ಹೆಸರುಕಾಳು ಇದ್ರೆ ಈ ಪಲ್ಯ ಮಾಡಿ ಆರೋಗ್ಯಕ್ಕೆ ಒಳ್ಳೆದು

0 0

ಹೆಸರುಕಾಳು ಆರೋಗ್ಯಕ್ಕೆ ಉತ್ತಮ ಅನ್ನೋದು ವೈದ್ಯರ ಸಲಹೆ ಕೂಡ. ಹೌದು ಹೆಸರುಕಾಳು ತಿನ್ನೋದ್ರಿಂದ ದೇಹಕ್ಕೆ ಪ್ರೊಟೀನ್ ಹಾಗೂ ಫೈಬರ್ ಅಂಶ ಇರೋದ್ರಿಂದ ಶರೀರಕ್ಕೆ ಒಳ್ಳೆಯ ಅರೋಗ್ಯ ವೃದ್ಧಿಸುತ್ತದೆ. ಹೆಸರುಕಾಳು ಇದ್ರೆ ಮನೆಯಲ್ಲಿ ಈ ಪಲ್ಯ ಮಾಡಿ ಶರೀರಕ್ಕೆ ತುಂಬಾನೇ ಒಳ್ಳೆಯದು.

ಹೆಸರುಕಾಳಿನ ಪಲ್ಯ ಹೇಗೆ ಮಾಡೋದು ಎಂಬುದನ್ನು ಇಲ್ಲಿ ತಿಳಿಯುವುದಾದರೆ ತಯಾರಿಸಲು ಬೇಕಾಗುವ ಸಾಮಗ್ರಿಗಳು ಮೊದಲನೆಯದಾಗಿ 4 ಚಮಚ ಎಣ್ಣೆ,1ಚಮಚ ಸಾಸಿವೆ,1ಚಮಚ ಜೀರಿಗೆ, ಚಿಟುಕು ಇಂಗು, ಕರಿಬೇವು, ಬೆಳ್ಳುಳ್ಳಿ, ಶುಂಠಿ ಪೇಸ್ಟ್,1ಮೆಣಸಿನಕಾಯಿ, 1ಮದ್ಯ ಗಾತ್ರದ ಈರುಳ್ಳಿ, 2ಟೊಮ್ಯಾಟೊ, ಕಾಲು ಚಮಚ ಅರಿಶಿಣ, ಅರ್ಧ ಚಮಚ ಖಾರದ ಪುಡಿ, ಅರ್ಧ ಚಮಚ ಬೆಲ್ಲ, ಉಪ್ಪು, 2ಕಪ್ ಮೊಳಕೆಕಾಳು ಇಷ್ಟು ಸಾಮಗ್ರಿಗಳು ಬೇಕಾಗುತ್ತದೆ.

ಇನ್ನು ಈ ಪಲ್ಯ ಹೇಗೆ ತಯಾರಿಸೋದು ಅನ್ನೋದನ್ನ ಮಾಡುವುದಾದರೆ ಮೊದಲು ಒಂದು ಪಾತ್ರೆಯಲ್ಲಿ ಎಣ್ಣೆ, ಸಾಸಿವೆ, ಜೀರಿಗೆ, ಕೆರಿಬೇವು, ಇಂಗು, ಬೆಳ್ಳುಳ್ಳಿ, ಶುಂಠಿ ಪೇಸ್ಟ್ ಮತ್ತು ಮೆಣಸಿನಕಾಯಿ ಸೇರಿಸಿ ಹುರಿದುಕೊಳ್ಳಿ.ಈರುಳ್ಳಿ ಕೆಂಪಾಗುವ ತನಕ ಹುರಿಯಬೇಕು. ಅದಕ್ಕೆ ಟೊಮ್ಯಾಟೋ, ಅರಿಷಿಣ, ಖಾರದ ಪುಡಿ, ಬೆಲ್ಲ ಮತ್ತು ಉಪ್ಪು ಹಾಕಿ ಕೈ ಆಡಿಸುತ್ತಿರಿ. ಇದಾದ ಮೇಲೆ ಮೊಳಕೆ ಕಟ್ಟಿದ ಹೆಸರು ಕಾಳು ಸೇರಿಸಿ. ನೀರು ಹಾಕಿ 10 ರಿಂದ 15 ನಿಮಿಷ ಬೇಯಿಸಿದರೆ ರುಚಿ ರುಚಿಯಾದ ಕಾಳಿನ ಪಲ್ಯನ ಸೇವಿಸಲು ಸಿದ್ಧವಿರುತ್ತದೆ.

Leave A Reply

Your email address will not be published.