ಕನ್ನಡ ಚಿತ್ರರಂಗದ ನಟ ರಘುವೀರ್ ಅವರ ಜೀವನದ ಯಾರಿಗೂ ತಿಳಿಯದ ಕೆಲವು ಕುತೂಹಲಕರ ಘಟನೆಗಳ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳೋಣ. ಇಂಜಿನಿಯರಿಂಗ್ ಓದುತ್ತಿದ್ದ ರಘುವೀರ್ ತಂದೆ ಮುನಿಯಲ್ಲಪ್ಪ ದೊಡ್ಡ ಬಿಲ್ಡಿಂಗ್ ಕಾಂಟ್ರಾಕ್ಟರ್ ಆಗಿದ್ದ ಕಾರಣ ತಂದೆಯ ಹಾದಿಯಲ್ಲೇ ನಡೆಯಲು ಸಿವಿಲ್ ಇಂಜಿನಿಯರಿಂಗ್ ಓದುತ್ತಿದ್ದರು. ಅಂಬರೀಷ್ ಅವರ ಮನೆ ಕಟ್ಟುವ ಕಾಂಟ್ರಾಕ್ಟ್ ರಘುವೀರ್ ಅವರ ತಂದೆಗೆ ಸಿಕ್ಕಿತ್ತು. ಅದರ ಪ್ರಾಕ್ಟಿಕಲ್ ಎಕ್ಸ್ಪೀರಿಯನ್ಸ್ ಪಡೆಯಲು ಅಲ್ಲಿಗೆ ಹೋಗುತ್ತಿದ್ದ ರಘುವೀರ್ ಗೆ ಅಂಬರೀಶ್ ಅವರ ಪರಿಚಯ ಆಗಿ ಅವರ ಗತ್ತು ಮತ್ತು ಸ್ಟೈಲ್ ನೋಡಿ ರಘುವೀರ್ ತಾನೂ ಕೂಡಾ ಹೀರೋ ಆಗಬೇಕು ಅಂದುಕೊಂಡರು. ರಘುವೀರ್ ತಮ್ಮ ಈ ಆಸೆಯನ್ನು ತಮ್ಮ ತಂದೆಗೆ ಹೇಳಿದಾಗ ಅವರೂ ಸಹ ಒಪ್ಪಿದರು. ರಘುವೀರ್ ಬಗ್ಗೆ ಅತಿಯಾಗಿ ಪ್ರೀತಿ ಇಟ್ಟುಕೊಂಡಿದ್ದ ಅವರ ತಂದೆ ಮಗ ಹೀರೋ ಆಗಲು ಆಸೆ ಪಡುತ್ತಿದ್ದಾನೆ ಎಂದು ಮಗನನ್ನು ಚೆನ್ನೈ ಗೆ ಕಳುಹಿಸಿ ಅಲ್ಲಿ ನಟನೆ , ಡಾನ್ಸ್ ಎಲ್ಲವನ್ನೂ ಕಲಿಯಲು ಹೇಳಿದರು. ನಂತರ ಅಜೇಯ್ ವಿಜಯ್ ಅನ್ನುವ ಚಿತ್ರಕ್ಕೆ ತಾವೇ 30 ಲಕ್ಷ ಬಂಡವಾಳ ಹಾಕಿ ಮಗನನ್ನು ಹೀರೋ ಮಾಡಿದರು. ಆದರೆ ಅಷ್ಟೊಂದು ಸಕ್ಸಸ್ ಆಗಲಿಲ್ಲ.

ನಂತರ ಹುಟ್ಟಿದ್ದೇ ಚೈತ್ರದ ಪ್ರೇಮಾಂಜಲಿ. ಅಸಿಸ್ಟಂಟ್ ಡೈರೆಕ್ಟರ್ ಆಗಿದ್ದ ಎಸ್ ನಾರಾಯಣ್ ಅವರಿಗೆ ಅವಕಾಶ ಕೊಟ್ಟ ರಘುವೀರ್ ಚೈತ್ರದ ಪ್ರೇಮಾಂಜಲಿ ಚಿತ್ರದಲ್ಲಿ ಪರಿಪೂರ್ಣ ಹೀರೋ ಆದರು. ಶೂಟಿಂಗ್ ಎಲ್ಲಾ ಮುಗಿದ ಮೇಲೆ ವಿತರಕರಿಗೆ ಚಿತ್ರವನ್ನು ತೋರಿಸಿದಾಗ ಎಲ್ಲರೂ ನಕ್ಕಿದ್ದರು. ಈ ಚಿತ್ರದ ಮೈನಸ್ ಪಾಯಿಂಟ್ ರಘುವೀರ್ ಅವರೇ ಎಂದು ಹೀಯಾಳಿಸಿದ್ದರು. ಹಾಗಾಗಿ ಆಗ ಯಾರೂ ಕೂಡಾ ಈ ಚಿತ್ರವನ್ನು ಖರೀದಿ ಮಾಡಲಿಲ್ಲ. ಆಗ ಮುಂದೆ ಬಂದ ರಾಮ್ ಅವರು ಚೈತ್ರದ ಪ್ರೇಮಾಂಜಲಿ ಚಿತ್ರವನ್ನು ಖರೀದಿ ಮಾಡಿ ರಿಲೀಸ್ ಮಾಡಿದರು. ಯಾರೂ ಊಹಿಸದ ರೀತಿಯಲ್ಲಿ ಈ ಚಿತ್ರ ಹಿಟ್ ಆಯಿತು. ಮೊದಲು ಯಾರು ರಘುವೀರ್ ಅವರನ್ನ ನೋಡಿ ಯಾರು ಹೀಯಾಳಿಸಿದ್ದರೋ ಅವರೇ ಮುಂದೆ ಇವರ ಡೇಟ್ಸ್ ಗಾಗಿ ಕಾಯುವಂತೆ ಆಯಿತು. ಚೈತ್ರದ ಪ್ರೇಮಾಂಜಲಿ ಚಿತ್ರದಲ್ಲಿ ಸಕ್ಸಸ್ ಕಂಡ ರಘುವೀರ್ ಅವರ ನಂತರದ ಚಿತ್ರ ಶೃಂಗಾರ ಕಾವ್ಯ. ಇದಕ್ಕೆ ನಟಿಯಾಗಿ ಚೆನ್ನೈ ಇಂದ ಸಿಂಧು ಅವರು ಬಂದರು. ಈ ಚಿತ್ರ ಕೂಡಾ ಸುಪರ್ ಹಿಟ್ ಆಗಿತ್ತು. ಈ ಮಧ್ಯೇ ಸಿಂಧು ಮತ್ತು ರಘುವೀರ್ ನಡುವೆ ಪ್ರೇಮಾಂಕುರವಾಗಿ ಮದುವೆ ಆಗಲು ನಿರ್ಧರಿಸಿದ್ದರು. ಆದರೆ ಈ ಮದುವೆ ರಘುವೀರ್ ಅವರ ತಂದೆಗೆ ಸ್ವಲ್ಪವೂ ಇಷ್ಟ ಇರಲಿಲ್ಲ. ಕೊನೆಗೆ ತಂದೆಯ ಮಾತನ್ನೇ ಧಿಕ್ಕರಿಸಿ ರಘುವೀರ್ ಅವರು ಸಿಂಧು ಅವರನ್ನು ವಿವಾಹ ಆದರು. ತಂದೆ ಮತ್ತು ಮಗನ ಮಧ್ಯೆ ಮನಸ್ತಾಪ ಬಂದು ಮನೆಯಿಂದ ಹೊರ ಬಂದ ರಘುವೀರ್ ಮನೆಯವರ ಜೊತೆಗೆ ಮಾತು ಕತೆಯನ್ನೇ ಬಿಟ್ಟರು.

ಈ ವಿಷಯ ಗಾಂಧಿ ನಗರದಲ್ಲಿ ಬಹಳಷ್ಟು ಹರಿದಾಡಿತ್ತು. ರಘುವೀರ್ ಅವರು ಮನೆ ಬಿಟ್ಟು ಬಂದಿರುವುದಾಗಿ, ಅವರ ಬಳಿ ಸ್ವಲ್ಪವೂ ಹಣ ಇಲ್ಲ ಎಂದು ಸುದ್ಧಿಗಳು ಹರಿದಾಡಿದವು. ಆಗ ರಘುವೀರ್ ಗೆ ಯಾವ ಸಿನಿಮಾ ಅವಕಾಶಗಳೂ ಸಿಗಲಿಲ್ಲ. ಒಂದರ ಹಿಂದೆ ಒಂದರಂತೆ ಉತ್ತಮ ಚಿತ್ರಗಳನ್ನು ನೀಡಿದ್ದ ರಘುವೀರ್ ಅವರರಿಗೆ ಯಾರೂ ಅವಕಾಶ ನೀಡಲೇ ಇಲ್ಲ. ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ರಘುವೀರ್ ಅವರಿಗೆ 2003 ರಲ್ಲಿ ಮತ್ತೊಂದು ದೊಡ್ಡ ಆಘಾತ ಕಾದಿತ್ತು. ಸುನಾಮಿ ಸಂತ್ರಸ್ತರ ನೆರವಿಗೆ ಹೋದ ಪತ್ನಿ ಸಿಂಧು ಸುಂಟರಗಾಳಿಗೆ ಸಿಲುಕಿ ಮೂಗಿನಲ್ಲಿ ಅತಿಯಾಗಿ ಧೂಳು ಹೋಗಿದ್ದರಿಂದ 2003 ರಲ್ಲಿ ಕೋಮಾಗೆ ಜಾರಿ ನಂತರ ಮರಣ ಹೊಂದಿದರು. ಅಲ್ಲಿಗೆ ಎಲ್ಲರನ್ನೂ ಕಳೆದುಕೊಂಡ ರಘುವೀರ್ ಮಾನಸಿಕ ಖಿನ್ನತೆಗೆ ಒಳಗಾಗಿ ಮುಂಬೈ ಗೆ ಹೋದರು. ಅಲ್ಲಿ ಬೀದಿ ಬೀದಿಗಳಲ್ಲಿ ಮಗ ತಿರುಗುತ್ತಾ ಇದ್ದಾನೆ ಎನ್ನುವುದನ್ನ ತಿಳಿದ ರಘುವೀರ್ ತಂದೆ ಎಲ್ಲವನ್ನೂ ಮರೆತು ಮಗನನ್ನು ವಾಪಸ್ ಕರೆತಂದು ಇನ್ನೊಂದು ಮದುವೆ ಮಾಡಿದರು. ಮತ್ತೆ ರಘುವೀರ್ ಹಲವಾರು ಚಿತ್ರಗಳಲ್ಲಿ ನಟಿಸಿದ್ದರೂ ಅವು ಬಿಡುಗಡೆ ಆಗಲಿಲ್ಲ. ಮೇ 8 , 2014 ರಲ್ಲಿ ಎದೆನೋವು ಕಾಣಿಸಿಕೊಂಡ ತಕ್ಷಣ ರಘುವೀರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಷ್ಟರಲ್ಲಿ ಆಗಲೇ ಚೈತ್ರದ ಪ್ರೇಮಾಂಜಲಿ ಚಿತ್ರದ ಖ್ಯಾತಿಯ ರಘುವೀರ್ ಇಹಲೋಕ ತ್ಯಜಿಸಿದ್ದರು. ಹೀಗೆ ಪ್ರೀತಿ ಅನ್ನುವ ಹೆಸರು ರಘುವೀರ್ ಜೀವನದಲ್ಲಿ ಶಾಪವಾಗಿ ಪರಿಣಮಿಸಿತ್ತು. ಪ್ರೀತಿ ಜೀವನವನ್ನು ನಾಶ ಮಾಡುವಂತಿದ್ದರೆ ಅದನ್ನು ಪಡೆಯುವುದಕ್ಕಿಂತ ತ್ಯಾಗ ಮಾಡುವುದೇ ಉತ್ತಮ ಎನಿಸುತ್ತದೆ.

By

Leave a Reply

Your email address will not be published. Required fields are marked *