ತನ್ನನ್ನು ತಾನೇ ಮದುವೆಯಾಗಿ ಒಬ್ಬಳೇ ಗೋವಾಗೆ ಹನಿಮೂನ್ ಹೊರಟ ಈಕೆ ನಿಜಕ್ಕೂ ಯಾರು ಗೊತ್ತಾ

0 2

ಮದುವೆಯೆಂದರೆ ನನ್ನ ತಲೆಯಲ್ಲಿ ಬರುವುದು ಹುಡುಗ-ಹುಡುಗಿ ಸಂಭ್ರಮ ಮೆಹಂದಿ ಸಂಗೀತ. ಆದರೆ ಗುಜರಾತ್‌ನ ವಡೋದರಾದ ಕ್ಷಮಾ ಬಿಂದು ಎಂಬ 24 ವರ್ಷದ ಯುವತಿಯು ತನಗೆ ತಾನೆ ತಾಳಿ ಕಟ್ಟಿಕೊಂಡು ಮದುವೆಯಾಗಿದ್ದಾರೆ. ಭಾರತದಲ್ಲಿ ಮೊದಲ ಸೋಲೊಗಮಿ ವಿವಾಹಕ್ಕೆ ಸಾಕ್ಷಿಯಾದ ಕ್ಷಮಾ ಬಿಂದು ಅವರ ಮದುವೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಗುಜರಾತ್‌ನ ವಡೋದರಾದ ಕ್ಷಮಾ ಬಿಂದು ಎಂಬ 24 ವರ್ಷದ ಯುವತಿಯು ತನಗೆ ತಾನೆ ತಾಳಿ ಕಟ್ಟಿಕೊಂಡು ಮದುವೆಯಾಗಲಿದ್ದಾರೆ. ಈ ಸುದ್ದಿ ದೂರದರ್ಶನ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದೆ ಜೂನ್ 11ರಂದು ಕ್ಷಮಾ ಬಿಂದು ಹೀಗೊಂದು ವಿಚಿತ್ರ ಮದುವೆಗೆ ಸಾಕ್ಷಿಯಾಗಿದ್ದಾರೆ, ಹಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ಮದುವೆಯಲ್ಲಿ ಸಂಗೀತ, ಮೆಹಂದಿ ಎಲ್ಲ ರೀತಿಯ ಶಾಸ್ತ್ರಗಳು ಇದ್ದು, ಮದುವೆಯಾದ ಬಳಿಕ ಆಕೆ ಒಬ್ಬರೆ ಹನಿಮೂನ್​ಗೂ ಹೋಗಲಿದ್ದಾರೆ. ಭಾರತದಲ್ಲಿ ಇದೆ ಮೊದಲ ಬಾರಿಗೆ ಇಂತಹದ್ದೊಂದು ಮದುವೆಯೊಂದು ನಡೆಯುತ್ತಿದ್ದು, ಇದು ಸ್ವಪ್ರೇಮಕ್ಕೆ ಒಂದು ಉದಾಹರಣೆ ಎಂದು ಹೇಳಲಾಗುತ್ತಿದೆ ಜೊತೆಗೆ ಈ ರೀತಿಯ ಮದುವೆಗೆ ಸೊಲೊಗಮಿ ಎಂದು ಕರೆಯುತ್ತಾರೆ.

ತನ್ನ ವಿವಾಹದ ಬಗ್ಗೆ ಮಾತನಾಡಿರುವ ಕ್ಷಮಾ ದೇಶದಲ್ಲೆ ಸ್ವಯಂ-ವಿವಾಹ ಎನ್ನುವುದು ಮೊದಲ ನಿದರ್ಶನವೆಂದು ಅವರೆ ಹೇಳಿಕೊಂಡಿದ್ದಾರೆ. ದಾಂಪತ್ಯದಲ್ಲಿ ಒಬ್ಬರಿಗೊಬ್ಬರು ಪ್ರೀತಿ ಇಟ್ಟುಕೊಳ್ಳುವುದು ಅಗತ್ಯ ಆದರೆ ತನ್ನನ್ನು ತಾನೆ ಪ್ರೀತಿಸುತ್ತಿದ್ದು ಅದಕ್ಕಾಗಿಯೆ ಈ ಮದುವೆ ಎಂದಿದ್ದಾರೆ. ಎಂಎಸ್‌ ವಿಶ್ವವಿದ್ಯಾಲಯದಿಂದ ಸಮಾಜಶಾಸ್ತ್ರದಲ್ಲಿ ಪದವಿ ಪಡೆದಿರುವ ಕ್ಷಮಾ ಬಿಂದು ಓರ್ವ ಬುದ್ಧಿವಂತೆ ಹಾಗೂ ಖಾಸಗಿ ಸಂಸ್ಥೆಯ ಉದ್ಯೋಗಿಯಾಗಿರುವ ಅವರ ಈ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ತನ್ನ ನಿರ್ಧಾರದ ಬಗ್ಗೆ ಅವಳು ತನ್ನ ಹೆತ್ತವರ ಬಳಿ ಹೇಳಿಕೊಂಡಾಗ ಪೋಷಕರು ಮೊದಲು ಆಶ್ಚರ್ಯವ್ಯಕ್ತಪಡಿಸಿದರೂ ಬಳಿಕ ಒಪ್ಪಿಕೊಂಡಿದ್ದಾರೆ. ನನ್ನ ಮನಸ್ಸಿನಲ್ಲಿ ಬಹಳ ದಿನಗಳಿಂದ ಈ ಆಲೋಚನೆ ಇತ್ತು ಆದರೆ ಅದು ಸಾಧ್ಯ ಎಂದು ಭಾವಿಸಿರಲಿಲ್ಲ, ನಂತರ ನಾನು ಏಕಪತ್ನಿತ್ವ ಬಗ್ಗೆ ಓದಿ ತಿಳಿದುಕೊಂಡೆ ಆಗ ನಾನು ನನ್ನನ್ನೆ ಮದುವೆಯಾದರೆ ಹೇಗೆ ಎಂಬ ಆಲೋಚನೆ ಬಂತು ಎಂದು ಸಂದರ್ಶನವೊಂದರಲ್ಲಿ ಅವರೆ ಈ ಅಚ್ಛರಿಯ ಮದುವೆಯ ಬಗ್ಗೆ ಮಾತನಾಡಿದ್ದಾರೆ.

ನನಗೆ ವರನ ಜೊತೆಗೆ ವಿವಾಹ ಇಷ್ಟವಿಲ್ಲ, ಜೀವನ ಪೂರ್ತಿ ಏಕಾಂಗಿಯಾಗಿರುವೆ, ದೇಶದಲ್ಲಿ ಇಂತಹದ್ದೊಂದು ಮದುವೆಗೆ ನಾನೆ ಸಾಕ್ಷಿ ಎಂದಿದ್ದಾರೆ ಕ್ಷಮಾ. ಭಾರತದಲ್ಲಿ ಇದುವರೆಗೂ ಯಾರೂ ಈ ರೀತಿ ತನ್ನನ್ನು ತಾನೆ ಮದುವೆಯಾದ ಉದಾಹರಣೆಗಳಿಲ್ಲ. ಇದೆ ಮೊದಲ ಬಾರಿಗೆ ಈ ರೀತಿಯ ಮದುವೆ ನಡೆಯಲಿದೆ. ಭಾರತದಲ್ಲಿ ಏಕಪತ್ನಿತ್ವ ಅಥವಾ ಸ್ವಯಂ-ವಿವಾಹಕ್ಕೆ ಯಾವುದೆ ಕಾನೂನಿನ ಮಾನ್ಯತೆ ಇಲ್ಲ ಎನ್ನುವುದು ಕಾನೂನು ತಜ್ಞರ ಅಭಿಮತವಾಗಿದೆ. ಭಾರತದಲ್ಲಿ ಇದೆ ಮೊದಲು ಸೊಲೊಗಮಿ ಎನ್ನುವ ವಿವಾಹಕ್ಕೆ ಒಳಗಾಗುತ್ತಿದ್ದು, ಈ ಪರಿಕಲ್ಪನೆಯುಳ್ಳವರನ್ನು ಬಂಧಿಸುವ ಅಧಿಕಾರವೂ ಇಲ್ಲ.

ಇದನ್ನು ಈ ಯುವತಿಯ ಹುಚ್ಚುತನ ಅನ್ನಬೇಕೊ ಅಥವಾ ಪ್ರಬುದ್ಧತೆ ಅನ್ನಬೇಕೊ ಯಾವುದೂ ಗೊತ್ತಾಗುತ್ತಿಲ್ಲ ಎನ್ನುವುದು ನೆಟಿಜನ್​ಗಳ ಮಾತು. ಈಕೆಯ ಸುದ್ದಿ ಕೇಳಿ ಅವರನ್ನೆ ಅವರೆ ಮದುವೆ ಆಗುವ ಕಲ್ಪನೆಯೊಂದು ಭೂಮಿ ಮೇಲೆ ಇದೆಯಾ ಎಂಬ ಪ್ರಶ್ನೆ ಇದೀಗ ಎಲ್ಲರಲ್ಲೂ ಕಾಡತೊಡಗಿದೆ. ಸೊಲೊಗಮಿ ಪದ್ದತಿ ಬೇರೆ ದೇಶಗಳಲ್ಲಿ ಚಾಲ್ತಿಯಲ್ಲಿದ್ದು ಭಾರತದಲ್ಲಿ ಇದೆ ಮೊದಲ ಬಾರಿಗೆ ಈ ಪದ್ದತಿಯನ್ನು ಗುಜರಾತ್ ನಲ್ಲಿ ನೋಡುತ್ತಿದ್ದೇವೆ.

Leave A Reply

Your email address will not be published.