ಸ್ಟಾರ್ ನಟ ನಟಿಯರ ವ್ಯಯಕ್ತಿಕ ಬದುಕಿನ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಇರುತ್ತದೆ. ಕೆಲವು ನಟ ನಟಿಯರು ಜೀವನದಲ್ಲಿ ತಮ್ಮದೆ ಆದ ಛಾಪನ್ನು ಮೂಡಿಸಿದಂತೆ ವೈಯಕ್ತಿಕ ಜೀವನದಲ್ಲಿಯೂ ಸುಂದರವಾಗಿ ನೋಡಿಕೊಂಡಿರುತ್ತಾರೆ. ಕೆಲವು ನಟ ನಟಿಯರು ತಮ್ಮ ಸಿನಿ ಜೀವನದಲ್ಲಿಯೂ ವೈಯಕ್ತಿಕ ಜೀವನದಲ್ಲಿಯೂ ಸುದ್ದಿಯಲ್ಲಿ ಇರುತ್ತಾರೆ. ಸಿನಿ ಜೀವನದಲ್ಲಿ ಹಾಗೂ ವೈಯಕ್ತಿಕ ಜೀವನ ಎರಡರಲ್ಲಿಯೂ ಒಂದೆ ತೆರನಾದ ಅದ್ಭುತ ಬದುಕನ್ನು ಬದುಕುತ್ತಿರುವ ಶಿವರಾಜ್ ಕುಮಾರ್ ಅವರ ದಾಂಪತ್ಯದ ಬಗ್ಗೆ ಕೆಲವು ಸ್ವಾರಸ್ಯಕರ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಡಾಕ್ಟರ್ ರಾಜಕುಮಾರ್ ಅವರ ಕುಟುಂಬದಲ್ಲಿ ಎಲ್ಲರೂ ತಮ್ಮ ವೈಯಕ್ತಿಕ ಜೀವನದಲ್ಲಿ ಹಾಗೂ ಸಿನಿ ಜೀವನದಲ್ಲಿ ಕಪ್ಪು ಕಲೆ ಬೀಳದಂತೆ ನೋಡಿಕೊಂಡಿದ್ದಾರೆ. ಶಿವರಾಜಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಅವರ ದಾಂಪತ್ಯ ಅದ್ಭುತವಾಗಿದೆ. ಅನೇಕ ಕಾರ್ಯಕ್ರಮಗಳಲ್ಲಿ ಇಬ್ಬರು ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ ಒಬ್ಬರ ಬಗ್ಗೆ ಒಬ್ಬರು ತೂಕವಾದ ಮಾತುಗಳನ್ನಾಡುತ್ತಾರೆ. ಇಲ್ಲಿಯವರೆಗೂ ಇವರ ದಾಂಪತ್ಯದಲ್ಲಿ ಬಿರುಕು ಕಪ್ಪುಚುಕ್ಕೆ ಬಂದಿಲ್ಲ.

ಪುನೀತ್ ರಾಜಕುಮಾರ್ ಅವರು ವಿಧಿವಶರಾದಾಗ ಶಿವರಾಜಕುಮಾರ್ ಅವರು ಭಾವನಾತ್ಮಕವಾಗಿ ಕುಗ್ಗಿ ಹೋಗಿದ್ದರು. ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಶಿವರಾಜಕುಮಾರ್ ಅವರು ಅಳುತ್ತಲೆ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಅವರಿಗೆ ಬಲತುಂಬಿ ಶಕ್ತಿಯಾಗಿ ನಿಂತುಕೊಂಡವರು ಅವರ ಪತ್ನಿ ಗೀತಾ ಶಿವರಾಜಕುಮಾರ್. ಇತ್ತೀಚಿನ ದಿನಗಳಲ್ಲಿ ಶಿವರಾಜ್ ಕುಮಾರ್ ಅವರೊಂದಿಗೆ ಗೀತಾ ಶಿವರಾಜಕುಮಾರ್ ಅವರು ಹೆಚ್ಚು ಸಂದರ್ಭಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಹೌದು ಶಿವಣ್ಣ ಅವರಿಗೆ ಗೀತಾ ಅವ್ರೆ ಒಂದು ಶಕ್ತಿಯಾಗಿದ್ದಾರೆ ಹಾಗಾಗಿ ಅವರ ಜೊತೆಯಲ್ಲೇ ಇರ್ತಾರೆ, ಇವರ ದಾಂಪತ್ಯ ಜೀವನ ನೋಡಿ ಅಭಿಮಾನಿಗಳು ಖುಷಿ ಪಟ್ಟಿರೋದಂತು ನಿಜ

ಶಿವರಾಜ್ ಕುಮಾರ್ ಅವರು ಚಿತ್ರರಂಗಕ್ಕೆ ಆನಂದ್ ಎಂಬ ಸಿನಿಮಾ ಮೂಲಕ ಎಂಟ್ರಿ ಕೊಡುತ್ತಾರೆ ಆದರೆ ಡಾಕ್ಟರ್ ರಾಜಕುಮಾರ್ ಅವರು ಕೆಲವು ಕಾರಣಗಳಿಂದ ತಮ್ಮ ಮಕ್ಕಳು ಮದುವೆಯ ನಂತರ ಸಿನಿಮಾರಂಗಕ್ಕೆ ಬರಬೇಕು ಎಂಬ ನಿಯಮವನ್ನು ಪಾಲಿಸುತ್ತಿದ್ದರು. ಸಿನಿಮಾ ರಂಗಕ್ಕೆ ಬಂದ ನಂತರ ಒಂದೆರಡು ಹಿಟ್ ಸಿನಿಮಾಗಳಾದರೆ ಗಾಸಿಪ್ ಪ್ರಾರಂಭವಾಗುತ್ತದೆ ಮದುವೆ ಆದರೆ ಗಾಸಿಪ್ ಕಡಿಮೆ ಆದ್ದರಿಂದ ರಾಜಕುಮಾರ್ ಅವರು ಈ ನಿರ್ಧಾರ ತೆಗೆದುಕೊಂಡರು.

ಆನಂದ್ ಸಿನಿಮಾ ರಿಲೀಸ್ ಆಗುವ ಮುನ್ನ ಶಿವರಾಜ್ ಕುಮಾರ್ ಅವರಿಗೆ ಮದುವೆ ಮಾಡಲು ಹುಡುಗಿಯನ್ನು ಹುಡುಕುತ್ತಿರುತ್ತಾರೆ. ಈ ವಿಷಯ ರಾಜಕೀಯದಲ್ಲಿ ಇದ್ದಂತಹ ಬಂಗಾರಪ್ಪನವರಿಗೆ ಗೊತ್ತಾಗುತ್ತದೆ. ಬಂಗಾರಪ್ಪನವರು ರಾಜಕುಮಾರ್ ಅವರ ಮನೆಗೆ ಬಂದು ರಾಜಕುಮಾರ್ ಅವರ ಬಳಿ ನಿಮ್ಮ ಮನೆಗೆ ನನ್ನ ಮಗಳು ಸೊಸೆಯಾಗಿ ಬರಬೇಕೆಂದು ನಾನು ಆಸೆ ಪಡುತ್ತೇನೆ ಎಂದರು. ಡಾಕ್ಟರ್ ರಾಜಕುಮಾರ್ ಅವರಿಗೆ ಬಂಗಾರಪ್ಪನವರ ಮಾತು ಕೇಳಿ ಬಹಳ ಸಂತೋಷವಾಗುತ್ತದೆ. ರಾಜಕುಮಾರ್ ಅವರು ತಮ್ಮನ್ನು ಸಾಮಾನ್ಯ ನಟನೆಂದು ಅಂದುಕೊಳ್ಳುತ್ತಾರೆ.

ನನ್ನಂತಹ ಸಾಮಾನ್ಯನ ಬಳಿ ಅಷ್ಟು ದೊಡ್ಡ ರಾಜಕೀಯ ವ್ಯಕ್ತಿ ಬಂದು ಮಾತನಾಡಿರುವುದು ಸಂತೋಷ ಎನ್ನುತ್ತಾರೆ. ರಾಜಕುಮಾರ್ ಅವರು ತಮ್ಮ ಕುಟುಂಬದವರಿಗೆ ವಿಷಯ ತಿಳಿಸಿ ಮಾತುಕತೆಯು ಮುಗಿಯುತ್ತದೆ. ಶಿವರಾಜ್ ಕುಮಾರ್ ಅವರು ಆನಂದ್ ಸಿನಿಮಾ ಬಿಡುಗಡೆಯ ನಿರೀಕ್ಷೆಯಲ್ಲಿದ್ದರು. ಮದುವೆ ಮಾತುಕತೆಯ ನಂತರ ಶಿವರಾಜಕುಮಾರ್ ಅವರಿಗೆ ವಿಷಯ ತಿಳಿಸಲಾಗುತ್ತದೆ ಶಿವರಾಜ್ ಕುಮಾರ್ ಅಣ್ಣಾವ್ರ ಮಾತನ್ನು ತೆಗೆದು ಹಾಕುತ್ತಿರಲಿಲ್ಲ ಮದುವೆಗೆ ಒಪ್ಪಿಗೆಯನ್ನು ಸೂಚಿಸುತ್ತಾರೆ.

1976 ಮೇ 19ರಂದು ಶಿವರಾಜ್ ಕುಮಾರ್ ಹಾಗೂ ಗೀತಾ ಅವರ ಮದುವೆಯಾಗುತ್ತದೆ. ಅರಮನೆ ಮೈದಾನದಲ್ಲಿ ಮದುವೆ ನಡೆದು ಜನಸಾಗರವೆ ಮದುವೆಗೆ ಸಾಕ್ಷಿಯಾಗಿತ್ತು. ಮದುವೆಯಾಗಿ ಎರಡು ತಿಂಗಳಿಗೆ ಆನಂದ ಸಿನಿಮಾ ಬಿಡುಗಡೆಯಾಗಿ ಬಿಗ್ ಹಿಟ್ ಆಗುತ್ತದೆ. ಬಂಗಾರಪ್ಪನವರ ಮಗಳು ಗೀತಾ ಅವರಿಗೆ ಅಹಂಕಾರವಿದೆ ಅವರು ಡಾಕ್ಟರ್ ರಾಜಕುಮಾರ್ ಅವರ ಕುಟುಂಬಕ್ಕೆ ಹೊಂದಿಕೊಳ್ಳುವುದಿಲ್ಲ ಎಂದು ಕೆಲವರು ಮಾತನಾಡುತ್ತಾರೆ ಆದರೆ ಗೀತಾ ಶಿವರಾಜಕುಮಾರ್ ಅವರು ರಾಜಕುಮಾರ್ ಅವರ ಮನೆಗೆ ಹೊಂದಿಕೊಂಡು ಕಡಿಮೆ ಸಮಯದಲ್ಲಿ ಎಲ್ಲ ಜವಾಬ್ದಾರಿಯನ್ನು ಹೊತ್ತುಕೊಳ್ಳುತ್ತಾರೆ. ಈ ದಂಪತಿಗೆ ಇಬ್ಬರು ಮಕ್ಕಳು ಇರುತ್ತಾರೆ ಡಾಕ್ಟರ್ ನಿರೂಪಮಾ ಹಾಗೂ ನಿವೇದಿತಾ. ಇವರೆಲ್ಲರ ಜವಾಬ್ದಾರಿಯನ್ನು ಗೀತಾ ಶಿವರಾಜಕುಮಾರ್ ಅವರು ವಹಿಸಿಕೊಂಡು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.

ಪಾರ್ವತಮ್ಮ ರಾಜಕುಮಾರ್ ಅವರು ನಿಧನರಾದ ನಂತರ ಗೀತಾ ಅವರೆ ಕುಟುಂಬದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾರೆ. ಎಲ್ಲಾ ಜವಾಬ್ದಾರಿಯನ್ನು ನಿಭಾಯಿಸುವ ಸಾಮರ್ಥ್ಯ ಗೀತಾ ಅವರಿಗೆ ಇದೆ. ಅವರು ಮಾಡಿದ ಒಂದು ಸಣ್ಣ ತಪ್ಪೆಂದರೆ ರಾಜಕೀಯಕ್ಕೆ ಸೇರಿರುವುದು. ಶಿವರಾಜ್ ಕುಮಾರ್ ಅವರ ಹಿಂದಿರುವ ಸ್ತ್ರೀಶಕ್ತಿ ಗೀತಾ ಶಿವರಾಜಕುಮಾರ್. ಈ ದಂಪತಿ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ. ಇವರ ದಾಂಪತ್ಯ ಯಾವಾಗಲೂ ಹೀಗೆ ಇರಲಿ ಎಂದು ಆಶಿಸೋಣ.

Leave a Reply

Your email address will not be published. Required fields are marked *