ಕಾಮಿಡಿ ಪೀಸ್ ಹೀರೋನಾ ಅಂತ ನಕ್ಕವರ ಮುಂದೆ ನಟ ಶರಣ್ ನಟನಾಗಿ ಬೆಳೆದದ್ದು ಹೇಗೆ ಗೊತ್ತಾ? ಇದು ಸಕ್ಸಸ್ ಅಂದ್ರೆ

0 2

ಶರಣ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಾಯಕನಟ, ನಿರ್ಮಾಪಕ ಮತ್ತು ಹಿನ್ನಲೆ ಗಾಯಕ. ಸುಮಾರು 2 ದಶಕಗಳಿಂದ ತಮ್ಮ ತಿಳಿಹಾಸ್ಯದಿಂದ ಕನ್ನಡ ಸಿನಿಪ್ರಿಯರಿಗೆ ಕಚಗುಳಿಯಿಡುತ್ತಿರುವ ಶರಣ್ ತುಂಬು ಕಲಾಕುಟುಂಬದಿಂದ ಬಂದವರು. ಇವರ ಹಿರಿಯ ಸಹೋದರಿ ಶೃತಿ ಕನ್ನಡ ಚಿತ್ರರಂಗದ ಪ್ರಮುಖ ನಾಯಕನಟಿ.

ಶರಣ್ ತಂದೆ ತಾಯಿ ಆಗಿನ ಪ್ರಸಿದ್ಧ ಗುಬ್ಬಿ ನಾಟಕ ಕಂಪನಿಯಲ್ಲಿದ್ದರು. ಹಲವು ದಿನಗಳ ಕಾಲ ನಾಟಕ ತಂಡ ಯಾದಗಿರಿಯಲ್ಲಿ ಬೀಡುಬಿಟ್ಟಿದ್ದಾಗ ಶರಣ್ ತಾಯಿ ತುಂಬು ಗರ್ಭಿಣಿಯಾಗಿದ್ದರು. ಒಮ್ಮೆ ವೈದ್ಯರ ಹತ್ತಿರ ಹೆರಿಗೆಪೂರ್ವ ಪರೀಕ್ಷೆಗೆ ಹೋದಾಗ ಹೊಟ್ಟಿಯಲ್ಲಿರುವ ಮಗು ಅಪಾಯಕರ ಸ್ಥಿತಿಯಲ್ಲಿರುವುದರಿಂದ, ತಾಯಿಯ ಆರೋಗ್ಯಕ್ಕಾಗಿಯಾದರೂ ಗರ್ಭಪಾತ ಮಾಡುವುದು ಸೂಕ್ತವೆಂದು ಹೇಳುತ್ತಾರೆ.

ಆದರೆ ಶರಣ್ ತಾಯಿ ಒಪ್ಪುವುದಿಲ್ಲ. ತಿಂಗಳು ತುಂಬಿದಾಗ ಡಾಕ್ಟರ್ ಸಿಸೇರಿಯನ್‌ಗೆ ಸೂಚಿಸುತ್ತಾರೆ. ಆಗ ಶರಣ್ ತಾಯಿ ಯಾದಗಿರಿಯ ಪ್ರಸಿದ್ಧ ಶರಣ ಬಸವೇಶ್ವರರನ್ನು ಪ್ರಾರ್ಥಿಸಿ, ಮಗು ಕ್ಷೇಮವಾಗಿ ಜನಿಸಿದರೆ ನಿನ್ನ ಹೆಸರನ್ನೇ ಇಡುತ್ತೇನೆಂದು ಹರಕೆ ಹೊರುತ್ತಾರೆ. ನಂತರ ಹರಕೆಯಂತೆ ಸುಖಪ್ರಸವವಾದಾಗ ಮಗುವಿಗೆ ಶರಣ್ ಎಂದು ಹೆಸರಿಟ್ಟರು.

ಕನ್ನಡ ಚಿತ್ರರಂಗದಲ್ಲಿ ಅದೆಷ್ಟೋ ಕಲಾವಿದರು ನಟರಾದ ಕ್ಕಿಂತ ಮುಂಚೆ ತಮ್ಮ ನಿಜ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಅನುಭವಿಸುತ್ತಾ ವಿವಿಧ ರೀತಿಯ ಕೆಲಸಗಳನ್ನು ಮಾಡಿ ಇಂದು ಚಿತ್ರರಂಗದಲ್ಲಿ ಉನ್ನತ ಸ್ಥಾನವನ್ನು ಪಡೆದಿದ್ದಾರೆ. ಇನ್ನು ಇಂತಹ ನಟರ ಸಾಲಿನಲ್ಲಿ ಶರಣ್ ಅವರ ಹೆಸರು ಕೂಡ ಕೇಳಿಬರುತ್ತದೆ. ನಟ ಶರಣ್ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಡುವ ಮೊದಲು ಆರ್ಕೆಸ್ಟ್ರ ಒಂದರಲ್ಲಿ ಗಾಯಕರಾಗಿ ಕೆಲಸ ಮಾಡುತ್ತಿದ್ದರು.

ಕೆಲವು ದಿನಗಳು ಕಳೆದ ನಂತರ ಅವರು ಕಿರುತೆರೆಯ ಧಾರವಾಹಿಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಅಭಿನಯಿಸುತ್ತಾ ಕಲಾವಿದರಾಗಿ ಗುರುತಿಸಿಕೊಂಡರು. ನಂತರ ಅವರು ನಿರ್ದೇಶಕ ಸಿದ್ದಲಿಂಗಯ್ಯ ಅವರ ಪ್ರೇಮ ಪ್ರೇಮ ಪ್ರೇಮ ಎಂಬ ಸಿನಿಮಾದಲ್ಲಿ ಹಾಸ್ಯ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಈ ಚಿತ್ರದ ನಂತರ ನಟ ಶರಣ್ ಅವರು ಕರ್ಪೂರದ ಗೊಂಬೆ, ಯುವರಾಜ, ಮೊನಾಲಿಸಾ, ಕೆಂಪೇಗೌಡ, ಫ್ರೆಂಡ್ಸ್ ಸೇರಿದಂತೆ ಸುಮಾರು 100ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಹಾಸ್ಯಗಾರನ ಪಾತ್ರದಲ್ಲಿ ಮಿಂಚಿದರು. ಇನ್ನು ಇವರ ಹಾಸ್ಯ ಪಾತ್ರವೂ ಸಾಕಷ್ಟು ಕನ್ನಡಿಗರಿಗೆ ಇಷ್ಟವಾಯಿತು. ಹೀಗೆ ಹಾಸ್ಯ ಪಾತ್ರಗಳ ಮೂಲಕ ಜನಮನಸೆಳೆದ ನಟ ಶರಣ್ ಅವರು ‘ರಾಂಬೊ’ ಎಂಬ ಸಿನಿಮಾದ ಮೂಲಕ ನಾಯಕ ನಟರಾಗಿ ಯಶಸ್ವಿಯಾದರು. ಈ ಚಿತ್ರದ ನಂತರ ಅವರು ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ಕನ್ನಡಿಗರ ಮನಸ್ಸನ್ನು ಗೆದ್ದರು.

ನಟ ಶರಣ್ ಅವರ ರಾಂಬೋ ಚಿತ್ರದ ನಂತರ ವಿಕ್ಟರಿ, ಜಯಲಲಿತಾ, ಬುಲೆಟ್ ಬಸ್ಯಾ, ಜೈ ಮಾರುತಿ 800, ಅಧ್ಯಕ್ಷ, ರಾಂಬೊ 2, ವಿಕ್ಟರಿ 2, ಅಧ್ಯಕ್ಷ ಇನ್ ಅಮೆರಿಕ ಹೀಗೆ ಹತ್ತು ಹಲವಾರು ಸಿನಿಮಾಗಳಲ್ಲಿ ನಾಯಕನಟರಾಗಿ ಯಶಸ್ವಿಯಾದರು. ಇನ್ನು ಇದೀಗ ಸಂದರ್ಶನವೊಂದರಲ್ಲಿ ನಟ ಶರಣ್ ಅವರು ತಮ್ಮ ತಾಯಿ ಪ್ರೀತಿಯ ಬಗ್ಗೆ ಮಾತನಾಡಿದ್ದು, ಅಂತಹ ತಾಯಿ ಪ್ರೀತಿ ಪಡೆಯಬೇಕಾದರೆ ನೂರು ಜನ್ಮದ ಪುಣ್ಯ ಎಂದು ಅವರು ಹೇಳಿದ್ದಾರೆ. ಅಷ್ಟೇ ಅಲ್ಲದೆ ಅವರಿಗೆ ಅಮ್ಮ ಇಲ್ಲ ಆದರೆ ಅಮ್ಮಂದಿರು ಇದ್ದಾರೆ ಎಂದು ಕೂಡ ಹೇಳಿದ್ದಾರೆ. ಇನ್ನೂ ಮಾತು ಮುಂದುವರಿಸಿದ ನಟ ಶರಣ್ ಅವರು ನಾನು ಈ ಮಟ್ಟಕ್ಕೆ ಬೆಳೆಯಬೇಕಾದರೆ ನನ್ನ ಅಮ್ಮಂದಿರ ಪರಿಶ್ರಮವೇ ಕಾರಣ. ಇದನ್ನು ಪ್ರತಿಯೊಬ್ಬರು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

ಶರಣ್ ಅವರು ನನಗೆ ಜನ್ಮ ನೀಡಿದ ತಾಯಿ ಯಾರು ಎಂದು ಗೊತ್ತಿಲ್ಲ. ಆದರೆ ಅದನ್ನು ತಿಳಿದುಕೊಳ್ಳುವ ಅವಶ್ಯಕತೆ ನನಗಿಲ್ಲ. ಅದರಿಂದ ಪ್ರಯೋಜನವೂ ಇಲ್ಲ. ಏಕೆಂದರೆ ನನ್ನ ತಾಯಂದಿರು ಸಮಾನವಾಗಿ ಪ್ರೀತಿಸುತ್ತಾರೆ. ಅಷ್ಟೇ ಅಲ್ಲದೆ ನನ್ನ ಸಹೋದರಿಯರಾದ ಶ್ರುತಿ ಹಾಗೂ ಉಷಾಗೆ ಅವರ ತಾಯಿಯಂದಿರು ಯಾರು ಎಂಬುದೇ ಗೊತ್ತಿಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ಈ ವಿಚಾರವು ಹಾಗೆ ಇರಲಿ, ನನಗೆ ಇಬ್ಬರು ತಾಯಂದಿರು ಇದ್ದಾರೆ ಎಂದು ಬಾಲ್ಯದಿಂದ ಇಲ್ಲಿಯವರೆಗೆ ಕೆಲವರು ಅಸೂಯೆ ಪಟ್ಟರೆ, ಮತ್ತೆ ಕೆಲವರು ನೀನು ಪುಣ್ಯವಂತ ಎಂದು ಅಭಿನಂದಿಸಿದ್ದಾರೆ. ಇದೀಗ ಶರಣ್ ಅವರಿಗೆ ಇಬ್ಬರು ತಾಯಂದಿರು, ತಂದೆ ಹಾಗೂ ಅಜ್ಜ-ಅಜ್ಜಿ ಇದ್ದಾರೆ. ಎಲ್ಲರೊಂದಿಗೆ ಇದೀಗ ಸುಖವಾಗಿ ಕಾಲ ಕಳೆಯುತ್ತಿರುವ ನಟ ಶರಣ್ ಅವರು ಚಿತ್ರರಂಗದಲ್ಲಿ ಕೂಡ ಸಕ್ರಿಯರಾಗಿದ್ದಾರೆ.

ನಟ ಶರಣ್ ಅವರಿಗೆ ಇಬ್ಬರು ಮುದ್ದಾದ ಮಕ್ಕಳು ಇದ್ದಾರೆ. ಮಗ ಹೃದಯ ಮತ್ತು ಮಗಳು ಪುಣ್ಯ. ಹಾಸ್ಯನಟನೆಯಲ್ಲಿ ನಟ ಶರಣ್ ಎತ್ತಿದ ಕೈ ಆದರೆ ಮಗಳು ಪುಣ್ಯ ಮುಗ್ಧತೆಯಲ್ಲಿ ತಂದೆಯನ್ನು ಮೀರಿಸುವ ಇದ್ದಾಳೆ. ಶರಣ್ ಅವರ ಅವತಾರ ಪುರುಷ ಎಂಬ ಸಿನಿಮಾದಲ್ಲಿ ತಂದೆ ಜೊತೆ ಮಗಳು ಪುಣ್ಯ ಕೂಡ ಅಭಿನಯಿಸಲಿದ್ದಾರೆ. ಚಿತ್ರರಂಗಕ್ಕೆ ಪ್ರವೇಶ ಮಾಡುತ್ತಿದ್ದಾಳೆ ಪುಟ್ಟ ಹುಡುಗಿಯ ಮುಗ್ಧತೆ ಎಲ್ಲರಿಗೂ ಕೂಡ ಇಷ್ಟವಾಗುವಂತೆ ಇದೆ.

ಪುಣ್ಯ ಸ್ಯಾಂಡಲ್ ವುಡ್ ಗೆ ಬಾಲನಟಿಯಾಗಿ ಎಂಟ್ರಿ ಕೊಡಲು ಸಜ್ಜಾಗಿದ್ದಾಳೆ. ಪುಣ್ಯ ಅವರ ಫಸ್ಟ್ ಲುಕ್ ಪೋಸ್ಟರ್ ನೋಡಿದರೆ ಸಿನಿಮಾ ಬಿಡುಗಡೆಯಾದ ನಂತರ ಇವರ ಮುದ್ದಾದ ನಟನೆ ಮತ್ತು ಮುಗ್ಧತೆ ಎಲ್ಲರಿಗು ಇಷ್ಟವಾಗುವುದು ಖಂಡಿತ. ಮಕ್ಕಳ ಸಿನಿಮಾ ನೋಡಿದರೆ ಮನಸ್ಸಿಗೆ ಒಂದು ರೀತಿ ಸಂತೋಷ ಆಗುವುದು ಖಂಡಿತ. ಈ ಹಿಂದೆ ಮುಗ್ಧತೆಗೆ ಮತ್ತೊಂದು ಹೆಸರಾಗಿದ್ದ ಬಾಲನಟಿ ಬೇಬಿ ಶ್ಯಾಮಿಲಿ ಹಾಗೆ ಶರಣ್ ಅವರ ಮಗಳು ಪುಣ್ಯ ಕೂಡ ಆಗುವುದರಲ್ಲಿ ಸಂದೇಹವಿಲ್ಲ.

Leave A Reply

Your email address will not be published.