Ultimate magazine theme for WordPress.

ಪ್ರತಿ ಕಷ್ಟ ಸುಖದಲ್ಲಿ ಭಾಗಿಯಾಗುವ ಪತ್ನಿ ಸ್ಪಂದನ ಹಾಗೂ ನಟ ವಿಜಯ್ ರಾಘವೇಂದ್ರ ಅವರ ಲವ್ ಸ್ಟೋರಿ ಶುರು ಆಗಿದ್ದು ಹೇಗೆ?

0 2

ಕನ್ನಡ ಚಿತ್ರರಂಗದ ವರನಟ ಮತ್ತು ಕರುನಾಡ ಆರಾಧ್ಯದೈವ ಡಾ.ರಾಜ್ ಕುಮಾರ್ ಅವರ ಚಲಿಸುವ ಮೋಡಗಳು ಚಿತ್ರದ ಮೂಲಕ ಬಾಲ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟ ವಿಜಯ್ ರಾಘವೇಂದ್ರ ಅವರು. ಸದ್ಯ ನಮ್ಮ ಚಿತ್ರರಂಗದಲ್ಲಿ ಚಿನ್ನಾರಿ ಮುತ್ತ ಎಂದೇ ಖ್ಯಾತಿ ಪಡೆದಿರುವ ಅವರು ಚಿನ್ನಾರಿ ಮುತ್ತ ಚಿತ್ರದ ಅಭಿನಯಕ್ಕಾಗಿ ಬಾಲ್ಯದಲ್ಲಿಯೇ ರಾಜ್ಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಅಲ್ಲದೇ ಕೊಟ್ರೇಶಿ ಕನಸು ಎಂಬ ಸಿನಿಮಾದ ಅಭಿನಯಕ್ಕಾಗಿಯೂ ಕೂಡ ಅತ್ಯುತ್ತಮ ಬಾಲನಟ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿರುವ ವಿಜಯ ರಾಘವೇಂದ್ರ ರವರು ನಿನಗಾಗಿ ಎಂಬ ಸಿನಿಮಾ ಮೂಲಕ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು ವಿಜಯ ರಾಘವೇಂದ್ರ ಅವರು ಈವರೆಗೆ ಬರೋಬ್ಬರಿ 50 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಇನ್ನು ನಮ್ಮ ಕನ್ನಡ ಚಿತ್ರರಂಗದ ಖ್ಯಾತ ನಟ ವಿಜಯ್ ರಾಘವೇಂದ್ರ ಎಂದರೆ ಎಲ್ಲರಿಗೂ ಕೂಡ ಬಹಳ ಅಚ್ಚುಮೆಚ್ಚಾಗಿದ್ದು ಒಂದು ಕಾಲದಲ್ಲಿ ಕನ್ನಡದ ಲವರ್ ಬಾಯ್ ಡ್ರೀಮ್ ಬಾಯ್ ಚಿನ್ನಾರಿಮುತ್ತ ಎಂದೇ ಖ್ಯಾತಿ ಗಳಿಸಿದ್ದರು. ಹೌದು ಬೆಳ್ಳಿತೆರೆಯಲ್ಲಿ ಮಾತ್ರವಲ್ಲದೆ ಕಿರುತೆರೆಯಲ್ಲೂ ಕೂಡ ಡ್ರಾಮಾ ಜ್ಯೂನಿಯರ್ಸ್ ಶೋ ಹಾಗೂ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿ ಎಲ್ಲರ ಫೇವರೆಟ್ ಆಗಿರುವವರು ಚಿನ್ನಾರಿಮುತ್ತ ವಿಜಯ್ ರಾಘವೇಂದ್ರರವರನ್ನು ನೋಡಿದರೆ ಈಗಲೂ ಕೂಡ ಅದರೇ ಮಗುವಿನ ಮುಗ್ಧತೆಯ ಹಾಗೆ ತೋರುತ್ತದೆ. ಇನ್ನು ನಿನಗಾಗಿ ಸಿನಿಮಾದಿಂದ ಹಿಡಿದು ಇಲ್ಲಿಯವರೆಗೂ ಅವರು ಅಭಿನಯಿಸಿರುವ ಒಂದೊಂದು ಸಿನಿಮಾಗಳು ಮತ್ತು ಒಂದೊಂದು ಪಾತ್ರಗಳು ಸಹ ನೆನಪಿನಲ್ಲಿ ಉಳಿಯುವಂಥವು ಎನ್ನಬಹುದು.

ನಿನಗಾಗಿ ಸಿನಿಮಾ ತೆರೆಕಂಡ ಸಮಯದಲ್ಲಿ ಕರ್ನಾಟಕದ ಎಲ್ಲಾ ಹುಡುಗಿಯರ ಡ್ರೀಮ್ ಬಾಯ್ ಆಗಿದ್ದ ಈ ಚಿನ್ನಾರಿ ಮುತ್ತನಿಗೆ ಈಗಲೂ ಸಹ ಅದೇ ರೀತಿಯ ಮಹಿಳಾ ಅಭಿಮಾನಿ ಬಳಗ ಇರುವುದು ವಿಶೇಷವಾಗಿದೆ. ಅದರಲ್ಲೂ ವಿಜಯ್ ರಾಘವೇಂದ್ರ ಅವರ ವಿವಾಹ ಆದಾಗ ಅದೆಷ್ಟೋ ಜನ ಮಹಿಳಾ ಅಭಿಮಾನಿಗಳು ಬಹಳ ಬೇಸರ ಮಾಡಿಕೊಂಡಿದ್ದು ಉಂಟು. ಸಾಮಾನ್ಯವಾಗಿ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂಧನಾ ಎಂಬುದು ತಮಗೆ ತಿಳಿದಿದೆ. ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಪ್ರಖ್ಯಾತ ನಿಷ್ಠಾವಂತ ಅಧಿಕಾರಿಯ ಮಗಳಾಗಿದ್ದು ನಿರ್ಮಾಪಕಿ ಕೂಡ ಆಗಿದ್ದಾರೆ.

ವಿಜಯ ರಾಘವೇಂದ್ರ ಅವರು 2004ರಲ್ಲಿ ಮಲ್ಲೇಶ್ವರಂ ಕಾಫಿ ಡೇಯಲ್ಲಿ ಸ್ಪಂದನಾ ಅವರನ್ನು ನೋಡಿದ್ದು ಮೊದಲ ಭೇಟಿಯಲ್ಲಿ ಸಂಗೀತದ ವಿಚಾರವಾಗಿ ಸ್ಪಂದನಾ-ವಿಜಯ್ ಮಧ್ಯೆ ಕ್ಲ್ಯಾಶ್ ನಡೆದಿತ್ತಂತೆ. ಎರಡನೇ ಬಾರಿ 2007ರಲ್ಲಿ ಶೇಷಾದ್ರಿಪುರಂ ಕಾಫಿಡೇಯಲ್ಲಿ ಇವರಿಬ್ಬರ ಭೇಟಿ ಮತ್ತೆ ಆಗಿದಂದು ಎರಡನೇ ಭೇಟಿಯಲ್ಲಿ ಸ್ಪಂದನಾ ಅವರನ್ನು ವಿಜಯ್ ಮಾತನಾಡಿಸುತ್ತಾರೆ. ಅದಾಗಲೇ ವಿಜಯ್ ಗೆ ಪ್ರೇತಿ ಚಿಗುರಿದ್ದು ಮತ್ತೆ ಭೇಟಿಯಾದಾಗ ಪ್ರೇಮ ನಿವೇದನೆ ಮಾಡಬೇಕು ಎಂದು ನಿರ್ಧರಿಸಿರುತ್ತಾರೆ.

ಈ ವಿಚಾರವನ್ನು ತಂದೆ ಚೆನ್ನೇಗೌಡರ ಬಳಿ ಕೂಡ ಮಾತನಾಡಿದ್ದು ಅದಾಗಲೇ ಸ್ಪಂದನಾ ಬಳಿ ವಿಜಯ್ ನ ಮದುವೆಯಾಗ್ತೀಯಾ ಎಂದು ಅವರ ತಂದೆ ಕೇಳಿದ್ದು ಸ್ಪಂದನಾ ತಂದೆ ಕೂಡ ಚೆನ್ನೇಗೌಡರಿಗೆ ಪರಿಚಯವಿದ್ದ ಕಾರಣ ಇವರಿಬ್ಬರ ಮದುವೆ ಮಾತುಕತೆ ಮಾಡಿದ್ದಾರೆ. ಇತ್ತ ಅದಾಗಲೇ ವಿಜತ್ ಸ್ಪಂದನಾ ಗೆ ಪ್ರಪೋಸ್ ಮಾಡಿದ್ದು ಅವರು ಕೂಡ ಒಪ್ಪಿಕೊಂಡಿರುತ್ತಾರೆ. ಇನ್ನು ಮನೆಯಲ್ಲಿ ಇವರಿಬ್ಬರ ವಿಚಾರ ಗೊತ್ತಾಗಿ ಒಂದೇ ತಿಂಗಳಿಗೆ ಮದುವೆಯಾಗಿದ್ದು ೨೬ ಆಗಸ್ಟ್ ೨೦೦೭ ರಲ್ಲಿ ಜೊತೆ ಸಪ್ತಪದಿ ತುಳಿದು ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಇನ್ನು ಸ್ಪಂದಾನಾ ಅವರ ತಂದೆ ಪೊಲೀಸ್ ಅಸಿಸ್ಟೆಂಟ್ ಕಮಿಷನರ್ ಆಗಿ ಕೆಲಸ ನಿರ್ವಹಿಸಿದ್ದರು. ಇನ್ನು ಸ್ಪಂದನ ಹಾಗೂ ವಿಜಯ ರಾಘವೇಂದ್ರ ಅವರಿಗೆ ಶೌರ್ಯ ಹೆಸರಿನ ಮುದ್ದಾದ ಮಗ ಕೂಡಾ ಇದ್ದಾನೆ. ಸ್ಪಂದನಾ ಕನ್ನಡ ನಟ ವಿಜಯ್ ರಾಘವೇಂದ್ರರವರ ಪತ್ನಿ. ಇವರು ತಮ್ಮ ಪತಿ ವಿಜಯ ರಾಘವೇಂದ್ರ ನಟಿಸಿ ನಿರ್ಮಿಸುತ್ತಿರುವ ಕಿಸ್ಮತ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ವಿಜಯ್ ರಾಘವೇಂದ್ರ ಅವರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಿಯಾಲಿಟಿ ಶೋ ಆದ ಡಾನ್ಸಿಂಗ್ ಚಾಂಪಿಯನ್ ಶೋ ನ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

Leave A Reply

Your email address will not be published.