ಸೀತೆಯ ರಾಮ ಸೀರಿಯಲ್ ನಲ್ಲಿ ರಾವಣ ಪಾತ್ರ ಮಾಡಿತೋರೋದು ಯಾರು ಗೊತ್ತೇ, ಇವರದ್ದು ಖಡಕ್ ವಾಯ್ಸ್

0 0

ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ ಸೀತೆಯ ರಾಮ ಧಾರಾವಾಹಿಯಲ್ಲಿ ರಾವಣ ಪಾತ್ರ ಮಾಡುತ್ತಿರುವವರು ಯಾರು ಅವರ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಹಿಂದಿಯ ಜನಪ್ರಿಯ ಹಾಗೂ ಪೌರಾಣಿಕ ಸೀರಿಯಲ್ ಸೀತೆಯ ರಾಮ ಕನ್ನಡದಲ್ಲಿ ಡಬ್ ಆಗಿ ಸ್ಟಾರ್ ಸುವರ್ಣ ಚಾನೆಲ್ ನಲ್ಲಿ ಪ್ರಸಾರವಾಗುತ್ತಿದೆ. ಮಹಾಭಾರತ ಧಾರವಾಹಿಯಂತೆ ಸೀತೆಯ ರಾಮ ಕೂಡ ಜನರ ಮನಸನ್ನು ಗೆಲ್ಲುತ್ತಿದೆ. ಅದರಲ್ಲೂ ರಾವಣನ ಪಾತ್ರವೆಂದರೆ ಜನ ಎದುರು ನೋಡುತ್ತಿದ್ದರು ಕಾರಣ ಹಿಂದಿಯಲ್ಲೂ ಜೆಕೆ ಅಲಿಯಾಸ್ ಜಯರಾಮ ಕಾರ್ತಿಕ್ ಅವರು ಈ ಧಾರವಾಹಿಯಲ್ಲಿ ನಟಿಸಿದರು. ಜೆಕೆ ಅವರು ಅಶ್ವಿನಿ ನಕ್ಷತ್ರ ಎಂಬ ಧಾರವಾಹಿ ಮೂಲಕ ಕನ್ನಡ ಧಾರವಾಹಿ ಪ್ರಿಯರಿಗೆ ಪರಿಚಯವಾದರು. ನಂತರ ಕನ್ನಡದಲ್ಲಿ ಕೆಲವು ಸಿನಿಮಾಗಳಲ್ಲಿ ನಟಿಸಿದರು. ಈಗ ಸೀತೆಯ ರಾಮ ಧಾರವಾಹಿಯಲ್ಲಿ ನಟಿಸುವ ಮೂಲಕ ಮತ್ತೊಮ್ಮೆ ಜನರ ಮೆಚ್ಚುಗೆ ಗಳಿಸಿದ್ದಾರೆ

ಜೆಕೆ ಅವರ ಪಾತ್ರ, ನಟನೆ ಹಿಂದಿಯಲ್ಲಿ ಪ್ರಸಾರವಾದ ಈ ಧಾರವಾಹಿಯನ್ನು ಜನ ಇಷ್ಟ ಪಟ್ಟರು. ಈಗ ಕನ್ನಡದಲ್ಲಿ ಡಬ್ ಆದ ಈ ಧಾರವಾಹಿಗೆ ಜೆಕೆ ಅವರೆ ಸ್ವತಃ ತಮ್ಮ ರಾವಣನ ಪಾತ್ರಕ್ಕೆ ಡಬ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಅವರೆ ತಮ್ಮ ಪಾತ್ರಕ್ಕೆ ಧ್ವನಿ ನೀಡಿದ್ದಾರೆ. ರಾವಣ ಮಹಾದೇವನ ಪರಮ ಭಕ್ತ ಈ ಎಲ್ಲ ರೀತಿಯ ಘಟನೆಗಳು ಈ ಧಾರವಾಹಿಯಲ್ಲಿ ಪ್ರಸ್ತುತ ಪಡಿಸಿದ್ದಾರೆ. ಅವರ ನಟನೆ ಹಾಗೂ ಕನ್ನಡದಲ್ಲಿ ಅವರೆ ಡಬ್ ಮಾಡಿರುವುದು ಕನ್ನಡಾಭಿಮಾನಿಗಳಿಗೆ ಇಷ್ಟವಾಗುತ್ತದೆ. ಜೆಕೆ ಅವರು ರಾವಣನ ಪಾತ್ರ ಮಾಡುವುದರೊಂದಿಗೆ ಅವರ ಪಾತ್ರಕ್ಕೆ ಡಬ್ ಮಾಡುತ್ತಿರುವುದು ಶ್ಲಾಘನೀಯ. ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ ಹೆಚ್ಚು ನೋಡಿ ಬೆಂಬಲ ನೀಡಿ

Leave A Reply

Your email address will not be published.