Phone Pay ಅಕೌಂಟ್ 5 ನಿಮಿಷದಲ್ಲಿ ಕ್ರಿಯೇಟ್ ಮಾಡಿಕೊಳ್ಳೋದು ಹೇಗೆ? ನೋಡಿ..

0 28

ನಗದು ವ್ಯವಹಾರದ ಬದಲಾಗಿ ಆನ್ಲೈನ್ ವ್ಯವಹಾರಕ್ಕೆ ಹೆಚ್ಚು ಮಹತ್ವ ಕೊಡುತ್ತಿರುವ ಈಗಿನ ಕಾಲದಲ್ಲಿ ಫೋನ್ ಪೇ ಆ್ಯಪ್ ಮೂಲಕ ಹಣ ಕಳುಹಿಸುವುದರಿಂದ ಅಥವಾ ಹಣ ಪಡೆಯುವುದರಿಂದ ಯಾವುದೆ ರೀತಿಯ ನಷ್ಟ, ದುರುಪಯೋಗ ಆಗುವುದಿಲ್ಲ. ಹಾಗಾದರೆ ಫೋನ್ ಪೇ ಅಕೌಂಟ್ ಕ್ರಿಯೇಟ್ ಮಾಡಿಕೊಳ್ಳುವುದು ಹೇಗೆ ಹಾಗೂ ಹಣದ ವ್ಯವಹಾರ ನಡೆಸುವುದು ಹೇಗೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಮೊಬೈಲ್ ನಲ್ಲಿ ಫೋನ್ ಪೇ ಅಕೌಂಟ್ ಕ್ರಿಯೇಟ್ ಮಾಡಿ ಅದರ ಮೂಲಕ ಹಣದ ವ್ಯವಹಾರ ಮಾಡಬಹುದು. ಮೊದಲು ಮೊಬೈಲ್ ನಲ್ಲಿ ಫೋನ್ ಪೇ ಎಂಬ ಆ್ಯಪ್ ಅನ್ನು ಇನ್ಸ್ಟಾಲ್ ಮಾಡಬೇಕು. ನಂತರ ನಿಮ್ಮ ಮೊಬೈಲ್ ನಲ್ಲಿರುವ ನಂಬರ್ ಗಳು ಕಾಣಿಸುತ್ತದೆ ಬ್ಯಾಂಕ್ ಅಕೌಂಟ್ ಗೆ ಲಿಂಕ್ ಇರುವ ಮೊಬೈಲ್ ನಂಬರನ್ನು ಸೆಲೆಕ್ಟ್ ಮಾಡಬೇಕು. ನಂತರ ಮೊಬೈಲ್ ನಂಬರ್ ಗೆ ಓಟಿಪಿ ಬರುತ್ತದೆ.
ಓಟಿಪಿಯನ್ನು ಎಂಟ್ರಿ ಮಾಡಬೇಕು.

ನಂತರ ಫೋನ್ ಪೇ ಆ್ಯಪ್ ಓಪನ್ ಆಗುತ್ತದೆ ಅದರಲ್ಲಿ ಆ್ಯಡ ಬ್ಯಾಂಕ್ ಅಕೌಂಟ್ ಎಂಬ ಆಪ್ಷನ್ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಬೇಕು. ನಂತರ ಒಂದು ವಿಂಡೋ ಓಪನ್ ಆಗುತ್ತದೆ ಅಲ್ಲಿ ನಿಮ್ಮ ಅಕೌಂಟ್ ಇರುವ ಬ್ಯಾಂಕ್ ಹೆಸರನ್ನು ಹಾಕಬೇಕು. ನಂತರ ಬ್ಯಾಂಕ್ ಅಕೌಂಟ್ ಗೆ ಲಿಂಕ್ ಇರುವ ನಂಬರ್ ಯಾವ ಸಿಮ್ ಎಂದು ಕೇಳುತ್ತದೆ ಅದನ್ನು ಸೆಲೆಕ್ಟ್ ಮಾಡಬೇಕು. ನಂತರ ಕಂಟಿನ್ಯೂ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು.

ನಂತರ ನಿಮ್ಮ ಮೊಬೈಲ್ ನಂಬರ್ ಇಂದ ಬ್ಯಾಂಕಿಗೆ ಒಂದು ಎಸ್ಎಂಎಸ್ ಸೆಂಡ್ ಆಗುತ್ತದೆ ಬ್ಯಾಂಕ್ ಅಕೌಂಟ್ ವೆರಿಫಿಕೇಷನ್ ಆಗುತ್ತದೆ. ವೆರಿಫಿಕೇಷನ್ ಆದನಂತರ ಸಕ್ಸಸ್ ಫುಲ್ ಎಂದು ಮೆಸೇಜ್ ಬರುತ್ತದೆ. ನಂತರ ಮೊಬೈಲ್ ನಂಬರ್ ಗೆ ಬ್ಯಾಂಕ್ ಅಕೌಂಟ್ ಫೋನ್ ಪೇ ಅಕೌಂಟ್ ಲಿಂಕ್ ಆಗುತ್ತದೆ. ನಂತರ ನಿಮ್ಮ ಅಕೌಂಟ್ ಇರುವ ಬ್ಯಾಂಕ್ ಹೆಸರು, ಅಕೌಂಟ್ ನಂಬರ್ ನ ಕೊನೆಯ ನಾಲ್ಕು ನಂಬರ್, ಬ್ರಾಂಚ್, ಐ.ಎಫ್.ಎಸ್.ಸಿ ಕೋಡ್ ಕಾಣಿಸುತ್ತದೆ.

ಯುಪಿಎಸ್ ಕೋಡ್ ಯಶಸ್ವಿಯಾಗಿ ರಿಜಿಸ್ಟರ್ ಆಗಿರುತ್ತದೆ. ಕೆಳಗಡೆ ಸೆಟ್ ಯುಪಿಐ ನಂಬರ್ ಎಂದು ಬರುತ್ತದೆ ಅದನ್ನು ಕ್ಲಿಕ್ ಮಾಡಿದ ನಂತರ ಎಟಿಎಂ ಕಾರ್ಡ್ ಹಿಂದಿನ ಕೊನೆಯ ಆರು ಸಂಖ್ಯೆಯನ್ನು ಮತ್ತು ಕಾರ್ಡ್ ವೇಲಿಡ್ ತಿಂಗಳು, ವರ್ಷದ ಕೊನೆಯ ಎರಡು ಸಂಖ್ಯೆಯನ್ನು ಎಂಟ್ರಿ ಮಾಡಬೇಕು. ನಂತರ ಕಂಟಿನ್ಯೂ ಎಂಬ ಆಪ್ಶನ್ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಬೇಕು. ನಂತರ ಆ್ಯಡ್ ಅಕೌಂಟ್ ಸಕ್ಸೆಸ್ ಫುಲ್ ಎಂದು ಬರುತ್ತದೆ.

ಅಕೌಂಟ್ ಇರುವ ಬ್ಯಾಂಕ್ ನ ಬಗ್ಗೆ ವಿವರ ಕಾಣಿಸುತ್ತದೆ. ಕೆಳಗಡೆ ಡನ್ ಎಂಬ ಆಪ್ಷನ್ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಬೇಕು ಆಗ ಬ್ಯಾಂಕ್ ಅಕೌಂಟ್ ಗೆ ಲಿಂಕ್ ಆಗುತ್ತದೆ. ಪೋನ್ ಪೇ ಮೂಲಕ ಹಣ ವರ್ಗಾವಣೆ ಮಾಡಬಹುದು. ಫೋನ್ ಪೇ ಆ್ಯಪ್ ನಲ್ಲಿ ಟು ಕಾಂಟಾಕ್ಟ್ ಎಂಬ ಆಪ್ಷನ್ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿ ನಿಮ್ಮ ಸ್ನೇಹಿತರಿಗೆ, ಸಂಬಂಧಿಕರಿಗೆ, ಯಾರಿಗೆ ಆಗಲಿ ಅವರ ನಂಬರ್ ಗೆ ನೀವು ಹಣ ಕಳುಹಿಸಬಹುದು ಆದರೆ ಅವರ ನಂಬರ್ ಗೆ ಫೋನ್ ಪೇ ಅಕೌಂಟ್ ಲಿಂಕ್ ಆಗಿರಬೇಕು. ಅವರ ನಂಬರ್ ಅನ್ನು ಟೈಪ್ ಮಾಡಿದಾಗ ಅವರ ಹೆಸರು ಕಾಣಿಸುತ್ತದೆ.

ನಂತರ ಕಂಟಿನ್ಯೂ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿದಾಗ ಎಂಟರ್ ಅಮೌಂಟ್ ಎಂದು ಕಾಣಿಸುತ್ತದೆ ಅಲ್ಲಿ ಅಮೌಂಟ್ ಹಾಕಿ ಸೆಂಡ್ ಎಂದು ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಬೇಕು. ನಂತರ ನಿಮ್ಮ ವ್ಯವಹಾರ ಯಶಸ್ವಿಯಾಗಿದೆ ಎಂದು ಹಾಗೂ ಅದರ ಡೀಟೇಲ್ ಬರುತ್ತದೆ, ಕೆಳಗಡೆ ಡನ್ ಎಂಬ ಆಪ್ಷನ್ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಬೇಕು. ಫೋನ್ ಪೇ ಆ್ಯಪ್ ನಲ್ಲಿ ಹಿಸ್ಟರಿ ಎಂಬ ಆಪ್ಷನ್ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿದಾಗ ನೀವು ಯಾವ ಟೈಮ್ ಗೆ, ಯಾರಿಗೆ ಅಮೌಂಟ್ ಕಳುಹಿಸಿದ್ದೀರಾ ಅದರ ಬಗ್ಗೆ ಸಂಪೂರ್ಣ ವಿವರ ಇರುತ್ತದೆ.

ಹಣ ಕಳುಹಿಸಿದ ರಿಸಿಪ್ಟ್ ಅನ್ನು ಅವರಿಗೆ ವಾಟ್ಸಪ್ ಮೂಲಕ ಶೇರ್ ಮಾಡಬಹುದು. ಬೇರೆಯವರ ಅಕೌಂಟ್ ಗೆ ಹಣ ಕಳುಹಿಸಬೇಕಾದರೆ ಟು ಅಕೌಂಟ್ ಎಂಬ ಆಪ್ಷನ್ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿ ಅವರ ಅಕೌಂಟ್ ಇರುವ ಬ್ಯಾಂಕ್ ನ ಅಡ್ರೆಸ್, ಅಕೌಂಟ್ ನಂಬರ್, ಅಮೌಂಟ್ ಹಾಕಿದಾಗ ಅವರ ಅಕೌಂಟ್ ಗೆ ಹಣ ಹೋಗುತ್ತದೆ. ಈ ರೀತಿ ಉಚಿತವಾಗಿ ಕಡಿಮೆ ಸಮಯದಲ್ಲಿ ಮೊಬೈಲ್ ಮೂಲಕವೆ ಹಣದ ವ್ಯವಹಾರ ಮಾಡಬಹುದು. ಈ ಮಾಹಿತಿ ನಿಜಕ್ಕೂ ಉಪಯುಕ್ತವಾಗಿದ್ದು ತಪ್ಪದೆ ಎಲ್ಲರಿಗೂ ತಿಳಿಸಿ, ಪೋನ್ ಪೇ ಮೂಲಕ ಅನೇಕ ದುಂದುವೆಚ್ಚವನ್ನು ಕಡಿಮೆ ಮಾಡಬಹುದು.

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.