ಮಧ್ಯಮ ಕುಟುಂಬದ 20 ವರ್ಷದ ಗಗನ್ ಎಂಬ ಹುಡುಗ ಎರಡು ವರ್ಷಗಳ ಹಿಂದೆ ಪ್ರಪಂಚವನ್ನು ಸುತ್ತುವ ಕನಸನ್ನು ಕಂಡಿದ್ದ, ಪ್ರಪಂಚದ ಪ್ರಖ್ಯಾತ ಸ್ಥಳಗಳನ್ನು ಕನ್ನಡಿಗರಿಗೆ ತೋರಿಸಬೇಕು ಎನ್ನುವುದು ಆತನ ಕನಸಾಗಿತ್ತು. ಗಗನ್ ತನ್ನ ಕನಸನ್ನು ಹೇಗೆ ಈಡೇರಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ಸಂಪೂರ್ಣವಾಗಿ ಈ ಲೇಖನದಲ್ಲಿ ನೋಡೋಣ.

ಗಗನ್ ಕಟ್ಟಿಕೊಂಡ ಪ್ರಪಂಚ ಸುತ್ತುವ ಕನಸು ಈಡೇರುವುದು ಅಷ್ಟು ಸುಲಭವಾಗಿರಲಿಲ್ಲ. ಶ್ರೀಮಂತರಿಗೆ ಪ್ರಪಂಚದ ಎಲ್ಲ ಸ್ಥಳಗಳಿಗೆ ಭೇಟಿ ಕೊಡಲು ಸಾಧ್ಯವಿಲ್ಲ. ಆದರೆ ಈ ಹುಡುಗ ಗುರಿಯನ್ನು ಬಿಡಲಿಲ್ಲ, ಈ ಹುಡುಗನ ಯುಟ್ಯೂಬ್ ಚಾನೆಲ್ ನ ಹೆಸರು ಡಾಕ್ಟರ್ ಬ್ರೊ. ನಮಸ್ಕಾರ ದೇವರು ಎನ್ನುತ್ತಾ ವಿಡಿಯೊ ಆರಂಭಿಸುವ ಡಾಕ್ಟರ್ ಬ್ರೊ ಈತ ಸರಳ ಭಾಷೆಯಲ್ಲಿ ಸ್ಥಳಗಳ ಬಗ್ಗೆ ವಿವರವನ್ನು ಕೊಡುತ್ತಾನೆ. ಇವರ ಮಾತನ್ನು ಕೇಳುತ್ತಿದ್ದರೆ ನಮ್ಮ ಆತ್ಮೀಯರು ನಮ್ಮೊಂದಿಗೆ ಮಾತನಾಡುತ್ತಿದ್ದಾರೆ ಎಂದು ಅನಿಸುತ್ತದೆ.

ಇವರ ಮಾತಿನ ಶೈಲಿ ಮಾತ್ರವಲ್ಲದೆ ನೀಡುವ ಮಾಹಿತಿ ಕೂಡ ಸ್ಪಷ್ಟವಾಗಿರುತ್ತದೆ. ಡಾಕ್ಟರ್ ಬ್ರೊ ಯುವಕನ ಹೆಸರು ಗಗನ್, ಅವರಿಗೆ ಈಗ ಕೇವಲ 23 ವರ್ಷ ವಯಸ್ಸು. ಗಗನ್ ಹುಟ್ಟಿದ್ದು ಬೆಂಗಳೂರಿನ ಪಕ್ಕದ ಒಂದು ಹಳ್ಳಿಯಲ್ಲಿ, ಈಗ ಆ ಹಳ್ಳಿ ಬೆಂಗಳೂರಿಗೆ ಸೇರಿಕೊಂಡಿದೆ. ಡಾಕ್ಟರ್ ರೋಗಿಗಳಿಗೆ ಆಪರೇಷನ್ ಮಾಡುತ್ತಾರೆ, ಅದರಂತೆ ಗಗನ್ ಕೂಡ ಹೊಸ ಹೊಸ ಸ್ಥಳಗಳ ಆಪರೇಷನ್ ಮಾಡಿ ಮಾಹಿತಿ ನೀಡುತ್ತಾರೆ ಆದ್ದರಿಂದ ಡಾಕ್ಟರ್ ಬ್ರೊ ಎಂದು ಹೆಸರಿಡಲಾಗಿದೆ ಎಂದು ಗಗನ್ ಅವರೆ ಹೇಳಿಕೊಂಡಿದ್ದಾರೆ.

2016 ರಲ್ಲಿ ಗಗನ್ ಕೇವಲ ಹವ್ಯಾಸಕ್ಕೆ ಯುಟ್ಯೂಬ್ ಚಾನೆಲ್ ಮಾಡಿದ್ದರು. ಹೋಗ್ತಾ ಹೋಗ್ತಾ ಹೊಸ ಪ್ರಯತ್ನಗಳನ್ನು ಮಾಡುತ್ತಾರೆ ಅದು ಜನರಿಗೆ ಇಷ್ಟವಾಗುತ್ತದೆ. ಮೊದಲು ಯುಟ್ಯೂಬ್ ನಲ್ಲಿ ವಿಡಿಯೋ ಮಾಡುತ್ತೇನೆ ಎಂದು ಪ್ರಯತ್ನ ಮಾಡಿದಾಗ ಮನೆಯಲ್ಲಿ ಸಪೋರ್ಟ್ ಮಾಡಲಿಲ್ಲ. ಗಗನ್ ಗೆ ಬೇರೆಯವರ ಕೈ ಕೆಳಗೆ ಕೆಲಸ ಮಾಡಲು ಇಷ್ಟವಿರಲಿಲ್ಲ. ಕಾಲೇಜ್ ಹೋಗುವ ಸಮಯದಲ್ಲಿ ಗಗನ್ ಕೆಲವು ಕೆಲಸ ಮಾಡುತ್ತಿದ್ದರು ಆಗ ನಡೆದ ಘಟನೆಗಳು ಅವರಿಗೆ ಬೇಸರ ತರಿಸಿತು, ಇದರಿಂದ ಯಾವ ಕಾರಣಕ್ಕೂ ಯಾರ ಕೈ ಕೆಳಗೂ ಕೆಲಸ ಮಾಡುವುದಿಲ್ಲ ಎಂದು ನಿರ್ಧಾರ ಮಾಡಿದರು.

ನಂತರದ ದಿನಗಳಲ್ಲಿ ಮನೆಯವರು ಬೆಂಬಲಿಸುತ್ತಾರೆ. ಗಗನ್ ಕರ್ನಾಟಕದ ಸ್ಥಳಗಳ ವಿಡಿಯೊ ಮಾಡುತ್ತಾರೆ, ಅದರಲ್ಲಿ ಸಿಕ್ರೇಟ್ ಸ್ಥಳಗಳ ಬಗ್ಗೆಯೂ ವಿಡಿಯೊ ಮಾಡುತ್ತಾರೆ. ಈ ಸಮಯದಲ್ಲಿ ಗಗನ್ ಹಲವು ಅವಮಾನಗಳನ್ನು ಎದುರಿಸಿದರು. ಸಿಕ್ರೇಟ್ ಸ್ಥಳಗಳ ಬಗ್ಗೆ ಜನರಿಗೆ ತೋರಿಸಿ ಸ್ಥಳವನ್ನು ಹಾಳು ಮಾಡುತ್ತಿದ್ದಾನೆ ಎಂದು ಟ್ರೋಲ್ ಪೇಜ್ ನಲ್ಲಿ ಟ್ರೊಲ್ ಮಾಡುತ್ತಿದ್ದರು. ಗಗನ್ ಒಳ್ಳೆಯ ಉದ್ದೇಶಕ್ಕೆ ಸ್ಥಳಗಳ ಬಗ್ಗೆ ಮಾಹಿತಿ ಕೊಡುತ್ತಿದ್ದರೂ ಅಲ್ಲಿಗೆ ಬರುವ ಪ್ರವಾಸಿಗರ ವರ್ತನೆಯಿಂದ ಗಗನ್ ಅವಮಾನ ಅನುಭವಿಸುತ್ತಿದ್ದರು. ಗಗನ ವಿಡಿಯೊ ಮಾಡುವಾಗಲೆ ಪರಿಸರದ ಕಾಳಜಿ ನೋಡಿಕೊಂಡು ಮಾಡುತ್ತಿದ್ದರು, ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಮಾತನಾಡುತ್ತಿದ್ದರು. ಹೀಗಾಗಿ ಟ್ರೋಲ್ ಗಳಿಗೆ ಗಗನ್ ತಲೆಕೆಡಿಸಿಕೊಳ್ಳುವುದಿಲ್ಲ. ವಿಡಿಯೊ ಮಾಡುತ್ತಾರೆ ಜೊತೆಗೆ ಸೋಲೊ ಟ್ರಾವೆಲ್ ಮಾಡುತ್ತಾರೆ.

ಗಗನ್ ಮಾಡುವ ವಿಡಿಯೋಗಳು ಜನರಿಗೆ ಇಷ್ಟವಾಗುತ್ತದೆ. ಗಗನ್ ರೂಮ್ ನಲ್ಲಿ ಮೊದಲು ಕಾಣಿಸುವುದು ವಿಶ್ವ ಭೂಪಟ, ಇದರಲ್ಲಿ ಕಾಣಿಸುವ ಪ್ರತಿಯೊಂದು ಸ್ಥಳವನ್ನು ನಿಮಗೆ ತೋರಿಸುತ್ತೇನೆ ಎಂಬ ಪ್ರಾಮಿಸ್ ಮಾಡಿದ ವಿಡಿಯೋವನ್ನು ಗಗನ್ ಮಾಡಿದ್ದರು. ಪ್ರಾರಂಭದಲ್ಲಿ ಕರ್ನಾಟಕದ ಕೆಲವು ಪ್ರದೇಶಗಳನ್ನು ಸುತ್ತಾಡುತ್ತಾರೆ. ಗಗನ್ ಕೆಲವು ಬ್ಲಾಗ್ ಗಳನ್ನು ಮಾಡುತ್ತಾರೆ ಅದು ಜನರಿಗೆ ಇಷ್ಟವಾಗುತ್ತದೆ. ಗಗನ್ ಕರ್ನಾಟಕ ಸುತ್ತಿದ ನಂತರ ಭಾರತ ಸುತ್ತುತ್ತಾರೆ.

ಗಗನ್ ಕೆಲವು ಸುಂದರವಾಗಿರುವ ಸ್ಥಳವನ್ನು ಆಯ್ಕೆಮಾಡಿ ಲೊ ಬಜೆಟ್ ಟ್ರಿಪ್ ಪ್ಲಾನ್ ಮಾಡುತ್ತಾರೆ. ಅವರು ಟ್ರೇನ್ ನಲ್ಲಿಯೆ ಹೋಗುತ್ತಿದ್ದರು ಇದರಿಂದ ಕಡಿಮೆ ಖರ್ಚಿನಲ್ಲಿ ಪ್ರಯಾಣ ಮಾಡಬಹುದು ಎಂದು. ಹೋದಲ್ಲಿ ಹಾಸ್ಟೆಲ್ ಗಳಲ್ಲಿ ಉಳಿದುಕೊಳ್ಳುತ್ತಿದ್ದರು, ಹಾಸ್ಟೆಲ್ ಸಿಗದೆ ಇದ್ದಾಗ ಕಾಡಿನ ಪಕ್ಕದಲಿ ಅಥವಾ ನದಿ ಪಕ್ಕದಲ್ಲಿ ಟೆಂಟ್ ಹಾಕಿ ಕಳೆದಿದ್ದಾರೆ. ಟೆಂಟ್ ಹಾಕಿದ ವಿಡಿಯೋಗಳನ್ನು ಕೂಡ ನೋಡಬಹುದು ಹೀಗೆ ಅವರ ವಿಡಿಯೋಗಳನ್ನು ಜನರು ಇಷ್ಟಪಡುತ್ತಾರೆ. ಮೊದಲು ವಾರಕ್ಕೆ ಒಂದು ವಿಡಿಯೋವನ್ನು ಅಪ್ಲೋಡ್ ಮಾಡುತ್ತಿದ್ದರು ಜನರ ರೆಸ್ಪಾನ್ಸ್ ನೋಡಿ ವಾರಕ್ಕೆ ಎರಡು ವಿಡಿಯೋಗಳನ್ನು ಅಪ್ಲೋಡ್ ಮಾಡಿದರು.

ದೆಹಲಿ, ರಾಜಸ್ಥಾನ್, ಉತ್ತರಾಖಂಡ್ ಹೀಗೆ ಹಲವು ಕಡೆ ಸುತ್ತಾಡುತ್ತಾರೆ. ನೋಡು ನೋಡುತ್ತಾ ವೀಕ್ಷಕರ ಸಂಖ್ಯೆ ಹೆಚ್ಚಾಗುತ್ತದೆ. ಗಗನ್ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿ ಬಳಗವನ್ನೆ ಹೊಂದುತ್ತಾರೆ. ಗಗನ್ ಅವರ ಕನಸು ನನಸಾಗಲು ಯೂಟ್ಯೂಬ್ ಒಂದು ದೊಡ್ಡ ಕಾರಣವಾಗುತ್ತದೆ. ತಮ್ಮ ವೀಕ್ಷಕರಿಗೆ ಪ್ರಾಮಿಸ್ ಮಾಡಿದಂತೆ ಜಗತ್ತನ್ನು ಸುತ್ತಲು ಹೊರಟಿದ್ದಾರೆ. ದುಬೈ ಎಂಬ ಅದ್ಭುತ ಜಗತ್ತನ್ನು ಗಗನ್ ತಮ್ಮ ಸರಳ ಭಾಷೆಯಲ್ಲಿ ಅದ್ಭುತವಾಗಿ ವಿವರಿಸಿದ್ದಾರೆ.

ಗಗನ್ ಭೇಟಿ ಕೊಡುವ ಜಾಗದ ಬಗ್ಗೆ ಮೊದಲೆ ರಿಸರ್ಚ್ ಮಾಡಿ ಅದರ ಬಗ್ಗೆ ಜನರಿಗೆ ಮನಮುಟ್ಟುವಂತೆ ವಿವರಿಸುತ್ತಾರೆ. ಗಗನ್ ಹೇಳಿಕೊಂಡಿರುವ ಹಾಗೆ ಅವರಿಗೆ ಕನ್ನಡ ಭಾಷೆ ಬಿಟ್ಟು ಬೇರೆ ಭಾಷೆ ಸ್ಪಷ್ಟವಾಗಿ ಬರುವುದಿಲ್ಲ ಆದರೆ ತಮಗೆ ಗೊತ್ತಿರುವ ಸ್ವಲ್ಪ ಭಾಷಾ ಜ್ಞಾನದಿಂದ ಕಮ್ಯೂನಿಕೇಟ್ ಮಾಡುತ್ತದೆ. ಗಗನ್ ಅವರು ಇದೀಗ ರಷ್ಯಾ ಪ್ರವಾಸದಲ್ಲಿದ್ದು ಗೂಗಲ್ ಟ್ರಾನ್ಸ್ಲೇಷನ್ ಬಳಸಿಕೊಂಡು ಕಮ್ಯುನಿಕೇಟ್ ಮಾಡುತ್ತಿದ್ದಾರೆ. ಗಗನ್ ಅವರಿಗೆ ಭರತನಾಟ್ಯ ಬಹಳ ಇಷ್ಟ ಅವರು ಶಾಲಾ ಮಕ್ಕಳಿಗೆ ಭರತನಾಟ್ಯ ಹೇಳಿಕೊಡುತ್ತಿದ್ದರು ಹಾಗೂ ಅವರು ಅರ್ಚಕ ವೃತ್ತಿಯನ್ನು ಮಾಡಿದ್ದರು. ಗಗನ್ ಶ್ರೀನಿವಾಸನ್ ಅವರ ಕನಸು ಯಶಸ್ವಿಯಾಗಲಿ ಎಂದು ಆಶಿಸೋಣ. ಈಗಲೆ ಡಾಕ್ಟರ್ ಬ್ರೊ ಚಾನಲ್ ಅನ್ನು ಸಬ್ಸಕ್ರೈಬ್ ಮಾಡಿ.

Leave a Reply

Your email address will not be published. Required fields are marked *