ಆಷಾಢ ಮಾಸವೆಂದರೆ ಕೆಲವರ ಮನಸ್ಸಿನಲ್ಲಿ ಅಶುಭ ಮಾಸ ಎಂದು ಬಿಂಬಿತವಾಗಿರುತ್ತದೆ. ಆದರೆ ಆಷಾಢ ಮಾಸ ಅಶುಭವೆಂದು ಯಾವುದೇ ಶಾಸ್ತ್ರಗಳಲ್ಲಿ ಉಲ್ಲೇಖವಾಗಿಲ್ಲ. ಹಾಗೆ ನೋಡಿದರೆ ಆಷಾಢ ಮಾಸವು ತುಂಬಾ ಪವಿತ್ರತೆಯನ್ನು ಹೊಂದಿರುವ ಮಾಸವಾಗಿದೆ. ಆಷಾಢ ಮಾಸದಲ್ಲಿ ಯಾವುದೇ ಶುಭ ಕಾರ್ಯಗಳು ನಡೆಯದೆ ಇದ್ದರೂ ಈ ಮಾಸದಲ್ಲಿ ಮಾಡುವ ಪೂಜೆಗಳಿಂದ ವಿಶೇಷವಾದ ಫಲಗಳು ಲಭಿಸುತ್ತದೆ.

ಆಷಾಢ ಮಾಸದಲ್ಲಿ ವಿಪರೀತವಾದ ಗಾಳಿ ಹಾಗೂ ಮಳೆ ಬರುವುದರಿಂದ ಶೀತವಾಗುವ ಪದಾರ್ಥಗಳನ್ನು ನಿಯಮಿತವಾಗಿ ಸೇವಿಸಬೇಕು. ಆಷಾಢ ಮಾಸದಲ್ಲಿ ಎಲ್ಲರಿಗೂ ತಿಳಿದಿರುವ ಹಾಗೆ ನಾಮಕರಣ, ಮದುವೆ, ಮುಂಜಿ, ನಿಶ್ಚಿತಾರ್ಥದ ಮಾತುಕತೆ ಹೀಗೆ ಯಾವುದೇ ಶುಭಕಾರ್ಯವನ್ನು ಮಾಡುವುದಿಲ್ಲ. ಆಷಾಢ ಮಾಸದಲ್ಲಿ ದೇವರಿಗೆ ವ್ರತವನ್ನು, ಪೂಜೆಯನ್ನು ಭಕ್ತಿಯಿಂದ ಮಾಡುವುದರಿಂದ ಭಗವಂತನನ್ನು ಬಹಳ ಬೇಗ ಒಲಿಸಿಕೊಳ್ಳಬಹುದು.

ಆಷಾಢ ಮಾಸವು ದೇವ ಪಾರಾಯಣವನ್ನು ಮಾಡಲು ಸೂಕ್ತವಾದ ಸಮಯವಾಗಿದೆ.
ಆಷಾಢ ಮಾಸದಲ್ಲಿ ಹೊಸದಾಗಿ ಮದುವೆಯಾಗಿರುವ ನವದಂಪತಿಗಳು ಒಟ್ಟಿಗೆ ಸೇರಬಾರದು ಎಂದು ಕೂಡ ಹೇಳಲಾಗುತ್ತದೆ, ಏಕೆಂದರೆ ಒಂದು ವೇಳೆ ಈ ಸಮಯದಲ್ಲಿ ಹೆಣ್ಣು ಮಗು ಗರ್ಭವತಿಯಾದರೆ ಆ ಮಗುವಿನ ಮೇಲೆ ಈ ವಾತಾವರಣದ ಪ್ರಭಾವವು ಬೀಳುವುದರಿಂದ ಮಗುವಿನ ಆರೋಗ್ಯದ ಮೇಲೆ ಏರುಪೇರು ಆಗುತ್ತದೆ. ಆದ್ದರಿಂದ ಆಷಾಢ ಮಾಸದಲ್ಲಿ ಹೆಣ್ಣುಮಕ್ಕಳನ್ನು ತವರಿಗೆ ಕಳಿಸುವ ಪದ್ಧತಿಯು ರೂಢಿಯಲ್ಲಿದೆ.

ಆಷಾಢ ಮಾಸದಲ್ಲಿ ಶಿವನ ವ್ರತವನ್ನು ಮಾಡುವುದು, ಲಕ್ಷ್ಮೀದೇವಿಯ ವ್ರತವನ್ನು ಸಹ ಮಾಡಬಹುದು. ಆಶಾಡ ಮಾಸದಲ್ಲಿ ದೀಪದ ಪೂಜೆಯನ್ನು ಮಾಡುವುದು ಬಹಳ ಶ್ರೇಷ್ಠಕರವಾಗಿರುತ್ತದೆ. ಆಷಾಢ ಮಾಸದಲ್ಲಿ ದಾನ ಮಾಡುವುದರಿಂದ ತುಂಬಾ ವಿಶೇಷವಾದ ಫಲಗಳು ಲಭಿಸುತ್ತವೆ. ಆಷಾಢ ಮಾಸದಲ್ಲಿ ಉಪ್ಪು, ನಲ್ಲಿಕಾಯಿ, ಚಪ್ಪಲಿ, ಛತ್ರಿ ಈ ರೀತಿ ವಸ್ತುಗಳನ್ನು ದಾನ ಮಾಡುವುದು ತುಂಬ ಶ್ರೇಷ್ಠವಾಗಿರುತ್ತದೆ. ಆಷಾಢ ಮಾಸದಲ್ಲಿ ಹೆಣ್ಣು ದೇವರಿಗೆ ತುಂಬಾ ಪ್ರಾಮುಖ್ಯತೆ ಇರುವುದರಿಂದ ಶುಕ್ರವಾರದ ದಿನದಂದು ಅಮ್ಮನವರ ದರ್ಶನವನ್ನು ಮಾಡುವುದು ತುಂಬಾ ಒಳ್ಳೆಯದು.

ಆಷಾಡ ಮಾಸದಲ್ಲಿ ಉಗ್ರ ದೇವರನ್ನು ಪೂಜಿಸುವದು ವಿಶೇಷ ಇದರಿಂದ ವಿಶೇಷ ಫಲ ಸಿಗುತ್ತದೆ ಅಂತಾನೆ ಹೇಳಬಹುದು. ಹಾಗಾದರೆ ಯಾವ ರೀತಿಯ ಉಗ್ರ ದೇವತೆಯನ್ನು ಪೂಜಿಸಬೇಕು ಅಂದರೆ ದುರ್ಗಾ ದೇವಿ ಲಕ್ಷ್ಮಿ ನರಸಿಂಹ ದೇವರ ಆರಾಧನೆ ಮಾಡಿದರೆ ವಿಶೇಷ ಫಲ ಪ್ರಾಪ್ತಿಯಾಗುತ್ತದೆ. ಇನ್ನು ಸಾಮಾನ್ಯವಾಗಿ ಮಹಿಳೆಯರು ಆಷಾಡ ಮಾಸದಲ್ಲಿ ದೇವಿಯ ಆರಾಧನೆ ಮಾಡುವದನ್ನು ನೋಡಬಹುದು ಅಲ್ಲದೆ ಶ್ರೀ ವಿಷ್ಣುವಿನ ಆರಾಧನೆ ಮಾಡುವದು ವಿಶೇಷ. ನೀವು ಪ್ರತಿನಿತ್ಯ ಆಷಾಡ ಮಾಸದಲ್ಲಿ ಸ್ನಾನ ಮಾಡಿದ ನಂತರ ವಿಷ್ಣುವಿಗೆ ಸಂಬಂದಿಸಿದ ಕೆಲವು ನಾಮಗಳನ್ನು ಪತ್ನಿಸಿದರೆ ಒಳ್ಳೆಯದು ಯಾವ ರೀತಿ ಅಂದರೆ ಓಂ ನಮೋ ನಾರಾಯಣಾಯ ಓಂ ನಮೋ ಭಗವತೇ ವಾಸುದೇವಾಯ ಎಂದು.

ಈ ಆಷಾಡ ಮಾಸದಲ್ಲಿ ನೀವು ಕೆಲವೊಂದು ದಾನ ಮಾಡುವದು ಒಳ್ಳೆಯದು ನಿಮ್ಮ ಮನೆ ಗೃಹದೋಷ ಪರಿಹಾರ ಆಗುತ್ತದೆ ಹಾಗು ನಿಮ್ಮ ಜಾತಕದಲ್ಲಿನ ಕೆಲವೊಂದು ದೋಷಗಳು ಪರಿಹಾರವಾಗುತ್ತವೆ ಚಪ್ಪಲಿ ಹಾಗು ಛತ್ರಿ ಉಪ್ಪು ನೆಲ್ಲಿಕಾಯಿ ಈ ರೀತಿ ವಸ್ತುಗಳನ್ನು ನೀವು ದಾನ ಮಾಡುವದರಿಂದ ನಿಮ್ಮ ದೋಷಗಳು ನಿವಾರಣೆ ಆಗುತ್ತವೆ ಇನ್ನು ಆಷಾಡ ಮಾಸದಲ್ಲಿ ಚತುರ್ ಮಾಸದ ಬಗ್ಗೆ ಕಂದ ಪುರಾಣದಲ್ಲಿ ಏನು ಹೇಳುತ್ತಾರೆ ಅಂದರೆ ಯಾರು ಈ ವ್ರತವನ್ನು ಪಾಲಿಸುತ್ತಾರೋ ಅಂತವರು ಕೆಲವು ನಿಯಮವನ್ನು ಪಾಲಿಸಬೇಕು

ಕೆಲವು ಆಹಾರ ಪದಾರ್ಥಗಳನ್ನು ತ್ಯಜಿಸಬೇಕು ಆಗ ಒಳ್ಳೆಯ ಫಲ ದೊರೆಯುತ್ತದೆ ಹಾಗೆ ದೇವರ ಗುಡಿ ಶುದ್ದಿಗೊಳಿಸುವದು ಹಾಗು ಮನೆಯ ತುಳಸಿ ಕಟ್ಟಿ ತೊಳೆದು ಪೂಜೆ ಮಾಡುವದರಿಂದ ವಿಷ್ಣುವಿನ ಅನುಗ್ರಹ ಸುಲಭವಾಗಿ ದೊರೆಯುತ್ತದೆ. ಆಷಾಡ ಮಾಸದ ಶುಕ್ಲ ಪಕ್ಷದ ದ್ವಾದಶಿಯಿಂದ ಶ್ರಾವಣ ಮಾಸದ ಶುಕ್ಲ ಪಕ್ಷ ದ್ವಾದಶಿಯವರೆಗೂ ಸೊಪ್ಪನ್ನು ತಿನ್ನಬಾರದು ಹಾಗು ಭಾದ್ರಪದ ಮಾಸದಲ್ಲಿ ಮೊಸರನ್ನು ತಿನ್ನಬಾರದು ಅದೇ ರೀತಿ ಆಶ್ವಿಜ ಮಾಸದಲ್ಲಿ ಹಾಲನ್ನು ಉಪಯೋಗಿಸಬಾರದು ನಂತರ ಕಾರ್ತೀಕ ಮಾಸದ ಶುಕ್ಲ ಪಕ್ಷದ ದ್ವಾದಶಿ ಮಾಸದವರೆಗೂ ಬೇಳೆಕಾಳು ಹೆಸರುಕಾಳು ಸೇವಿಸಬಾರದು

ಇದರಿಂದ ನಿಮಗೆ ದೇವರ ಸಂಪೂರ್ಣ ಅನುಗ್ರಹ ಪ್ರಾಪ್ತಿಯಾಗುತ್ತದೆ ಮತ್ತು ಬೆಲ್ಲವನ್ನು ನಿಮಮಿತ ರೀತಿಯಲ್ಲಿ ತಿನ್ನಬೇಕು. ನಿಮ್ಮ ಮಾತುಗಳು ಸುಮಧುರವಾಗಿ ಬರುತ್ತವೆ ಹಾಗೆ ಚತುರ ಮಾಸದಲ್ಲಿ ಎಣ್ಣೆ ತಿನ್ನುವದು ಬಿಟ್ಟರೆ ಸಂತಾನೋತ್ಪತ್ತಿ ಜಾಸ್ತಿ ಆಗುತ್ತದೆ ಇದೆ ರೀತಿ ಬಿಳಿ ಮೂಲಂಗಿ, ಕೆಂಪು ಮೂಲಂಗಿ, ಹುರುಳೆ ಕಾಯಿ, ಕುಂಬಳ ಕಾಯಿ, ಪಡವಲ ಕಾಯಿ, ನೆಲ್ಲಿಕಾಯಿ, ಹುಣುಸೆ ಹಣ್ಣು ತಿನ್ನುವದು ಬಿಟ್ಟರೆ ನಿಮಗೆ ಲಕ್ಷ್ಮಿ ದೇವಿಯ ಅನುಗ್ರಹ ದೊರೆಯುತ್ತದೆ ಅಂತ ಹೇಳಬಹುದು. ಆಷಾಢ ಮಾಸ ಜೂನ್‌ 30ಕ್ಕೆ ಪ್ರಾರಂಭವಾಗಿ ಜುಲೈ 28ಕ್ಕೆ ಮುಕ್ತಾಯವಾಗುತ್ತದೆ.

ಕುಮಾರ ಷಷ್ಠಿ, ಗೌರಿ ವ್ರತ, ಭಾನು ಸಪ್ತಮಿ, ಚತುರ್ಮಾಸ ವ್ರತ ಹಾಗೂ ಭೀಮನ ಅಮವಾಸ್ಯೆ ಈ ತಿಂಗಳಿನಲ್ಲಿದೆ.ಆಷಾಢ ಮಾಸ ಒಳ್ಳೆಯದಲ್ಲ ಎಂಬ ಕಲ್ಪನೆ ಜನರಲ್ಲಿ ಇದೆ. ಈ ಸಮಯದಲ್ಲಿ ಯಾವುದೇ ಶುಭ ಕಾರ್ಯ ಮಾಡುವುದಿಲ್ಲ. ಮದುವೆ, ಗೃಹ ಪ್ರವೇಶ, ನಾಮಕರಣ ಈ ರೀತಿಯ ಯಾವುದೇ ಕಾರ್ಯಕ್ರಮ ಮಾಡುವುದಿಲ್ಲ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458. ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರುಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ) ಪೂರ್ವಜರ ಶಾಪ (ಪಿತೃ ದೋಷ) ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *