ಹೋಟೆಲ್ ಗಳಲ್ಲಿ ಸ್ವಲ್ಪ ಬಳಸಿ ಬಿಟ್ಟ ಸೋಪನ್ನು ಏನ್ಮಾಡ್ತಾರೆ ಗೊತ್ತೇ

0 0

ಪ್ರತಿಯೊಬ್ಬರು ಕೂಡ ಒಂದಲ್ಲ ಒಂದು ಸಮಯ ಸಂದರ್ಭದಲ್ಲಿ ಹೋಟೆಲಿಗೆ ಭೇಟಿ ನೀಡಿಯೆ ನೀಡಿರುತ್ತಾರೆ ಹಾಗೂ ಉಳಿದುಕೊಂಡಿರುತ್ತಾರೆ. ಹೋಟೆಲ್ ಅಲ್ಲಿ ಉಳಿದು ಕೊಂಡಂತಹ ಜನರಿಗೆ ಹೋಟೆಲ್ ನಲ್ಲಿಯೂ ಕೂಡ ಪ್ರತಿಯೊಬ್ಬರಿಗೂ ಬೇರೆ ಬೇರೆ ಸೋಪು , ಶಾಂಪು ನೀಡಿರುತ್ತಾರೆ ಹಾಗೂ ಸ್ನಾನಕ್ಕೆ ಬೇಕಾದಂತಹ ಇತರ ವಸ್ತುಗಳನ್ನು ಕೂಡ ನೀಡಿರುತ್ತಾರೆ ಆದರೆ ಹೋಟೆಲ್ ಅವರು ನೀಡಿದ ಎಲ್ಲ ವಸ್ತುಗಳನ್ನು ಕೂಡ ನಾವು ಪೂರ್ತಿಯಾಗಿ ಉಪಯೋಗಿಸಲು ಸಾಧ್ಯವಿಲ್ಲ. ಕೆಲವೊಂದಿಷ್ಟು ಜನರು ಹೋಟೆಲ್ ನವರೂ ನಮಗೆ ಉಪಯೋಗಕ್ಕೆಂದು ಕೊಟ್ಟಂತಹ ವಸ್ತುಗಳನ್ನು ಅರ್ಧ ಮಾತ್ರ ಬಳಸಿ ಇನ್ನುಳಿದ ಸೋಪು ಶಾಂಪು ಇತ್ಯಾದಿಗಳನ್ನು ಕವರ್ನಲ್ಲಿ ಪ್ಯಾಕ್ ಮಾಡಿಕೊಂಡು ತಾವು ಮನೆಗೆ ತೆಗೆದುಕೊಂಡು ಹೋಗುತ್ತಾರೆ. ಇನ್ನು ಕೆಲವು ಜನ ಹೋಟೆಲ್ನಲ್ಲಿ ಅರ್ಧ ಉಪಯೋಗಿಸಿ ಬಿಟ್ಟಂತಹ ಸೋಪು ಶಾಂಪೂ ಹಾಗೂ ಇನ್ನಿತರೆ ವಸ್ತುಗಳನ್ನು ಹಾಗೆಯೇ ಬಿಟ್ಟು ಹೋಗುತ್ತಾರೆ. ಈ ರೀತಿಯಾಗಿ ಅರ್ಧ ಉಪಯೋಗಿಸಿ ಬಿಟ್ಟಂತಹ ಸೋಪು ಹಾಗೂ ಶಾಂಪೂಗಳನ್ನು ಹೋಟೆಲ್ ಅವರು ಏನು ಮಾಡುತ್ತಾರೆ ಎನ್ನುವುದು ಯಾರಿಗೆ ತಾನೆ ಗೊತ್ತು? ಅರ್ಧ ಉಪಯೋಗಿಸಿ ಬಿಟ್ಟಂತಹ ಸೋಪಾನವೂ ಶಾಂತಿಗಳನ್ನು ಹೋಟೆಲ್ ಅವರು ಏನು ಮಾಡುತ್ತಾರೆ ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಹೋಟೆಲಿನಲ್ಲಿ ಜನರ ಬಳಕೆಗೆ ಎಂದು ನೀಡಿದಂತಹ ಸೋಪು ಹಾಗೂ ಇನ್ನಿತರ ವಸ್ತುಗಳನ್ನು ಅವರು ಬಳಸಿದ ನಂತರ ಉಳಿದ ಅರ್ಧ ಭಾಗವನ್ನು ಏನು ಮಾಡಬೇಕು ? ಅಥವಾ ಏನು ಮಾಡಬಹುದು ಎನ್ನುವ ಆಲೋಚನೆ ಮೊದಲು ಹುಟ್ಟಿಕೊಂಡಿದ್ದು ಅಮೆರಿಕದಲ್ಲಿ. ಕ್ಲೀನ್ ದ ವರ್ಲ್ಡ್ ಎನ್ನುವ ಆರ್ಗನೈಜೇಷನ್ ಇದು ಗ್ಲೋಬಲ್ ಸೋಪ್ ಎನ್ನುವ ಸಂಸ್ಥೆಯ ಜೊತೆ ಸೇರಿ ಈಗಾಗಲೇ ಉಪಯೋಗಿಸಿ ಬಿಟ್ಟಂತಹ ಸೋಪು ಶಾಂಪೂ ಹಾಗೂ ಇತರ ವಸ್ತುಗಳನ್ನು ಹೋಟೆಲಿನ ಮಾಲೀಕರಿಂದ ಸಂಗ್ರಹಣೆ ಮಾಡಿ ಅದನ್ನು ಮತ್ತೆ ಉಪಯೋಗಿಸುತ್ತಾರೆ. ಉಪಯೋಗಿಸಿದ ವಸ್ತುಗಳನ್ನು ರಿಸೈಕಲ್ ಮಾಡಿ ಹೊಸ ಹಾಗೂ ಇನ್ನಿತರ ವಸ್ತುಗಳನ್ನು ತಯಾರಿಸಿ ಈ ಸಂಸ್ಥೆ ಅದನ್ನು ಸ್ಲಂ ಏರಿಯಾಗಳಲ್ಲಿ ವಾಸವಾಗಿರುವ ಅಂತಹ ಬಡ ಜನರಿಗೆ ಉಚಿತವಾಗಿ ಈ ವಸ್ತುಗಳನ್ನು ಹಾಗೂ ಸೋಪುಗಳನ್ನು ನೀಡುತ್ತಾರೆ.

ಇನ್ನು ಕೆಲವು ದೊಡ್ಡ ದೊಡ್ಡ ಹೋಟೆಲುಗಳಲ್ಲಿ ಇಂತಹ ವಸ್ತುಗಳನ್ನು ಅನಾಥಾಶ್ರಮಕ್ಕೆ ಅಥವಾ ಬಡವರಿಗೆ ಉಚಿತವಾಗಿ ನೀಡುತ್ತಾರೆ. ಹಾಗಾಗಿ ಇನ್ನು ಮುಂದೆ ಯಾರೇ ಯಾವುದೇ ಹೋಟೆಲಿಗೆ ಹೋದರೂ ಅಲ್ಲಿ ಉಳಿದುಕೊಂಡವರು ಹೋಟೆಲಿನಲ್ಲಿ ನೀಡಿದಂತಹ ವಸ್ತುಗಳನ್ನು ಅವುಗಳನ್ನು ಉಪಯೋಗಿಸಿ ಇನ್ನುಳಿದ ಅರ್ಧ ಭಾಗವನ್ನು ಹಾಗೂ ಅಲ್ಲಿಯೆ ಮರೆತು ಬಂದೆ ಎಂದು ಹೇಳಬೇಡಿ. ಏಕೆಂದರೆ ಅದು ಮತ್ತೆ ಹೊಸ ರೂಪವನ್ನು ಪಡೆದುಕೊಂಡು ಇನ್ಯಾವುದೋ ಬೇರೆ ವ್ಯಕ್ತಿಗಳಿಗೆ ಉಪಯೋಗ ಆಗಲಿದೆ.

Leave A Reply

Your email address will not be published.