ಕಾಮಿಡಿ ಕೀಲಾಡಿಗಳು ಸೀಸನ್ ಒಂದರ ವಿಜೇತ ಶಿವರಾಜ್ ಕೆ ಆರ್ ಪೇಟೆ ಇವರ ಬಗ್ಗೆ ಎಲ್ಲರಿಗೂ ತಿಳಿದೇ ಇರುತ್ತದೆ. ಆದರೆ ಇವರು ಕಾಮಿಡಿ ಕಿಲಾಡಿಗಳು ಶೋ ಗೆ ಬರುವುದಕ್ಕೂ ಮೊದಲು ಇವರ ಜೀವನ ಹೇಗೆ ಇತ್ತು ಎನ್ನುವುದು ಬಹಳಷ್ಟು ಜನರಿಗೆ ತಿಳಿದಿರಲಿಕ್ಕಿಲ್ಲ. ಇವತ್ತಿನ ದಿನ ಶಿವರಾಜ್ ಕೆ ಆರ್ ಪೇಟೆ ಅವರು ಏನಾದರೂ ಸಾಧನೆ ಮಾಡಿದ್ದಾರೆ ಅಂದರೆ ಅವರ ಮೊದಲಿನ ಜೀವನ ಹೂವಿನ ಹಾಸಿಗೆ ಏನೂ ಆಗಿರಲಿಲ್ಲ ಸಾಕಷ್ಟು ಏಳು ಬೀಳುಗಳನ್ನು ಕಂಡು, ಕಷ್ಟಗಳನ್ನು ದಾಟಿಕೊಂಡು ಜೀವನದಲ್ಲಿ ಸಾಧನೆ ಮಾಡಿದ್ದಾರೆ. ಅವರ ಜೀವನದ ಕುರಿತು ಅವರೇ ಸ್ವತಃ ಎನು ಹೇಳಿದ್ದಾರೆ ಎನ್ನುವುದನ್ನು ನಾವಿಲ್ಲಿ ನೋಡೋಣ.

ಶಿವರಾಜ್ ಕೆ ಆರ್ ಪೇಟೆ ಅವರು ಮೊದಲು ತಮ್ಮ ತಂದೆಯ ಬಳಿ ಐದುನೂರು ರೂಪಾಯಿ ಹಣ ಪಡೆದುಕೊಂಡು ಟಿವಿ ನೈನ್ ಆಫೀಸ್ ಗೆ ಬರುತ್ತಾರೆ. ಇಲ್ಲಿ ರಘುನಂದನ್ ಎನ್ನುವ ವ್ಯಕ್ತಿ ಭೇಟಿ ಆಗಿ ಅವರು ಇವರಿಗೆ ಒಂದು ಡೈಲಾಗ್ ಇರುವ ಸ್ಕ್ರಿಪ್ಟ್ ಕೊಟ್ಟು ಅಲ್ಲಿರುವ ಡೈಲಾಗ್ ಅನ್ನು ಮಂಡ್ಯ ಭಾಷೆಯ ಶೈಲಿಯಲ್ಲಿ ಹೇಳಲು ಹೇಳುತ್ತಾರೆ. ಶಿವರಾಜ್ ಹೇಳಿದ ಡೈಲಾಗ್ ಇವರಿಗೆ ಒಪ್ಪಿಗೆ ಆಗಿ ಮಾರನೇ ದಿನದಿಂದ ಶೂಟಿಂಗ್ ಗೆ ಬರಲು ಹೇಳುತ್ತಾರೆ. ಕಲಾವಿದನಾಗಿ ಜೀವನ ನಡೆಸಬೇಕು ಎಂದುಕೊಂಡಿದ್ದ ಶಿವರಾಜ್ ಅವರಿಗೆ ಟಿವಿ ನೈನ್ ಅಲ್ಲಿ ಸಿಕ್ಕಿದ ಅವಕಾಶ ಒಂದು ಹೊಸ ತಿರುವು ಎನ್ನಬಹುದು. ಟಿವಿ ನೈನ್ ನ್ನಲ್ಲಿ ಪ್ರಸಾರವಾಗುತ್ತಿದ್ದ ಹಳ್ಳಿಕಟ್ಟೆ ಕಾರ್ಯಕ್ರಮವನ್ನು ಶಿವರಾಜ್ ಕೆ ಆರ್ ಪೇಟೆ ಅವರು ನಡೆಸಿಕೊಡುತ್ತಿದ್ದರು. ಹಳ್ಳಿಕಟ್ಟೆ ಕಾರ್ಯಕ್ರಮ ಸುಮಾರು ನಾಲ್ಕೈದು ತಿಂಗಳುಗಳ ಕಾಲ ಯಶಸ್ವಿಯಾಗಿ ನಡೆಯುತ್ತಲೇ ಇತ್ತು. ಶಿವರಾಜ್ ಕೆ ಆರ್ ಪೇಟೆ ಅವರು ಒಮ್ಮೆ ರಘುನಂದನ್ ಅವರನ್ನು ನೀವು ಹೇಳಿದ್ದು ನಾವು ಕೇಳಿದ್ದು ಕಾರ್ಯಕ್ರಮದ ಕುರಿತಾಗಿ ಈ ರೀತಿಯಾಗಿ ಹೇಳುತ್ತಾರೆ ಧೀರೇಂದ್ರ ಗೋಪಾಲ್ ಅವರ ಧ್ವನಿಯಲ್ಲಿ ಕಾರ್ಯಕ್ರಮ ಮೂಡಿಬರುತ್ತಿದ್ದ ಈ ಕಾರ್ಯಕ್ರಮ ಯಾಕೆ ಯಶಸ್ವಿಯಾಗಲಿಲ್ಲ? ಯಾಕೆ ನಿಂತುಹೋಯಿತು ? ಎಂದು ಕೇಳುತ್ತಾರೆ. ಧೀರೇಂದ್ರ ಗೋಪಾಲರ ಧ್ವನಿಯನ್ನು ಬೇರೆ ಇನ್ನೊಬ್ಬರು ಯಾರೋ ನೀಡುತ್ತಿದ್ದರು ಅವರು ಇಲ್ಲದೆ ಇರುವ ಕಾರಣಕ್ಕಾಗಿ ಆ ಕಾರ್ಯಕ್ರಮವನ್ನು ನಿಲ್ಲಿಸಲಾಗಿತ್ತು ಎಂದು ಹೇಳುತ್ತಾರೆ. ಶಿವರಾಜ್ ಕೆ ಆರ್ ಪೇಟೆ ಅವರು ಧೀರೇಂದ್ರ ಗೋಪಾಲ್ ಅವರ ಧ್ವನಿಯನ್ನು ತಾನು ನೀಡುವುದಾಗಿ ಕೇಳಿಕೊಂಡರು.

ಆಗ ರಗುನಂದನ್ ಅವರು ಒಂದು ವಾರ ಸಮಯವಕಾಶ ತೆಗೆದುಕೊಂಡು ಬೇರೆ ಇನ್ನೊಂದೆರಡು ಸ್ಕ್ರಿಪ್ಟ್ ಗಳನ್ನು ಬರೆದುಕೊಂಡು ಬಂದು ಶಿವರಾಜ್ ಕೆ ಆರ್ ಪೇಟೆ ಅವರಿಗೆ ನೀಡಿ ಅದನ್ನು ಹೇಳುವಂತೆ ಹೇಳಿ ಅದನ್ನು ರೆಕಾರ್ಡ್ ಕೂಡ ಮಾಡಿದಾಗ ಶಿವರಾಜ್ ಕೆ ಆರ್ ಪೇಟೆ ಅವರ ಧ್ವನಿಯು ದೀರೆಂದ್ರಗೋಪಾಲ್ ಅವರೊಂದಿಗೆ ಬಹಳಷ್ಟು ಹೊಂದಿಕೆ ಆಗುತ್ತಿತ್ತು. ಈ ಕಾರ್ಯಕ್ರಮ ಕೂಡ ಆರಂಭವಾದಾಗಿನಿಂದ ಶಿವರಾಜ್ ಕೆ ಆರ್ ಪೇಟೆ ಅವರ ಜನಪ್ರಿಯತೆ ಹೆಚ್ಚಿಸಿದೆ ಮಾತ್ರವಲ್ಲದೆ ಇವರ ಸಂಬಳವನ್ನೂ ಕೂಡ ಹೆಚ್ಚು ಮಾಡಲಾಯಿತು. ಸುಮಾರು ಎರಡು ವರ್ಷಗಳಿಂದ ನಡೆದುಕೊಂಡು ಬಂದ ಈ ಕಾರ್ಯಕ್ರಮ ಇವರಿಗೆ ಈಗಲೂ ಸಹ ಶಿವರಾಜ್ ಅವರ ಸ್ನೇಹಿತ ಶರತ್ ಚಕ್ರವರ್ತಿ ಎಂಬುವರೆ ಸ್ಕ್ರಿಪ್ಟ್ ಬರೆದುಕೊಡುತ್ತಾರೆ. ಇದೇ ಸಂದರ್ಭದಲ್ಲಿ ಶಿವರಾಜ್ ಕೆ ಆರ್ ಪೇಟೆ ಅವರ ಮದುವೆ ಕೂಡಾ ಆಗುತ್ತದೆ. ಸ್ವಲ್ಪ ದಿನಗಳ ಕಾಲ ಊರಿನಲ್ಲಿ ಇದ್ದು ನಂತರ ಹೆಂಡತಿಯನ್ನು ಕರೆದುಕೊಂಡು ಮತ್ತೆ ಬೆಂಗಳೂರಿಗೆ ಬರುತ್ತಾರೆ. ಎರಡು ತಿಂಗಳುಗಳ ಕಾಲ ಜೀವನ ಸುಗಮವಾಗಿ ಸಾಗುತ್ತಿತ್ತು ನಂತರ ಬೇರೆ ಒಂದು ಖಾಸಗಿ ಚಾನೆಲ್ ಗೆ ಸೇರುತ್ತಾರೆ ಅಲ್ಲಿ ಆರು ತಿಂಗಳು ಇವರಿಗೆ ಸಂಬಳವನ್ನು ನೀಡಲಿಲ್ಲ. ಸಂಬಳ ನೀಡಲಿಲ್ಲವೆಂದು ಜೀವನ ನಡೆಸುವುದನ್ನು ನಿಲ್ಲಿಸಲು ಸಾಧ್ಯವೇ? ಈ ಸಮಯದಲ್ಲಿ ಶಿವರಾಜ್ ಕೆ ಆರ್ ಪೇಟೆ ಅವರಿಗೆ ಅವರ ಪತ್ನಿ ಬೆನ್ನೆಲುಬಾಗಿ ನಿಂತಿದ್ದರೂ. ಮನೆಗೆ ಯಾರೇ ಪರಿಚಿತರು ಅಥವಾ ನೆಂಟರು ಬಂದರೆ ಸಹ ಅವರನ್ನು ಸರಿಯಾಗಿ ಉಪಚಾರ ಮಾಡಿ ಕಳುಹಿಸುತ್ತಿದ್ದರು . ಶಿವರಾಜ್ ಅವರಿಗೆ ಆರು ತಿಂಗಳುಗಳ ಕಾಲ ಸಂಬಳವೇ ನೀಡಲಿಲ್ಲ ಇವರು ಹಾಗೆ ಜೀವನ ನಡೆಸುತ್ತಿದ್ದಾರೆ ಎನ್ನುವಂತಹ ಸತ್ಯ ಅವರ ಸಂಬಂಧಿಕರಿಗೇ ಆಗಲಿ ಅವರ ಮನೆಯವರಿಗಾಗಲಿ ಯಾರಿಗೂ ತಿಳಿದಿರಲಿಲ್ಲ. ಆ ರೀತಿಯಲ್ಲಿ ಶಿವರಾಜ್ ಅವರ ಪತ್ನಿ ಮನೆಯನ್ನು ನಿಭಾಯಿಸಿಕೊಂಡು ಹೋಗುತ್ತಿದ್ದರಂತೆ.

ಕಷ್ಟ ಅಂತ ಬಂದಾಗ ನಮಗೆ ಸಂಬಂಧಿಕರ ಗಿಂತ ಸ್ನೇಹಿತರು ಹೆಚ್ಚಾಗಿ ಸಹಾಯಕ್ಕೆ ಬರುತ್ತಾರೆ. ಶಿವರಾಜ್ ಕೆ ಆರ್ ಪೇಟೆ ಅವರಿಗೂ ಕೂಡ ಕಷ್ಟ ಬಂದಾಗ ಇವರ ಕೆಲವು ಸ್ನೇಹಿತರು ಸಹಾಯ ಮಾಡಿದರು. ಆದರೆ ಇನ್ನು ಕೆಲವು ಸ್ನೇಹಿತರಿಗೆ ಇವರು ಫೋನ್ ಮಾಡಿದರೆ ಹಣ ಕೇಳುವುದರ ಸಲುವಾಗಿಯೇ ಫೋನ್ ಮಾಡುತ್ತಿದ್ದಾನೆ ಎನ್ನುವ ವರ್ತನೆಯನ್ನು ತೋರಿಸಿದರಂತೆ. ಇವರ ಬಳಿ ಇರುವಂತಹ ಬಂಗಾರದ ಒಡವೆಗಳನ್ನು ಎಲ್ಲವನ್ನು ಮಾರಿ ಆರು ತಿಂಗಳುಗಳ ಕಾಲ ಹೇಗೋ ಜೀವನ ಸಾಗಿಸಿದರಂತೆ. ಮತ್ತೆ ಪುನಹ ಇವರು ಕೆಲಸ ಆರಂಭಿಸಿದ ಜಾಗ ಅಂದರೆ ಟಿವಿ9 ಚಾನೆಲ್ ಗೆ ಬಂದು ಅಲ್ಲಿ ಮತ್ತೆ ತಮ್ಮ ಕೆಲಸವನ್ನು ಮುಂದುವರಿಸಿದರು. ನಂತರ ಇವರಿಗೆ ವಂಶಿಕ್ ಎಂಬ ಮಗ ಹುಟ್ಟುತ್ತಾನೆ ಮಗ ಹುಟ್ಟಿದ ಆರು ತಿಂಗಳಿಗೆ ಆರಂಭವಾಗಿದ್ದೇ ಕಾಮಿಡಿ ಕಿಲಾಡಿಗಳು. ಕಾಮಿಡಿ ಕಿಲಾಡಿಗಳು ಪ್ರೋಗ್ರಾಮ್ ನಲ್ಲಿ ಸೆಲೆಕ್ಟ್ ಆಗಿ ಅಲ್ಲಿಂದ ತಮ್ಮ ಜೀವನದ ದಿಕ್ಕನ್ನೇ ಬದಲಾಯಿಸಿಕೊಂಡ ಶಿವರಾಜ್ ಕೆ ಆರ್ ಪೇಟೆ ಅವರು ನಂತರ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋದ ವಿನ್ನರ್ ಕೂಡ ಆಗುತ್ತಾರೆ ಹಾಗೆ ಅಲ್ಲಿಂದ ಕನ್ನಡದ ಚಲನಚಿತ್ರಗಳಲ್ಲಿ ಅಭಿನಯ ಕೂಡ ಮಾಡುತ್ತಾರೆ. ಈ ರೀತಿಯಾಗಿ ಇಂದು ಕನ್ನಡ ಚಲನಚಿತ್ರ ರಂಗದಲ್ಲಿ ಒಬ್ಬ ಹಾಸ್ಯನಟನಾಗಿ ಶಿವರಾಜ್ ಕೆ ಆರ್ ಪೇಟೆ ಅವರ ಬೆಳೆದು ನಿಂತಿದ್ದಾರೆ.

Leave a Reply

Your email address will not be published. Required fields are marked *