Kannada Astrology: ನಿಮಗೆ ಕೆಲಸದಲ್ಲಿ ಉನ್ನತ ಸ್ಥಾನಕ್ಕೆ ಏರಬೇಕು, ಎಲ್ಲರು ನಿಮ್ಮನ್ನು ಗೌರವದಿಂದ ಕಾಣಬೇಕು ಎನ್ನುವ ಆಸೆ ಸಹಜವಾಗಿ ಇರುತ್ತದೆ ಅಲ್ಲವೇ? ನಿಮ್ಮ ಸುತ್ತಮುತ್ತಲಿನವರಿಗಿಂತ ನೀವು ಮೇಲು ಎಂದು ತೋರಿಸಿಕೊಳ್ಳುವ ಪ್ರಸಂಗವನ್ನು ನೀವು ಎದುರು ನೋಡುತ್ತಿರುವಿರಿ ಎನ್ನುವುದಾದರೆ ನೀವು ಈ ಲೇಖನವನ್ನು ಕೊನೆಯ ತನಕ ಓದಲೇ ಬೇಕು. ಯಾಕೆಂದರೆ ನಿಮ್ಮ ರಾಶಿಯಮೇಲು ಸಹ ಅಂತಹ ಅದೃಷ್ಟವು ಹುಟ್ಟಿನಿಂದಲೇ ಬಂದಿರಬಹುದು. ಒಂದು ವೇಳೆ ಅದೃಷ್ಟವಿಲ್ಲ ಎನ್ನುವುದಾದರೆ ಹೀಗೆ ಮಾಡಿ ಸಾಕು. ನೀವು ಸಹ ಅದೃಷ್ಟವಂತರಾಗುತ್ತಿರಿ.

ಕೆಲವರು ಹುಟ್ಟಿನಿಂದಲೇ ಅದೃಷ್ಟವನ್ನು ಪಡೆದು ಬಂದಿರುತ್ತಾರೆ. ಅವರಿಗೆ ಮನೆಯಲ್ಲಿ ಹಾಗೂ ಹೊರಗಡೆ ಪ್ರೀತಿ ಸ್ನೇಹಗಳು ಯಥೇಚ್ಛವಾಗಿ ದೊರೆತಿರುತ್ತವೆ. ಅವರನ್ನು ಅಪ್ಪ, ಅಮ್ಮ, ಸಹೋದರ ಸಂಬಂಧ ಹಾಗೂ ನೆಂಟರು ಸಹ ಪ್ರೀತಿಯಿಂದ ಕಾಣುತ್ತಾರೆ. ಅವರ ಸ್ನೇಹಿತ ಬಳಗವು ಸಹ ದೊಡ್ಡದಾಗಿಯೆ ಇರುತ್ತವೆ. ಯಾಕೆಂದರೆ ಅವರು ಜನ್ಮತಃ ಪ್ರೀತಿ ವಿಶ್ವಾಸಗಳನ್ನು ಪಡೆದುಕೊಳ್ಳುವ ಯೋಗವನ್ನು ಪಡೆದಿರುತ್ತಾರೆ. ಹಾಗಾಗಿ ಅವರ ಸುತ್ತಲಿನ‌ ವಾತಾವರಣವು ಕೂಡ ಪ್ರೇಮದಿಂದಲೇ ಕೂಡಿರುತ್ತದೆ.

ಇವರು ಉದ್ಯೋಗ ಮಾಡುವ ಜಾಗದಲ್ಲಿ ಶಕ್ತಿಗಿಂತ ಹೆಚ್ಚಾಗಿ ತಮ್ಮ ಯುಕ್ತಿಯನ್ನು ಬಳಸಿಕೊಂಡು ಕೆಲಸವನ್ನು ಸಾಧಿಸಿಕೊಂಡು ಉನ್ನತಿಯನ್ನು ಹೊಂದುತ್ತಾರೆ. ಏಕೆಂದರೆ ಇವರನ್ನು ಇವರ ರಾಶಿಯ ಅದೃಷ್ಟವು ಕಾಯುತ್ತಿರುತ್ತದೆ. ಕೇವಲ ಇವರಷ್ಟೇ ಅಲ್ಲ, ಇವರ ಜೊತೆಯಲ್ಲಿ ಸ್ನೇಹ ಮಾಡಿದವರು ಸಹ ಇವರ ಜೊತೆಯಲ್ಲಿ ಮೇಲಕ್ಕೆ ಬರುತ್ತಾರೆ‌. ಹಾಗಾಗಿ ನಿಮ್ಮ ರಾಶಿಯಲ್ಲಿ ಅದೃಷ್ಟವು ಇಲ್ಲದಿದ್ದರೂ ನೀವು ಇಂತವರ ಸ್ನೇಹ ಸಂಪಾದಿಸಿಕೊಳ್ಳುವುದರಿಂದ ಒಳ್ಳೆಯ ಸ್ಥಾನವನ್ನು ಪಡೆಯಬಹುದು.

ಇದನ್ನೂ ಓದಿ..200 ವರ್ಷಗಳ ನಂತರ ಈ 4 ರಾಶಿಗಳ ಮೇಲೆ ಆಂಜನೇಯ ಸ್ವಾಮಿಯ ಕೃಪಾಕಟಾಕ್ಷ

ಈ ಮೂರು ರಾಶಿಯಲ್ಲಿ ಜನಿಸಿದವರು ಹುಟ್ಟಿನಿಂದಲೇ ರಾಜಯೋಗವನ್ನು ಪಡೆದಿರುತ್ತಾರೆ. ಅದರಿಂದ ಇವರಿಗೆ ಸೋಲು ಎನ್ನುವುದು ತಿಳಿದಿರುವುದಿಲ್ಲ. ಇವರ ಜೊತೆಯಲ್ಲಿ ಇದ್ದವರು ಸಹ ಇವರ ಅದೃಷ್ಟದಲ್ಲಿ ಪಾಲುದಾರರಾಗುತ್ತಾರೆ‌‌. ಇಂತಹ ಅದೃಷ್ಟದ ರಾಶಿಯಲ್ಲಿ ಮೊದಲ ರಾಶಿ ಕುಂಭರಾಶಿ‌. ಕುಂಭರಾಶಿಯವರು ಸ್ವಭಾವತಃ ಶಾಂತರಾಗಿರುತ್ತಾರೆ. ಹೆಚ್ಚಾಗಿ ಇವರು ಏಕಾಂತ ಪ್ರಿಯರು. ಇವರಿಗೆ ಎಂತಹುದೆ ಕಷ್ಟಗಳು ಬಂದರೂ ಸಹ ಇವರು ಶಾಂತವಾಗಿ ಎಲ್ಲವನ್ನು ಎದುರಿಸುತ್ತಾರೆ‌. ಇವರು ಎಲ್ಲವನ್ನು ಸಕಾರಾತ್ಮಕ ಭಾವನೆಯಿಂದ ನೋಡುತ್ತಾರೆ. ಹಾಗಾಗಿ ಇವರನ್ನು ನಕಾರಾತ್ಮಕ ಪರಿಣಾಮಗಳು ಬಾಧಿಸುವುದಿಲ್ಲ.

ಅದೃಷ್ಟವಂತ ರಾಶಿಗಳಲ್ಲಿ ಎರಡನೇಯದು ತುಲಾ ರಾಶಿ. ಇವರು ಅತಿ ಚಿಕ್ಕ ಕೆಲಸವನ್ನು ಸಹ ಅತೀ ಮುತುವರ್ಜಿಯಿಂದ ಮಾಡುತ್ತಾರೆ‌. ಯಾವುದೇ ಸಮಸ್ಯೆಯನ್ನು ಇವರು ಸೂಕ್ಷ್ಮವಾಗಿ ನೋಡುವುದರಿಂದ ಬಹು ಬೇಗನೇ ಪರಿಹಾರವನ್ನು ಕಂಡುಕೊಳ್ಳುತ್ತಾರೆ. ಮತ್ತೆ ಇವರು ಬುದ್ಧಿವಂತರಾಗಿರುತ್ತಾರೆ. ಎಲ್ಲರನ್ನು ತಮ್ಮ ಮಾತುಗಳಿಂದಲೇ ಮೋಡಿ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗುತ್ತಾರೆ. ಇವರ ಸುತ್ತಲು ಯಾವಾಗಲು ಜನರು ಇರುತ್ತಾರೆ. ಇವರಿಗೆ ಆಸ್ತಿ ಅಂತಸ್ತು ಹುಟ್ಟಿನಿಂದಲೇ ಬಂದಿರುವುದರಿಂದ ಹೆಚ್ಚು ಕಷ್ಟ ಪಡಬೇಕಾಗಿಯೂ ಬರುವುದಿಲ್ಲ.

ಇದನ್ನೂ ಓದಿ..ವರ್ಷದ ಮೊದಲ ಸೂರ್ಯ ಗ್ರಹಣ ಈ 3 ರಾಶಿಯವರಿಗೆ ಹೊತ್ತು ತರಲಿದೆ ಅದೃಷ್ಟ

ಮೂರನೇಯ ರಾಶಿ ಸಿಂಹ ರಾಶಿ‌. ರಾಶಿಯ ಹೆಸರೆ ಸೂಚಿಸುವಂತೆ ಇವರಿಗೆ ಬಹಳ ಧೈರ್ಯ. ಈ ರಾಶಿಯಲ್ಲಿ ಜನಿಸಿದವರು ಬಹು ಪ್ರತಿಭೆ ಉಳ್ಳಂತವರು. ಇವರಿಗೆ ಸಣ್ಣ ವಯಸ್ಸಿನಿಂದಲೇ ಸಂಗೀತ ನಾಟಕಗಳಲ್ಲಿ ಬಹಳ ಆಸಕ್ತಿಯಿರುತ್ತದೆ. ಹಾಗೂ ಆ ಕ್ಷೇತ್ರದಲ್ಲಿ ಇವರು ಹೆಸರನ್ನು ಸಹ ಸಂಪಾದಿಸುತ್ತಾರೆ. ಇವರು ಯಾವಾಗಲೂ ಹೊರ ಪ್ರಪಂಚವನ್ನು ನೋಡಲು ಬಯಸುತ್ತಾರೆ‌. ಇವರಿಗೆ ಸಾಹಸ ಕಾರ್ಯಗಳಲ್ಲಿ ಹುಚ್ಚು ಎನ್ನುವಷ್ಟು ಆಸಕ್ತಿಯಿದ್ದು, ತಾವು ಮಾಡುವ ಎಲ್ಲ ಕೆಲಸಗಳಲ್ಲಿಯು ಸಾಕಷ್ಟು ತೊಂದರೆಗಳನ್ನು ತಂದುಕೊಳ್ಳುತ್ತಾರೆ‌. ಆದಾಗ್ಯೂ ಇವರಿಗೆ ಜಯವೆನ್ನುವುದು ಶತಸಿದ್ಧ.

Leave a Reply

Your email address will not be published. Required fields are marked *