ಹೊಸ ಲುಕ್ ನಲ್ಲಿ ಬರಲಿದ್ದಾರೆ ಕನ್ನಡದ ಹ್ಯಾಟ್ರಿಕ್ ಹೀರೊ

0 0

2019 ರಲ್ಲಿ ಬಿಡುಗಡೆಗೊಂಡ ಯುವ ನಿರ್ದೇಶಕ ಸಚಿನ್ ರವಿ ನಿರ್ದೇಶಿಸಿದ ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಚಿತ್ರ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನವನ್ನು ಕಂಡಿದ್ದು, ಶ್ರೀಮನ್ನಾರಾಯಣ ಚಿತ್ರದ ನಿರ್ದೇಶಕ ಸಚಿನ್ ರವಿ ಅವರು ಇನ್ನೊಂದು ಚಿತ್ರ ನಿರ್ದೇಶನ ಮಾಡಲು ತಯಾರಿಯಲ್ಲಿದ್ದಾರೆ. ಸಚಿನ್ ರವಿಯವರೇ ನಿರ್ದೇಶನ ಮಾಡುತ್ತಿರುವ ಇನ್ನೊಂದು ಹೊಸ ಸಿನಿಮಾ ಯಾವುದು ಹಾಗೂ ಅವರು ಯಾವ ನಟನಿಗೆ ನಿರ್ದೇಶನ ಮಾಡುತ್ತಿದ್ದಾರೆ ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಅವನೇ ಶ್ರೀಮನ್ನಾರಾಯಣ ನಿರ್ದೇಶಕ ಸಚಿನ್ ರವಿ ಅವರು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ತನ್ನ ಮುಂದಿನ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಸಧ್ಯ ಭಜರಂಗಿ-2 ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಿರುವ ನಟ ಶಿವರಾಜ್ ಕುಮಾರ್ ತಮ್ಮ ಮುಂದಿನ ಚಿತ್ರವನ್ನು ಯುವ ನಿರ್ದೇಶಕನ ಜೊತೆ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಅವನೇ ಶ್ರೀಮನ್ನಾರಾಯಣ ಚಿತ್ರದ ನಂತರ ಸಚಿನ್ ರವಿ ಅವರು ಶಿವಣ್ಣನ ಹಿಂದೆ ಬಿದ್ದಿದ್ದಾರೆ. ರಕ್ಷಿತ್ ಶೆಟ್ಟಿ ನಟನೆ ಅಭಿನಯದ ಅವನೇ ಶ್ರೀಮನ್ನಾರಾಯಣ ಸಿನಿಮಾ ನಿರ್ದೇಶನ ಮಾಡಿದ್ದ ಸಚಿನ್ ರವಿ ಅವರು ಈಗ ಹ್ಯಾಟ್ರಿಕ್ ಹೀರೋಗೆ ಆಕ್ಷನ್ ಕಟ್ ಹೇಳುವ ಅವಕಾಶ ಪಡೆದುಕೊಂಡಿದ್ದಾರೆ. ಈ ಕುರಿತು ಸ್ವತಃ ಸಚಿನ್ ಅವರೇ ತಮ್ಮ ಟ್ವಿಟ್ಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಪೋಸ್ಟರ್ ಸಹ ಬಿಡುಗಡೆ ಮಾಡಿದ್ದಾರೆ.

ನಂಬರ್ 1 ಕನ್ನಡ ರಾಜ್ಯೋತ್ಸವದ ದಿನದಂದು ಸಚಿನ್ ರವಿ ಅವರು ಟ್ವಿಟರ್ನಲ್ಲಿ ಟ್ವೀಟ್ ಮಾಡಿ ಮುಂದಿನ ಸಿನಿಮಾದ ಬಗ್ಗೆ ಈ ರೀತಿಯಾಗಿ ಹೇಳಿಕೊಂಡಿದ್ದಾರೆ. ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ನಿಮ್ಮ ಶುಭಹಾರೈಕೆ ನಮ್ಮ ಜೊತೆಗಿರಲಿ. ನಾವು ಶಿವರಾಜ್ ಕುಮಾರ್ ಅವರ ಸಿನಿಮಾವನ್ನೂ ನೋಡಿಕೊಂಡು ಕನಸುಗಳನ್ನು ಕಟ್ಟುತ್ತಿದ್ದೆವು ಆದರೆ ಈಗ ಇವರ ಜೊತೆಯಲ್ಲೆ ನಮ್ಮ ಕನಸು ನನಸಾಗುವ ಸಮಯ ಬಂದಿದೆ. ಒಬ್ಬ ಮಹಾನ್ ಕಲಾವಿದ ಶಿವರಾಜ್ ಕುಮಾರ್ ಅವರ ಜೊತೆಗೆ ನನಗೆ ನನ್ನ ಮುಂದಿನ ಸಿನಿಮಾವನ್ನು ನಿರ್ದೇಶನ ಮಾಡಲು ಅವಕಾಶ ಸಿಕ್ಕಿದೆ ಎಂದು ಟ್ವೀಟ್ ಮಾಡಿದ್ದಾರೆ. ಸಚಿನ್ ರವಿ ನಿರ್ದೇಶನದ ಮುಂದಿನ ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರು ಮಹಾಭಾರತದಲ್ಲಿ ಅಶ್ವತ್ಥಾಮ ಪಾತ್ರವು ಬಹಳ ಪ್ರಧಾನವಾಗಿದ್ದು, ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಅಶ್ವತ್ಥಾಮನನ್ನು ಹೋಲುವಂತಹ ಪಾತ್ರ ನಿರ್ವಹಿಸಲಿದ್ದಾರೆ. ಸಚಿನ್ ಮತ್ತು ಶಿವಣ್ಣ ಕಾಂಬಿನೇಷನ್‌ನಲ್ಲಿ ತಯಾರಾಗಲಿರುವ ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನಯ್ಯ ಬಂಡವಾಳ ಹಾಕುತ್ತಿದ್ದಾರೆ. ಸದ್ಯಕ್ಕೆ ಸಿನಿಮಾ ಮಾತ್ರ ಘೋಷಣೆ ಮಾಡಿರುವ ನಿರ್ದೇಶಕರು ಶೂಟಿಂಗ್ ಹಾಗೂ ಇನ್ನಿತರ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಭಜರಂಗಿ-2 ಸಿನಿಮಾ ಬಳಿಕ ಈಗಾಗಲೇ ಶಿವಣ್ಣ ಆರ್‌ಡಿಎಕ್ಸ್ ಮತ್ತು ಬೈರತಿ ರಣಗಲ್ಲು ಎಂಬ ಪ್ರಾಜೆಕ್ಟ್‌ಗಳಿಗೆ ಕಾಲ್‌ಶೀಟ್ ಕೊಟ್ಟಿದ್ದಾರೆ. ಬಹುಶಃ ಈ ಸಿನಿಮಾ ನಂತರ ಸಚಿನ್ ಅವರ ಚಿತ್ರ ಕೈಗೆತ್ತಿಕೊಳ್ಳಬಹುದು.

Leave A Reply

Your email address will not be published.