ಕಸದ ಬುಟ್ಟಿಯಲ್ಲಿ ಒಂದು ಕೆಜಿ ಚಿನ್ನ ಸಿಕ್ತು ಆದ್ರೆ ಮುಂದೆ ಏನ್ ಆಯ್ತು ಗೊತ್ತೇ?

0 2

ಜೀವನದಲ್ಲಿ ಕೆಲವು ಅನಿರೀಕ್ಷಿತ ಘಟನೆಗಳು ನಡೆಯುತ್ತದೆ. ಕೆಲವೊಂದು ಒಳ್ಳೆಯ ಪರಿಣಾಮವನ್ನು ಉಂಟು ಮಾಡುತ್ತವೆ. ಕೆಲವೊಂದು ಕೆಟ್ಟ ಪರಿಣಾಮವನ್ನು ಉಂಟು ಮಾಡುತ್ತವೆ. ಆದರೆ ಯಾವುದೇ ರೀತಿಯ ನಿರೀಕ್ಷೆಯಿಲ್ಲದೆ ಆಗುತ್ತದೆ. ಆದ್ದರಿಂದ ನಾವು ಇಲ್ಲಿ ಕೆಲವು ಅನಿರೀಕ್ಷಿತ ಘಟನೆಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಒಂದು ಕಾಲದಲ್ಲಿ ಒಬ್ಬ ಹೆಂಗಸು ಸೊಂಟದಲ್ಲಿ ಮಗು ಇಟ್ಟುಕೊಂಡು ತಲೆಯ ಮೇಲೆ ಕಲ್ಲು ಹೋರುತ್ತಿದ್ದಳು. ಆದರೆ ಅವಳು ಈಗ ಒಂದು ಶ್ರೇಷ್ಠ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಳೆ. ಆರ್ಥಿಕ ಸಂಕಷ್ಟದಲ್ಲಿರುವ ಇವಳು ಪೊಲೀಸ್ ಎಂಬ ಶ್ರೇಷ್ಠ ಹುದ್ದೆಯನ್ನು ಸೇರಿ ತನ್ನ ಸಾಹಸವನ್ನು ಮೆರೆದಿದ್ದಾಳೆ. ಅವಳ ಹೆಸರು ಪದ್ಮಶಿಲಾ. ಅವಳು ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆದು ಈಗ ಇನ್ಸ್ಪೆಕ್ಟರ್ ಆಗಿದ್ದಾಳೆ. 2009ರಲ್ಲಿ  ಪದವಿ ಮುಗಿಸಿ 2013ರಲ್ಲಿ ಇ.ಎಸ್.ಐ ಆಗಿದ್ದಾಳೆ.

ಪುಣೆಯಲ್ಲಿ ರೇಖಾ ಎಂಬ ಮಹಿಳೆ ಒಂದು ದಿನ ದೀಪಾವಳಿ ಹಬ್ಬದ ಖುಷಿಯಲ್ಲಿ ಮನೆಯನ್ನು ಸ್ವಚ್ಛ ಮಾಡುತ್ತಿದ್ದಳು. ಸ್ವಚ್ಛ ಮಾಡಿದ ನಂತರ ಕಸವನ್ನು ಒಗೆಯುವುದರ ಜೊತೆಗೆ ಬಂಗಾರವನ್ನು ಒಗೆದಿದ್ದಳು. ಕಸ ಒಗೆದ ಎರಡು ಗಂಟೆಯ ನಂತರ ಅವಳಿಗೆ ನೆನಪಾಯಿತು. ಅದರಲ್ಲಿ ಸುಮಾರು ಮೂರು ಲಕ್ಷ ಬೆಲೆಯ ಆಭರಣ ಇತ್ತು.ಇದು ತಿಳಿದ ತಕ್ಷಣವೇ ಆರೋಗ್ಯ ಇಲಾಖೆಗೆ ದೂರು ನೀಡಿದ್ದಾರೆ ಆದರೆ ಆ ಹೊತ್ತಿಗೆ ಪೌರಕಾರ್ಮಿಕರು ಕಸವನ್ನು ಎತ್ತಿಕೊಂಡು ಹೋಗಿದ್ದರು ನಂತರ 18 ಟನ್ ಗಳಷ್ಟು ಕಸದ ಚೀಲವನ್ನು ಹುಡುಕಿದಾಗ ಈ ಚಿನ್ನ ಸಿಕ್ಕಿತು.

ಪಾರಿವಾಳದ ಓಟದ ಸ್ಪರ್ಧೆ ನಡೆಯುವುದು ಎಂದರೆ ಕೆಲವರಿಗೆ ಅತಿ ಹೆಚ್ಚು ಆಸಕ್ತಿ ಇರುತ್ತದೆ ಬೆಲ್ಜಿಯಂನಲ್ಲಿ ಒಂದು ಪಾರಿವಾಳವನ್ನು ಸ್ಪರ್ಧೆಗೆ ಇಡಲಾಗಿತ್ತು. ಇದರ ಹೆಸರು ನ್ಯೂ ಕಿಮ್ ಎಂದು ಆಗಿತ್ತು. ಹರಾಜಿನಲ್ಲಿ ಕಡಿಮೆಯಿಂದ ಎಷ್ಟೋ ಹೆಚ್ಚಿನ  ಹಣಕ್ಕೆ  ಕರೆಯಲಾಗಿತ್ತು. ಇದರ ವಿಶೇಷವೆಂದರೆ 1.9 ಯುಎಸ್ ಡಾಲರ್ ಗೆ ಮಾರಾಟವಾಗಿದೆ. ಚೀನಾದ ಒಬ್ಬ ಉದ್ಯಮಿ ಪಾರಿವಾಳವನ್ನು ಖರೀದಿ ಮಾಡಿದ್ದಾನೆ. ಇದು ಹಾಗೆಯೇ ನೋಡಲು ಬಹಳ ಸುಂದರವಾಗಿದೆ.

ಕ್ಯಾಲಿಫೋರ್ನಿಯಾದಲ್ಲಿ ಇಬ್ಬರು ಸಮುದ್ರದಲ್ಲಿ ದೋಣಿಯನ್ನು ತೆಗೆದುಕೊಂಡು ಹೋಗಿ ಖುಷಿಯನ್ನು ಅನುಭವಿಸುತ್ತಿದ್ದರು. ಇಬ್ಬರೂ ಸುರಕ್ಷಿತ ಅಂತರದಲ್ಲಿ ಇದ್ದೇವೆ ಎಂದು ತಿಳಿದುಕೊಂಡಿದ್ದರು. ಖುಷಿಯಲ್ಲಿ ಸಾಗುತ್ತಿದ್ದಾಗ ಒಂದು ತಿಮಿಂಗಿಲ ಬಾಯಿತೆರೆದು ಎದುರಿಗೆ ಬಂದಿತ್ತು. ಆದರೆ ಇವರ ಸಮಯ ಬಹಳ ಚೆನ್ನಾಗಿತ್ತು. ತಮ್ಮ ಪ್ರಾಣವನ್ನು ಉಳಿಸಿಕೊಂಡು ಬಂದಿದ್ದಾರೆ. ಇವರಿಬ್ಬರು ಸಾವಿನ ಅಂಚಿನಿಂದ ಉಳಿದು ಬಂದಿದ್ದಾರೆ. ಹೀಗೆ ಕೆಲವೊಂದು ಅನಿರೀಕ್ಷಿತ ಘಟನೆಗಳು ಸಂಭವಿಸುತ್ತವೆ.

Leave A Reply

Your email address will not be published.