ಬಿಗ್ ಬಾಸ್ ಸೀಸನ್ 8 ರ ಫೈನಲ್ ಸ್ಪರ್ಧಿಗಳು ಇವರೇ?

0 1

ಕಲರ್ಸ್ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ. ಕಿಚ್ಚ ಸುದೀಪ್ ನಿರೂಪಣೆಯ ಈ ಶೋ ಅದೆಷ್ಟೋ ಕನ್ನಡಿಗರ ಮನ ಸೆಳೆದಿದೆ, ಈಗಾಗಲೇ ಬಿಗ್ ಬಾಸ್ ಸೀಸನ್ 7 ಮುಗಿಸಿ ಸೀಸನ್ 8 ಕೆ ಭಾರಿ ತಯಾರಿ ಆರಂಭ ಗೊಂಡಿದೆ ಬೇರೆ ಬೇರೆ ಕ್ಷೇತ್ರಳಲ್ಲಿ ಕೆಲಸಮಾಡಿ ಬಂದ ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ಈ ಬಾರಿ ಯಾರೆಲ್ಲ ಬಿಗ್ ಬಾಸ್ ಮನೆಗೆ ಬರಬಹುದು ಎನ್ನುವ ಕುತೂಹಲ ಎಲ್ಲರಲ್ಲಿಯು ಮನೆಮಾಡಿದೆ. ಇನ್ನೂ ಯಾರೆಲ್ಲ ಬರುತ್ತಾರೆ ಎಂಬ ಖಾತರಿ ಆಗಿಲ್ಲ ಆದರೆ ಇವರು ಬರಬಹುದು ಎನ್ನುವ ಸುದ್ದಿ ಕೇಳಿ ಬರುತ್ತಿದೆ, ಹಾಗಾದರೆ ಯಾರೆಲ್ಲ ಬರುತ್ತಾರೆ ಅನ್ನೋ ಸಂಪೂರ್ಣ ಮಾಹಿತಿಯನ್ನು ಮುಂದೆ ತಿಳಿಸುತ್ತೇವೆ ನೋಡಿ.

ಅಮೃತವರ್ಷಿಣಿ ಧಾರಾವಾಹಿಯ ಮೂಲಕ ಎಲ್ಲರ ಮನಗೆದ್ದಂತಹ ರಜನಿಯವರು ಈ ಬಾರಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಾರೆ ಅನ್ನೋ ಸುದ್ದಿ ಕೇಳಿಬರುತ್ತಿದೆ, ಇನ್ನು ರೇಡಿಯೋ ಕಾರ್ಯಕ್ರಮದ ಮೂಲಕ ಎಲ್ಲರ ಮನ ಗೆದ್ದಿರುವ RJ ಸುನಿಲ್, ಇನ್ನೂ ನಟ ರಾಕೇಶ್ ಅಡಿಗ ಇತ್ತೀಚಿಗೆ ಮಾ ದಕದ್ರವ್ಯ ಕುರಿತು ಮಾತನಾಡಿ ಟ್ರೊಲ್ ಆದವರು ವಿವಾದಕ್ಕೆ ಸಿಲುಕಿದವರನ್ನು ಹೆಚ್ಚಾಗಿ ಬಿಗ್ ಬಾಸ್ ಗೆ ಕರೆಯಲಾಗುತ್ತದೆ ಹಾಗಾಗಿ ನಟ ರಾಕೇಶ್ ಅಡಿಗ ಈ ಬಾರಿ ಬಿಗ್ ಬಾಸ್ ಗೆ ಬರುತ್ತಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ ಕಾಮಿಡಿ ಕಿಲಾಡಿ ಖ್ಯಾತಿ ಆಗಿರುವ ನಯನ ಅವರು ಕೂಡಾ ಬಿಗ್ ಬಾಸ್ ಸ್ಪರ್ಧಿಯಾಗಿ ಬರುತ್ತಾರೆ ಎಂದು ಹೇಳಲಾಗುತ್ತಿದೆ ಅದೇ ರೀತಿ ಇತ್ತೀಚಿಗೆ ವಿವಾದಗಳಮೂಲಕ ಪ್ರಸಿದ್ದಿಯದ ನಟಿ ನಿವೇದಿತಾ ಕೂಡಾ ಬರುವುದು ಬಹುತೇಕ ಪಕ್ಕ ಎನ್ನಲಾಗುತ್ತಿದೆ ಇನ್ನು ಜನರ ಅತ್ಯಂತ ನೆಚ್ಚಿನ ನ್ಯೂಸ್ ಆ್ಯಂಕರ್ ಆಗಿರುವಂತಹ ರಮಾಕಾಂತ್ ಅವರು ಈ ಬಾರಿ ಬಿಗ್ ಬಾಸ್ ನಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನಲಾಗುತ್ತಿದೆ.

ಇನ್ನು ಮಜಾ ಟಾಕೀಸ್ ಅಲ್ಲಿ ಎಲ್ಲರನ್ನೂ ಮನರಂಜಿಸುತ್ತಿರುವ ವಿಶ್ವ ಅವರು ಈ ಬಾರಿ ಬಿಗ್ ಬಾಸ್ ಅಲ್ಲಿ ಬರಲಿದ್ದಾರೆ ಎಂದು ಹೇಳಗುತ್ತಿದೆ ಇನ್ನು ನಾನು ಎಂದರೆ ನಂಬರ್ ಅಂತ ಹೇಳುವ ಅರ್ಯವರ್ದನ್ ಗುರೂಜಿ ಈ ಬಾರಿ ಬಿಗ್ ಬಾಸ್ ನಲ್ಲಿ ಕಾಣಿಸಿಕೊಳ್ಳುವ ಚಾನ್ಸ್ ಹೆಚ್ಚಿದೆ ಎಂದು ಹೇಳಲಾಗುತ್ತಿದೆ ಇನ್ನು ಯಾರೇ ನೀ ಮೋಹಿನಿ ಧಾರಾವಾಹಿಯ ಖ್ಯಾತಿ ಮತ್ತು ಇದಕ್ಕೂ ಮುನ್ನ ಲಕುಮಿ ಧಾರಾವಾಹಿಯಲ್ಲಿ ನಟಿಸಿರುವ ಸುಷ್ಮಾ ಶೇಕರ್ ಇವರು ಈ ಬಾರಿ ಶೇಕಡ ತೊಂಬತ್ತರಷ್ಟು ಬಿಗ್ ಬಾಸ್ ಮನೆಗೆ ಬರೋದು ಪಕ್ಕ ಎಂದು ಹೇಳಲಾಗುತ್ತಿದೆ ಇನ್ನು ಅಗ್ನಿಶಾಕ್ಷಿ ಧಾರಾವಾಹಿಯ ಸುಕೃತ ನಾಗ್ ಕೂಡಾ ಈ ಬಾರಿ ಕಾಣಿಸಿಕೊಳ್ಳುವ ಸಾಧ್ಯತೆ ಬಹಳಷ್ಟು ಇದೆ ಎನ್ನಲಾಗುತ್ತಿದೆ ಅದೇ ರೀತಿ ರಾಧಾ ರಮಣ ಧಾರಾವಾಹಿಯಲ್ಲಿ ಅಭಿನಯಿಸಿರುವ ಶ್ವೇತ ಆರ್ ಪ್ರಶದ್ ಅವರು ಈ ಬಾರಿ ಬಿಗ್ ಬಾಸ್ ಗೆ ಬರಲಿದ್ದಾರೆ ಎಂದು ಬಹಳಷ್ಟು ಸುದ್ದಿ ಕೇಳಿ ಬರುತ್ತಿದೆ.

ರಾಪ್ ಸಿಂಗರ್ ಅಲೋಕ್ ಅವರು ಬರಲಿದ್ದಾರೆ ಇವರ ಹಾಡು ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ ಇವರ ಹಾಡು ಕೇಳಲು ಆದರೂ ಕಲರ್ಸ್ ಕನ್ನಡ ವಾಹಿನಿಯವರು ಅಲೋಕ್ ಅವರನ್ನ ಕರಿಯಬಹುದು ಎನ್ನಲಾಗುತ್ತಿದೆ ಇದು ಕೇವಲ ಸಂಭವಿಯರ ಪಟ್ಟಿ ಅಷ್ಟೇ, ನೂರಕ್ಕೆ ನೂರರಷ್ಟು ಇವರೇ ಬರುತ್ತಾರೆ ಎಂದು ಹೇಳಲು ಆಗುವದಿಲ್ಲ. ಯಾವುದಕ್ಕೂ ಕಲರ್ಸ್ ಕನ್ನಡ ವಾಹಿನಿ ಕಡೆಯಿಂದ ಅಧಿಕೃತಮಾಹಿತಿ ಬರಬೇಕಾಗಿದೆ ಹಾಗು ಈ ಬಾರಿಯ ಸೀಸನ್ 8 ರಲ್ಲಿ ಯಾರು ಗೆಲ್ಲುತ್ತಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ,

Leave A Reply

Your email address will not be published.