Ultimate magazine theme for WordPress.

ಮದುವೆ ಹಾಗೂ ಸಿನಿಮಾ ಈ ಎರಡರಲ್ಲಿ ನಟಿ ಅನುಷ್ಕಾ ಶೆಟ್ಟಿ ಅವರ ಆಯ್ಕೆ ಯಾವುದು ಗೊತ್ತೇ

0 1

ಇತ್ತೀಚಿನ ದಿನಗಳಲ್ಲಿ ಕಲಾವಿದರು ತಮ್ಮ ವೃತ್ತಿ ಜೀವನದ ಸಲುವಾಗಿ ತಮ್ಮ ವೈಯಕ್ತಿಕ ಬದುಕನ್ನು ಸಹ ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಅಂತವರ ಸಾಲಿಗೆ ಸೇರಿದ್ದಾರೆ ನಟಿ ಅನುಷ್ಕಾ ಶೆಟ್ಟಿ. ಮದುವೆ ಮತ್ತು ಸಿನಿಮಾ ಈ ಎರಡರಲ್ಲಿ ಅನುಷ್ಕಾ ಆಯ್ಕೆ ಯಾವುದು? ಎಂಬ ಪ್ರಶ್ನೆಗೆ ನಟಿ ಅನುಷ್ಕಾ ಶೆಟ್ಟಿ ಏನೆಂದು ಹೇಳಿದ್ದಾರೆ ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಬಾಹುಬಲಿ ಖ್ಯಾತಿಯ ನಟಿ, ಕನ್ನಡತಿ ಅನುಷ್ಕಾ ಶೆಟ್ಟಿ ಅವರು ವಿಭಿನ್ನ ಪಾತ್ರಗಳಲ್ಲಿ ನಟನೆ ಮಾಡುವ ಮೂಲಕ ಟಾಲಿವುಡ್ ಹಾಗೂ ಕಾಲಿವುಡ್‌ನಲ್ಲಿ ಹೆಸರು ಗಳಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಮಾಧ್ಯಮಗಳಲ್ಲಿ ಅನುಷ್ಕಾ ಶೆಟ್ಟಿ ಅವರ ಮದುವೆಯ ಬಗ್ಗೆ ಚರ್ಚೆಗಳು ಕೇಳಿಬರುತ್ತಿದ್ದವು. ಅಲ್ಲದೇ ನಟ ಪ್ರಭಾಸ್ ಹಾಗೂ ಅನುಷ್ಕಾ ಮದುವೆಯಾಗಲಿದ್ದಾರೆ ಎಂಬ ಸುದ್ದಿಯೂ ಸಹ ಸಾಕಷ್ಟು ಹರಿದಾಡುತ್ತಿತ್ತು. ಆದರೆ ಈ ಎಲ್ಲ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳದ ಅನುಷ್ಕಾ ಒಳ್ಳೆಯ ಚಿತ್ರಗಳನ್ನು ಮಾಡುವತ್ತ ಗಮನ ಹರಿಸಿದ್ದಲ್ಲದೆ ತಮ್ಮ ಮದುವೆಯ ವಿಚಾರವನ್ನು ಮುಂದೂಡುತ್ತಾ ಬಂದಿದ್ದಾರೆ. ಆದರೆ ಇತ್ತೀಚೆಗೆ ಅಷ್ಟೇ ಅನುಷ್ಕಾ ಶೆಟ್ಟಿ ಅವರು ತನಗೆ ಹೊಂದುವಂತಹ ಬಾಳಸಂಗಾತಿ ಸಿಕ್ಕರೆ ಮದುವೆಯಾಗುತ್ತೇನೆ, ಅಲ್ಲದೇ ಮಕ್ಕಳೊಂದಿಗೆ ಸಂತೋಷದ ಜೀವನ ನಡೆಸಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ಒಂದರ ಹಿಂದೆ ಒಂದರಂತೆ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಅನುಷ್ಕಾಗೆ ಈಗ 38 ವರ್ಷ. ಈಗಾಗಲೇ ಕೈಯ್ಯಲ್ಲಿ ಸಿನಿಮಾಗಳು ಇದ್ದು , ಸದ್ಯ ಅವರ ಕೈಯಲ್ಲಿರುವ ಸಿನಿಮಾಗಳನ್ನು ಮುಗಿಸುವಾಗ ಅವರ ವಯಸ್ಸು ನಲವತ್ತು ಆಗಬಹುದು. ಬಾಹುಬಲಿ ಚಿತ್ರದ ನಂತರ ಈ ಸ್ಟಾರ್ ನಟಿ ಸಿನಿಮಾಗಳ ಆಯ್ಕೆ ಮಾಡಿಕೊಳ್ಳುವಲ್ಲಿ ತುಂಬಾನೇ ಯೋಚಿಸುತ್ತಿದ್ದಾರೆ. ಇಷ್ಟು ವರ್ಷಗಳಲ್ಲಿ ಕಾಣಿಸಿಕೊಂಡ ಪಾತ್ರಗಳಿಗಿಂತ ವಿಭಿನ್ನ ಪಾತ್ರಗಳಲ್ಲಿ ನಟಿಸುವ ಆಲೋಚನೆ ಇವರದ್ದು. ಇತ್ತೀಚೆಗೆ ಅನುಷ್ಕಾ ಶೆಟ್ಟಿ ಅವರ ನಿಶಬ್ದಂ ಚಿತ್ರ ಬಿಡುಗಡೆಯಾಗಿತ್ತು. ಈ ಸಿನಿಮಾದ ಬಗ್ಗೆ  ಪ್ರೇಕ್ಷಕರಿಂದ ಅಷ್ಟೊಂದು ಮೆಚ್ಚುಗೆ ವ್ಯಕ್ತವಾಗಿರಲಿಲ್ಲ. ‌ಕೆಲವರ ಪ್ರಕಾರ ವಯಸ್ಸಿನ ಕಾರಣದಿಂದ ಅನುಷ್ಕಾ ನಟನೆಗೆ ನಿವೃತ್ತಿ ಘೋಷಿಸಬಹುದು ಎಂಬ ಮಾತಿತ್ತು. ಆದರೆ ಇದೆಲ್ಲವನ್ನು ಸುಳ್ಳು ಮಾಡಿರುವ ಅನುಷ್ಕಾ ಹೊಸ ಸಿನಿಮಾವೊಂದಕ್ಕೆ ಸಹಿ ಹಾಕಿದ್ದಾರೆ. ಮೂಲಗಳ ಪ್ರಕಾರ ಗೌತಮ್ ವಾಸುದೇವ್ ಮೆನನ್ ನಿರ್ದೇಶನದ ಸಿನಿಮಾದಲ್ಲಿ ಅನುಷ್ಕಾ ಬಣ್ಣ ಹಚ್ಚಲಿದ್ದಾರೆ. ಈ ಹಿಂದೆ ಎನ್ನೈ ಅರಿಂದಾಳ್ ಸಿನಿಮಾದಲ್ಲಿ ಗೌತಮ್ ಹಾಗೂ ಅನುಷ್ಕಾ ಒಟ್ಟಿಗೆ ಕೆಲಸ ಮಾಡಿದ್ದರು. ಇದರಲ್ಲಿ ಅಜಿತ್ ನಾಯಕನಾಗಿ ನಟಿಸಿದ್ದರು. ಈ ಸಿನಿಮಾವು ಅಜಿತ್ ಹಾಗೂ ಅನುಷ್ಕಾಗೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು. ಮದುವೆಯ ಬಗ್ಗೆ ತನಗೆ ಹೊಂದುವಂತಹ ಬಾಳ ಸಂಗಾತಿ ಸಿಕ್ಕರೆ ಮದುವೆ ಆಗುವೆ ಎಂದು ಹೇಳಿದ ಅನುಷ್ಕಾ ಶೆಟ್ಟಿ ಅವರ ಮುಂದಿನ ನಡೆ ಏನು ಎಂದು ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಾ ಇದ್ದಾರೆ

Leave A Reply

Your email address will not be published.