ್ಮದಿನಾಂಕ ಅಂದರೆ ಹುಟ್ಟಿದ ದಿನಾಂಕದಲ್ಲೂ ಮದುವೆಯ ವಿಚಾರವನ್ನು ಲೆಕ್ಕಾಚಾರ ಮಾಡಬೇಕಾಗುತ್ತದೆ. ವಿವಾಹಕ್ಕೆ ಸಂಬಂಧಿಸಿದಂತೆ ಕುಜ ದೋಷ ಅಥವಾ ವಿಳಂಬ ನಕ್ಷತ್ರ ಇರುತ್ತದೆ. ಎಷ್ಟೇ ಪ್ರಯತ್ನ ಮಾಡಿದರೂ ವಿವಾಹ ವಿಳಂಬವಾಗುತ್ತದೆ ಬೇಗ ಅನುಕೂಲ ಆಗುವುದಿಲ್ಲ. ಅದಕ್ಕೆ ದೋಷ ಅಂದುಬಿಡುತ್ತಾರೆ ಮೂಲ ನಕ್ಷತ್ರ ಆಶ್ಲೇಷ ನಕ್ಷತ್ರ ಜೇಷ್ಠ ನಕ್ಷತ್ರ ಈ ರೀತಿಯ ನಕ್ಷತ್ರಗಳು ದೋಷ ನಕ್ಷತ್ರಗಳು ಅದಕ್ಕೆ ವಿವಾಹದ ವಿಷಯದಲ್ಲಿ ಸಮಸ್ಯೆ ಎಂದು ಹೇಳುತ್ತಾರೆ ಆದರೆ ಅದು ಹಾಗಲ್ಲ. ನಕ್ಷತ್ರಗಳಲ್ಲಿ ಜನನವಾಗಿರುವವರಿಗೆ ಒಂದಿಷ್ಟು ಪಾದ ಎಂಬುದು ಇರುತ್ತದೆ. ಒಂದನೇ ಪಾದ ನಾಲ್ಕನೇ ಪಾದದಲ್ಲಿ ಅವರಿಗೆ ಯಾವೊಂದು ಬೇಗ ಅನುಕೂಲ ಆಗುವುದಿಲ್ಲ ಈ ರೀತಿಯಾಗಿ ಲೆಕ್ಕಾಚಾರ ಇರುತ್ತದೆ. ಅದು ರಾಶ್ಯಾಧಿಪತಿ ಇರುವ ಲಗ್ನದ ಸ್ಥಾನ ಫಲ ಎಂದು ಹೇಳುತ್ತಾರೆ.

ಸಾಮಾನ್ಯವಾಗಿ ಹುಟ್ಟಿದ ದಿನಾಂಕದ ವಿಷಯಕ್ಕೆ ಬಂದರೆ ನಾಲ್ಕು ಹದಿಮೂರು ಎಂಟು ಈ ರೀತಿ ಇರುವ ದಿನಾಂಕಗಳಲ್ಲಿ ಮದುವೆಯ ವಿಷಯಕ್ಕೆ ಸಂಬಂಧಿಸಿದಂತೆ ತುಂಬಾ ಬೇಜಾರು ಮಾಡಿಕೊಳ್ಳುತ್ತಿರುತ್ತಾರೆ ಮದುವೆಯ ವಿಷಯ ಕೂಡಿ ಬರುವುದಿಲ್ಲ ಸಾಮಾನ್ಯವಾಗಿ ಶನಿಗೆ ಸಂಬಂಧಿಸಿದ ದಿನಾಂಕಗಳಲ್ಲಿ ಅಥವಾ ರಾಹುವಿಗೆ ಸಂಬಂಧಿಸಿದಂತಹ ದಿನಾಂಕಗಳಲ್ಲಿ ಜನನವಾಗುವವರಿಗೆ ಮದುವೆ ಸ್ವಲ್ಪ ವಿಳಂಬವಾಗುತ್ತದೆ. ಮಿಥುನ ಲಗ್ನದಲ್ಲಿ ಹುಟ್ಟಿರುವವರಿಗೆ ಜಾತಕದಲ್ಲಿ ರಾಹು ಸಪ್ತಮ ಸ್ಥಾನದಲ್ಲಿದ್ದರೆ ಧನುರಾಶಿಯಲ್ಲೇನಾದರೂ ಇದ್ದು ನಾಲ್ಕನೇ ದಿನಾಂಕದಂದು ಹುಟ್ಟಿದ್ದರೆ ಮುವತ್ತು ವರ್ಷ ದಾಟುವವರೆಗೆ ವಿವಾಹವಾಗುವುದಿಲ್ಲ.

ಮದುವೆಯ ವಿಳಂಬಕ್ಕೆ ಕುಜ ಸಪ್ತಮ ಅಷ್ಟಮ ವ್ಯಯಸ್ಥಾನ ಅಥವ ಲಗ್ನದಿಂದ ದ್ವಿತೀಯ ಸ್ಥಾನದಲ್ಲಿದ್ದರು ವಿವಾಹ ವಿಷಯದಲ್ಲಿ ಸ್ವಲ್ಪ ತಡವಾಗುತ್ತದೆ. ಕುಜ ಸ್ವಕ್ಷೇತ್ರದಲ್ಲಿ ಅಥವಾ ಉಚ್ಚ ಸ್ಥಾನದಲ್ಲಿದ್ದರೆ ಯಾವ ಸಮಯಕ್ಕೆ ಬೇಕು ಆ ಸಮಯಕ್ಕೆ ಒಳ್ಳೆಯ ಕಡೆಯ ಸಂಬಂಧ ಸಿಗುತ್ತದೆ ಆದರೆ ಆ ಕುಜ ಬಲಹೀನನಾಗಿದ್ದರೆ ದೋಷ ಬರೀತ ನಾಗಿದ್ದಾಗ ಮದುವೆಯ ವಿಚಾರದಲ್ಲಿ ವಿಳಂಬವಾಗುತ್ತದೆ. ಅದೇ ರಾಹು ಬಲಹೀನನಾಗಿ ನೀಚ ಸ್ಥಾನದಲ್ಲಿದ್ದರೆ ನಾಲ್ಕು ಹದಿಮೂರು ದಿನಾಂಕಗಳಂದು ಹುಟ್ಟಿದವರ ಮದುವೆಯ ವಿಚಾರ ಬಹಳ ನಿಧಾನಗತಿಯಲ್ಲಿ ಸಾಗುತ್ತಿರುತ್ತದೆ.

ತುಂಬಾ ಜನರಿಗೆ ಅವರು ಹುಟ್ಟಿದ ದಿನಾಂಕವನ್ನು ಬರೆದಿಟ್ಟಿರುವುದಿಲ್ಲ. ಆಗ ಜನ್ಮ ನಕ್ಷತ್ರ ಮತ್ತು ನಾಮ ನಕ್ಷತ್ರ ಎಂಬುದಿರುತ್ತದೆ ಜನ್ಮನಕ್ಷತ್ರ ಎಂದರೆ ನೀವು ಹುಟ್ಟಿರುವ ಅಂತಹ ಸಮಯಕ್ಕೆ ಸರಿಯಾಗಿ ಆ ದಿನದ ನಕ್ಷತ್ರ ಯಾವುದು ಬರುತ್ತದೆ ಎಂಬುದನ್ನು ಲೆಕ್ಕಾಚಾರ ಮಾಡಿ ಯಾವ ನಕ್ಷತ್ರದಲ್ಲಿ ಹುಟ್ಟಿದರೆ ಎಷ್ಟನೇ ಪಾದ ಯಾವ ರಾಶಿಗೆ ಒಳಪಡುತ್ತದೆ ಇದನ್ನೆಲ್ಲ ಲೆಕ್ಕಾಚಾರ ಮಾಡುವಂತಹ ವಿಧಾನ ಇರುತ್ತದೆ. ಆದರೆ ಈಗ ಜನ್ಮದಿನಾಂಕ ಗೊತ್ತಿಲ್ಲ ಎಂದರೆ ಏನು ಮಾಡಬೇಕು ಶಾಸ್ತ್ರದಲ್ಲಿ ಏನು ಹೇಳುತ್ತದೆ ಎಂಬುದನ್ನು ಲೆಕ್ಕಾಚಾರ ಮಾಡಿದ್ರೆ ಜನ್ಮನಕ್ಷತ್ರ ಇಲ್ಲ ಎಂದಾದಾಗ ನಾಮ ನಕ್ಷತ್ರವನ್ನು ನೋಡಿ ಮದುವೆಯ ವಿಷಯಕ್ಕೆ ಸಾಲಾವಳಿ ಯನ್ನು ನೋಡಬೇಕಾಗುತ್ತದೆ. ವಧುವಿಗೆ ಜನ್ಮನಕ್ಷತ್ರ ವರನಿಗೆ ನಾಮ ನಕ್ಷತ್ರ ಈ ರೀತಿಯಾಗಿ ನೋಡುವಂತಿಲ್ಲ ಇಬ್ಬರಿಗೂ ನಾಮ ನಕ್ಷತ್ರಕ್ಕೆ ನೋಡಬೇಕಾಗುತ್ತದೆ.

ಸಾಮಾನ್ಯವಾಗಿ ಯಾವುದೇ ದೋಷ ಇತ್ತು ಎಂದರೆ ಅದಕ್ಕೆ ಸಂಬಂಧಪಟ್ಟ ಪರಿಹಾರವನ್ನು ನಾವು ತೆಗೆದುಕೊಳ್ಳಬೇಕಾಗುತ್ತದೆ. ಬಹಳಷ್ಟು ಜನರಿಗೆ ದೋಷವೇ ಇರುವುದಿಲ್ಲ ಪೂಜೆ-ಪುನಸ್ಕಾರಗಳನ್ನು ಮಾಡಿ ಮಾಡಿ ಬೇಸತ್ತು ಹೋಗಿರುತ್ತಾರೆ ಬಹಳ ಜನಕ್ಕೆ ಸಮಸ್ಯೆಗಳು ಎದುರಾಗುತ್ತದೆ. ಮದುವೆಯಾಗುವುದಕ್ಕೆ ಯಾವೆಲ್ಲ ಪೂಜೆ-ಪುನಸ್ಕಾರಗಳು ಇರುತ್ತವೆಯೋ ಅವುಗಳನ್ನೆಲ್ಲವನ್ನೂ ಮಾಡಿದರು ಯಾವುದೇ ರೀತಿಯ ಫಲ ಸಿಕ್ಕಿರುವುದಿಲ್ಲ.

ಅದರಲ್ಲಿ ಎಲ್ಲೋ ಒಂದು ಕಡೆ ಸಣ್ಣದಾದ ಸಮಸ್ಯೆ ಇರುತ್ತದೆ ಅದಕ್ಕೆ ನಾವು ದೊಡ್ಡಮಟ್ಟದಲ್ಲಿ ಪೂಜೆ-ಪುನಸ್ಕಾರಗಳು ಹೋಮ ಹವನಗಳನ್ನು ಮಾಡಿದರೆ ಫಲ ಸಿಗುವುದಿಲ್ಲ. ಹಾಗಾಗಿ ಯಾವ ಗ್ರಹ ಬಲಹೀನವಾಗಿದೆ ಉದಾಹರಣೆಗೆ ರವಿ ಅಂದರೆ ಸಪ್ತಮಾಧಿಪತಿ ವಿವಾಹಾಧಿಪತಿ ರವಿ ಬಲಹಿನನಾಗಿದ್ದು ವಿವಾಹಕ್ಕೆ ತಡವಾಗುತ್ತೆ ಆಗ ಸೂರ್ಯನ ಆರಾಧನೆಯನ್ನು ಮಾಡುವಂತದ್ದು ಅಥವಾ ಚಂದ್ರ ಬಲಹೀನನಾಗಿ ವೃಷಭ ಲಗ್ನದಲ್ಲಿ ಜನವಾಗಿರುವಂತವರಿಗೆ ಸಪ್ತಮ ಸ್ಥಾನದಲ್ಲಿ ಚಂದ್ರ ನೀಚನಾಗಿದ್ದರೆ ಅವರಿಗೆ ಏನು ಮಾಡಿದರೂ ಮದುವೆ ಆಗುತ್ತಿಲ್ಲವಲ್ಲ ಎನಿಸುತ್ತದೆ. ಹಾಗಾಗಿ ಚಂದ್ರ ಜಪ ಚಂದ್ರ ಪೀಡಾ ಪರಿಹಾರ ಮಂತ್ರವನ್ನು ಪಠಿಸುವಂತದ್ದು ಮಾಡಿದರೆ ಉತ್ತಮ.

ಒಂದು ವೇಳೆ ಕನ್ಯಾ ಲಗ್ನದಲ್ಲಿ ಜನನವಾಗಿದ್ದರೆ ಲಗ್ನಾಧಿಪತಿ ಬುಧ ಆಗಿರುತ್ತಾನೆ. ಬುಧ ಸಪ್ತಮ ಸ್ಥಾನದಲ್ಲಿ ಮೀನ ರಾಶಿಯಲ್ಲಿದ್ದರೆ ವಿವಾಹ ವಿಷಯದಲ್ಲಿ ಚಿಂತೆ ಕಾಡುತ್ತದೆ ವಿವಾಹವಾದರೂ ಅಷ್ಟೊಂದು ಸುಖವಾಗಿ ಇರುವುದಿಲ್ಲ. ಪ್ರಮುಖವಾಗಿ ಬುಧ ಕುಜ ಶುಕ್ರ ರಾಹು ಈ ನಾಲ್ಕು ಗ್ರಹಗಳು ಸಪ್ತಮ ಸ್ಥಾನದಲ್ಲಿ ನೀಚವಾಗಿದ್ದರೆ ಸಮಸ್ಯೆಗಳು ಬರುತ್ತವೆ. ಅದಕ್ಕಾಗಿ ತುಂಬಾ ಜಾಗರೂಕತೆಯನ್ನು ವಹಿಸಬೇಕಾಗುತ್ತದೆ. ಸಪ್ತಮ ಸ್ಥಾನದಲ್ಲಿ ಶುಕ್ರ ಇದ್ದಾನಾ ಅಥವಾ ಕುಜ ಇದ್ದಾನ ಇದನ್ನೆಲ್ಲ ಲೆಕ್ಕಾಚಾರ ಮಾಡಬೇಕಾಗುತ್ತದೆ. ಕುಜ ಮತ್ತು ಶುಕ್ರ ಇಬ್ಬರು ಇದ್ದರೆ ತುಂಬಾ ಸಮಸ್ಯೆಗಳು ಬರುತ್ತವೆ. ಕುಜ ಶುಕ್ರರು ಕನ್ಯಾ ರಾಶಿಯಲ್ಲಿ ಇದ್ದರೆ ಮೂವತ್ತು ನಲವತ್ತು ವರ್ಷವಾದರೂ ಮದುವೆಯಾಗುವುದಿಲ್ಲ. ಅದೇ ಕುಜ-ಶುಕ್ರ ಕರ್ಕಾಟಕ ಮತ್ತು ಕನ್ಯಾ ರಾಶಿಯಲ್ಲಿದ್ದರೆ ಮದುವೆಗೆ ಸಂಬಂಧಿಸಿದ ತೊಂದರೆ ಬರುತ್ತದೆ. ಮತ್ತು ಕುಜನ ಜೊತೆ ಬುಧನು ಕಂಡುಬಂದರೆ ಮದುವೆಗೆ ಸಮಸ್ಯೆಯಾಗುತ್ತದೆ.

ಮಕರ ರಾಶಿಯಲ್ಲಿ ಸಪ್ತಮ ಸ್ಥಾನದಲ್ಲಿ ಗುರು ರಾಹು, ಗುರು ಕೇತು ಇದ್ದರೆ ಮದುವೆಯವರೆಗೂ ವಿಚಾರ ಬರುತ್ತದೆ ಆದರೆ ಪೂರ್ಣ ಆಗುವುದಿಲ್ಲ ಎರಡು-ಮೂರು ಸಲ ಮದುವೆ ತಪ್ಪುತ್ತದೆ. ಈ ರೀತಿಯ ಸಮಸ್ಯೆ ಗಳಿದ್ದಾಗ ಆಯಾ ಗ್ರಹಗಳಿಗೆ ಸಂಬಂಧಿಸಿದ ಜಪ ಮತ್ತು ಧಾನ್ಯಗಳ ದಾನವನ್ನು ಮಾಡಬೇಕು. ನೋಡಿಡಿರಲ್ಲ ಸ್ನೇಹಿತರೆ ಯಾವ ಕಾರಣದಿಂದಾಗಿ ಮದುವೆಯಲ್ಲಿ ವಿಳಂಬವಾಗುತ್ತದೆ ಎಂದು ಜಾತಕದಲ್ಲಿ ಕಂಡುಬರುವ ಗ್ರಹಗತಿಗಳ ಆಧಾರದ ಮೇಲೆ ಮದುವೆ ನಿರ್ಧರಿತವಾಗಿರುತ್ತದೆ ನಿಮ್ಮ ಜಾತಕದಲ್ಲಿ ಗ್ರಹಗತಿಗಳಲ್ಲಿ ದೋಷ ಕಂಡುಬಂದರೆ ಅವುಗಳ ಪರಿಹಾರವನ್ನು ಮಾಡಿಸಿಕೊಳ್ಳಿ ನಿವು ಈ ಮಾಹಿತಿಯನ್ನು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಸ್ನೇಹಿತರಿಗೂ ಪರಿಚಯದವರಿಗೂ ಈ ಮಾಹಿತಿಯನ್ನು ತಿಳಿಸಿರಿ.

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.