ಕಲೆ ಅನ್ನೋದು ಪ್ರತಿಯೊಬ್ಬರನ್ನೂ ಕೈ ಬೀಸಿ ಕರೆಯುತ್ತಿದೆ ಆದರೆ ಅದರಲ್ಲಿ ಕೆಲವು ಅನುಭವಿಗಳನ್ನು ಮಾತ್ರ ಅರಿಸಿಕೊಳ್ಳುತದೆ ಎನ್ನುವುದು ಅನುಭವಿಗಳ ಮಾತು ಇದಕ್ಕೆ ಅನುಗುಣವಾಗಿ ನಮ್ಮ ಸುತ್ತ ಮುತ್ತಲಿನ ಕಲಾವಿದರನ್ನು ನಾವು ನೋಡಿದ್ದೇವೆ ತಾವು ಏನಾದರೂ ಸಾಧನೆ ಮಾಡಬೇಕು ಎಂದು ಎಷ್ಟೋ ಜನರು ಬರುತ್ತಾರೆ ಆದರೆ ಕೆಲವೇ ಕೆಲವರು ಮಾತ್ರ ತಮ್ಮ ಗುರಿ ಮುಟ್ಟುತ್ತಾರೆ ಕೆಲವೊಬ್ಬರು ತಮ್ಮ ಗುರಿ ಮುಟ್ಟಲು ಸಮಯವನ್ನು ನೋಡಿ ತನ್ನ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ ಇನ್ನೂ ತನ್ನ ಸತತ ಪರಿಶ್ರಮ ಕೊಟ್ಟರು ಕೂಡ ಯಾವುದೇ ಏಳಿಗೆಯನ್ನು ಕಾಣದವರು ಕೂಡ ಇದ್ದಾರೆ ಅವರಲ್ಲಿ ನಟ ಲೂಸ್ ಮಾದ ಅಲಿಯಾಸ್ ಯೋಗೇಶ್ ಕೂಡ ಒಬ್ಬರು ಇಂದಿನ ಅಂಕಣ ಅವರ ಕುರಿತಾಗಿದೆ

ಯೋಗಿ ಅಂದರೆ ನಿನಪಿಗೆ ಬರೋದು ದುನಿಯಾ ಚಿತ್ರದಲ್ಲಿ ಸರ್ಪ ಕಣ್ಣಿನ ಎಳೆ ಪುಡಿ ರೌಡಿ ಪಾತ್ರ ತಟ್ಟನೆ ಕಣ್ಣ ಮುಂದೆ ಸುಳಿಯುವುದು ಅ ಪಾತ್ರ ಮಾಡುವ ಸಮಯದಲ್ಲಿ ಹದಿನಾರು ವರ್ಷ ಹದಿಹರೆಯದ ಹುಡುಗ ಅವನ ಪಾತ್ರ ಎಲ್ಲರನ್ನೂ ಮೋಡಿ ಮಾಡಿದಂತೂ ಸುಳ್ಳಲ್ಲ ತದನಂತರದಲ್ಲಿ ಯೋಗಿ ಅವರಿಗೆ ಹಲವಾರು ಚಿತ್ರಗಳಲ್ಲಿ ನಟಿಸಲು ಅವಕಾಶ ಬಂದಿತ್ತು ನಂದ ನಂದಿತ ನಾಯಕ ನಟನಾಗಿ ನಟಿಸಿದ್ದು ಮುಂದೆ ಹಲವಾರು ಸಿನಿಮಾ ಅಲ್ಲಿ ನಟಿಸುತ್ತಾರೆ 2010-11 ಇಸವಿಯಲ್ಲಿ ಅವರ ಕ್ರೇಜ್ ಉತ್ತುಂಗ ಅಲ್ಲಿ ಇತ್ತು ನಂತರ ಯಾವ ಸಿನಿಮಾ ಅಷ್ಟೊಂದು ಯಶಸ್ಸು ಗಳಿಸುವುದು ಸಾಧ್ಯವಾಗಲಿಲ್ಲ ಜನರ ಮನದಲ್ಲಿ ರಸಿಕರ ಕಂಗಳ ಲೂಸ್ ಮಾದ ಎಂದು ಹೇಳಿಕೊಂಡವರು ಯಾಕೆ ಸೋಲಿನ ತೆಕ್ಕೆಗೆ ಬಿದ್ದರು ಎನ್ನುವುದನ್ನು ತಿಳಿಯೋಣ

ಬೆಂಗಳೂರಿನ ನಿವಾಸಿಯಾದ ಯೋಗೀಶ್ 1990 ಜುಲೈ6 ಅಂದು ಶರತ್ ಚಂದ್ರ ಆಸ್ಪತ್ರೆಯಲ್ಲಿ ಸಿದ್ದರಾಜು ಮತ್ತು ಅಂಬುಜಾ ಎಂಬ ದಂಪತಿಗಳ ಎರಡನೆಯ ಮಗನಾಗಿ ಹುಟ್ಟಿ ಅವರಿಗೆ ಮಹೇಶ್ ಎಂಬ ಹಿರಿಯ ಸಹೋದರ ಇದ್ದಾರೆ ಇನ್ನುಬದುಕವ ಲಕ್ಷಣ ಇಲ್ಲ ಎಂದಿದ್ದರು ವೈದ್ಯರು ದೇವರ ಕೃಪಾಕಟಾಕ್ಷ ಇಂದ ಮಗು ಮತ್ತು ತಾಯಿ ಕೂಡ ಆರೋಗ್ಯವಾಗಿ ಇದ್ದರು ಕಿರಿಯ ಮಗ ಎಂದು ಎಲ್ಲರೂ ಮುದ್ದಾಗಿ ಕಾಣುತ್ತಿದ್ದ ಹಾಗೂ ಹುಟ್ಟುವಾಗ ತುಂಬಾನೇ ತ್ರಾಸ ಇಂದ ಜನಿಸಿದ ಎಂಬ ಕಾರಣದಿಂದ ಎಲ್ಲರ ಮುದ್ದಿನ ಮಗನಾಗಿ ಬೆಳೆದಿದ್ದ ಯೋಗಿ ಅವರು ತಮ್ಮ ಶಿಕ್ಷಣವನ್ನು ಜ್ಯೋತಿ ಕೇಂದ್ರ ವಿದ್ಯಾಲಯದಲ್ಲಿ ಐದನೇ ತರಗತಿಯ ತನಕ ಅಲ್ಲಿ ವಿದ್ಯಾಬ್ಯಾಸ ಮಾಡಿ ಕಾರಣಾಂತರದಿಂದ ಮುಂದಿನ ವಿದ್ಯಾಭ್ಯಾಸಕ್ಕೆ ಎನ್ ಸ್ ಕೆ ವಿ ಹೈ ಸ್ಕೂಲ್ ಸೇರಿ ಶಿಕ್ಷಣವನ್ನು ಮುಂದುವರೆಸುತ್ತಾರೆ

ತನ್ನ ಸ್ನೇಹಕ್ಕೆ ತುಂಬಾನೇ ಬೆಲೆ ಕೊಡುತ್ತಿದ್ದರು ಹಾಗಾಗಿ ಹೈಸ್ಕೂಲ್ ಓದುವ ವೇಳೆಗೆ ಅವರಿಗೆ ನೂರಾರು ಜನ ಸ್ನೇಹಿತರಿದ್ದರು ತನ್ನ ಹೈಸ್ಕೂಲ್ ಜೀವನದ ನಂತರ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ ನಿಮಗೆಲ್ಲ ಗೊತ್ತಿರುವ ಹಾಗೆ ಕನ್ನಡದ ಹೆಸರಾಂತ ನಟ ದುನಿಯಾ ವಿಜಯ್ ಅವರು ಯೋಗೀಶ್ ಅವರಆಪ್ತ ಸಂಬಂಧಿಕರು ದುನಿಯಾ ವಿಜಿ ಅವರ ಅಕ್ಕಾನೆ ಯೋಗೀಶ್ ಅವರ ಸ್ವಂತ ಅಮ್ಮ ನಿಮಗೆಲ್ಲ ಗೊತ್ತಿರುವ ವಿಷಯ ದುನಿಯಾ ವಿಜಯ್ ಅವರು ದುನಿಯಾ ಚಿತ್ರದ ನಾಯಕ ನಟ ಆಗುವ ಮುನ್ನ ಅನೇಕ ಸಣ್ಣ ಸಣ್ಣ ಪಾತ್ರ ಮಾಡಿಕೊಂಡು ಬರುತ್ತ ಇದ್ದರು ಇನ್ನು ದುನಿಯಾ ಚಿತ್ರದ ಸೂರಿ ಅವರು ಚಿತ್ರದ ಕಥೆಯನ್ನು ತಿಳಿದು ಒಳ್ಳೆಯ ಚೌಕಟ್ಟನ್ನು ಕಟ್ಟಿ ಅದಕ್ಕೆ ದುನಿಯಾ ವಿಜಯ್ ಅವರ ಹೀರೋ ಆಗಿ ಆಯ್ಕೆ ಮಾಡಲಾಗುವುದು

ಇನ್ನು ಚಿತ್ರದ ಸಣ್ಣ-ಪುಟ್ಟ ಪಾತ್ರಗಳಿಗೆ ಕಲಾವಿದರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಸೂರಿಯವರ ಕಣ್ಣಿಗೆ ಅವರು ಬರುತ್ತಾರೆ ಆದರೆ ಅವರಿಗೆ ತನ್ನ ಮಾವನ ಹಾಗೆ ನಟನೆಯಲ್ಲಿ ಯಾವುದೇ ಗೊತ್ತಿರುವುದಿಲ್ಲ ಇದು ಒಬ್ಬ ಸಾಮಾನ್ಯ ಪೋರನಿಗೆ ಸಿಕ್ಕ ಸದವಕಾಶ ಆಗಿರುವುದು ಇದು 2006 ಎಲ್ಲ ಹೊಸ ಕಲಾವಿದರನ್ನು ಒಳಗೊಂಡ ಒಂದು ಮನೋಜ್ಞ ಚಿತ್ರ ಆಗಿ ಹೊರಬರುವುದು ಇದರಲ್ಲಿ ಯೋಗೀಶ್ ಅವರ ಲೂಸ್ ಮಾದ ಪಾತ್ರದ ಬಗ್ಗೆ ಸಾಕಷ್ಟು ಚರ್ಚೆ ಗೆ ಅವಕಾಶ ಆಗಿದ್ದು ಬಳಿಕ ಎಲ್ಲ ಪತ್ರಿಕೆ ಹಾಗೂ ಮಧ್ಯಮ ಅಲ್ಲಿನು ಲೂಸ್ ಮಾದನ ಬಗೆಗ್ ವಿಮರ್ಶೆ ನಡೆದವು ಅವರ ತಂದೆ ವಕೀಲ ವೃತ್ತಿ ಅಲ್ಲಿ ಇದ್ದರು ಕೂಡ ಈ ಚಿತ್ರದ ನಿರ್ಮಾಣಕ್ಕೆ ತನ್ನಾದೆಲ್ಲಾನ್ನು ಒತ್ತೆ ಇಟ್ಟು ಮಕ್ಕಳ ಭವಿಷ್ಯಕ್ಕೆ ಹೆಗೆಲು ಕೊಟ್ಟವರು ಆಮೇಲೆ ನಡೆದೆಲ್ಲವು ಶುಭ ಅನ್ನುವ ಹಾಗೆ ಕಾಲೇಜ್ ಜೀವನಕ್ಕೆ ನಾಂದಿ ಹಾಡಿ ಅಜಯ ಕುಮಾರ್ ಅವರು ಕೊಟ್ಟ ಆಫರ್ ಅನ್ನು ಮೊದಲ ಬಾರಿಗೆ ನಂದ ನಂದಿತ ಸಿನಿಮಾದಲ್ಲಿ ನಟನಾಗಿ ಅಭಿನಯಿಸಿದ್ದು ಅದು ಕೂಡ ಹಿಟ್ ಆಗುವುದು

ಇನ್ನೂ ಮೊದಲ ಸಂಭಾವನೆ ಐದು ಲಕ್ಷ ರೂಪಾಯಿಗಳು ಹೊಗಳುವರು ಇದ್ದ ಕಡೆ ತೆಗಳುವರು ಇರುತ್ತಾರೆ ಎನ್ನುವ ಹಾಗೆ ಯೋಗಿ ಅವರನ್ನು ಕೆಲವರು ಹೀನಾಯವಾಗಿ ಅವಮಾನಿಸಿ ನೋಡಲು ಕಳ್ಳನ ಹಾಗೆ ಇದ್ದಾನೆ ಹಾಗೆ ಹೀಗೆ ಎಂದು ತುಚ್ಯವಾಗಿ ನೋಡಿದ್ದಾರೆ ಆದರೂ ಯಾವುದಕ್ಕೂ ಧೃತಿಗೆಡದೆ ತನ್ನ ಛಲವನ್ನು ಹೊಂದಿ 2009 ಅಲ್ಲಿ ಅಂಬಾರಿ ಚಿತ್ರವು ಯೋಗೇಶ್ ಅವರ ಜೀವನದ ಪ್ರಮುಖ ಚಿತ್ರ ಆಗಿದೆ ಇದಕ್ಕೆ ಸ್ಟೇಟ್ ಅವಾರ್ಡ್ ಕೂಡ ಲಭಿಸಿದೆ

ನಂತರ ಅನೇಕ ರೀಮೇಕ್ ಚಿತ್ರ ಅಲ್ಲಿ ನಟಿಸಿದರು ಪುಂಡ ರಾವಣ ಯಕ್ಷ್ ಯೋಗಿ ಚಿತ್ರವು ನಿರಾಸೆ ಮೂಡಿಸಿದವು ಅಪ್ಪು ನಾಯಕತ್ವ ಹುಡುಗರು ಚಿತ್ರದಲ್ಲಿ ಸಾಂದರ್ಭಿಕ ಹಾಸ್ಯ ಹಾಗೂ ಅಪ್ಪು ಜೊತೆಗೆ ಸ್ನೇಹಿತ ಪಾತ್ರವೂ ಜನರಲ್ಲಿ ಕಚಗುಳಿ ಇಟ್ಟಂತೆ ಆಯಿತು ಧೂಳ್ ಸಿದ್ದಲ್ಲಿಂಗು ಚಿತ್ರವು ಮತ್ತೆ ಅವರ ನಟನೆಯ ಪ್ರಕಶಿಸುವಂತೆ ಮಾಡಿದ ಚಿತ್ರ ಅದಕ್ಕೆ ಫಿಲ್ಮ್ ಫೇರ್ ಪ್ರಶಸ್ತಿಗೆ‌ ಯೋಗೀಶ್ ಅವರ ಹೆಸರು ಕೂಡ ಸೇರಿತು ತದನಂತರ ಅಲೆಮಾರಿ ಕಲಾಯ್ ತಸ್ಮೈ ನಮಃ ಜಿಂಕೆಮರಿ ಅಂಬರಿ ಚಿತ್ರವು ನಿರಾಸೆ ಮೂಡಿಸಿದ ಸಿನಿಮಾಗಳು‌ ಇನ್ನೂ ಈ ಸಿನಿಮಾ ಅಲ್ಲಿ ಮೊದಲ ಬಾರಿಗೆ ಸಂಗೀತ ನೀಡಿದ್ದರು 2012 ಪುನಃ ಪುನೀತ್ ಅವರ ಜೊತೆಗೆ ಯಾರೇ ಕೂಗಾಡಲಿ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದರು ಜಾನ್ ಜಾನಿ ಜನಾರ್ಧನ್ ಸಿನಿಮಾ ದಲ್ಲಿ ಹೀರೋ ಅಜಯ್ ಹಾಗೂ ಕೃಷ್ಣ ಅವರ ಜೊತೆ ನಟಿಸಿದು ಈ ಚಿತ್ರವು ಸಾಕಷ್ಟು ಮಟ್ಟಿಗೆ ಹಿಟ್ ಆಗಿತ್ತು

ನಂತರ 2017 ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಮಾಸ್ ಲೀಡರ್ ಚಿತ್ರ ಸಣ್ಣ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡರು ಕೋಲಾರ ಯೋಗಿ ದುನಿಯಾ ಬಾಕ್ಸ್ ಆಫೀಸ್ ಸೋಲುತ್ತವೆ ಮತ್ತೆ ಲಂಕೆ ಸಾಧಾರಣ ಯಶಸ್ಸು ಗಳಿಸುವುದು ಲಾಡ್ಜ್ ಪರಿಮಳ ಸರೋಜಾ ಕಿರಿಕ್ ಶಂಕರ್ ಹೆಡ್ ಬುಷ್ ಮುಂತಾದ ಸಿನಿಮಾ ಅಲ್ಲಿ ಇವಾಗ ನಟಿಸುತಲಿದ್ದು ಚಿತ್ರೀಕರಣ ಅಲ್ಲಿ ಬಿಜಿಯಾಗಿದ್ದಾರೆ 2017 ಅಲ್ಲಿ ಸಾಹಿತ್ಯ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಅವರಿಗೆ ಎರಡು ವರ್ಷ ಮುದ್ದಾದ ಹೆಣ್ಣು ಮಗುವಿನ ತಂದೆ ಆಗಿದ್ದಾರೆ ಯೋಗೀಶ್ ಒಬ್ಬರು ಕನ್ನಡ ಚಿತ್ರರಂಗದ ಅದ್ಬುತ ನಟ ಇನ್ನೂ 31 ವರ್ಷ ಪ್ರಾಯದ ಯೋಗೇಶ್ ಅವರಿಗೆ ಒಳ್ಳೆಯ ಅವಕಾಶಕ್ಕೆ ಕಾಯುತ್ತ ಇದ್ದಾರೆ ಒಳ್ಳೆಯ ಅವಕಾಶ ಸಿಗಲಿ ಮತ್ತು ಯಶಸ್ಸು ಸಿಗಲಿ ಎಂಬುದು ನಮ್ಮೆಲ್ಲರ ಆಶಯ.

Leave a Reply

Your email address will not be published. Required fields are marked *